Saturday 20th, April 2024
canara news

ಭಾರತ್ ಬ್ಯಾಂಕ್ ಅಂಧೇರಿ ಪಶ್ಚಿಮ ಶಾಖೆಯ ರಜತೋತ್ಸವ ಸಂಭ್ರಮ

Published On : 11 Jul 2019   |  Reported By : Rons Bantwal


ಗ್ರಾಹಕರ-ಸಿಬ್ಬಂದಿಗಳ ಸಂಬಂಧದ ಸಂಭ್ರಮ : ನಿತ್ಯಾನಂದ ಡಿ.ಕೋಟ್ಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.10: ಅಂಧೇರಿ ಪಶ್ಚಿಮದ ಲಿಂಕ್ ರೋಡ್‍ನಲ್ಲಿರುವ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಅಂಧೇರಿ ಪಶ್ಚಿಮ ಶಾಖೆಯು ಇಂದಿಲ್ಲಿ ಬುಧವಾರ ಶಾಖಾ ರಜತೋತ್ಸವ (25ನೇ ವಾರ್ಷಿಕ ದಿನಾಚರಣೆ) ಸಂಭ್ರಮಿಸಿತು.

ಸರಳವಾಗಿ ಆಚರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸನಾ ಶಿಬಿರ ಆಯೋಜಿಸಲಾಗಿದ್ದು, ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ನಿಕಟಪೂರ್ವ ಅಧ್ಯಕ್ಷ, ಬ್ಯಾಂಕ್‍ನ ನಿವೃತ್ತ ಮಹಾ ಪ್ರಬಂಧಕ ಹಾಗೂ ಅಂಧೇರಿ ಪಶ್ಚಿಮ ಶಾಖೆಯ ಪ್ರಥಮ ಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಿಬ್ಬಂದಿಗಳ ಸೇವೆ ಮತ್ತು ಗ್ರಾಹಕರ ಅನ್ಯೋನ್ಯತೆ ವರವಾಗಿ ಫಲಿಸಿದ್ದು, ಕಳೆದ ಇಪ್ಪತೈದು ವರ್ಷಗಳಿಂದ ಈ ಶಾಖೆಯಲ್ಲಿ ವ್ಯವಹರಿಸಿದ ಗ್ರಾಹಕರ ಸಹಯೋಗವೇ ಈ ಆಚರಣೆಗೆ ಕಾರಣವಾಗಿದೆ ಎಂದು ಈ ಶಾಖೆಯ ಆರಂಭದ ದಿನಗಳನ್ನು ನಿತ್ಯಾನಂದ ಕೋಟ್ಯಾನ್ ಮೆಲುಕು ಹಾಕಿ ಶುಭರೈಸಿದರು.

ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ ಮಾತನಾಡಿ ಈ ಶಾಖೆಯು ಸರ್ವೋನ್ನತ ಸೇವೆಗೆ ಪಾತ್ರವಾಗಿದ್ದು ಇದಕ್ಕೆ ಬ್ಯಾಂಕ್‍ನ ನೌಕರ ವರ್ಗದ ಸೇವೆಯೂ ಅನುಪಮವಾದುದು ಎಂದು ಸರ್ವರ ಸಹಕಾರ ಶ್ಲಾಘಿಸಿದರು.

ಈ ಶುಭಾವಸರದಲ್ಲಿ ಬ್ಯಾಂಕ್‍ನ ನಿರ್ದೇಶಕ ಪ್ರೇಮನಾಥ್ ಪಿ.ಕೋಟ್ಯಾನ್, ಮಾಜಿ ನಿರ್ದೇಶಕ ಎನ್.ನಿತ್ಯಾನಂದ್, ಗ್ರಾಹಕರಾದ ಎಂ.ರಾಮಚಂದ್ರನ್ ಪಿಳ್ಳೆ, ನ್ಯಾಯವಾದಿ ಡಿ.ಕೆ ಶೆಟ್ಟಿ, ಬ್ಯಾಂಕ್‍ನ ಮಾಜಿ ಮಹಾ ಪ್ರಬಂಧಕ ಅನಿಲ್‍ಕುಮಾರ್ ಆರ್.ಅವಿೂನ್, ಹಾಲಿ ಪ್ರಧಾನ ಪ್ರಬಂಧಕರಾದ ದಿನೇಶ್ ಬಿ.ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ ಜಿ.ಪೂಜಾರಿ, ಮಹೇಶ್ ಬಿ.ಕೋಟ್ಯಾನ್, ಜನಾರ್ದನ ಎಂ.ಪೂಜಾರಿ, ವಾಸುದೇವ ಎಂ.ಸಾಲ್ಯಾನ್, ಸಹಾಯಕ ಮಹಾ ಪ್ರಬಂಧಕ ಜಗದೀಶ್ ಎನ್., ಅಭಿವೃದ್ಧಿ ಇಲಾಖೆಯ ಸುನೀಲ್ ಎ.ಗುಜರನ್, ದೀಪಕ್ ಪ್ರಭು, ಉನ್ನತಾಧಿಕಾರಿಗಳಾದ ನಾರಾಯಣ ಸನಿಲ್, ಸುಮನ್ ಅವಿೂನ್, ಪ್ರವೀಣ್ ಬಂಗೇರ, ದಿನೇಶ ಪೂಜಾರಿ, ರೇಖಾ ಸುವರ್ಣ, ಸುರೇಖಾ ರಾವ್, ಸೀತಲ್ ಅವಿೂನ್ ಮತ್ತಿತರರು ಉಪಸ್ಥಿತರಿದ್ದು ಶುಭಾರೈಸಿದರು.

ಲಯನ್ಸ್ ಕ್ಲಬ್ ಆಫ್ ಕಾಸ್‍ಮಿಕ್ ಪ್ರೈಡ್ ಸಂಸ್ಥೆಯ ಸಹಯೋಗದಲ್ಲಿ ನೇತ್ರ ತಪಾಸನಾ ಶಿಬಿರ ನಡೆಸಲಾಗಿದ್ದು, ನೇತ್ರತಜ್ಞ ಡಾ| ದೀಪಕ್ ವೈದ್ಯ ಮತ್ತು ತಂಡವು ತಪಾಸನಾ ಶಿಬಿರ ನಡೆಸಿದರು. ಕರುಣಾಕ ಬಿ. ಪೂಜಾರಿ ಮತ್ತು ಸಂಧ್ಯಾ ಡಿ.ಪೂಜಾರಿ ಸಹಕರಿಸಿದ್ದು ಧಾರ್ಮಿಕ ಕಾರ್ಯಕ್ರಮವಾಗಿ ಗಣ ಹೋಮ, ಗುರು ಪೂಜೆ ನಡೆಸಲ್ಪಟ್ಟಿದ್ದು, ರಾಘವೇಂದ್ರ ಪ್ರಸಾದ್ ಎನ್.ಸಾಲ್ಯಾನ್ ಪೂಜಾಧಿಗಳನ್ನು ನೇರವೇರಿಸಿದರು. ಶಾಖಾ ಪ್ರಬಂಧಕ ನವೀನ್‍ಕುಮಾರ್ ಜೆ.ಕರ್ಕೇರಾ ಸ್ವಾಗತ ಬಯಸಿದರು. ಪ್ರಶಾಂತ್ ಪೂಜಾರಿ ವಂದಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here