Friday 29th, March 2024
canara news

ಕನ್ನಡ ಲೇಖಕಿಯರ ಬಳಗ `ಸೃಜನಾ' ದಿಂದ ಡಾ| ಗಿರಿಜಾ ಶಾಸ್ತ್ರೀ ಅನುವಾದಿತ `ಸಾವಿತ್ರೀ' ಕೃತಿ ಬಿಡುಗಡೆ

Published On : 28 Apr 2019   |  Reported By : Rons Bantwal


ಕಾದಂಬರಿಗಳ ಭಾಷಾಂತರ ಸುಲಭಸಾಧ್ಯವಲ್ಲ : ಮನೋಜ್ ರೇಗೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.27: ಕಾದಂಬರಿಗಳ ರೂಪಾಂತರ ಅಥವಾ ಭಾಷಾಂತರ ಸುಲಭಸಾಧ್ಯವಲ್ಲ. ಮರಾಠಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಗೊಳಿಸುವುದಂತೂ ತುಂಬಾ ಶ್ರಮದಾಯಕ ಕಾಯಕವಾಗಿದೆ. ಅದು ಮೇಧಾವಿತ್ವ, ಅನುಭವಸ್ಥರಿಂದಲೇ ಸಾಧ್ಯವಾಗುವುದು. ಭಾಷಾಂತರದ ಕೆಲಸವು ಕಠಿಣವು ಉತ್ಕೃಷ್ಟವಾದ ಕೆಲಸವಾಗಿದೆ. ಈ ಕೃತಿಯ ಅನುವಾದ ಕಾರ್ಯ ತುಂಬಾ ಶ್ರೇಷ್ಠವಾಗಿದೆ. ಗಿರಿಜಾ ಶಾಸ್ತ್ರೀ ಅವರ ಬರಹ ಶೈಲಿಯೂ ಅಷ್ಟೇ ಚೆನ್ನಾಗಿದೆ ಎಂದು ಇಂಡಿಯನ್ ಎಕನಾಮಿಕ್ ಸರ್ವೀಸ್‍ನ ನಿವೃತ್ತ ಅಧಿಕಾರಿ ಮನೋಜ್ ಸಿ.ರೇಗೆ (ಐಇಎಸ್) ನುಡಿದರು.

ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕಿರು ಸಭಾಗೃಹÀದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನಾ' ಸಂಸ್ಥೆಯು ಆಯೋಜಿಸಿದ್ದ ಪು.ಶಿ.ರೇಗೆ ಮರಾಠಿ ಭಾಷೆಯಲ್ಲಿ ರಚಿತ ಡಾ| ಗಿರಿಜಾ ಶಾಸ್ತ್ರೀ ಅವರಿಂದ ಕನ್ನಡ ಭಾಷಾನುವಾದಿತ ಕಾದಂಬರಿ `ಸಾವಿತ್ರೀ' ಕೃತಿ ಬಿಡುಗಡೆ ಗೊಳಿಸಿ ಮನೋಜ್ ರೇಗೆ ಮಾತನಾಡಿದರು.

ಬೃಹನ್ಮುಂಬಯಿನ ಹಿರಿಯ ಸಾಹಿತಿ, ಸೃಜನಾ ಬಳಗದ ಮಾರ್ಗದರ್ಶಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಪ್ರಹ್ಲಾದ ದಿವಾಂಜಿ ಉಪಸ್ಥಿತರಿದ್ದು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ| ಸುನೀತಾ ಶೆಟ್ಟಿ ಕೃತಿ ಪರಿಚಯಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಅನುವಾದ ಕಾರ್ಯ ಎಂದರೆ ಅನುಸೃಷ್ಟಿ ಎಂದೇಳಬಹುದು. ಮೂಲ ಭಾಷೆಯಿಂದ ಯಾವ ಭಾಷೆಗೆ ತರ್ಜುಮೆ ಮಾಡುವವರು ಯಾವಾಗಲೂ ಅನುಭವಸ್ಥವರಾಗಿರುವ ಲೇಖಕರಾಗಿರಬೇಕು. ಅವಾಗ ಮಾತ್ರ ಭಾಷಾಂತರ ಕಾರ್ಯ ಅರ್ಥಬದ್ಧವಾಗುತ್ತದೆ. ಗಿರಿಜಾ ಶಾಸ್ತ್ರೀ ಅವರು ಓರ್ವ ಉತ್ತಮ ಲೇಖಕಿ, ಸಂಶೋಧಕಿ, ಒಳ್ಳೆಯ ವಿಮರ್ಶಕಿ ಮತ್ತು ಅನುವಾಧಕಿ ಆದುದರಿಂದ ಈ ಕೃತಿಯು ಅರ್ಥಪೂರ್ಣವಾಗಿ ಮೂಡಿಬಂದಿದೆ. ಗುಜರಾತಿಯಿಂದ ಕನ್ನಡಕ್ಕೆ ಅನುವಾದಿಸುವುದು. ಅನುವಾದಕರು ಅವರ ಭಾಷೆಯಲ್ಲಿ ಅಲ್ಲ ಎರಡೂ ಭಾಷೆಗಳಲ್ಲೂ ಹಿಡಿತವಿದ್ದು ಸಹನೆವುಳ್ಳುವರಾಗಿದ್ದಾಗ ಮಾತ್ರ ಕೃತಿಯೂ ಮೌಲಿಕವಾಗಿ ರೂಪುಗೊಳ್ಳುವುದು. ಭಾಷಾಂತರದ ಭಾಷೆಗೆ ತನ್ನದೇ ಆದ ಸೌಂದರ್ಯವಿರುತ್ತದೆ. ಮೂಲಭಾಷೆಗೆ ಧಕ್ಕೆ ಯಾಗದಂತೆ ಅನುವಾದ ಕಾರ್ಯವಾದಾಗಲೇ ರೂಪಾಂತರಿತ ಕೃತಿ ಮಹತ್ವದ್ದಾಗುತ್ತದೆ ಎಂದರು.

ವಿಮರ್ಶಕಿ, ಲೇಖಕಿ, ಕವಯತ್ರಿ, `ಸಾವಿತ್ರೀ' ಕನ್ನಡ ಕೃತಿಕರ್ತೆ ಡಾ| ಗಿರಿಜಾ ಶಾಸ್ತ್ರೀ ಮಾತನಾಡಿ ಮನೋಜ್ ರೇಗೆ, ಪ್ರಹ್ಲಾದ ದಿವಾಂಜಿ ಎಲೆಮರೆಯ ಕಾಯಿಯಂತಿದ್ದು ಈ ಕೃತಿಯನ್ನು ರೂಪಿಸಲು ಸಹರಿಸಿದ ಫಲವಾಗಿ ಈ ಕೃತಿ ಸಾರಸ್ವತ ಲೋಕಕ್ಕೆ ಅರ್ಪಿಸುವತಾಗಿದೆ. ಅಂತೆಯೇ ಕನ್ನಡಕ್ಕೆ ಅನುವಾದಿಸಲು ಅನೇಕರ ಸಹಯೋಗದಿಂದ ಕೃತಿ ನಿರ್ಮಾಣ ಸಾಧ್ಯವಾಗಿದೆ. ಇಂತಹ ಕೃತಿಯನ್ನು ರಚಿಸಿದ ನನಗೆ ತೃಪ್ತಿಯಿದೆ ಅನ್ನುತ್ತಾ ಎಲ್ಲರ ಅಭಾರ ಮನ್ನಿಸಿದರು.
ಈ ಸಂದರ್ಭದಲ್ಲಿ ಜತೆ ಗೌರವ ಕೋಶಾಧಿಕಾರಿ ಅನಿತಾ ಪಿ.ಪೂಜಾರಿ ತಾಕೋಡೆ, ಸದಸ್ಯೆಯರಾದ ಡಾ| ಮಮತಾ ರಾವ್, ಸುರೇಖಾ ಹೆಚ್.ದೇವಾಡಿಗ, ಡಾ| ಕರುಣಾಕರ ಶೆಟ್ಟಿ ಡಾ| ಕೆ.ರಘುನಾಥ್, ಡಾ| ವ್ಯಾಸರಾಯ ನಿಂಜೂರು, ಗುರುರಾಜ್ ಎನ್.ನಾಯಕ್, ಸುಧಾಕರ ಪೂಜಾರಿ, ನಾರಾಯಣ ರಾವ್, ಡಾ| ಜಿ.ಪಿ ಕುಸುಮಾ, ಬಾಲಚಂದ್ರ ದೇವಾಡಿಗ, ಭೀಮರಾಯ ಚಿಲ್ಕ, ವಿವೇಕ್ ಎಸ್.ಶ್ಯಾನುಭಾಗ್ ಮತ್ತಿತರರು ಉಪಸ್ಥಿತರಿದ್ದರು.

ಗೌರವ ಕೋಶಾಧಿಕಾರಿ ಡಾ| ದಾಕ್ಷಾಯಣಿ ಯಡಹಳ್ಳಿ ಪ್ರಾರ್ಥನೆಯನ್ನಾಡಿದರು. ಸೃಜನಾ ಸಂಚಾಲಕಿ ಮೀನಾ ಕಾಳಾವರ ಸ್ವಾಗತಿಸಿ ಪ್ರಸ್ತಾವನೆಗೈದರು. ಅಕ್ಷತಾ ದೇಶಪಾಂಡೆ ಅತಿಥಿü ಪರಿಚಯಗೈದು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಹೇಮಾ ಸದಾನಂದ ಅಮೀನ್ ಅಭಾರ ಮನ್ನಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here