Wednesday 24th, April 2024
canara news

ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Published On : 26 Apr 2019   |  Reported By : Roshan Kinnigoli


ತುಳುನಾಡಿನ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಇಂದು ಸಂಪ್ಪನ್ನಗೊಂಡಿತು. ಎ.14 ರಂದು ಆರಂಭಗೊಂಡ ಕ್ಷೇತ್ರದ ವಾರ್ಷಿಕ ಜಾತ್ರೆಯು ಸೋಮವಾರ ತನಕ ವಿಜೃಂಭಣೆಯಿಂದ ನಡೆಯಿತು. ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ತಾಯಿ ದುರ್ಗಾ ಪರಮೇಶ್ವರಿಯ ದರ್ಶನ ಪಡೆದು ಜನರು ಕೃತಾರ್ಥರಾದರು . ಜಾತ್ರಾ ಮಹೋತ್ಸವದ ಕೊನೆಯ ದಿನ ವಾದ ಆದಿತ್ಯವಾರದಂದು ಸಂಜೆ ದೇವರ ಬಲಿ ಉತ್ಸವ ನಡೆಯಿತು . ದೇವಳದ ವಸಂತ ಮಂಟಪದಲ್ಲಿ ದುರ್ಗಾ ಪರಮೇಶ್ವರಿಗೆ ಪೂಜೆ ನಡೆದು ಬಳಿಕ ಪಲ್ಲಕಿಯಲ್ಲಿ ಎಕ್ಕಾರಿನವರೆಗೆ ನಿನ್ನೆ ಸವಾರಿ ಸಾಗಿತು .

ಸವಾರಿ ಹೋಗಿ ಹಿಂದೆ ಬರುವ ಸಂದರ್ಭದಲ್ಲಿ ಸಿಗುವ ದೇವರ ಸುಮಾರು 18 ಕಟ್ಟೆಗಳಲ್ಲಿ ಕಟ್ಟೆ ಪೂಜೆ ನೆರವೇರಿಸಿ ಬಳಿಕ ಶ್ರೀದುರ್ಗಾ ಪರಮೇಶ್ವರಿ ಕಟೀಲಿಗೆ ಆಗಮಿಸಿತು.ಈ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ ಜರುಗಿತು .

ನಂತರ ಕಟೀಲಿನಲ್ಲಿ ಶ್ರೀದೇವಿ ರಥಾರೂಢಳಾಗಿ ಬ್ರಹ್ಮರಥೋತ್ಸವ ಜರುಗಿತು ನಂತರ ದೇವರ ಜಲಕವಾಗುತ್ತದೆ. ನಂತರ ನಡೆಯುವುವ ಸೇವೆಯೇ ಅತ್ಯಂತ ಆಕರ್ಷಕ ಮೈ ಜುಮ್ಮೆನಿಸುವ ತೂಟೆದಾರ ಸೇವೆಯಾಗಿದೆ.

ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಸ್ಥರ ನಡುವೆ ನಡೆಯುತ್ತದೆ.ತೂಟೆದಾರ ಸೇವೆ ನಡೆಯುವ ಅಗ್ನಿ ಯುದ್ಧ ಸೇವೆ ನೋಡಲು ಸಾವಿರಾರು ಜನರು ಸೇರುತ್ತಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here