Thursday 25th, April 2024
canara news

ಜು.21: ಸಾಂತಕ್ರೂಜ್‍ನ ಬಿಲ್ಲವ ಭವನದ ಸಭಾಗೃಹದಲ್ಲಿ

Published On : 11 Jul 2019   |  Reported By : Rons Bantwal


ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಸೇವಾ ಟ್ರಸ್ಟ್ ಮುಂಬಯಿನ ವಾರ್ಷಿಕ ಮಹಾಸಭೆ

ಮುಂಬಯಿ, ಜು.10: ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ ಪ್ರಥಮ ವಾರ್ಷಿಕ ಮಹಾಸಭೆಯನ್ನು ಇದೇ ಜುಲಾಯಿ.21ನೇ ರವಿವಾರ ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಗರೋಡಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ವಿದ್ಯಾಥಿರ್sಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಕಳೆದ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಹೆಚ್‍ಎಸ್‍ಸಿ ತರಗತಿಯಲ್ಲಿ 85% ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾಥಿರ್sಗಳನ್ನು ಗೌರವಿಸಲಾಗುವುದು. ಸದಸ್ಯರು ತಮ್ಮ ಮಕ್ಕಳ ಮಾಹಿತಿಯನ್ನು ನಮ್ಮ ಸೇವಾ ಟ್ರಸ್ಟ್‍ನ ಸದಸ್ಯರಾಗಿರುವ ವಿಶ್ವನಾಥ ತೋನ್ಸೆ, ವಿಠಲ ಪೂಜಾರಿ, ರವಿರಾಜ್ ಕಲ್ಯಾಣ್ಪುರ ಇವರನ್ನು ಸಂಪರ್ಕಿಸಬೇಕಾಗಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ತುಳುನಾಡ ಜಾನಪದ ಪ್ರತೀತಿಯ 66 ಪ್ರಾಚೀನ ಗರೋಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿಯು ಒಂದಾಗಿದ್ದು, ಇದು ಉಡುಪಿ ಜಿಲ್ಲೆಯ ಕಲ್ಯಾಣಪುರದ ಪಡು ತೋನ್ಸೆಯಲ್ಲಿದೆ. ಅನಾಧಿಕಾಲದಿಂದ ಕೋಟಿ ಚೆನ್ನಯ ಮತ್ತು ಪಂಚ ಧೂಮಾವತೀ ದೈವವನ್ನು ಪೂಜಿಸಿ ಕೊಂಡು ಬರುತ್ತಿರುವ ಈ ಗರೋಡಿ ಅನೇಕ ದಶಕಗಳಿಂದ ಪ್ರಸಿದ್ಧಿಯ ಧಾರ್ಮಿಕ ಕೇಂದ್ರವಾಗಿದೆ. ಈ ಗರೋಡಿಯ ಅಭಿವೃದ್ಧಿ, ಇನ್ನಿತರ ದೇವತಾ ಕಾರ್ಯಕ್ರಮಗಳು ಮತ್ತು ಪರಿಸರದ ಏಳಿಗೆಗಾಗಿ ತವರೂರ ಮುಂಬಯಿವಾಸಿ ಭಕ್ತರು ಕಳೆದ ಹಲವಾರು ವರ್ಷಗಳಿಂದ ಉಪಸಮಿತಿ ಮುಖೇನ ಶ್ರಮಿಸುತ್ತಿದ್ದಾರೆ. ಇದೀಗ ತಮ್ಮ ದಶಮಾನೋತ್ಸವದ ಸಂದರ್ಭದಲ್ಲಿ ಮುಂಬಯಿಯಲ್ಲಿ ಸೇವಾ ಟ್ರಸ್ಟನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರರ್ವತಗೊಳಿಸುವ ಉದ್ದೇಶದಿಂದ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಎಂಬ ನಾªದಿಂದÀ ನೊಂದಾಣಿÉ ಮಾಡಿಕೊಳ್ಳಲಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಈ ಸೇವಾ ಟ್ರಸ್ಟ್ ಅರ್ಥಪೂರ್ಣವಾಗಿ ದಶಮಾನೋತ್ಸ ಆಚರಿಸಿದೆ.

ತೋನ್ಸೆಯ ಪುಣ್ಯಭೂಮಿಯಲ್ಲಿ ಈಗಾಗಲೇ ನೂರಾರು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದು ಸಾಧಕರಾಗಿ ಗುರುತಿಸಿ ಕೊಂಡಿದ್ದು, ಕರ್ಮಭೂಮಿಯಲ್ಲಿ ತಮ್ಮ ಸಾಧನೆಗಳಿಂದ ಸಾಧಕರೆನಿಸಿದ 11 ಮಂದಿಯನ್ನು ಸೇವಾ ಟ್ರಸ್ಟ್ ತೋನ್ಸೆ ಸಾಧನಾ ಪ್ರಶಸ್ತಿ-2019 ಪ್ರದಾನಿಸಿ ಗೌರವಿಸಿದೆ. ಸುರ್ಯೋದಯ ಪರಂಪಳ್ಳಿ ಮತ್ತು ಲಕ್ಷ ್ಮಣ ಅಮೀನ್ ಬೆಂಗಳೂರು ಇವರಿಂದ ರಚಿಸಲ್ಪಟ್ಟ ತುಳು ಚಿತ್ರ ದ್ಯೇಯಿ ಬೈದೆದಿ ಪ್ರದರ್ಶನ ಆಯೋಜಿಸಿತ್ತು ಎಂದು ಶಂಕರ ಸುವರ್ಣ, ಉಪಾಧ್ಯಕ್ಷರುಗಳಾದ ಡಿ.ಬಿ ಅಮೀನ್, ಸಿ.ಕೆ ಪೂಜಾರಿ ತಿಳಿಸಿದ್ದಾರೆ.

ಸೇವಾ ಟ್ರಸ್ಟ್‍ನ ನೂತನ ಸದಸ್ಯತ್ವÀ ಅಭಿಯಾನಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು ಈಗಾಗಲೇ ಸುಮಾರು 200 ಮಂದಿ ಸದಸ್ಯತನ ಪಡೆದಿದ್ದಾರೆ. ಇನ್ನೂ ತುಂಬಾ ಮಂದಿ ಸಮಾಜ ಬಾಂಧವರು ಸದಸ್ಯರಾಗಬೇಕಾಗಿದೆ. ಸದಸ್ಯರಾಗಿ ಸಂಸ್ಥೆಯ ಮುಂದಿನ ಯೋಜನೆಗಳಲ್ಲಿ ಭಾಗವಹಿಸ ಬೇಕಾಗಿ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ತಿಳಿಸಿದ್ದಾರೆ.

ಸದಸ್ಯರೆಲ್ಲರು ಸೇವಾ ಟ್ರಸ್ಟ್‍ನ ಬೆನ್ನೆಲುಬು ಆಗಿದ್ದು, ಸದಸ್ಯರ ಪೆÇ್ರೀತ್ಸಾಹ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಟ್ರಸ್ಟ್ ಚಿಂತಿಸಿದೆ. ಆದ್ದರಿಂದ ಸದಸ್ಯರು ಕ್ಲಪ್ತ ಸಮಯಕ್ಕೆ ಹಾಜರಾಗುವಂತೆ ಸೇವಾ ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆÉ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here