Thursday 18th, April 2024
canara news

ಕಟೀಲು-ಅಜಾರುನಲ್ಲಿ ದುರ್ಗಾ ಸಂಜೀವನೀ ಮಣಿಪಾಲ್ ಆಸ್ಪತ್ರೆ ಹಸ್ತಾಂತರ-ಶುಭಾರಂಭ

Published On : 29 Apr 2019   |  Reported By : Rons Bantwal


ಅನ್ಯರ ಆರೋಗ್ಯ ಕಾಳಜಿಯೇ ಶ್ರೇಷ್ಠಪೂಜೆ: ವಿಶ್ವೇಶತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.29: ಆರೋಗ್ಯದ ದೃಷ್ಟಿಯಿಂದ ದೀನದಲಿತರÀ ಸೇವೆಗೈಯುವುದೇ ದೊಡ್ಡ ಪುಣ್ಯದ ಕಾಯಕ. ಆರೋಗ್ಯದ ಕಷ್ಟಕರ ಕಾಲಕ್ಕೆ ಪರಿಹಾರವಾಗಿ ಸ್ಪಂದಿಸುವುದಕ್ಕಿಂತ ಸೇವೆ ಮತ್ತೊಂದಿಲ್ಲ. ಅನ್ಯರ ಕಷ್ಟದ ಸ್ಪಂದನೆ ಜೊತೆಗೆ ಪರರ ಆರೋಗ್ಯ ಕಾಳಜಿಯೇ ಶ್ರೇಷ್ಠಪೂಜೆ. ವೈದ್ಯರಲ್ಲಿ ದೊಡ್ಡ ಸರ್ಜನ್ ದುರ್ಗಾದೇವಿ ಆಗಿದ್ದಾರೆ. ದುರ್ಗಾದೇವಿಯೇ ಜಗತ್ತಿಗೆ ದೊಡ್ಡ ಸರ್ಜನ್ ಆಗಿದ್ದಾರೆ. ಆದುದರಿಂದ ಇಂದು ಅವರ ನಾಮದಲ್ಲಿ ಈ ಆಸ್ಪತ್ರೆ ಸೇವೆ ಸಿದ್ಧಗೊಂಡಿದೆ. ಅಂದು ಕೆಎಂಸಿಯು ಉಡುಪಿಯ ಕೃಷ್ಣನ ನಾಡಿನಲ್ಲಿ ಆಸ್ಪತ್ರೆ ತೆರೆದಿದ್ದು, ಇಂದು ಕೃಷ್ಣನ ತಂಗಿಯ ಜಾಗ ಕಟೀಲುನಲ್ಲಿ ಈ ಆಸ್ಪತ್ರೆ ನಿರ್ಮಿಸಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಸಂಜೀವನಿ ಟ್ರಸ್ಟ್ ಮುಂಬಯಿ ಸಂಸ್ಥೆಯು ಮಂಗಳೂರು ಕಟೀಲು ಅಲ್ಲಿನ ಅಜಾರುನಲ್ಲಿ ನಿರ್ಮಿಸಿರುವ ದುರ್ಗಾ ಸಂಜೀವನೀ ಮಣಿಪಾಲ್ ಆಸ್ಪತ್ರೆ (ಡಿಎಸ್‍ಕೆ ಮಣಿಪಾಲ್ ಹಾಸ್ಪಿಟಲ್)ಯನ್ನು ಇಂದಿಲ್ಲಿ ಪೂರ್ವಾಹ್ನ ಪೇಜಾವರ ಶ್ರೀಪಾದರು ಆಸ್ಪತ್ರೆ ಆಶೀರ್ವದಿಸಿ ಅಮೃತಹಸ್ತಗಳಿಂದ ಕೆಎಂಸಿ ಸಂಸ್ಥೆಗೆ ಸೇವಾರ್ಪಣೆಗೆ ಹಸ್ತಾಂತರಿಸಿ ನೆರೆದ ಸದ್ಭಕ್ತರನ್ನು ಹರಸಿದರು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ ಅನುವಂಶಿಕೆ ಮೊಕ್ತೇಸರ, ಅನುವಂಶಿಕ ಅರ್ಚಕ ಶ್ರೀ ವಾಸುದೇವ ಅಸ್ರಣ್ಣ, ಶ್ರೀ ಕ್ಷೇತ್ರ ಕಟೀಲು ಇದರ ಆಡಳಿತ ಸಮಿತಿ ಅಧ್ಯಕ್ಷ, (ಮೊಕ್ತೇಸರ) ಸನತ್‍ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಸಹ ಕುಲಾಧಿಪತಿ ಡಾ| ಎಚ್.ಎಲ್ ಬಲ್ಲಾಳ್, ಕೆಎಂಸಿ ನಿರ್ದೇಶಕ ಡಾ| ರಂಜನ್ ಪೈ, ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್, ಸಂಜೀವನೀ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ಡಾ| ಸುರೇಶ್ ರಾವ್ ಕಟೀಲು, ಸಂಜೀವನೀ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಟ್ರಸ್ಟಿ ವಿಜಯಲಕ್ಷಿ ್ಮೀ ಸುರೇಶ್ ರಾವ್ ವೇದಿಕೆಯಲ್ಲಿ ಆಸೀನರಾಗಿದ್ದÀರು.

ಸದ್ಯ ವಿಷ ಸ್ವೀಕರಿಸಲು ಯಾರೂ ಸಾಧ್ಯವಿಲ್ಲ. ಆದರೂ ಲೋಕಕ್ಕೆ ಅಮೃತ ದೊರೆಯಲಿ ಅನ್ನುವವರ ತ್ಯಾಗದ ಫಲವಾಗಿ ದುರ್ಗಾ ಸಂಜೀವನೀ ಆಸ್ಪತ್ರೆ ರೂಪುಗೊಂಡಿದೆ. ಅನ್ಯರ ಕಷ್ಟಕ್ಕೆ ಶ್ರಮ ಪಟ್ಟರೆ ನಮ್ಮೊಳಗಿನ ಕಷ್ಟಗಳು ತನ್ನಷ್ಟಕ್ಕೇ ಶಮನಗೊಳ್ಳುವುದು. ಜೀವಸಂಕುಲದ ಇತಿಮಿತಿ ಮೀರಿದಾಗ ದುರ್ಮಾಂಸ ಹುಟ್ಟುವುದು. ಇಂತಹ ಇತಿಮಿತಿ ಮೀರಿ ಬೆಳೆಯುವುದೇ ಕ್ಯಾನ್ಸರ್. ಇಂತಹ ನಿವಾರಣೆಗೆ ದುರ್ಗೆಯ ಅಭಯ ಅವಶ್ಯವಾದದು. ಉಭಯ ಸಂಸ್ಥೆಗಳ ಮುಂದಾಳುತ್ವದಲ್ಲಿ ಈ ಊರಿನ ಜನತೆಗೆ ಉತ್ತಮ ರೀತಿಯ ಆರೋಗ್ಯಸೇವೆ ಪಾವನವಾಗಲಿ. ಒಂದೆಡೆ ಜನತೆ ಆರಾಧನೆ ಮತ್ತೊಂದೆಡೆ ಭಗವಂತನ ಆರಾಧನೆಯಲ್ಲಿ ಸಕ್ರೀಯರಾದ ಡಾ| ಸುರೇಶ್ ರಾವ್ ನಾನಾ ಸೇವೆ ಮೂಲಕ ಸೇವಾಂಕ್ಷಿಯಾಗಿ ಭಗವಂತನನ್ನು ಬಲ್ಲವರು. ದೇವರಿಗೆ ಕೊಡುವ ಸೇವೆಯೇ ಜನ ಸೇವೆ ಎಂದೆಣಿಸಿದ ಅವರ ಎಲ್ಲಾ ಸ್ತರದ ಸೇವೆಗಳು ಪರಮ ಸೇವೆಯಾಗಿವೆ ಎಂದೂ ಪೇಜಾವರಶ್ರೀಗಳು ನುಡಿದರು.

ಡಾ| ಸುರೇಶ್ ರಾವ್ ಪ್ರಸ್ತಾವನೆಗೈದು ಆಸ್ಪತ್ರೆ ಸೇವಾರ್ಪಣೆಗೈದು ನಮ್ಮ 25 ಸಾಲಿನ ದೀರ್ಘಾವಧಿಯ ಕನಸು ಇಂದು ನನಸಾಗಿದೆ. ಕಟೀಲುನಂತಹ ಸಣ್ಣ ಗ್ರಾಮದಲ್ಲಿ ಸುಮಾರು 8000 ಜನತಾ ಸೇವೆಯಲ್ಲಿ100 ಬೆಡ್‍ಗಳ ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆ ಇದೇ ಮೊದಲೆಣಿಸಿದ್ದೇನೆ. ಒಂದು ಗ್ರಾಮದಲ್ಲಿ ಸಿಟಿ ಸ್ಕಾ ್ಯನ್, ನಾಲ್ಕು ದೊಡ್ಡ ಅಪರೇಶನ್ ಕೊಠಡಿಗಳಿರುವ ಆಸ್ಪತ್ರೆ ನಿರ್ಮಾಣಗೊಂಡಿತ್ತೆಂದಾದರೆ ಇಂದು ವಿಶ್ವಮಾನ್ಯತೆಯ ಮಣಿಪಾಲ ಕಟೀಲಿಗೆ ಬಂದಂತಾಗಿದೆ. ಕಟೀಲು ಅಂದರೆ ಈ ತನಕ ದೇವರ ಅನುಗ್ರಹ. ಅನ್ನದಾನ, ವಿದ್ಯಾದಾನಕ್ಕೆ ಸೀಮಿತವಾಗಿದ್ದು ಇಂದಿನಿಂದ ಆರೋಗ್ಯದಾನಕ್ಕೂ ಕಾರಣಕರ್ತವಾಯಿತು. ಆರೋಗ್ಯದಾನವಾಗಿ ಭ್ರಮರಾಂಭಿಕೆ ಕರುಣಿಸಿದ್ದಾಳೆ. ಆದ್ದಂರಿಂದ ಈ ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ಎಂದೂ ಹಣದ ಕೊರತೆಯಾಗಿ ಹಿಂದೆ ಹೋಗದಂತೆ ಒಂದು ಆರೋಗ್ಯನಿಧಿಯನ್ನೂ ರಚಿಸುವ ಆಶಯ ಹೊಂದಿದ್ದೇವೆ ಎಂದರು.

ಪೂರ್ವಾಹ್ನ ಶ್ರೀ ಕ್ಷೇತ್ರ ಕಟೀಲುನಲ್ಲಿ ಮಾತೆ ಕಟೀಲೇಶ್ವರಿಯ ಪ್ರತಿಮೆಯನ್ನು ಪೂಜಿಸಿ ತೆರೆದ ಅಲಂಕೃತ ವಾಹನದಲ್ಲಿ ಗಣ್ಯಾಧಿಗಣ್ಯರೊಂದಿಗೆ ಭವ್ಯ ಮೆರವಣಿಗೆ ಮೂಲಕ ಬರ ಮಾಡಿಕೊಂಡ ಶ್ರೀ ಭ್ರಮರಾಂಬಿಕೆ ದೇವಿಯನ್ನು ಆಸ್ಪತ್ರೆಯ ದೇವರ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಬ್ರಹ್ಮಶ್ರೀ ವೇ| ಮೂ| ರಾಮಚಂದ್ರ ಉಪಾಧ್ಯಾಯ ಹಾಗೂ ವೇ| ಮೂ| ಗುರುರಾಜ ಉಡುಪ ಅವರ ಪೌರೋಹಿತ್ಯದಲ್ಲಿ ಹಲವಾರು ಹೋಮ, ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಟ್ರಸ್ಟಿಗಳಾದ (ನಿರ್ದೇಶಕರು) ಲಕ್ಷ್ಮೀಶ ಜಿ.ಆಚಾರ್ಯ ಮತ್ತು ವನಿತಾ ಎಲ್.ಆಚಾರ್ಯ, ಡಾ| ಪ್ರಶಾಂತ್ ರಾವ್ ಮತ್ತು ಡಾ| ಸುಪ್ರಿಯಾ ಪಿ.ರಾವ್ (ಇಎನ್‍ಟಿ), ಜಗದೀಶ್ ಆಚಾರ್ಯ ಮತ್ತು ವಿೂರಾ ಜೆ.ಆಚಾರ್ಯ, ಸತೀಶ್ ರಾವ್ ಮತ್ತು ಅರುಣಾ ಎಸ್.ರಾವ್, ಚಂದ್ರಶೇಖರ್ ರಾವ್ ಮತ್ತು ಜಯಶ್ರೀ ಸಿ.ರಾವ್, ಡಾ| ಸುರೇಶ್ ರಾವ್ ಕಟೀಲು ಮತ್ತು ವಿಜಯಲಕ್ಷಿ ್ಮೀ ಸುರೇಶ್ ರಾವ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಜೀವನೀ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಟ್ರಸ್ಟಿಗಳಾದ ಡಾ| ಶುೃತಿ ಎಸ್.ರಾವ್, ಡಾ| ದೇವಿಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್, ಡಾ| ಕಲ್ಲಡ್ಕ ಪ್ರಭಾಕರ್ ಭಟ್, ನಳೀನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೃಷ್ಣ ವೈ.ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಭುಜಂಗ ಎಂ.ಶೆಟ್ಟಿ, ಜಯಕೃಷ್ಣ ಎ.ಶೆಟ್ಟಿ, ಜಯ ಎನ್.ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಐಕಳ ಗುಣಪಾಲ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಗೀತಾ ಪೂಜಾರಿ, ಲಕ್ಷಿ ್ಮೀನಾರಾಯಾಣ ಮುಚ್ಚಿಂತ್ತಾಯ, ತೋನ್ಸೆ ಬಿ.ರಮಾನಂದ ರಾವ್, ಲಕ್ಷ್ಮಿ ಆರ್.ರಾವ್, ಜಗದೀಶ ಆಚಾರ್ಯ, ಅನಂತ ಪೇಜಾವರ, ಡಾ| ಆನಂದರಾಯ್ ಪೈ, ಡಾ| ಪ್ರಕಾಶ್ ರಾವ್ ಕೊಯಮುತ್ತೂರು, ಪೆÇ್ರ| ರಾಮಕೃಷ್ಣ ಚಡಗ, ಚಂದ್ರಶೇಖರ್ ಆಚಾರ್ ಬೆಂಗಳೂರು, ಡಾ| ಜಯರಾಮ ಐತಾಳ ದುಬಾಯಿ, ವಿದ್ವಾನ್ ಲಕ್ಷ್ಮೀನಾರಾಯಣ ಅಸ್ರಣ್ಣ, ವಿದ್ವಾನ್ ಪದ್ಮನಾಭ ಅಸ್ರಣ್ಣ, ವಿದ್ವಾನ್ ಅನಂತ ಪದ್ಮನಾಭ ಅಸ್ರಣ್ಣ, ವಿದ್ವಾನ್ ವೆಂಕಟ್ರಾಮಣ ಅಸ್ರಣ್ಣ, ಹರಿದಾಸ್ ಭಟ್ ಮುಂಡ್ಕೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.

ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಕ ಡಾ| ಸುರೇಶ್ ಎಸ್.ರಾವ್ ಕಟೀಲು ಪ್ರಸ್ತಾವನೆಗೈದು ಆಸ್ಪತ್ರೆಯ ಯೋಜನೆ ಬಗ್ಗೆ ತಿಳಿಸಿದರು. ಪೇಜಾವರಶ್ರೀಗಳು ಉಭಯ ಸಂಸ್ಥೆಗಳ ಪರವಾಗಿ ಶ್ರಮಿಸಿದÀ ಅಶೋಕ್ ಆಳ್ವ, ಆರ್ಕಿಟೆಕ್ ಸಾಧನಾ ಕಾಮತ್, ಕ್ಯಾಪ್ಟನ್ ಕೆ.ಬೆಳ್ಳಿಯಪ್ಪ, ಕೆ.ಎಲ್ ಕಾಮತ್, ದಿವಾಕರ್ ಕೋಟ್ಯಾನ್, ತ್ಮ್ಮಪ್ಪ ಕೋಟ್ಯಾನ್ ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು. ಶ್ರೀ ವಾಸುದೇವ ಅಸ್ರಣ್ಣ ಶುಭ ಶಂಸನೆಗೈದರು.

ಕು| ದಿಶಾ ಕಟೀಲು ಮತ್ತು ಕು| ದೀಕ್ಷಾ ಕಟೀಲು ಪ್ರಾರ್ಥನೆಯನ್ನಾಡಿದರು. ವಿದ್ವಾನ್ ಕಟೀಲು ಹರಿನಾರಾಯಣ ಅಸ್ರಣ್ಣ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟೀ ಲಕ್ಷ್ಮೀಶ ಆರ್ಚಾರ್ಯ ಕೃತಜ್ಞತೆ ಅರ್ಪಿಸಿದರು. ರಾತ್ರಿ ಆಸ್ಪತ್ರೆ ಆವರಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೇವೆ ರೂಪಿತ `ಧನ್ವಂತರಿ, ಸಂಜೀವಿನಿ, ಶ್ರೀನಿವಾಸ ಕಲ್ಯಾಣ' ಯಕ್ಷಗಾನ ಪ್ರದರ್ಶಿಸಿತು.

ಕಟೀಲು ಪರಿಸರ ಮತ್ತು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ
ಸಂಜೀವನಿ ಟ್ರಸ್ಟ್ ಮುಂಬಯಿ ಸಂಸ್ಥೆಯು ಶ್ರೀ ದುರ್ಗಾ ಪರಮೇಶ್ವರಿ ಟೆಂಪಲ್ ಟ್ರಸ್ಟ್ ಸಹಯೋಗದಲ್ಲಿ ಕಟೀಲು ಇಲ್ಲಿನ ಪ್ರಶಾಂತ ವಾತಾವರಣದ 1.5 ಎಕರೆ ಜಾಗದಲ್ಲಿ 3 ಅಂತಸ್ತಿನ ಕಟ್ಟಡದೊಂದಿಗೆ 70,000 ಚದರ ವಿಸ್ತೀರ್ಣದಲ್ಲಿ ಬಹುಕೋಟಿ ವೆಚ್ಚದಲ್ಲಿ 100 ಬೆಡ್‍ಗಳ ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ನಿರ್ಮಿಸಿದೆ. ವೈದ್ಯಕೀಯ ಸೇವೆಗಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಕೆಎಂಸಿ ಸಂಸ್ಥೆಗೆ ಹಸ್ತಾಂತರಿದ್ದು ಅವರು ಹಗಲಿರುಳು ಸೇವೆಯೊಂದಿಗೆ ಕಾರ್ಯನಿರ್ವಹಿಸುವರು. ಇಲ್ಲಿ ಔಷಧಾಲಯ, ಸಾಮಾನ್ಯ ಚಿಕಿತ್ಸೆ ಮತ್ತು ಶಸ್ತ್ರಕ್ರಿಯೆ, ಹೃದಯ ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಹೆರಿಗೆ ವಿಭಾಗ, ಮಕ್ಕಳ ಮತ್ತು ಶಿಶು ವೈದ್ಯಕೀಯ, ಮೂಳೆ ಚಿಕಿತ್ಸೆ (ಎಲುಬು ಮತ್ತು ಕೀಲು), ಕಣ್ಣಿನ ತಪಾನಸೆ, ನೇತ್ರಶಾಸ್ತ್ರ, ಕಣ್ಣು, ಮೂಗು, ಗಂಟಲು (ಇಎನ್‍ಟಿ), ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆ, ಮನೋರೋಗ ಮತ್ತು ಗ್ರಂಥಿüಶಾಸ್ತ್ರ ಚಿಕಿತ್ಸೆ, ದಂತ ಚಿಕಿತ್ಸೆ, ಚರ್ಮರೋಗ, ರೋಗನಿದಾನ ಶಾಸ್ತ್ರ (ಪಥಾಲಜೀ), ಎಕ್ಸ್‍ರೇ, ಸೋನೊಗ್ರಫಿ, ಮರುಧ್ವನಿ (2ಟಿಜ ಇಛಿho), ಇಸಿಜಿ, ಸಿಟಿ ಸ್ಕ್ಯಾನ್, ಮನೋ ಒತ್ತಡ ಪರೀಕ್ಷೆ, ರಕ್ತ ಸಂಗ್ರಹಣಾ ಬ್ಯಾಂಕ್, ಡಯಾಲಿಸಿಸ್, ತುರ್ತುನಿಗಾ ಉಪಶಮನ ವಿಭಾಗ, ವಿವಿಧ ಲ್ಯಾಬ್‍ಗಳು, ಐಸಿಯು ಸೇರಿದಂತೆ ಶವಾಗಾರ ಸೌಲಭ್ಯವೂ ಒಳಗೊಂಡಿದೆ. ಅಲ್ಲದೆ ಆಧುನಿಕ ವೈದ್ಯಕೀಯ ಎಲ್ಲಾ ಸೇವೆಗಳು ಉಪಲಬ್ಧವಿದೆ ಮತ್ತು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ವೈದ್ಯರಿಗೆ ವಸತಿ ನಿಲಯವಿದ್ದು ದಿನಾರಾತ್ರಿ ಸೇವಾ ನಿರತವಾಗಲಿದೆ ಎಂದು ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಕ ಡಾ| ಸುರೇಶ್ ಎಸ್.ರಾವ್ ತಿಳಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here