Thursday 25th, April 2024
canara news

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ

Published On : 17 Jun 2019   |  Reported By : Rons Bantwal


ಪ್ರತಿಸ್ಪರ್ಧಿ ಕಣದ ಮೂವರೂ ಉಮೇದುವಾರರೂ ಪರಾಜಿತ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂನ್.17: ಮಯಾನಗರಿ ಮುಂಬಯಿಯಲ್ಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಘಗಳಲ್ಲೇ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಎಂದೆಣಿಸಿ ಒಂಬತ್ತನೇ ದಶಕದತ್ತ ಮುನ್ನಡೆಯುತ್ತಿರುವ ಕರ್ನಾಟಕ ಸಂಘ ಮುಂಬಯಿ ಇದರ 2019-22ರ ಮೂರು ಸಾಲಿನ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಇಂದಿಲ್ಲಿ ಚುನಾವಣೆ ನಡೆಯಿತು.

ಹೊರನಾಡಿನಲ್ಲಿ ಎಲ್ಲಾ ಜಾತಿ-ಮತ, ಸಮುದಾಯಗಳ ಪ್ರಾತಿನಿಧ್ಯ ಹೊಂದಿರುವ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆಗೆ ನಗರದ ಮಾಟುಂಗಾ ಪಶ್ಚಿಮದ ಟಿ.ಹೆಚ್.ಕಟರಿಯಾ ಮಾರ್ಗದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಆವರಣದಲ್ಲಿ ಪೂರ್ವಾಹ್ನದಿಂದ ಸಂಜೆ ವರೆಗೆ ಮತದಾನ ನಡೆಸಲ್ಪಟ್ಟಿತು. ಶಾಂತಯುತವಾಗಿಯೇ ನಡೆದ ಮತದಾನದಲ್ಲಿ ಸುಮಾರು 500 ಸದಸ್ಯರು ಮತ ಚಲಾಯಿಸಿದರು.

ಹಾಲಿ ಅಧ್ಯಕ್ಷ ಮನೋಹರ ಎಂ.ಕೋರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು 355 ಮತಗಳನ್ನು ಪಡೆದು ವಿಜೇತರೆಣಿಸಿದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ರಾಮೇಶ್ವರ ಎನ್.ಹತ್ತರ್‍ಕರ್ ಅವರು ಬರೇ 121 ಮತಗಳನ್ನು ಪಡೆದು ಹೀನಾಯವಾಗಿ ಪರಾಜಿತಗೊಂಡÀರು. ಅಧ್ಯಕ್ಷ ಸ್ಥಾನದಲ್ಲಿ 24 ಮತಗಳು ಅಸಿಂಧುಗೊಂಡವು. ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರು ಸೆÉೀರಿದಂತೆ ಅನೇಕ ಗಣ್ಯ ಸದಸ್ಯರು ಆಗಮಿಸಿ ಮತ ಚಲಾಯಿಸಿದರು. ಎಸ್.ಬಿ ರಾಮಣ್ಣ, ಸುಧಾಕರ ಮೈಂದನ್ ಮತ್ತು ಸದಾನಂದ ಅವಿೂನ್ ಚುನಾವಣಾ ಅಧಿಕಾರಿಗಳಾಗಿದ್ದು ಸಂಜೆ ವೇಳೆಗೆ ಚುನಾವಣಾ ಫಲಿತಾಂಶ ಪ್ರಕಟಿಸಿದ್ದರು.

ಸಾಮಾನ್ಯ ವಿಭಾಗದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಹಾಲಿ ಆಡಳಿತ್ವ ತಂಡದ ಪರವಾಗಿ ಅಭ್ಯಥಿರ್üಗಳಾಗಿದ್ದ ನರಸಿಂಹ ಎಂ.ಗುಡಿ (332), ಸೋಮನಾಥ ಸಿ.ಹಲಗತ್ತಿ (326), ಸುಂದರ ಸಿ.ಕೋಟ್ಯಾನ್ (361), ವಿದ್ಯಾ ವಿ. ಚಿಟಗುಪಿ (327) ವಿಜೇತರೆಣಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ವಿಶ್ವನಾಥ ಎಸ್.ಶೆಟ್ಟಿ (151) ಮತ್ತು ಹ್ಯಾರಿ ರೋಸಾರಿಯೋ ಸಿಕ್ವೇರಾ (141) ಮತಗಳನ್ನು ಪಡೆದು ಪರಾಜಿತ ಗೊಂಡರು. ಸಂಘದ ಸಂವಿಧಾನಾತ್ಮಕ ನಿಯಮಗಳಾನುಸರವೇ ಚುನಾವಣೆ ನಡೆಸಲ್ಪಟ್ಟಿದ್ದು, ಈ ಬಾರಿ ಮತದಾರರ ಮನವೊಲಿಸುವಲ್ಲಿ ಪ್ರತಿಸರ್ಧಿಗಳು ಭಾರೀ ಪ್ರಯತ್ನ ನಡೆಸಿದ್ದು, ಪರಿಣಾಮವಾಗಿ ಮತದಾನದಲ್ಲಿ ಏರಿಕೆ ಕಂಡಿತ್ತು.

ಪ್ರಸ್ತುತ ಮನೋಹರ ಎಂ.ಕೋರಿ (ಅಧ್ಯಕ್ಷರು) ಡಾ| ಈಶ್ವರ್ ಅಲೆವೂರು (ಉಪಾಧ್ಯಕ್ಷರು), ಡಾ| ಭರತ್‍ಕುಮಾರ್ ಪೆÇಲಿಪು (ಗೌರವ ಕಾರ್ಯದರ್ಶಿ), ಅಮರೇಶ್ ಸಿ.ಪಾಟೀಲ್ (ಗೌರವ ಜೊತೆ ಕಾರ್ಯದರ್ಶಿ), ನ್ಯಾ| ಎಂ.ಡಿ ರಾವ್ (ಗೌರವ ಕೋಶಾಧಿಕಾರಿ), ದಿನೇಶ್ ಎ.ಕಾಮತ್ (ಗೌರವ ಜೊತೆ ಕೋಶಾಧಿಕಾರಿ) ಪದಾಧಿಕಾರಿಗಳಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ| ಎಸ್.ಕೆ ಭವಾನಿ, ಸುಧಾಕರ್ ಪಾಲನ್, ರಾಜೀವ್ ಎನ್.ನಾಯಕ್, ಲಲಿತಾ ಪಿ.ಅಂಗಡಿ, ಓಂದಾಸ್ ಕಣ್ಣಂಗಾರ್, ಡಾ| ಮಮತಾ ಟಿ.ರಾವ್, ಡಾ| ಜಿ.ಪಿ ಕುಸುಮಾ, ದುರ್ಗಪ್ಪ ಎಲ್ಲಪ್ಪ ಕೊಟ್ಯಾವರ್, ಸುಶೀಲಾ ಎಸ್.ದೇವಾಡಿಗ ಸೇರಿದಂತೆ ಒಟ್ಟು 16 ಸದಸ್ಯರ ಮಂಡಳಿ ಕಾರ್ಯನಿರತವಾಗಿದೆ.

ಸಂಘದ 85ನೇ ವಾರ್ಷಿಕ ಮಹಾಸಭೆಯು ಬರುವ (23.06.2019) ಭಾನುವಾರ ಸಂಜೆ 5.00 ಗಂಟೆಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್‍ನ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂಘದ ಗೌ| ಕಾರ್ಯದರ್ಶಿ ಭರತ್‍ಕುಮಾರ್ ಪೆÇಲಿಪು ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here