Thursday 25th, April 2024
canara news

ಸಾಂತಾಕ್ರೂಜ್‍ನ ಶ್ರೀ ಪೇಜಾವರ ಮಠದ ಸ್ವಾಗತ ಗೋಪುರ ಉದ್ಘಾಟನೆ

Published On : 03 Jul 2019   |  Reported By : Rons Bantwal


ಶ್ರೀಗಳ ಅಭಯ ಹಸ್ತದ ಅನುಗ್ರಹ ಸರ್ವ ಶ್ರೇಷ್ಠವಾದುದು: ಮೇಯರ್ ಮಹಾದೇಶ್ವರ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.30: ಪೇಜಾವರ ಶ್ರೀಗಳು 93ರ ಇಳಿ ವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹದಿಂದ ಸಮಾಜಮುಖಿ ಸೇವೆಯೊಂದಿಗೆ ನಮ್ಮೊಡನೆ ಇರುವುದು ನಮ್ಮ ಹಾಗೂ ರಾಷ್ಟ್ರದ ಸೌಭಾಗ್ಯವಾಗಿದೆ. ಶ್ರೀಗಳ ಅಭಯ ಹಸ್ತದ ಅನುಗ್ರಹ ಸರ್ವ ಶ್ರೇಷ್ಠವಾದುದು. ಆದುದರಿಂದಲೇ ನಾನು ಇಲ್ಲಿಗೆ ಆಗಮಿಸಿ ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ಪ್ರಾ| ವಿಶ್ವನಾಥ ಮಹಾದೇಶ್ವರ್ ತಿಳಿಸಿದರು.

ಇಂದಿಲ್ಲಿ ರವಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಮಠದ ಸ್ವಾಗತ ಗೋಪುರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಮೇಯರ್ ಮಹಾದೇಶ್ವರ್ ಮಾತನಾಡಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಭಕ್ತವೃಂದವು ಬೃಹನ್ಮುಂಬಯಿನಲ್ಲಿ ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳಲ್ಲಿ ಹಮ್ಮಿಕೊಂಡಿದ್ದ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪ ಸಮಾರರಂಭ ಪೇಜಾವರಶ್ರೀ ಯತಿಕುಲ ಚಕ್ರವರ್ತಿ ವಿಶ್ವೇಶತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆ ವತಿಯಿಂದ ಶ್ರೀಪಾದಂಗಳವರಿಗೆ ತುಲಾಭಾರ ಸೇವೆ ನೇರವೇರಿಸಲಾಯಿತು.

ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪದಲ್ಲಿ ಗೋಪಾಲಕೃಷ್ಣ ಟ್ರಸ್ಟ್ ಮತ್ತು ಬಿಎಸ್‍ಕೆಬಿಎ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಡಾ| ಮನೋಜ್ ಹುನ್ನೂರು, ಶೇಖರ್ ಸಾಲ್ಯಾನ್, ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್, ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಮತ್ತು ಪುರೋಹಿತರನೇಕರು, ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ಬಿ.ರಮಾನಂದ ರಾವ್ (ಬಡನಿಡಿಯೂರು),ವೇದಿಕೆಯಲ್ಲಿದ್ದರು. ಅತಿಥಿsಗಳು ಮತ್ತು ಮಹಾದಾನಿಗಳು ಭಕ್ತರು ಶ್ರೀಗಳ ರಜತ ತುಲಾಭಾರ ನೆರವೇರಿಸಿ ಶ್ರೀಪಾದರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್‍ಕೆಬಿಎ ಮುಂಬಯಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಪದಾಧಿಕಾರಿಗಳು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಡಾ| ಎ.ಎಸ್ ರಾವ್, ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಕೃಷ್ಣ ಯಾದವ ಆಚಾರ್ಯ, ಕೆ.ಕೃಷ್ಣರಾಜ್ ತಂತ್ರಿ, ಕೈರಬೆಟ್ಟು ವಿಶ್ವನಾಥ್ ಭಟ್, ರಾಮ ವಿಠಲ ಕಲ್ಲೂರಾಯ, ಭಾರ್ಗವ ಆಚಾರ್ಯ, ವಿಷ್ಣುಮೂರ್ತಿ ಆಚಾರ್ಯ ಉಡುಪಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಜತ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಎಸ್.ಕೆ ಉರ್ವಾಳ್ ಮತ್ತು ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ ಪರಿವಾರದ ಪ್ರಾಯೋಜಕತ್ವದಲ್ಲಿ ಗುರು ಶ್ರೀಮತಿ ಮಂಜುಳಾ ಜಿ.ಭಟ್ ಬಳಗವು ಭಜನಾ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here