Tuesday 23rd, April 2024
canara news

ಬಿಲ್ಲವರ ಭವನದ ಬೆಳ್ಳಿಪರದೆಯಲ್ಲಿ `ದೇಯಿಬೈದೆತಿ' ಪ್ರದರ್ಶಿಸಿದ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ)

Published On : 09 Apr 2019   |  Reported By : Rons Bantwal


ಮುಂಬಯಿ, ಎ.07: ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ) ಇಂದಿಲ್ಲಿ ಭಾನುವಾರ ಬೆಳಿಗ್ಗೆ ಸಾಂತಾಕ್ರೂಸ್ ಪೂರ್ವದ ಬಿಲ್ಲವರ ಭವನದ ಬೆಳ್ಳಿಪರದೆಯಲ್ಲಿ `ದೇಯಿಬೈದೆತಿ' ಪ್ರದರ್ಶಿಸಿದ್ದು ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಹಾಗೂ ಕೋಟಿ-ಚೆನ್ನಯರಿಗೆ ಪುಷ್ಫನಮನದೊಂದಿಗೆ ಗಣ್ಯರು ಉದ್ಘಾಟಿಸಿದರು.

ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ತುಳು ಚಿತ್ರರಂಗದಲ್ಲೇ ಮೊಟ್ಟಮೊದಲ ಬಾರಿಗೆ ಅದ್ಭುತವಾಗಿ ನಿರ್ಮಾಣಗೊಂಡ ಚಿತ್ರವೆಂದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ `ಯು' ಪ್ರಮಾಣಪತ್ರ ನೀಡಿದ, ಸೂರ್ಯೋದಯ ಪೆರಂಪಳ್ಳಿ ಈ ಅವರ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನದ ತುಳು ಚಲನಚಿತ್ರ `ದೇಯಿಬೈದೆತಿ' ಪ್ರದರ್ಶಿಸಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ `ದೇಯಿಬೈದೆತಿ' ಚಲನಚಿತ್ರದ ಚಿತ್ರಕಥೆ ರಚನೆಕಾರ, ನಿರ್ಮಾಪಕ ಮತ್ತು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ಉದ್ಯಮಿ, ಕೊಡುಗೈದಾನಿ ಹೆರ್ಗ ಬಾಬು ಪೂಜಾರಿ, ಗೌರವಾನ್ವಿತ ಅತಿಥಿüಗಳಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಶಾರದಾ ಸೂರು ಕರ್ಕೇರ, ಪುರುಷೋತ್ತಮ ಎಸ್.ಕೋಟ್ಯಾನ್ ಹಾಗೂ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉಪಾಧ್ಯಕ್ಷರಾದ ಸಿ.ಕೆ ಅಮೀನ್ ಮತ್ತು ಡಿ.ಬಿ ಅವಿೂನ್, ಸಲಹಾದಾರ ಶಂಕರ್ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾರು 500 ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವ ಭವ್ಯ ಮನೆಗಳಸೆಟ್‍ಗಳನ್ನು ನಿರ್ಮಿಸಲಾಗಿ ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಿರುವ ಈ ಚಿತ್ರ ಗರೋಡಿಗಳ (ಶಿಬಿರ) ವ್ಯವಸ್ಥೆ ಮತ್ತು ಬಲಾಢ್ಯತೆ ಸಾಧಿಸಿವ ವಿಧಾನವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಯಾವುದೇ ಜಾತಿಮತ, ಧರ್ಮಪಂಥಗಳಿಗೆ ಸೀಮಿತವಾದ ಕತೆಯಲ್ಲ. ಸಾಮಾನ್ಯ ಮಹಿಳೆ ಓರ್ವಳು ಅಸಮಾನ್ಯವಾಗಿ ಮೆರೆದ ಜೀವನಶೈಲಿಯನ್ನು ಬಿಂಬಿಸಲಾಗಿದೆ. ತುಳುನಾಡ ಮೂಲ ಮಣ್ಣಿನ ಕಥೆಯಾಗಿಸಿ ಈ ಚಿತ್ರ ನಿರ್ಮಿಸಲಾಗಿದೆ ಎಂದು ಸೂರ್ಯೋದಯ ಪೆರಂಪಳ್ಳಿ ತಿಳಿಸಿದರು.

ಪ್ರತಿಯೊಬ್ಬ ತಾಯಿಯ ಸಹಾಸಗಾಥೆ, ತನ್ನ ದೇಹದ ರಕ್ತಬಸಿದು ಹೆತ್ತುಹೊತ್ತು ಸಲುಹುವತಾಯಿ ಎಂಬ ಕರುಣಾಮಯಿಯು ರಾಜ್ಯದ ಪ್ರಜೆಗಳ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆಗೈದ ಸಾಮಾನ್ಯ ಮಹಿಳೆಯ ಅಸಮಾನ್ಯ ವೀರಗಾಥೆ ಸಾರುವ ಸುಮಾರು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುದು ಚಿಂತನೆಗೆ ಈಡುಮಾಡುವ ಈ ಚಿತ್ರವು ತಮ್ಮತಮ್ಮ ತಾಯಂದಿರ ತ್ಯಾಗಮಯ ಬದುಕನ್ನು ನೆನೆದು ಬಿಗಿದಪ್ಪಿ ರೋದಿಸುತ್ತಾ, ಯುವಪೀಳಿಗೆ ಜೀವನದ ಮಾರ್ಗದರ್ಶನವನ್ನು ನೀಡುವಂತಹದ್ದು. ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದು ಅನುಭವ ಹೊಂದಿರುವ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದಾಗಿದೆ ಇದು ನಮ್ಮೆಲ್ಲರ ಹಿರಿಮೆಯಾಗಿದೆ ಎಂದು ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್‍ನ ಅಶೋಕ್ ಎಂ. ಕೋಟ್ಯಾನ್, ಸುರೇಶ್ ಅಂಚನ್, ಕೆ.ಗೋಪಾಲ್ ಪಾಲನ್ ಕಲ್ಯಾಣ್ಫುರ್, ಕೃಷ್ಣ ಪಾಲನ್, ವಿ.ಸಿ ಪೂಜಾರಿ, ರೂಪ್‍ಕುಮಾರ್ ಕಲ್ಯಾಣ್ಫುರ್, ಉದಯ ಎನ್.ಪೂಜಾರಿ ಮತ್ತಿತರರು ಉಪಸ್ಥಿತರಿದ್ದು, ವಿಶ್ವನಾಥ್ ತೋನ್ಸೆ, ಸ್ವಾಗತಿಸಿ ಪ್ರಸ್ತಾವನೆಗೈದÀು. ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಂಜೀವ ಪೂಜಾರಿ ತೋನ್ಸೆ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here