Saturday 20th, April 2024
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯಲ್ಲಿ

Published On : 16 Jul 2019   |  Reported By : Rons Bantwal


ನಡೆಸಲ್ಪಟ್ಟ ವಾರ್ಷಿಕ ಶೈಕ್ಷಣಿಕ ನೆರಾವು ವಿತರಣಾ ಕಾರ್ಯಕ್ರಮ

ಮುಂಬಯಿ, ಜು.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯಲ್ಲಿ ಕಳೆದ ಗುರುವಾರ ರಾತ್ರಿ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಕೆ. ಜಿ ಅಮಿನ್ ವಹಿಸಿದ್ದರು.

ಮುಖ್ಯ ಅತಿಥಿüಯಾಗಿ ಸತೀಶ್ (ಕೃಷ್ಣಪ್ಪ) ಪೂಜಾರಿ (ಸಂಗೀತ್ ಬಾರ್ ಎಂಡ್ ರೆಸ್ಟೋರೆಂಟ್), ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಕೆ.ಬಿ ಪೂಜಾರಿ ಮತ್ತು ಬಿಲ್ಲವರ ಅಸೋಸಿಯೇಶನ್‍ನ ವಿದ್ಯಾ ಉಪಸಮಿತಿ ಕಾರ್ಯಧ್ಯಕ್ಷ ವಿಶ್ವನಾಥ ತೋನ್ಸೆ ಮತ್ತು ಸದಸ್ಯ ಗಣೇಶ್ ಬಂಗೇರ ಮತ್ತು ಕೋಶಾಧಿಕಾರಿ ನಾಗೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುಮಾರು 20 ಮಂದಿ ವಿದ್ಯಾಥಿರ್üಗಳಿಗೆ ಶೈಕ್ಷಣಿಕ ನೆರವು ವಿತರಿಸಿದರು.

ವಿಶ್ವನಾಥ ತೋನ್ಸೆ ಮಾತನಾಡುತ್ತಾ ನಮ್ಮ ಮಕ್ಕಳು ಶೈಕ್ಷಣಿಕ ನೆರವು ಪಡೆದರೂ ಮುಂದೆ ಸಮಾಜದಲ್ಲಿ ಬಂದು ಕೆಲಸಮಾಡಬೇಕು. ನಮ್ಮ ಅಸೋಸಿಯೇಶನ್‍ನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಹಾಜರು ಆಗಬೇಕು. ನೀವೇನಾದರೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳಿದ್ದಲ್ಲಿ ನಿಮ್ಮಲ್ಲಿಯೇ ಯುವ ಪ್ರತಿಭೆ ಕುಶಾಲ್ ಸುವರ್ಣ ಇವರನ್ನು ಭೇಟಿ ಮಾಡಿ (ಅಚಿಡಿeeಡಿ ಉuiಜಚಿಟಿಛಿe) ಇದರ ಬಗ್ಗೆ ಚರ್ಚಿಸಿರಿ ಎಂದರು.

ಕೆ.ಬಿ ಪೂಜಾರಿ ಮಾತನಾಡಿ ಇಂದಿನ ಮೊಬೈಲ್ ಯುಗದ ಮಕ್ಕಳಿಗೆ ವಿದ್ಯೆಯ ಪರಿತತ್ವವನ್ನು ತಿಳಿಸಿ ವಿದ್ಯೆಯಲ್ಲಿ ಪ್ರವೀಣರಾಗಿ ತಂದೆ ತಾಯಿಗೆ ಹಾಗೂ ಸಮಾಜದ ಕೀರ್ತಿಯನ್ನು ಬೆಳಗಿಸುವಂತೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ವಸಯಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಮತ್ತು ಪರಿಸರದ ನಮ್ಮ ಸಮಾಜ ಬಾಂಧವರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದು, ಗೌರವ ಕಾರ್ಯದರ್ಶಿ ಲೊಹಿತಾಕ್ಷ ಎಸ್.ಅಂಚನ್ ಕಾರ್ಯಕ್ರಮ ನಿರೂಪಿಸಿದರು.ಪೂಜೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here