Friday 29th, March 2024
canara news

ಬಾಂದ್ರಾ ಟರ್ಮಿನಲ್ ನಿಂದ ಮಂಗಳೂರು ಜಂಕ್ಷಣ್ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ

Published On : 25 Mar 2019   |  Reported By : Rons Bantwal


ಎಪ್ರಿಲ್-16 ರಂದು ರೈಲು ಸಂಖ್ಯೆ 09009/10 ಪ್ರಯಾಣಕ್ಕೆ ಸಜ್ಜು

ಮುಂಬಯಿ, ಡಿ.26: ಬಾಂದ್ರಾ ಟರ್ಮಿನಲ್ ನಿಂದ ಮಂಗಳೂರು ಜಂಕ್ಷಣ್ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದ್ದು, ಇದೇ ಎಪ್ರಿಲ್-16 ರಂದು ರೈಲು ಸಂಖ್ಯೆ 09009 / 10 ಪ್ರಯಾಣಕ್ಕೆ ಸಿದ್ಧತೆ ನಡೆಸಿ ವೇಳಾ ಪಟ್ಟಿ ಬಿಡುಗಡೆ ಗೊಳಿಸಿದೆ. ಸದ್ಯ ಈ ರೈಲು 16.ಎಪ್ರಿಲ್,2019ರಿಂದ 05.ಜೂನ್,2019 ತನಕ ಮಾತ್ರ ಸಾಪ್ತ್ತಾಹಿಕ ವಿಶೇಷ ರೈಲು ಆಗಿ ಓಡಾಡಲಿದ್ದು ಪಶ್ಚಿಮ ರೈಲ್ವೇ ಪ್ರದೇಶದಲ್ಲಿ ನೆಲೆಯಾಗಿರುವ ವಿಶೇಷವಾಗಿ ತುಳು-ಕನ್ನಡಿಗರ ಅನೇಕ ವರ್ಷಗಳ ಬೇಡಿಕೆ ಇದೀಗ ಈಡೇರಿದ್ದು ಪ್ರಯಾಣಿಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಬಾಂದ್ರಾ ಟರ್ಮಿನಲ್-ಮಂಗಳೂರು ಜಂಕ್ಷಣ್ ರೈಲು ಸಂಖ್ಯೆ (09009) ಮುಖೇನ ಬೋರಿವಿಲಿ, ವಸಾಯಿ ಮಾರ್ಗವಾಗಿ ಪನ್ವೇಲ್ ಮೂಲಕ ಮಂಗಳೂರುಗೆ ಪ್ರಯಾಣಿಸಲಿರುವ ಈ ರೈಲು 16.ಎಪ್ರಿಲ್,19ನೇ ಮಂಗಳವಾರ ಪ್ರಯಾಣ ಆರಂಭಿಸಲಿದೆ. ಅಂದು ರಾತ್ರಿ 11.55 (23.55 ಗಂಟೆಗೆ) ಬಾಂದ್ರಾ ಟರ್ಮಿನಲ್ ನಿಂದ ಬೋರಿವಿಲಿ, ವಸಾಯಿ ರೋಡ್, ಪನ್ವೇಲ್, ರೋಹ, ಮನ್ಗಾಂವ್, ಖೇಡ್, ಚಿಪ್ಲೂಣ್, ಸಂಗಮೇಶ್ವರ್ ರೋಡ್, ರತ್ನಗಿರಿ, ಕಂಕವ್ಳಿ, ಕುಡಲ್, ಸಾವಂತ್‍ವಾಡಿ ರೋಡ್, ಕಿವಿಂ, ಕರ್ಮಾಲಿ, ಮಡ್ಗಾಂವ್, ಕಾರವಾರ, ಕುಮಟಾ, ಮುರ್ಡೇಶ್ವರ್, ಭಟ್ಕಳ್, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್ ಮೂಲಕ ಮಾರನೇ ದಿನ ರಾತ್ರಿ 07.55 (19.45 ಗಂಟೆಗೆ) ಮಂಗಳೂರು ಜಂಕ್ಷಣ್ ಸೇರಲಿದೆ.

ಅದೇ ಬುಧವಾರ ದಿನ ರಾತ್ರಿ 11.00 (23.00 ಗಂಟೆಗೆ) ಮಂಗಳೂರು ಜಂಕ್ಷಣ್-ಬಾಂದ್ರಾ ಟರ್ಮಿನಲ್ ರೈಲು ಸಂಖ್ಯೆ (09010) ಆಗಿಸಿ ಇದೇ ಮಾರ್ಗವಾಗಿ ಪ್ರಯಾಣ ಬೆಳೆಸಿ ಮಾರನೇ ದಿನ ಗುರುವಾರ ರಾತ್ರಿ 07.30 (19.30 ಗಂಟೆಗೆ) ಬಾಂದ್ರಾ ಟರ್ಮಿನಲ್ ಸೇರಲಿದೆ. ಈ ರೈಲು ಎಸಿ-2 ಮತ್ತು 3 ಟಾಯರ್, ಸ್ಲೀಪರ್ ಕ್ಲಾಸ್, ಸೆಕೆಂಡ್ ಕ್ಲಾಸ್, ಜನರಲ್ ಕೋಚ್ ಜೊತೆಗೆ ಆಹಾರ ಪೂರೈಕೆ ವ್ಯವಸ್ಥೆಗಾಗಿನ ಅಡಿಗೆ ಉಗ್ರಾಣ (ಪ್ಯಾಂಟ್ರಿ ಕಾರ್) ಹೊಂದಿರುತ್ತದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿನ ತುಳು-ಕನ್ನಡಿಗರ ಏಕೈಕ ಲೋಕಸಭಾ ಪ್ರತಿನಿಧಿಯಾಗಿದ್ದು, ಈ ರೈಲು ಸೇವೆ ಆರಂಭಿಸಲು ವಿಶೇಷವಾದ ಕಾಳಜಿ ವಹಿಸಿ ಅವಿರತವಾಗಿ ಶ್ರಮಿಸಿ, ಸಂಘದ ನಿಯೋಗವನ್ನು ನವದೆಹಲಿಗೆ ಕರೆದೊಯ್ದು ರೈಲ್ವೇ ಸಚಿವ ಪಿಯೂಸ್ ಗೋಯಲ್ ಅವರನ್ನು ಭೇಟಿ ಮಾಡಿಸಿ ಹಲವು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಈ ಯೋಜನೆ ಜಾರಿ ತರುವಲ್ಲಿ ಶ್ರಮಿಸಿದ ಸಂಸದ ಗೋಪಾಲ್ ಸಿ.ಶೆಟ್ಟಿ, ರೈಲ್ವೇ ಸಚಿವ ಪಿಯೂಸ್ ಗೋಯಲ್, ಪಶ್ಚಿಮ ರೈಲ್ವೇ ಹಾಗೂ ಮಧ್ಯ ರೈಲ್ವೇಯ ಮುಖ್ಯಸ್ಥರು, ಕೊಂಕಣ್ ರೈಲ್ವೇ ಕಾಪೆರ್Çರೇಶನ್ ಲಿಮಿಟೆಡ್ (ಕೆಆರ್‍ಸಿಎಲ್) ಆಡಳಿತ ನಿರ್ದೇಶಕ ಸಂಜಯ್ ಗುಪ್ತ ಇವರ ಅವಿರತ ಸಹಯೋಗಕ್ಕೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಅಭಿವಂದಿಸಿದೆ.

ರೈಲು ಪ್ರಯಾಣಿಕರ ಹಲವಾರು ವರ್ಷಗಳ ಬೇಡಿಕೆ ಈಡೇರಿಸುವಲ್ಲಿ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಗೌರವಾಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್ ಮತ್ತು ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ಹಾಗೂ ಪದಾಧಿಕಾರಿಗಳೂ ಶ್ರಮಿಸಿದ್ದು, ಪಶ್ಚಿಮ (ವೆಸ್ಟನ್), ಮಧ್ಯ (ಸೆಂಟ್ರಲ್) ಹಾಗೂ ಕೊಂಕಣ್ ರೈಲ್ವೇಯ ಸಹಯೋಗದಿಂದ ತಾತ್ಕಲಿಕ ಸೇವೆಯಾಗಿಸಿ ಸಿದ್ಧಗೊಂಡಿದೆ. ಈ ರೈಲು ಸೇವೆ ದೈನಿಕವಾಗಿ (ಖಾಯಂ) ಓಡಾಡ ಬೇಕಾದರೆ ಸದ್ಯದ ಸೇವೆಯನ್ನು ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿ ರೈಲ್ವೇ ಆದಾಯ ಪೂರೈಸಬೇಕಾಗಿದೆ. ಆದುದರಿಂದ ಸದ್ಯ ಜಾರಿಗೆ ತಂದ ವೇಳಾ ಪಟ್ಟಿಯನ್ನು ಪ್ರಯಾಣಿಕರು ಸೂಕ್ಷ್ಮವಾಗಿ ಪರಿಗಣಿಸಿ ಈ ಸೇವೆಯ ಉಪಯೋಗ ಪಡೆದು ರೈಲ್ವೇಗೂ ಲಾಭದಾಯಕ ಆಗುವಂತೆ ಯೋಚಿಸಿ ಪ್ರಯಾಣ ಬೆಳೆಸಿ ಈ ಸೇವೆಯನ್ನು ಉಳಿಸಿ ಎಂದು ಶಂಕರ್ ಬಿ.ಶೆಟ್ಟಿ ವಿರಾರ್ ಮತ್ತು ಶಿಮಂತೂರು ಉದಯ ಶೆಟ್ಟಿ ಎಲ್ಲಾ ಪ್ರಯಾಣಿಕರಲ್ಲಿ ವಿನಂತಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here