Friday 19th, April 2024
canara news

ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ರಜತ ಮಹೋತ್ಸವ ಆಚರಣೆ

Published On : 02 Apr 2019   |  Reported By : media release


ಮಂಗಳೂರು ಎ.01 : ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯು ಸಮಾಜ ಸೇವಾ ಚಟುವಟಿಕೆಗಳಲ್ಲಿ 25 ವರ್ಷಗಳ ಅರ್ಥಪೂರ್ಣ ಮತ್ತು ಸಾರ್ಥಕ ಸೇವೆಯನ್ನು ಸಲ್ಲಿಸಿ ಒಂದು ನೂತನ ಮೈಲಿಗಲ್ಲನ್ನು ದಾಟಿ ನೂತನ ಇತಿಹಾಸ ನಿರ್ಮಿಸಿದೆ ಎಂದು ರೋಟರಿ ಜಿಲ್ಲಾ 3181ರ ಚುನಾಯಿತ ಗವರ್ನರ್‍ರಾದ ರೋ| ಜೋಸೆಪ್ ಮ್ಯಾಥ್ಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು 31.03.2019 ರಂದು ನಗರದ ಬೋಟ್ ಕ್ಲಬ್ ಪ್ರಾಂಗಣದಲ್ಲಿ ಜರಗಿದ ರೋಟರ್ಯಾಕ್ಟ್ ಕ್ಲಬ್‍ನ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಥೆಯ 25 ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ವಾಮಂಜೂರು ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಿರುವ ರೋಟರ್ಯಾಕ್ಟ್ ಮಾಜಿ ಕಾರ್ಯದರ್ಶಿ ದಿ| ಶಾಂತರಾಮ ವಾಮಂಜೂರು ಸ್ಮಾರಕ ಬಸ್ಸು ತಂಗುದಾಣದ ನೀಲಿ ನಕ್ಷೆಯನ್ನು ಅನಾವರಣಗೊಳಿಸಿದರು.

ರೋಟರಿ ಜಿಲ್ಲಾ ಸಲಹೆಗಾರರಾದ ರೋ| ಸೂರ್ಯಪ್ರಕಾಶ್ ಭಟ್ ರವರು ಅಭಿನಂದನಾ ಭಾಷಣ ಮಾಡಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಮುದ್ರಿಸಿದ ವಿಶೇಷ ಗೃಹವಾರ್ತಾ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ತುಳು ಚಲನಚಿತ್ರ ನಟ ಬೋಜರಾಜ್ ವಾಮಂಜೂರು ಸಂಸ್ಥೆಯ ಜನಪರ ಸೇವಾ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಬಳಿಕ ಅವರು ತುಳು ರಂಗಭೂಮಿಗೆ ಸಲ್ಲಿಸಿದ ಸಾರ್ಥಕ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು.

ರೋಟರ್ಯಾಕ್ಟ್ ಕ್ಲಬ್‍ನ ಸಭಾಪತಿಯಾದ ರೋ| ಡಾ| ದೇವದಾಸ್ ರೈ ರೋಟರ್ಯಾಕ್ಟ್ ಸಂಸ್ಥೆಯು ನಡೆದು ಬಂದ ದಾರಿ, ಬೆಳವಣಿಗೆ ಮತ್ತು ಸಾಧನೆಯ ಮಾಹಿತಿ ನೀಡಿದರು. ಬಳಿಕ ಅವರು ಸಂಸ್ಥೆಗೆ ಸಲ್ಲಿಸಿದ ಸುಧೀರ್ಘ ಅಪಾರ ಸೇವೆ ಮತ್ತು ನೀಡಿದ ಅಮೂಲ್ಯ ಮಾರ್ಗದರ್ಶನವನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ರೋ| ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದರು. ಗೌರವ ಅತಿಥಿಗಳಾಗಿ ರೋಟರಿ ವಲಯದ ಸಹಾಯಕ ಗವರ್ನರ್ ರೋ| ಕಿರಣ್ ಪ್ರಸಾದ್ ರೈ, ರೋ| ದಿವಾಕರ್ ಅಮೀನ್, ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ರೋ| ಪ್ರೇಮನಾಥ್ ಕುಡ್ವ, ಅಧ್ಯಕ್ಷ ರೋ| ಸಂತೋಷ್ ಶೇಟ್, ರೋಟರಾಕ್ಟ್ ಕ್ಲಬ್ ಸ್ಥಾಪಕಾಧ್ಯಕ್ಷ ರೋ| ಜಯಪ್ರಕಾಶ್ ರಾವ್, ರೋಟರಾಕ್ಟ್ ಜಿಲ್ಲಾಧ್ಯಕ್ಷ ರೋ| ರತ್ನಾಕರ್ ರೈ, ಪಾಲ್ಗೊಂಡಿದ್ದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರೋ| ಯತೀಶ್ ಸಾಲಿಯಾನ್ ಸ್ವಾಗತಿಸಿದರು. ರೋ| ಪ್ರಸನ್ನರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೋ| ಶೆಲ್ಡಾನ್ ಕ್ರಾಸ್ತ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here