Friday 19th, April 2024
canara news

ಮೊಡೇಲ್ ಬ್ಯಾಂಕ್‍ನ 23ನೇ ಶಾಖೆ ಪನ್ವೇಲ್‍ನ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಉದ್ಘಾಟನೆ

Published On : 23 Mar 2019   |  Reported By : Rons Bantwal


ಉದ್ಯೋಗಸ್ಥರಿಂದಲೇ ಉದ್ಯಮದ ಸರ್ವೋನ್ನತಿ: ರೆ| ಫಾ| ಲಿಯೋ ಲೊಬೋ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.20: ಯಾವುದೇ ಸಂಸ್ಥೆಯ ಸರ್ವೋನ್ನತಿ ಅಲ್ಲಿನ ನೌಕರವೃಂದದ ಸೇವಾ ವೈಖರಿಯಲ್ಲಿರುತ್ತದೆ. ಆದುದರಿಂದ ಉದ್ಯೋಗಸ್ಥರು ಬರೇ ಸಂಬಳಕ್ಕಾಗಿ ಶ್ರಮಿಸದೆ ಸೇವೆಯನ್ನೇ ವೃತ್ತಿಯಾಗಿಸಿ ಕೆಲಸ ನಿರ್ವಹಿಸಬೇಕು. ದಕ್ಷ ಸೇವೆಯ ಮುಖೇನವೇ ಗ್ರಾಹಕರ ಮನಾಕರ್ಷಿಸಬೇಕು. ಇಂತಹ ಸೇವೆಯಿಂದ ಅವರಿಗೂ ಸಂಸ್ಥೆಗೂ ಗ್ರಾಹಕರಿಗೂ ತೃಪ್ತಿಯನ್ನುಂಟು ಮಾಡುತ್ತದೆ. ಉದ್ಯೋಗಸ್ಥರಿಂದಲೇ ಉದ್ಯಮದ ಸರ್ವೋನ್ನತಿ ಸಾಧ್ಯ. ಬಹುಶಃ ಪನ್ವೇಲ್‍ಗೆ ಮೊಡೇಲ್ ಬ್ಯಾಂಕ್‍ನ ಆಗಮನ ಸರಿಯಾದ ಸಮಯಕ್ಕಾಗಿದೆ. ಇಲ್ಲಿನ ಜನತೆಗೆ ಇದರ ಫಲಾನುಭವ ಪಡೆದು ಸಂತೃಪ್ತರಾಗಲಿ ಎಂದು ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್'ಸ್ ಚರ್ಚ್ ಪನ್ವೇಲ್ ಇದರ ಪ್ರಧಾನ ಧರ್ಮಗುರು ರೆ| ಫಾ| ಲಿಯೋ ಲೊಬೋ ನುಡಿದರು.

ಇಂದಿಲ್ಲಿ ಬುಧವಾರ ಪೂರ್ವಾಹ್ನ ರಾಯಗಾಢ ಜಿಲ್ಲೆಯ ನ್ಯೂಪನ್ವೇಲ್ ಅಲ್ಲಿನ ಮಾಥೇರನ್ ರಸ್ತೆಯ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ತನ್ನ 23ನೇ ಶಾಖೆಯನ್ನು ತೆರೆದಿದ್ದು, ನೂತನ ಶಾಖೆಗೆ ಆಶೀರ್ವಚನಗೈದು, ದೀಪ ಬೆಳಗಿಸಿ ಶಾಖೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಫಾ| ಲಿಯೋ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲು ್ಯ.ಡಿಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ ನವಿಮುಂಬಯಿ ವಾಶಿ ಇದರ ಫಾ| ಸಿ.ರೋಡ್ರಿಗಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ| ಎಸ್.ಎಂ ಖೋತ್ ರಿಬ್ಬನ್ ಕತ್ತರಿಸಿ ನೂತನ ಶಾಖೆಗೆ ಚಾಲನೆಯನ್ನಿತ್ತÀರು.

ಡಾ| ಖೋತ್ ಮಾತನಾಡಿ ಸೇವೆಯಲ್ಲಿ ಶತಮಾನ ಮೀರಿದ ಈ ಹಣಕಾಸು ಸಂಸ್ಥೆಯ ಸಾಧನೆ ಮತ್ತು ಮುನ್ನಡೆ ಶ್ಲಾಘನೀಯ. ಇಂದು ಹಣಕಾಸು ಸಂಸ್ಥೆಗಳು ಜಾಗತಿಕವಾಗಿ ಸರಳ, ಸುಲಭವಾಗಿ ವ್ಯವಹರಿಸುವ ಕಾಲಘಟ್ಟದಲ್ಲೂ ಮೊಡೇಲ್ ಬ್ಯಾಂಕ್‍ನಂತಹ ಸಂಸ್ಥೆಗಳು ಇದನ್ನು ಬರೇ ವ್ಯವಹಾರಿಕವಾಗಿ ಪರಿಗಣಿಸಿದೆ ಸೇವೆಯಾಗಿಯೂ ಗಮನಿಸುತ್ತಿರುವುದು ಅಭಿನಂದನೀಯ. ಬ್ಯಾಂಕ್‍ನ ಕಾರ್ಯ ನಿರ್ವಾಹಣೆ, ಗ್ರಾಹಕರ ಸಂತೃಪ್ತಿಯೇ ಹಣಕಾಸು ಉದ್ಯಮದ ಸಮೃದ್ಧಿ, ಬ್ಯಾಂಕಿಂಗ್ ಅಥವಾ ಆಥಿರ್üಕ ವ್ಯವಸ್ಥೆಗೆ ಇಂತಹದ್ದೇ ಅನ್ನುವ ಸಮುದಾಯದ ಪರಿದಿ ಇಲ್ಲ. ಕಾರಣ ಬ್ಯಾಂಕಿಂಗ್ ಅಭಿವೃದ್ಧಿಯ ಬೆನ್ನು ಮೂಳೆಯಾಗಿದೆ ಎಂದರು.


ಹಣಕಾಸು ಸೇವೆಗೆ ಈ ಬ್ಯಾಂಕ್‍ಗೆ ತನ್ನದೇ ಆದ ಇತಿಹಾಸವಿದೆ. ಇದಕ್ಕೆ ಮಿಗಿಲಾಗಿ ಹೆಜ್ಜೆಯನ್ನಿಟ್ಟ ದಿಟ್ಟ ಬ್ಯಾಂಕ್ ಇದಾಗಿದೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿಯೇ ಬ್ಯಾಂಕ್ ಈ ಮಟ್ಟಕ್ಕೆ ಬೆಳೆದಿದೆ. ಅತೀ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದ್ದು ಪನ್ವೇಲ್ ಪ್ರದೇಶಕ್ಕೆ ಸೇವಾ ನಿರತವಾಗಲು ಸನ್ನದ್ಧ ಗೊಂಡಿದೆ. ಗ್ರಾಹಕರು ಎಲ್ಲಾ ಸೇವೆಗಳು ಲಾಭ ಪಡೆಯಬೇಕು ಎಂದು ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ ತಿಳಿಸಿದರು.

ಆರ್‍ಬಿಐ ಸಂಸ್ಥೆಯ ಕಾನೂನು ಚೌಕಟ್ಟಿನೊಳಗೆ ಶ್ರಮಿಸಿ ಗ್ರಾಹಕರ ಹಣಕಾಸು ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಬ್ಯಾಂಕ್‍ನ್ನೂ ವ್ಯವಸ್ಥಿತವಾಗಿ ಮುನ್ನಡೆಸುತ್ತಿರುವ ಅಭಿಮಾನ ನಮಗಿದೆ. ನೂತನ ಶಾಖೆಗಳನ್ನು ಸೇವಾರ್ಪಣೆ ಅಂದರೆ ಬ್ಯಾಂಕ್‍ನ ಫಲಪ್ರದದ ಸೇವೆ ಅಂದು ಕೊಡೀದ್ದೇವೆ. ಆಥಿರ್üಕ ವ್ಯವಸ್ಥೆಯ ಸೇವೆಯಲ್ಲಿ ಸದ್ಯ ಅತ್ಯುತ್ತಮ ಸೇವೆಯೊಂದಿಗೆ ಗುರುತಿಸಿಕೊಂಡಿರುವ ಬ್ಯಾಂಕ್ ಬೃಹತ್ ಬ್ಯಾಂಕ್‍ನಷ್ಟೇ ಸಮರ್ಥ ಸೇವಾ ಪ್ರಶಂಸೆಗೆ ಪಾತ್ರವಾಗಿರುವುದು ಬ್ಯಾಂಕ್‍ನ ಸೇವಾ ವೈಶಿಷ್ಟ ್ಯವನ್ನು ಪ್ರದರ್ಶಿಸುತ್ತಿದೆ ಎಂದು ಆಲ್ಬರ್ಟ್ ಡಿ'ಸೋಜಾ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಬೊಂಬೆ ಕಾಥೋಲಿಕ್ ಸಭಾ ಪನ್ವೇಲ್ ಘಟಕದ ಕಾರ್ಯಾಧ್ಯಕ್ಷ ಜಾರ್ಜ್ ವರ್ಗೀಸ್, ಕಾರ್ಯದರ್ಶಿ ವಿನ್ಸೆಂಟ್ ಜೋಸೆಫ್, ಸದಸ್ಯ ಲ್ಯಾನ್ಸಿ ಪಿಂಟೋ, ಕ್ರಿಸ್ಟಲ್ ಸೊಸೈಟಿಯ ಕಾರ್ಯಾಧ್ಯಕ್ಷ ಗೋಪಾಲ ಕೃಷ್ಣನ್, ಮಹಾರಾಷ್ಟ್ರರಾಜ್ಯ ಜಿಎಸ್‍ಟಿ ಸಹ ಅಧಿಕಾರಿ ದೀಪಕ್ ಬಿ.ವರ್ಶವೊ, ಉದ್ಯಮಿ ಖಾಂಜಿ ಕೆ.ಪಾಟೇಲ್, ಬ್ಯಾಂಕ್‍ನ ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ಸಿಎ| ಪೌಲ್ ನಝರೆತ್, ತೋಮಸ್ ಡಿ.ಲೋಬೊ, ಲಾರೇನ್ಸ್ ಡಿಸೋಜಾ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿಮೆಲ್ಲೋ, ಜೆರಾಲ್ಡ್ ಕರ್ಡೋಜಾ, ಆ್ಯನ್ಸಿ ಡಿ'ಸೋಜಾ, ಬ್ಯಾಂಕ್‍ನ ಡಿಜಿಎಂ ಝೆನೆರ್ ಡಿಕ್ರೂಜ್ ಸೇರಿದಂತೆ ನೂತನ ಗ್ರಾಹಕರು, ಷೇರುದಾರರು ಹಾಜರಿದ್ದು ಶಾಖೆಯ ಶ್ರೇಯೋಭಿವೃದ್ಧಿಗೆ ಶುಭೇಚ್ಛ ಹಾರೈಸಿದರು.

ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ'ಸೋಜಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಬ್ಯಾಂಕ್‍ನ ಸಿಜಿಎಂ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ವಿಲಿಯಂ ಎಲ್.ಡಿ'ಸೋಜಾ ವೇದಿಕೆಯಲ್ಲಿ ಅಸೀನರಾಗಿದ್ದು ಉಪಸ್ಥಿತ ಅತಿಥಿüಗಣ್ಯರಿಗೆ ಪುಷ್ಫಗುಪ್ಚವನ್ನೀಡಿ ಗೌರವಿಸಿದರು. ಎಡ್ವರ್ಡ್ ರಸ್ಕೀನ್ಹಾ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ವಿನೋದ್ ಶೆಟ್ಟಿ ಅಭಾರ ವ್ಯಕ್ತಪಡಿಸಿದರು. ರಾಷ್ಟ್ರಗೀತೆಯೊಂದಿದೆ ಕಾರ್ಯಕ್ರಮ ಸಮಾಪನ ಕಂಡಿತು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here