Friday 19th, April 2024
canara news

ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದ `ಸಾಫಲ್ಯ ಭಾಗ್ಯ' ವೈಶಿಷ್ಟ ್ಯಪೂರ್ಣ ಕಾರ್ಯಕ್ರಮ

Published On : 10 Apr 2019   |  Reported By : Rons Bantwal


ಪರಿಚಾರಕರಾಗಿ ಮಾಡುವ ಸೇವೆ ಸರ್ವಶ್ರೇಷ್ಠವಾದುದು: ಗಣೇಶ್ ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.08: ಇದು ಸಮಾಜದ ಆಗುಹೋಗುಗಳನ್ನು ಖುದ್ಧಾಗಿ ಪಾಲ್ಗೊಂಡು ಸೇವಾ ಸವಿ ಆಸ್ವಾಧಿಸುವ ಸಮಯವಾಗಿದೆ. ಚಾಕರಿ ಮತ್ತು ನೌಕರಿ ಇವೆರಡೂ ಸೇವೆಗಳೇ. ಆದರೆ ಸಂಸ್ಥೆಯ ಮೂಲಕ ದಕ್ಷ ಪರಿಚಾರಕರಾಗಿ ಮಾಡುವ ಸೇವೆ ಸರ್ವಶ್ರೇಷ್ಠವಾದುದು. ಇದನ್ನೇ ಈ ಸಂಸ್ಥೆಯು ಅಧ್ಯಕ್ಷ ಶ್ರೀನಿವಾಸ ಸಾಫಲ್ಯರ ಸಾರಥ್ಯದಲ್ಲಿ ಮಾಡಿಸಿ ಇತರರಿಗೆ ಮಾದರಿಯಾಗಿದೆ. ಸಂಸ್ಥೆಗಳ ಉದ್ದೇಶ ಯಾವೊತ್ತೂ ಸಾಮಾಜಿಕ ಕಳಕಳಿವುಳ್ಳದ್ದಾಗಬೇಕು. ಅಲ್ಲಿ ಸಮಾನ ಮನಸ್ಕ ಸೇವಾಂಕ್ಷಿಗಳ ಸಾಂಘಿಕತ್ವ ಬಲಿಷ್ಠಗೊಂಡಾಗ ಇಡೀ ಸಮಾಜವೇ ಸಂಸ್ಥೆಯ ಲಾಭ ಪಡೆಯಲು ಸಾಧ್ಯವಾಗುವುದು ಮಹಾನಗರದ ಯುವೋದ್ಯಮಿ, ಜಿ.ಎಸ್ ಶೆಟ್ಟಿ ಆ್ಯಂಡ್ ಅಸೋಸಿಯೇಟ್ಸ್‍ನ ಆಡಳಿತ ನಿರ್ದೇಶಕ ಗಣೇಶ್ ಶೆಟ್ಟಿ ತಿಳಿಸಿದರು.

ಕಳೆದ ಭಾನುವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗÀವು ಆಯೋಜಿಸಿದ್ದ `ಸಾಫಲ್ಯ ಭಾಗ್ಯ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಗಣೇಶ್ ಶೆಟ್ಟಿ ಮಾತನಾಡಿದರು.

ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಮತ್ತು ಮಹಿಳಾ ವಿಭಾಗದ ಸಂಚಾಲಕಿ ಶೋಭಾ ಬಂಗೇರ ಸಾರಥ್ಯದಲ್ಲಿ ನಡೆಸಲ್ಪಟ್ಟ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಹೊಟೇಲು ಉದ್ಯಮಿ ಸದಾನಂದ ಸಫಲಿಗ (ರಾಜ್‍ಯೋಗ್), ಸಾಫಲ್ಯ ಸೇವಾ ಸಂಘ ಮಾಜಿ ಗೌ| ಪ್ರ| ಕಾರ್ಯದರ್ಶಿ ಕಿರಣ್ ಮೂಲ್ಕಿ, ಮೊಗವೀರ ಸಂಘದ ಮಹಿಳಾ ವಿಭಾಗಧ್ಯಕ್ಷೆ ರಾಜೀವಿ ವಿಶ್ವನಾಥ್ ಕಾಂಚನ್, ಪದ್ಮಶಾಲಿ ಸಮಾಜ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಹೆಚ್.ಶೆಟ್ಟಿಗಾರ್ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಆಥಿರ್üಕವಾಗಿ ಹಿಂದುಳಿದ ಸಮಾಜ ಮಹಿಳೆಯರನ್ನು ಗುರುತಿಸಿ ಅವರಿಗೆ ಹೊಲಿಗೆ ಯಂತ್ರವನ್ನು ಬಳಸುವ ವಿಧಾನ ತಿಳಿಪಡಿಸಿ ಅತಿಥಿüüಗಳು ಧರ್ಮಾರ್ಥವಾಗಿ ಯಂತ್ರವನ್ನು ವಿತರಿಸಿದರು. ಬೆರ್ನೆಟ್ಟ್ ಸಂಸ್ಥೆಯು ಅತ್ಯಾಧುನಿಕವಾಗಿ ರಚಿಸಲ್ಪಟ್ಟ ಹೊಲಿಗೆ ಯಂತ್ರದ ಉಪಯೋಗದ ಪ್ರತ್ಯಕ್ಷಿಕೆ ನೀಡಲಾಯಿತು. ಆರಂಭದಲ್ಲಿ ಆರ್ಟ್ ಝೋನ್ ಮಾಲಕಿ ರೇಶ್ಮಾ ಆಚಾರ್ಯ ಅವರು ಡಾಟ್ ಆಟ್9 ವರ್ಕ್‍ಶಾಪ್ (ಸ್ವಉದ್ಯೋಗ) ವಿಶೇಷವಾಗಿ ತರಬೇತಿ ನೀಡಿದರು.

ಇದು ಭಾಗ್ಯ, ಭಾಗ್ಯ ಇದು, ಭಾಗ್ಯವಯ್ಯ ಎಂದು ದಾಸರು ಹೇಳಿದ್ದಂತೆ ಇದು ನಮ್ಮ ಪೂರ್ವ ಜನ್ಮದ ಫಲದ ಭಾಗ್ಯ ಎಂದೆಣಿಸಿದ್ದೇನೆ. ಕಾರಣ ಸಮಾಜಕ್ಕೆ ನಮ್ಮ ಕೊಡುಗೆ ಏನೆಂದು ತಿಳಿದು ಇಂತಹ ಸೇವೆಯ ಮೂಲಕವಾದರೂ ಸಮಾಜ ಋಣ ಪೂರೈಸಿ ಸಂತಸ ಪಡೆಯುವ ಭಾಗ್ಯ ನನಗೊದಗಿದೆ. ಸಂಸ್ಥೆ ಬೆಳೆದು ಸದಸ್ಯರ, ಸಮಾಜದ ಕಷ್ಟಕಾಲಕ್ಕೆ ಸ್ಪಂದಿಸದಿದ್ದರೆ ಆ ತನಕ ಸಂಘ-ಸಂಸ್ಥೆಗಳ ಕೊಡುಗೆ ಶೂನ್ಯ ಆಗಿರುತ್ತದೆ. ಆದುದರಿಂದ ಸಂಘವೂ ಬೆಳೆಯಬೇಕಾದರೂ ಅಶಕ್ತರನ್ನು ಸ್ಪಂದಿಸಬೇಕು ಶ್ರೀನಿವಾಸ ಪಿ.ಸಾಫಲ್ಯ ನುಡಿದರು.

ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕಿ, ಹಿರಿಯ ಲೇಖಕಿ, ಕವಯತ್ರಿ ಡಾ| ವಾಣಿ ಉಚ್ಚಿಲ್ಕರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಸಲಾಗಿದ್ದು ಹೆಸರಾಂತ ಕವಿಗಳಾದ ಗೋಪಾಲ ತ್ರಾಸಿ, ಸಾ.ದಯಾ, ಡಾ| ಕರುಣಾಕರ ಎನ್.ಶೆಟ್ಟಿ, ಅಶೋಕ್ ಎಸ್.ಸುವರ್ಣ, ಅಶೋಕ ವಳದೂರು, ಲಲಿತಾ ಅಂಗಡಿ, ತಾರಾ ಬಂಗೇರಾ ಭಾಗವಹಿಸಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಸಾಫಲ್ಯ ಮಾಸಿಕದ ಸಂಪಾದಕಿ ಡಾ| ಜಿ.ಪಿ ಕುಸುಮಾ ಕವಿಗೋಷ್ಠಿಯನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿಭಾವ ಭಜನೆ ಕಾರ್ಯಕ್ರಮ ನಡೆಸಲಾಗಿದ್ದು, ತೀರ್ಪುದಾರರಾಗಿ ಗಣೇಶ್ ಎರ್ಮಾಳ್ ಮತ್ತು ಮಹೇಂದ್ರ ಶೆಟ್ಟಿ ಸಹಕರಿಸಿದ್ದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ರವಿಕಾಂತ್ ಸಫಲಿಗ, ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಕಲಾ ಬಂಗೇರ ಸೇರಿದಂತೆ ಭಾರೀ ಸಂಖ್ಯೆಯ ಸಾಫಲ್ಯ ಬಂಧುಭಗಿನಿಯರು ಉಪಸ್ಥಿತರಿದ್ದು ಉಪಾಧ್ಯಕ್ಷೆ ವಿಮಲಾ ಬಂಗೇರಾ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಜನಾ ಕುಂಜತ್ತೂರು ಅತಿಥಿüಗಳನ್ನು ಪರಿಚಯಿ ಸಿದರು. ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಸಚಿನ್ ಸಾಲ್ಯಾನ್, ಲೀಲಾಧರ್ ಬಂಗೇರ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಶಾಂತಾ ಸುವರ್ಣ, ದಮಾಯಂತಿ ಸಾಲ್ಯಾನ್, ಕು| ಸಂಧ್ಯಾ ಪುತ್ರನ್, ಕು| ದಿವ್ಯ ಸಾಫಲ್ಯ, ಕು| ಅಶ್ವಿನಿ ಸಫಲಿಗ, ಸುಲೋಚನ ಸಫಲಿಗ, ಮಾಲತಿ ಸೋಮೇಶ್ವರಿ ಕವಿಗಳಿಗೆ ಗೌರವಿಸಿದರು. ಉಷಾ ಸಫಲಿಗ ಕಾರ್ಯಕ್ರಮ ನಿರ್ವಹಿಸಿದರು. ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಕೃತಜ್ಞತೆ ಸಲ್ಲಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here