Wednesday 24th, April 2024
canara news

ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ

Published On : 17 Jun 2019   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.17: ಕರ್ನಾಟಕ ಕರಾವಳಿಯ ಹಿರಿಯ ಸಾಮಾಜಿಕ ಚಿಂತಕ, ಜಾತ್ಯಾತೀತತೆ, ಸಮಾಜವಾದಿ, ಜನಪರ ನಿಸ್ವಾರ್ಥ ಸಾಮಾಜಿಕ ಹೋರಾಟಗಾರ, ಭಾರತ ರಾಷ್ಟ್ರದ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ನೇತಾರ ಹೆಚ್.ಡಿ ದೇವೇಗೌಡ ಪರಮಾತ್ಮ ಮಿತ್ರ, ಮಂಗಳೂರು ಅರ್ಬನ್ ಡೆವಲಪ್‍ಮೆಂಟ್ ಅಥೋರಿಟಿ (ಮುಡಾ) ಇದರ ಮಾಜಿ ಅಧ್ಯಕ್ಷ ಎಂ.ಸಂಜೀವ (86.) ಇಂದಿಲ್ಲಿ ಮುಂಜಾನೆ ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ಮಂಗಳೂರು ಅಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು.

ಇತ್ತೀಚೆಗಷ್ಟೇ ಮಂಗಳೂರು ನಗರದಲ್ಲಿನ ಯುನಿಟಿ ಆಸ್ಪತ್ರೆಯಲ್ಲಿ ವೃದ್ಧಾಪ್ಯದಿಂದ ದಾಖಲಾಗಿ ಶುಶೂಷೆ ಪಡೆಯುತ್ತಿದ್ದಾಗ ಹೆಚ್.ಡಿ ದೇವೇಗೌಡ ಅವರು ಸಂಜೀವರನ್ನು ಭೇಟಿಗೈದು ಎಂ.ಸಂಜೀವ ಅವರ ಜೀವನ ಅನುಪಮವಾದುದು. ನಾವು ಸಮಾನ ವಯಸ್ಕರಾಗಿ, ಸಮಕಾಲೀನರಾಗಿ, ಸಮಾನ ಮನಸ್ಕರಾಗಿ, ಒಂದೇ ರೀತಿಯ ರಾಜಕಾರಣ ಆಯ್ಕೆ ಮಾಡಿಕೊಂಡ ಬಗ್ಗೆ ಗುಣಗಾನಗೈದು ಅವರಿಬ್ಬರ ಒಡನಾಟವನ್ನು ಬಣ್ಣಿಸಿದ್ದರು.

ಇದೇ ಸಂದರ್ಭದಲ್ಲಿ ಸಂಜೀವರ ತಂಗಿ ಸುಕಲಾಕ್ಷಿ ಸುವರ್ಣ ರಚಿತ ಎಂ.ಸಂಜೀವರ ಜೀವನ ಕಥನ `ಸಂಜೀವನ' ಜನನಾಯಕ ಎಂ.ಸಂಜೀವ ಜೀವನ ಕಥನ ಕೃತಿಯನ್ನು ದೇವೇಗೌಡರು ಬಿಡುಗಡೆ ಗೊಳಿಸಿದ ಸಂಜೀವÀರಂಥಹ ಒಳ್ಳೆಯ ಜನ ಇಂದಿನ ದಿನಗಳಲ್ಲಿ ಕಾಣ ಸಿಗುವುದು ಕಷ್ಟ. ಅವರಿಗೆ ಇಂಥಹ ಕಷ್ಟ ಬರಬಾರದಿತ್ತು. ಶ್ರೀಹರಿ ತಮಗೆ ಆರೋಗ್ಯ ದಯಪಾಲಿಸಿ ತಾವು ಆದಷ್ಟು ಬೇಗ ಗುಣಮುಖರಾಗುವಂತೆ ಹಾರೈಸಿದ್ದರು.

ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ಸದಾ ಸರಕಾರಗಳಿಗೆ ಮನವರಿಕೆ ಮಾಡಿ ಕೊಡುತ್ತಿದ್ದ ಸಂಜೀವರು ದಕ್ಷಿಣ ಕನ್ನಡ ಜಿಲ್ಲೆಯ ಬಾಡಿಗೆದಾರ ಸಂಘದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಆಯ್ಕೆ ಸಾರ್ವಜನಿಕ ಬದುಕಿನ ಹೋರಾಟಗಾರರಾಗಿ ರೂಪುಗೊಂಡಿದ್ದ ಸಂಜೀವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸ್ವರ್ಗೀಯ ರಾಮಕೃಷ್ಣ ಹೆಗಡೆ ಮತ್ತು ದೇವರಾಜು ಅರಸು ಅವರ ಒಡನಾಡಿ ಆಗಿದ್ದರು.

ಮೃತರು ಅವಿವಾಹಿತರಾಗಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಸೋಮವಾರ ಸಂಜೆ ಅವರ ನಿವಾಸವಾದ ಕದ್ರಿ ಅಲ್ವಾರೆಸ್ ರಸ್ತೆಯಲ್ಲಿನ ಸ್ವಸ್ತಿಕ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದ್ದು ಮಾಜಿವರುಗಳಾದ ಸಚಿವ ಕೆ.ಅಮರನಾಥ ಶೆಟ್ಟಿ, ವಿನಯಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ರಾಜಕೀಯ ಧುರೀಣರಾದ ಹರೀಶ್‍ಕುಮಾರ್ ಬೆಳ್ತಂಗಡಿ, ಐವಾನ್ ಡಿಸೋಜಾ, ಹರಿಕೃಷ್ಣ ಬಂಟ್ವಾಳ, ಎಸ್.ಸದಾಶಿವ್, ಸಹೋದರಿ ಕೃಪಾ ಭೋಜರಾಜ್, ಕುಳಾಯಿ ಭೋಜರಾಜ್ ಥಾಣೆ ನೂರಾರು ಗಣ್ಯರು, ರಾಜಕಾರಣಿಗಳು, ಮುಖಂಡರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಬಂಧುಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದÀು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದರು. ಬಳಿಕ ಸಂಜೆ ವೇಳೆಗೆ ಕದ್ರಿ ರುಧ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here