Tuesday 16th, April 2024
canara news

ಕನ್ನಡ ವಿಭಾಗದಲ್ಲಿ ಅಶೋಕ ಸುವರ್ಣರ `ಮಹಾಕಾಳಿ ಕೇವ್ಸ್‍ನ ಮಹಾನುಭಾವ' ಕೃತಿ ಬಿಡುಗಡೆ

Published On : 20 Mar 2019   |  Reported By : Rons Bantwal


ಮುಂಬಯಿಯಲ್ಲಿ ಅನೇಕ ಪುರಾತನ ಗುಹೆಗಳಿವೆ : ಡಾ| ಜಿ.ಎನ್ ಉಪಾಧ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.16: ಸಂಶೋಧನಾ ಕಾರ್ಯವನ್ನು ಕೇವಲ ಅಕಾಡೆಮಿ ಕ್ಷೇತ್ರದವರೇ ಮಾಡಬೇಕು ಎಂಬುದಿಲ್ಲ. ಲೋಕಕ್ಕೆ ಹೊಸಸಂಗತಿಯನ್ನು ಅಥವಾ ಇತಿಹಾಸಕಾರರು ಪರಿಗಣಿಸದೇ ಇರುಅ ವಿಷಯದ ಬಗ್ಗೆ ಯಾರೂ ಸಂಶೋಧನೆ ಮಾಡಬಹುದು ಎಂಬುದಕ್ಕೆ ಮುಂಬಯಿಯ ಹಿರಿಯ ಪತ್ರಕರ್ತ, ಲೇಖಕ ಅಶೋಕ್ ಸುವರ್ಣ ಸಾಕ್ಷಿಯಾಗಿದ್ದಾರೆ. ಮುಂಬಯಿಯಲ್ಲಿ ಅನೇಕ ಪುರಾತನ ಗುಹೆಗಳಿವೆ. ಒಂದೊಂದು ಗುಹೆಗೂ ತನ್ನದೇ ಆದ ವಿಶಿಷ್ಟವಾದ ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಇದೆ. ಆದರೆ ಅಂಧೇರಿ ಅಲ್ಲಿರುವ ಕೊಂಡಿವಿಟಾ ಕೇವ್ಸ್ ಎಂಬ ಪುರಾತನ ಗುಹೆ ಮಹಾಕಾಳಿ ಕೇವ್ಸ್ ಎಂಬ ನಾಮಾಂತರ ಹೇಗಾಯಿತು ಎಂಬುದರ ಬಗ್ಗೆ ಈ ಕೃತಿಯಲ್ಲಿ ಸಂಶೋಧನಾ ರೀತಿ ಕಾರ್ಯವಿದೆ ಎಂಬ ಹೆಮ್ಮೆ ಪಡುವ ಸಂಗತಿಯಾಗಿದೆ ಹಾಗೂ ಸಂಶೋಧಕರಿಗೆ ಮಾರ್ಗದರ್ಶಿಯಾಗಿದೆ ಎಂದು ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಹೇಳಿದರು.

ಮುಂಬಯಿ ವಿವಿ ಕನ್ನಡ ವಿಭಾಗವು ಕಳೆದ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಮಹಾನಗರದಲ್ಲಿನ ಕರ್ನಾಟಕ ರಾಜ್ಯೋತ್ಸವ 2012 ಪ್ರಶಸ್ತಿ ಪುರಸ್ಕೃತ ಶತಮಾನ ಮಿಕ್ಕಿದ ಸೇವಾ ನಿರತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮುಖವಾಣಿ ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ ರಚಿತ `ಮಹಾಕಾಳಿ ಕೇವ್ಸ್‍ನ ಮಹಾನುಭಾವ' ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ| ಉಪಾಧ್ಯ ಮಾತನಾಡಿದರು.

ಮೈಸೂರು ಅಲ್ಲಿನ ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ ಮುಖ್ಯ ಅತಿಥಿಧಿಯಾಗಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ, ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಪ್ರಾಧ್ಯಾಪಕ ವಿಮರ್ಶಕ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಹುಬ್ಬಳ್ಳಿ ಅಲ್ಲಿನ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ, ಮೊಗವೀರ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸದಾನಂದ ಎ.ಕೋಟ್ಯಾನ್ ಅತಿಥಿü ಅಭ್ಯಾಗತರಾಗಿದ್ದು ಬ್ಯಾಂಕ್‍ನ ನಿವೃತ್ತ ಹಿರಿಯ ಉದ್ಯೋಗಿ, ಸಾಹಿತ್ಯಪ್ರಿಯ ಕೃಷ್ಣರಾಜ್ ಸಿ.ಕರ್ಕೇರ ಬಿಡುಗಡೆ ಗೊಳಿಸಿದರು. ಉದಯ ಶೆಟ್ಟಿ ಪಂಜಿಮಾರು ಕೃತಿಯನ್ನು ಪರಿಚಯಿಸಿದರು.

ಹರೀಶ್ ಪುತ್ರನ್ (ಕಾಂತಪ್ಪ ಮನೆ), ಮೊಗವೀರ ಮಂಡಳಿ ಟ್ರಸ್ಟಿಗಳಾದ ಜಿ.ಕೆ.ರಮೇಶ್, ಅಜಿತ್ ಜಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂಜೀವ ಕೆ.ಸಾಲ್ಯಾನ್, ಕಾಟಿಪಟ್ಣ ಮೋಗವೀರ ಸಭಾ ಅಧ್ಯಕ್ಷ ಪಿ.ಧರ್ಮಪಾಲ್, ಆನಂದ ಮೆಂಡನ್ (ಕಾಂತವು ಭಟ್ಟ ಮನೆತನ), ಮೊಗವೀರ ಪತ್ರಿಕೆಯ ವ್ಯವಸ್ಥಾಪಕ ದಯಾನಂದ ಬಂಗೇರ, ಉದ್ಯಮಿ ಶ್ರೀನಿವಾಸ ಕಾಂಚನ್ ಉಪಸ್ಥಿತರಿದ್ದರು.

ಡಾ| ಕಾಳೇಗೌಡ ನಾಗವಾರ ಮಾತನಾಡಿ ಮೊಗವೀರರ ಸಾಹಸ, ಸಾಧನೆ ಮತ್ತು ಸೌಲಭ್ಯದ ಬಗ್ಗೆ ಬೆಳಕು ಚೆಲ್ಲುತ್ತಾ, ಪಶ್ಚಿಮ ಕರಾವಳಿಯ ಈ ಸಮಾಜವು ತನ್ನ ಶ್ರೀಮಂತ ಪರಂಪರೆಯಿಂದಾಗಿ ಒಗ್ಗಟ್ಟಿಗೆ ಹೆಸರುವಾಸಿ ಆಗಿದೆ ಎಂದರು.

ಗುಹೆಗಳೆಲ್ಲವೂ ಶಿವತತ್ವದಲ್ಲಿ ನಿರ್ಮಾಣ ಗೊಂಡಿವೆ. ಇವೆಲ್ಲವೂ ನಮ್ಮ ಪುರಾತನ ಜೀವನ ಪದ್ಧತೆಯನ್ನು ಬಿಂಬಿಸುತ್ತಿವೆ. ಆದುದಾರಿಂದ ಭವಿಷ್ಯತ್ತಿನ ಪೀಳಿಗೆಗೆ ಇಂತಹ ಬರವಣಿಗಳ ಪುಸ್ತಕ ಆಕಾರಗ್ರಂಥ ಆಗಬೇಕು ಎಂದು ಕೃತಿಕಾರ ಅಶೋಕ ಸುವರ್ಣ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಂಶೋಧನ ಸಹಾಯಕ ದಿನಕರ ಚಂದನ್ ಕೃತಜ್ಞತೆ ಸಮರ್ಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here