Saturday 24th, August 2019
canara news

ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ

Published On : 20 Apr 2019   |  Reported By : Rons Bantwal


ಮಾತೃಭಾಷೆ ಬೆಳವಣಿಗೆ ಶಿಸು ರಕ್ತಗತವಾಗಲಿ-ವಿದ್ಯಾಸಿಂಹಾಚಾರ್ಯ ಮಾಹುಲಿ

ಮುಂಬಯಿ, ಎ.18: ಮಾತೃ ಭಾಷೆಯನ್ನು ಜನ್ಮತ: ಮನೆ-ಮನೆಗಳಲ್ಲಿ ಹುಟ್ಟುಹಾಕಬೇಕು. ಮಾತೃ ಭಾಷೆಯೇ ಎಲ್ಲಾ ಭಾಷೆಗಳ ಆಧಾರ ಸ್ತಂಭ. ಕನ್ನಡ ಸಂಘ ಎಂದರೆ ಕನ್ನಡ ಭಾಷೆಯ, ಚರಿತ್ರೆಯ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸುವುದು. ಅಳಿದು ಹೋದ ಸಂಸ್ಕøತಿಯನ್ನು ಬಾವಿ ಪೀಳಿಗೆಗಳಲ್ಲಿ ಪುನರುಜ್ಜೀವನ ಗೊಳಿಸುವುದು. ಭಾಷಾಭಿಮಾನ, ಭಾಷಾ ಬೆಳವಣಿಗೆ ಹಾಗೂ ಜನೋದ್ದಾರವನ್ನು ಮಾಡುವ ಮಹತ್ತರವಾದ ಉದ್ದೇಶವಾಗಿದೆ. ಕನ್ನಡ ಭಾಷೆಯ ಹಿರಿಮೆ-ಗರಿಮೆ, ಸಂಸ್ಕøತಿಯ ಪ್ರಹಾರದ ಜೊತೆಗೆ ಕನ್ನಡಿಗರಲ್ಲಿ ಧೈರ್ಯ, ಸ್ಥೈರ್ಯ, ಆತ್ಮ ವಿಶ್ವಾಸವನ್ನು ಪ್ರತಿಬಿಂಬಿಸುವ ಕಾರ್ಯಾರಂಭವಾಗಬೇಕು. ಕನ್ನಡ ಸಾಹಿತ್ಯದ ಕುರಿತು ಕಮ್ಮಟಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುವ ಮಹಾನ ಕಾರ್ಯವಾಗಬೇಕಾಗಿದೆ. ಕನ್ನಡ ಸಂಘ ಎಂದರೆ ಕನ್ನಡ ಭಾಷಾಭಿಮಾನವನ್ನು ಮನೆ-ಮನೆಗಳಲ್ಲಿ, ಮನ ಮನಗಳಲ್ಲಿ ಹೊಂಬೆಳಕಾಗಿ ಹರಡಲಿ, ಸಂಘದಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆದುಕೊಂಡು ಮುಲುಂಡ್ ಮತ್ತು ಇತರ ವಲಯಗಳ ಕನ್ನಡಿಗರು ಮುಲುಂಡ್ ಕನ್ನಡ ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಕನ್ನಡ ಸಂಘದ ಸ್ಥಾಪನೆ ಸಾರ್ಥಕವಾಗುತ್ತದೆಂದು, ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸುವ ಮಹತ್ವದ ವೇದಿಕೆ ಇದಾಗಿದೆ. ಈ ಸಂಘದ ಮೂಲಕ ಕನ್ನಡ ಭಾಷೆಯನ್ನು ಜನಜಾಗೃತಿ ಮಾಡಿ, ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡರೆ ತಾಯಿ ಭುವನೇಶ್ವರಿಯ ಕೀರ್ತಿಯ ಧ್ವಜದ ಪತಾಕೆಯನ್ನು ಹೊರನಾಡಿನಲ್ಲಿ ಪ್ರಕಾಶಿಸಿದಂತಾಗುತ್ತದೆಂದು ಸತ್ಯಾಧ್ಯಾನ ವಿದ್ಯಾಪೀಠದ ಕುಲಪತಿ ವಿದ್ಯಾಸಿಂಹಾಚಾರ್ಯ ಕಾರ್ಯಕ್ರಮ ಉದ್ಘಾಟಿಸಿ, ಮುಲುಂಡ್ ಕನ್ನಡ ಸಂಘ ಲೋಕಾರ್ಪಣೆ ಮಾಡಿ ಶುಭಾಶೀರ್ವಾದಗೈದರು.

ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಬಿ.ಎಚ್ ಕಟ್ಟಿ ಅನಿಸಿಕೆ ವ್ಯಕ್ತಪಡಿ ಎಲ್ಲಿ ಸಂಘ-ಸಂಸ್ಥೆಗಳು ಸಂಖ್ಯೆಯನ್ನು ಮುಂಬಯಿ ಮಹಾನಗರಿಯಲ್ಲಿ ಕಾರ್ಯನಿರತವಾಗಿರುವುದು ಸತ್ಯ ಸಂಗತಿಯಾಗಿದ್ದು, ಅಭಿಮಾನದ ವಿಷಯವಾಗಿದೆ. ಕನ್ನಡ ಸಂಘ-ಸಂಸ್ಥೆಗಳು ಮುಂಬಯಿಯ ವಿವಿಧ ವಲಯಗಳಲ್ಲಿ ಆಲದ ಮರದ ಹಾಗೆ ಪಸರಿಸಿರುವುದು ಕನ್ನಡಿಗರ ಸಾಧನೆಯ ಪ್ರತೀಕವಾಗಿದೆ. ಮುಲುಂಡ್ ಕನ್ನಡ ಸಂಘವು ಸಹ ಕನ್ನಡ ಭಾಷೆ-ನಾಡು-ನುಡಿ-ಸಾಹಿತ್ಯ ಪ್ರದರ್ಶಿಸುವ ಸುವರ್ಣಾವಕಾಶದ ಮಹಾನ ವೇದಿಕೆ ಎಂದರೆ ತಪ್ಪಾಗಲಾರದು. ಮನೆ-ಮನೆಗಳಲ್ಲಿ, ಮನ-ಮನಗಳಲ್ಲಿ ಕನ್ನಡದ ಭಾಷೆ ನಿರಂತರವಾಗಿ ಹರಿಯುವ ನೀರಿನಂತೆ ಕಾರ್ಯಾಗತಗೊಳ್ಳಬೇಕಾಗಿದೆ. ಕನ್ನಡ ಭಾಷೆಯ ಪ್ರೇಮಿಗಳು, ಕನ್ನಡ ಅಭಿಮಾನಿಗಳಿಗೆ ಈ ಸಂಘದ ದ್ವಾರ ಬಾಗಿಲು ಸದಾ ಮುಕ್ತವಾಗಿದೆ. ಹೊರನಾಡಿನಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಮನೋಭಾವನೆ ನಮ್ಮದಾಗಬೇಕಾಗಿದೆಂದು ಶುಭ ಕೋರಿದರು.

ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಡಾ| ಪಿ.ಎಂ ಕಾಮತ್ ದೀಪ ಪ್ರಜ್ವಲಿಸಿ ಮಾತನಾಡಿ ಕನ್ನಡದ ಉದ್ದೇಶ ಸರ್ವಧರ್ಮ ಸಮಭಾವವನ್ನು ಮನದಾಳದಿಂದ ಪಾಲಿಸುವುದು. ಕನ್ನಡ ಭಾಷೆಯ ಸಿರಿ-ಸಂಪತ್ತು ನಮ್ಮಿಂದಲೇ ನಾಶವಾಗುವ ಮೊದಲು ಅದರ ಅಭಿವೃದ್ಧಿಯ ಕುರಿತು ಎಚ್ಚರಗೊಳ್ಳಬೇಕಾಗಿದೆ. ಬನ್ನಿ ಕೈ ಜೊಡಿಸಿ ಕನ್ನಡದ ಸವಿಯನ್ನು ಸವಿಯಿರಿ. ಕನ್ನಡ ಭಾಷೆ ಮತ್ತು ಸಾಹಿತ್ಯದ ಜೊತೆಗೆ ಮುಲುಂಡ್ ಪರಿಸರದ ಹಾಗೂ ಇತರ ವಲಯದ ಕನ್ನಡಿಗರನ್ನು ಈ ಸಂಘದ ಕಾರ್ಯವೈಖರಿಗೆ ಕರೆತರುವುದಾಗಿದೆ. ಉದಾರ ಮನಸ್ಸಿನಿಂದ, ವಿಶಾಲ ಮನೋಭಾವನೆಯಿಂದ, ಹೃದಯ ಶ್ರೀಮಂತಿಕೆಯಿಂದ ಎಲ್ಲಾ ಕನ್ನಡಿಗರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಅಭಿವೃದ್ಧಿಗಾಗಿ ಅಹರ್ನಿಸಿಯ ಕಾರ್ಯವನ್ನು ಮಾಡಿರಿ, ಎಲ್ಲಾ ಕನ್ನಡಿಗರನ್ನು ಒಂದೆಡೆ ಬೆರೆಸುವ, ಮನದಾಳದ ಮಾತನ್ನು ವ್ಯಕ್ತಪಡಿಸುವ ಮಹಾನ ವೇದಿಕೆ ಇದಾಗಿದೆ. ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಭಾಷೆಯ ಮಹತ್ವವನ್ನು, ಕನ್ನಡ ಭಾಷೆಯ ಸಿರಿ-ಸಂಪತ್ತನ್ನು, ಕನ್ನಡ ಭಾಷೆಯ ಮತ್ತು ಐತಿಹಾಸಿಕ ವೈಭವವನ್ನು ಈ ಸಂಘದಲ್ಲಿ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರದರ್ಶಿಸುವುದಾಗಿದೆ. ತನು-ಮನ-ಧನದಿಂದ ಕನ್ನಡ ಕಾರ್ಯವನ್ನು ಮಾಡಲು ಮುಂದೆ ಬರೆಬೇಕೆಂದು, “ಮುಲುಂಡ್ ಕನ್ನಡ ಸಂಘ ಇದು ನಿಮ್ಮ ಸಂಘ, ನಿಮ್ಮಿಂದ ಬೆಳೆಯಬೇಕಾಗಿದೆಂದು ಅಧ್ಯಕ್ಷೀಯ ಭಾಷಣದ ಮೂಲಕ ಕನ್ನಡ ಅಭಿಮಾನಿ ಬಂಧುಗಳಿಗೆ ಮತ್ತು ಪ್ರೇಮಿಗಳಿಗೆ ಹೇಳುತ್ತಾ ಶುಭ ಕೋರಿದರು.

ಮಾಜಿ ಅಧ್ಯಕ್ಷ ಡಾ| ಎಸ್.ಮೋಹನ್, ಆಜೀವ ಸದಸ್ಯ ಡಾ| ಕೆ.ಗಿಡದುಬ್ಲಿ, ವಿದ್ಯಾ ಪ್ರಸಾರಕ ಮಂಡಳದ ಖಜಾಂಚಿ ಪೆÇ್ರ| ಸಿ.ಜೆ ಪೈ, ಸಹ ಖಜಾಂಚಿ ಎನ್.ಎಂ ಗುಡಿ ವೇದಿಕೆಯಲ್ಲಿ ಆಸೀನರಾಗಿದ್ದು, ಕಾರ್ಯಕ್ರಮದಲ್ಲಿ ಮಂಡಳದ ಪದಾದಿಕಾರಿ ಗಳು, ವಿದ್ಯಾ ಪ್ರಸಾರಕ ಮಂಡಳದ ಎಲ್ಲಾ ವಿಭಾಗದ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯವರು, ಪರಿವೀಕ್ಷಕರು, ಶಿಕ್ಷಕರು, ಕನ್ನಡ ಅಭಿಮಾನಿಗಳು, ಕನ್ನಡ ಪ್ರೇಮಿಗಳು ಸಮಾವೇಶಗೊಂಡಿದ್ದು, ವಿಪಿಎಂ ಸುಂದರಿಬಾಯಿ ಮಂಜುನಾಥ್ ಕಾಮತ್ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅರುಣಾ ಭಟ್‍ರ ಪ್ರಾರ್ಥನೆಯನ್ನಾಡಿ ದರು. ಮಾಧ್ಯಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುವಿನಾ ಶೆಟ್ಟಿ ಮತ್ತು ಶಿಕ್ಷಕಿ ಅಶ್ವಿನಿ ಬಂಗೇರಾ ಅತಿಥಿü ಪರಿಚಯಗೈದರು. ಡಾ| ಕಾಮತ್ ಅತಿಥಿüಗಳಿಗೆ ಶಾಲು ಹೊದಿಸಿ, ಫಲಪುಷ್ಪ ಕೊಟ್ಟು ಗೌರವಿಸಿದರು. ಶಿಕ್ಷಕಿ ಸುನಿತಾ ಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಂದ್ರಶೇಖರ ಬನ್ನಿಮಠ ಅನಿಸಿಕೆ ವ್ಯಕ್ತಪಡಿಸಿದರು. ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಪ್ರಮೋದ್ ಮುಳುಗುಂದ ಧನ್ಯವಾದ ಗೈದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಸಮಾರೋಪ ಗೊಂಡಿತು.
More News

ಬಿಲ್ಲವರ ಎಸೋಸಿಯೇಶನ್ ಸಿಬ್ಬಂದಿ ಕೃಷ್ಣ ಬಂಗೇರ ನಿವೃತ್ತಿ
ಬಿಲ್ಲವರ ಎಸೋಸಿಯೇಶನ್ ಸಿಬ್ಬಂದಿ ಕೃಷ್ಣ ಬಂಗೇರ ನಿವೃತ್ತಿ
ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಪೂರೈಸಿದ 19ನೇ ವಾರ್ಷಿಕ ಮಹಾಸಭೆ
ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಪೂರೈಸಿದ 19ನೇ ವಾರ್ಷಿಕ ಮಹಾಸಭೆ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ

Comment Here