Saturday 24th, August 2019
canara news

ಕುಂದಾಪುರದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಿದ

Published On : 23 Apr 2019   |  Reported By : Rons Bantwal


ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಎ.19: ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅವರ ನೇತೃತ್ವ ಹಾಗೂ ಪದಾಧಿಕಾರಿಗಳ ಮತ್ತು ಮಹಿಳಾ ವಿಭಾಗದ ಮುಂದಾಳತ್ವದಲ್ಲಿ ಬಂಟ ಸಮಾಜದ ಆಥಿರ್üಕ ಅಸಹಾಯಕ ವಧುವಿಗೆ ಪಾಣಿಗ್ರಹಣ ನೆರವೇರಿಸಲ್ಪಟ್ಟಿತು.

ತೆಳ್ಳಾರು ಹೊಸಮನೆ ಗೋಪಾಲ ಶೆಟ್ಟಿ (ದಿವಂಗತರು) ಮತ್ತು ವಾರಿಜಾಕ್ಷಿ ಜಿ.ಶೆಟ್ಟಿ ದಂಪತಿ ಸುಪುತ್ರಿ ಜ್ಯೋತಿ ಜಿ. ಶೆಟ್ಟಿ ವಧುವನ್ನು ಮಂಜಯ್ಯ ಶೆಟ್ಟಿ (ದಿವಂಗತರು) ಮತ್ತು ಗುಲಾಬಿ ಎಂ.ಶೆಟ್ಟಿ ಅವರ ಸುಪುತ್ರ ಅವಿನಾಶ್ ಶೆಟ್ಟಿ ವರನೊಂದಿಗೆ ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಅಭಿಜಿತ್ ಲಗ್ನ ಮಹೂರ್ತದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಇಲ್ಲಿನ ಮಣೂರು ರಾಜಲಕ್ಷ್ಮೀ ಸಭಾಗೃಹದಲ್ಲಿ ಸರಳವಾಗಿ ನಡೆಸಲ್ಪಟ್ಟ ವಿವಾಹ ಸಂಭ್ರಮದಲ್ಲಿ ಡಾ| ಆರ್.ಕೆ ಶೆಟ್ಟಿ ಮತ್ತು ಅನಿತಾ ಆರ್.ಕೆ ಶೆಟ್ಟಿ ದಂಪತಿ ಕನ್ಯಾದಾನ ನೇರವೇರಿಸಿ ಮದುವೆಯ ಹೊಸ ಹೆಜ್ಜೆ ಇಡುತ್ತಿರುವ ವದುವರರ ಪೀತಿ ಪಾತ್ರರನ್ನು ಅಭಿನಂದಿಸಿ. ಬಾಳಿನ ನಾಳೆಗಳೆಂದಿಗೂ ದಣಿಯದಿರಲಿ ಸರಸ ನಲಿವಿನ ದಾರಿಯಲ್ಲಿ ಮುಂದುವರಿಯಲಿ ಜೀವನ ಅನ್ನುತ್ತಾ ಮದುವೆಯ ಹೊಸ ಹೆಜ್ಜೆ ಇಡುತ್ತಿರುವ ನವದಂಪತಿಗೆ ಕಿವಿ ಮಾತುಗಳನ್ನಾಡುತ್ತಾ ನವ ದಂಪತಿಗಳಿಗೆ ಹರ್ಷ ಮತ್ತು ಸಮೃದ್ಧಿ ತುಂಬಿರಲೆಂದು ನೂತನ ವಧುವರರ ದಾಂಪತ್ಯ ಜೀವನಕ್ಕೆ ಹರಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಂಘದ ವಿಶ್ವಸ್ಥ ಸದಸ್ಯ, ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಲಕ್ಷಣ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ವೈವಾಹಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಡಾ| ಪ್ರಭಾಕರ್ ಶೆಟ್ಟಿ ಬೋಳ, ಖಾಂದೇಶ್ ಭಾಸ್ಕರ್ ಶೆಟ್ಟಿ, ಕಿಶೋರ್ ಶೆಟ್ಟಿ, ಡಿ.ಕೆ ಶೆಟ್ಟಿ, ಅಡ್ವಕೇಟ್ ಆರ್.ಜಿ ಶೆಟ್ಟಿ, ರಮೇಶ್ ಡಿ.ರೈ ಕಯ್ಯಾರು, ಸುಜಾತ ಗುಣಪಾಲ್ ಶೆಟ್ಟಿ, ಗೀತಾ ಶೆಟ್ಟಿ, ಆನಂದ್ ಶೆಟ್ಟಿ, ತರುಣ್ ಆರ್.ಕೆ ಶೆಟ್ಟಿ, ವಜ್ರ ಪೂಂಜ, ಪ್ರೇಮಾ ಶೆಟ್ಟಿ, ಜಯರಾಮ ಶೆಟ್ಟಿ, ಅಶೋಕ್ ಶೆಟ್ಟಿ, ಸೀತಾರಾಮ ಶೆಟ್ಟಿ, ಭಾರತಿ ಯಶವಂತ್ ಶೆಟ್ಟಿ ಸೇರಿದಂತೆ ವಧುವರರ ಪರಿವಾರ ಉಪಸ್ಥಿತರಿದ್ದು ಮದುವೆಯ ಈ ಬಂಧ ಅನುರಾಗದ ಅನುಬಂಧ, ಇದು ಸಮಗ್ರ ಸಮಾಜಕ್ಕೆ ಆದರ್ಶವಾಗಲಿ. ಈ ದಿನದಿಂದ ನೀವು ಇನ್ನೊಂದನ್ನು ಒಡೆಯಲು ಮತ್ತೊಂದು ಭುಜವನ್ನು ನೀಡಿದ್ದೀರಿ. ಈ ವಿಶೇಷ ಸುದಿನ ತಾವು ಯಾವಾಗಲೂ ಸ್ಮರಿಸಿ ಇಂದಿನ ಅನುಭವವನ್ನು ಯಾವಾಗಲೂ ನೆನಪಿಸಿಕೊಂಡು ನಿಮ್ಮ ಸಮಯವನ್ನು ಆನಂದಿಸಿ ಮತ್ತು ಹಳೆಯ ಮತ್ತು ಸಂತೋಷವನ್ನು ಬೆಳೆಸಿಕೊಳ್ಳಿ ಇತರರಿಗೆ ಪ್ರೇರಣೆ ಆಗುವಂತೆ ಆಶಯ ವ್ಯಕ್ತಪಡಿಸಿ ಸಂತೋಷದ ಮದುವೆಗಾಗಿ ಶುಭಾರೈಸಿದರು.
More News

ಬಿಲ್ಲವರ ಎಸೋಸಿಯೇಶನ್ ಸಿಬ್ಬಂದಿ ಕೃಷ್ಣ ಬಂಗೇರ ನಿವೃತ್ತಿ
ಬಿಲ್ಲವರ ಎಸೋಸಿಯೇಶನ್ ಸಿಬ್ಬಂದಿ ಕೃಷ್ಣ ಬಂಗೇರ ನಿವೃತ್ತಿ
ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಪೂರೈಸಿದ 19ನೇ ವಾರ್ಷಿಕ ಮಹಾಸಭೆ
ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಪೂರೈಸಿದ 19ನೇ ವಾರ್ಷಿಕ ಮಹಾಸಭೆ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ

Comment Here