Friday 29th, March 2024
canara news

ಸಂಜೀವನಿ ಚಾರಿಟೇಬಲ್ ಟ್ರಸ್ಟ್‍ನ ಡಾ| ಸುರೇಶ್ ಎಸ್.ರಾವ್ ಕೊಡುಗೆ

Published On : 27 Mar 2019   |  Reported By : Rons Bantwal


ಎ.29: ಕಟೀಲುನಲ್ಲಿ ದುರ್ಗಾ ಸಂಜೀವನಿ-ಮಣಿಪಾಲ ಆಸ್ಪತ್ರೆ ಸೇವಾರ್ಪಣೆ

ಮುಂಬಯಿ, ಮಾ.25: ವಿಶ್ವಾದ್ಯಂತ ಪ್ರಸಿದ್ದಿ ಪಡೆದ ಪುರಾಣ ಪ್ರತೀತಿ ಇರುವ ಅಸಂಖ್ಯ ಭಕ್ತ ಸಮೂಹವೇ ಸಾಗರೋಪಾದಿಯಲ್ಲಿ ಹರಿದು ಬರುವ ಹಾಗೆ ಕರ್ನಾಟಕ ರಾಜ್ಯದಲ್ಲಿ ಆದಾಯದಲ್ಲಿ 4ನೇ ಸ್ಥಾನ ಇರುವ ದೇಗುಲ ತಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು. ಪ್ರಕøತಿಯ ರಮ್ಯ ರಮಣೀಯವಾದ ದ್ವೀಪಕ್ಷೇತ್ರವಾಗಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದತಾಯಿ ಭ್ರಾಮರಿಯ ಸಾನಿಧ್ಯದ 150 ಮೀಟರ್ ದೂರದಲ್ಲಿ ಸೇವಾರ್ಪಣೆ ಗೊಳ್ಳುತ್ತಿದೆ ವಿನೂತನ ದುರ್ಗಾ ಸಂಜೀವನಿ ಮಣಿಪಾಲ ಹಾಸ್ಪಿಟಲ್ ವಿನೂತನ ತಂತ್ರಜ್ಞಾನದ ಸೂಪರ್ ಸ್ಪೆಷಾಲಿಟಿ ಎಲ್ಲತರಹದ ಸೌಲಭ್ಯದೊಂದಿಗೆ 24x7 ಸೇವೆಯೊಂದಿಗೆ ಜನರ ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗೆ ಸ್ಪಂದಿಸಲು ಸಜ್ಜಾಗುತ್ತಿದೆ.

ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಯಕನಸುಗಾರರ
ಕಟೀಲು ಪರಿಸರದ ನಿವಾಸಿ ಮುಂಬಯಿನಲ್ಲಿ ವೃತ್ತಿಪರ ವೈದ್ಯ ಡಾ| ಸುರೇಶ್ ಎಸ್.ರಾವ್ ಇವರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಟೆಂಪಲ್ ಟ್ರಸ್ಟ್ ಹಾಗೂ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ಯ ಕನಸಿನ ಕೂಸು ಇದಾಗಿದೆ. ತಾನು ಹುಟ್ಟಿ ಬೆಳೆದ ಕಟೀಲು ಪರಿಸರಕ್ಕೆ ಉನ್ನತವಾದ, ಉತ್ತುಂಗವಾದ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಬೇಕು ಎನ್ನುವ ಮನದ ಇಂಗಿತವನ್ನು ಇರಿಸಿ ಡಾ| ಸುರೇಶ್ ರಾವ್ ಅವರು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಮೇಲೆ ಹೆಸರಿಸಿರುವ ಸಂಸ್ಥೆಗಳ ಆಶ್ರಯದಲ್ಲಿ ಬಹುಕೋಟಿ ವೆಚ್ಚದಲ್ಲಿ ಈ ಹಾಸ್ಪಿಟಲನ್ನು ನಿರ್ಮಿಸುತ್ತಿದ್ದಾರೆ.

ಕಟೀಲು ಪರಿಸರ ಮತ್ತುದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 14 ಕಿ.ಮೀ ದೂರವಿರುವ, ಕಡಲ ಕಿನಾರೆಯಿಂದ 29 ಕಿ.ಮೀ ದೂರದ ಮತ್ತು ಆಳ್ವಾಸ್ ವಿದ್ಯಾ ಸಂಸ್ಥೆಯಿಂದ 22 ಕಿ.ಮೀ ಅಂತರ ಇರುವ ಜಾಗದಲ್ಲಿ ದುರ್ಗಾ ಸಂಜೀವನಿ ಮಣಿಪಾಲ ಹಾಸ್ಪಿಟಲ್ ಮೂಡಿಬರುತ್ತದೆ. ಕಟೀಲು ಪರಿಸರಎಂದರೆ ಅದು ಗ್ರಾಮೀಣ ಪರಿಸರ ಕೂಲಿ ಕಾರ್ಮಿಕರು, ಕೃಷಿಕರು, ರೈತಾಪಿ ವರ್ಗದ ಜನರು ಸಣ್ಣ ಉದ್ದಿಮೆದಾರರು ವಾಸಿಸುವ ಗ್ರಾಮ ಇದಾಗಿದೆ. ಪ್ರಸ್ತುತ ಕಟೀಲು ಬಜಪೆ, ಕಿನ್ನಿಗೋಳಿ, ಪಕ್ಷಿಕೆರೆ, ಪೆರ್ಮುದೆ ಹೀಗೆ 20 ಗ್ರಾಮಗಳಲ್ಲಿ ಸಣ್ಣ ವ್ಯದ್ಯರ ಕ್ಲಿನಿಕ್ ಹೊರತು ಪಡಿಸಿ ಯಾವುದೇ ಉನ್ನತ ಪರಿಪೂರ್ಣ ಸೌಲಭ್ಯದ ಹಾಸ್ಪಿಟಲ್‍ಗಳಿಲ್ಲ. ಜನರಿಗೆ ತೀರಾ ಅವಶ್ಯಕ ಇರುವ ಸೌಲಭ್ಯಗಳಲ್ಲಿ ವೈದ್ಯಕೀಯ ಸೌಲಭ್ಯವು ಬಹುಮೂಲ್ಯ.ಸುಮಾರು ವರುಷಗಳ ಜನರ ಬೇಡಿಕೆ ಇನ್ನು ಕೆಲವೇ ದಿನಗಳಲ್ಲಿ ಪ್ರಸನ್ನವಾಗಲಿದೆ. ಕಟೀಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ 2 ಸಣ್ಣ ಪ್ರಮಾಣದ ಕ್ಲಿನಿಕ್ ಹೊರತು ಪಡಿಸಿ ಬೇರೆಯಾವುದೇ ವೈದ್ಯಕೀಯ ಸೌಲಭ್ಯಗಳಿರುವುದಿಲ್ಲ. ಯಾವುದೇ ದೊಡ್ಡ ಪ್ರಮಾಣದ ಖಾಯಿಲೆಗೆ ತುತ್ತಾದ ಸಂದರ್ಭದಲ್ಲಿ, ಮಂಗಳೂರು ನಗರ ಸುರತ್ಕಲ್ ಅಥವಾ ಮೂಡಬಿದಿರೆಗೆ ಧಾವಿಸುವ ಅಗತ್ಯ ಈ ಭಾಗದಜನರಿಗಿದೆ.

ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಯನಿರ್ವಹಣೆ
ಸಂಜೀವನಿ ಚಾರಿಟೇಬಲ್ ಟ್ರಸ್ಟ್‍ನ ದಾನಿಗಳಾದ ಡಾ| ಸುರೇಶ್ ರಾವ್ ನೇತೃತ್ವದಲ್ಲಿ ಹಾಗೂ ಕಟೀಲು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಯ ಸಾರಥ್ಯ ಮತ್ತು ಮಾಹೆ ಸಂಸ್ಥೆಯ ಸಂಯೋಗದಲ್ಲಿ ನಿರ್ಮಿಸಿ, ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯಮ್ನ ಪರಿಸರದ ಆಸು ಪಾಸಿನ ಜನರಿಗೆ ವಿಶ್ವ ವಿಖ್ಯಾತ ವೈದ್ಯಕೀಯ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಕೆ.ಎಂ.ಸಿ ಆಸ್ಪತ್ರೆಗೆ ನಿರ್ವಹಣಾ ಜವಾಬ್ದಾರಿ ನೀಡಿದ್ದು, ಕೆ.ಎಂ.ಸಿ ಹಾಸ್ಪಿಟಲ್ ಅವಿಭಜಿತ ದ.ಕಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶ ಗಳಲ್ಲಿಯೂ ವೈದ್ಯಕೀಯ ಮತ್ತು ಶಿಕ್ಷಣ ಕೇತ್ರದಲ್ಲಿ ಹೆಸರುವಾಸಿಯಾದ ಸಂಸ್ಥೆ. ಮಂಗಳೂರಿನಲ್ಲಿ ಸುಸಜ್ಜಿತ ಹಾಗೂ ನಂಬೆಕೆಗೆ ಪಾತ್ರವಾದ ಎರಡು ಆಸ್ಪತ್ರೆ, ಉಡುಪಿಯಲ್ಲಿ, ಮಣಿಪಾಲದಲ್ಲಿ, ಕಾರ್ಕಳದಲ್ಲಿ ಹೀಗೆ ಜನರ ಮನೆಮನಗಳನ್ನು ವೈದ್ಯಕೀಯ ಸೇವೆಯ ಮೂಲಕ ಮೆಚ್ಚಿದ ಹಾಸ್ಪಿಟಲ್ ಇದಾಗಿದೆ.ಅನುಭವವುಳ್ಳ ಸುಸಜ್ಜಿತ ವೈದ್ಯರತಂಡ, ಸಿಬ್ಬಂದಿ ವರ್ಗ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶ್ವ ಗುಣಮಟ್ಟದ ಆರೋಗ್ಯ ಸೇವೆ ಈ ಮಾಹೆ ಹಾಸ್ಪಿಟಲ್‍ನ ಹಿರಿಮೆಗೆ ಸಂದ ಗೌರವ. ಜನರು ಉನ್ನತವಾದ ಸೇವೆ ಸೌಲಭ್ಯವನ್ನು ನಿರೀಕ್ಷಿಸಲುಯಾವುದೇ ಸಂಕೋಚವಿಲ್ಲ.

ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಯ ಪಕ್ಷಿ ನೋಟ
19-02-2017 ರಂದು ಆಸ್ಪತ್ರೆಯ ಕಟ್ಟಡದ ಕಾರ್ಯ ಪ್ರವೃತ್ತಗೊಂಡು ಇದೀಗ ಕಟ್ಟಡ ಅಂತಿಮ ಹಂತದ ಕಾರ್ಯದಲ್ಲಿದೆ. ಸರಿಸುಮಾರು 1.5 ಎಕರೆ ಜಾಗದಲ್ಲಿರುವ ಈ ಹಾಸ್ಪಿಟಲ್ ಸುಸಜ್ಜಿತ ಪಾರ್ಕಿಂಗ್ ಪ್ರಶಾಂತವಾದ ವಾತಾವರಣದೊಂದಿಗೆ 70,000ಚದರ ವಿಸ್ತೀರ್ಣದಲ್ಲಿದೆ. ಮೂರು ಅಂತಸ್ತಿನ ಕಟ್ಟಡದೊಂದಿಗೆ, 100 ಬೆಡ್‍ಗಳಷ್ಟು ಸಾಮಥ್ರ್ಯ ಹೊಂದಿರುವ, ಮತ್ತು ಹೆಚ್ಚಿನ ವೈದ್ಯಕೀಯ ಖಾಯಿಲೆಗಳ ಉಪಶಮನದ ವಿಭಾಗ 24x7 ಕಾರ್ಯನಿರ್ವಹಿಸಲಿದೆ. ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ, ಎಲುಬು ಮತ್ತು ಕೀಲು, ಜನರಲ್ ಮೆಡಿಸಿನ್, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು ಮತ್ತು ಮಕ್ಕಳ ವಿಭಾಗಗಳನ್ನು ಒಳಗೊಂಡ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗಿ ತುರ್ತುಚಿಕಿತ್ಸೆ, ಐಸಿಯು, ಮತ್ತು ಶವಾಗಾರ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ 24x7 ಕಾರ್ಯನಿರ್ವಹಿಸುವ ಸಲುವಾಗಿ ಲ್ಯಾಬ್, ಔಷಧಾಲಯ, ಹಾಗೂ ವೈದ್ಯರಿಗೆ ವಸತಿ ನಿಲಯದ ಪರಿಪೂರ್ಣ ಸೌಕರ್ಯದೊಂದಿಗೆ ದುರ್ಗಾ ಸಂಜೀವನಿ ಮಣಿಪಾಲ ಹಾಸ್ಪಿಟಲ್ ಸಜ್ಜಾಗಿದೆ.

ಕೈಗೆಟಕುವದರ ಮತ್ತು ವಿಶೇಷ ವೈದ್ಯಕೀಯ ನೆರವು
ಕಟೀಲುಗ್ರಾಮ ಮತ್ತು ಆಸುಪಾಸಿನ 20 ಗ್ರಾಮಗಳ ಆಥಿರ್üಕವಾಗಿ ಹಿಂದುಳಿದ ಜನರಿಗೆ ಕೈಗೆಟಕುವ ದರದಲ್ಲಿ ಉನ್ನತ ಗುಣಮಟ್ಟದ ಈ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಚಿಂತನೆಯನ್ನು ಒಳಗೊಂಡ ಈ ಆಸ್ಪತ್ರೆಯ 2019ನೇ ಎಪ್ರಿಲ್.28ರ ಗುರುವಾರ ಸಂಜೆ ವಾಸ್ತುಪೂಜೆ, ಧಾರ್ಮಿಕ ವಿಧಿಗಳೊಂದಿಗೆ ಅಣಿಗೊಂಡು ಮಾರನೇ ದಿನ ಎ.29ನೇ ಶುಕ್ರವಾರ ಪೂರ್ವಾಹ್ನ 10.00 ಗಂಟೆಗೆ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಭಯ ಹಸ್ತಗಳಿಂದ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಜೀವನಿ ಟ್ರಸ್ಟ್ ಮತ್ತು ಮಾಹೆ ಈ ಉಭಯ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here