Thursday 25th, April 2024
canara news

`ತುಳು ನಾಟಕ ಪರಂಪರೆ' ಕೃತಿ ಬಾನುಲಿ ಸ್ವರಮಂಟಮೆಗೆ

Published On : 31 May 2019   |  Reported By : Rons Bantwal


ಮಂಗಳೂರು ಆಕಾಶವಾಣಿಯ ತುಳು ವಿಭಾಗದ 'ಸ್ವರ ಮಂಟಮೆ' ಪುಸ್ತಕ-ಧ್ವನಿ ಸುರುಳಿ ಬಿಡುಗಡೆ ನೇರಪ್ರಸಾರದ 27ನೇ ಸಂಚಿಕೆಯಲ್ಲಿ ಮೇ.04 ರಂದು ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯವರೆಗೆ ಮುದ್ದು ಮೂಡುಬೆಳ್ಳೆಯವರ ತುಳು ನಾಟಕ ಪರಂಪರೆ' ಕೃತಿ ಅನಾವರಣಗೊಳ್ಳಲಿದೆ.

ಕೃತಿಯನ್ನು ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅನಾವರಣಗೊಳಿಸಲಿದ್ದಾರೆ. ಪುಸ್ತಕ ವಿಮರ್ಶೆಯನ್ನು ರಘು ಇಡ್ಕಿದು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೃತಿಯ ಲೇಖಕರಾದ ಮುದ್ದು ಮೂಡುಬೆಳ್ಳೆ, ತುಳು-ಕನ್ನಡ ನಿರ್ದೇಶಕ ಡಾ| ಸಂಜೀವ ದಂಡಕೇರಿ, ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್‌ಬೈಲ್, ತುಳು ನಾಟಕ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾದ ರೋಹಿದಾಸ್ ಕದ್ರಿ, ರಂಗಭೂಮಿ ಹಿರಿಯ ಕಲಾವಿದ ವಿ.ಜಿ.ಪಾಲ್, ತುಳು-ಕನ್ನಡ ಸಿನಿಮಾ, ರಂಗಭೂಮಿ ನಟಿ, ಸರೋಜಿನಿ ಶೆಟ್ಟಿ, ಆಕೃತಿ ಆಶಯ ಪ್ರಕಾಶನ ನಾಗೇಶ್ ಕಲ್ಲೂರು, ರಂಗಭೂಮಿ ನಿರ್ದೇಶಕರು, ಮುಂಬಯಿ ಸಾ.ದಯಾ, ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್‍ಯಕ್ರಮವನ್ನು ತುಳು ವಿಭಾಗದ ಕಾರ್‍ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ನಡೆಸಿಕೊಲಿದ್ದಾರೆ.

ಆಸಕ್ತ ಕೇಳುಗರು ಭಾಗವಹಿಸಲು ಕರೆ ಮಾಡಲು ದೂರವಾಣಿ ಸಂಖ್ಯೆಗಳು 2211999 ಎಸ್‌ಟಿಡಿ ಸಂಖ್ಯೆ 0824 ಮೊಬೈಲ್ 8277038000 ಎಂದು ಕಾರ್‍ಯಕ್ರಮ ಮುಖ್ಯಸ್ಥ ಉಷಾಲತಾ ಸರಪಾಡಿ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here