Friday 19th, April 2024
canara news

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‍ನ ಪ್ರಥಮ ವಾರ್ಷಿಕ ಮಹಾಸಭೆ

Published On : 22 Jul 2019   |  Reported By : Rons Bantwal


ಪೂರ್ವಜರ ನಂಬಿಕೆಗಳು ವಿಶ್ವಾಸನೀಯವುಳ್ಳವು : ನಿತ್ಯಾನಂದ ಡಿ.ಕೋಟ್ಯಾನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.20: ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಸರ್ವೋನ್ನತಿಗಾಗಿ ಸೇವಾನಿರತ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ ಪ್ರಥಮ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

ಸೇವಾ ಟ್ರಸ್ಟ್‍ನ ಉಪಾಧ್ಯಕ್ಷರುಗಳಾದ ಡಿ.ಬಿ ಅವಿೂನ್, ಸಿ.ಕೆ ಪೂಜಾರಿ, ವಿಶ್ವನಾಥ ತೋನ್ಸೆ, ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ ಕರುಣಾಕರ ಬಿ.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದು ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆಗೆ ಚಾಲನೆಯನ್ನಿತ್ತರು.

ಪಡು ತೋನ್ಸೆಯಲ್ಲಿ ಅನಾಧಿಕಾಲದಿಂದ ಕೋಟಿ ಚೆನ್ನಯ ಮತ್ತು ಪಂಚ ಧೂಮಾವತೀ ದೈವವನ್ನು ಪೂಜಿಸಿ ಕೊಂಡು ಬರುತ್ತಿರುವ ಈ ಗರೋಡಿಯ ಜೀರ್ಣೋದ್ಧಾರಕ್ಕಾಗಿ ನಾವೆಲ್ಲರೂ ಏಕತೆಯಿಂದ ಶ್ರಮಿಸುವ ಅಗತ್ಯವಿದೆ. ಪೂರ್ವಜರು ನಂಬಿಕೊಂಡು ಬಂದ ಕಾರಣಿಕೆಯ ಕ್ಷೇತ್ರದಲ್ಲಿ ಎಲ್ಲರೂ ನ್ಯಾಯಯುತವಾಗಿ ಶ್ರಮಿಸತಕ್ಕದ್ದು. ಕಾರಣ ಪೂರ್ವಜರ ನಂಬಿಕೆಗಳು ವಿಶ್ವಾಸನೀಯವುಳ್ಳವು. ದೈವದೇವರುಗಳ ಇಂತಹ ಕ್ಷೇತ್ರಗಳ ಉನ್ನತೀಕರಣ ನಮ್ಮ ಹೊಣೆಗಾರಿಕೆಯಾಗಿದೆ. ಅದಕ್ಕಾಗಿ ನಾವೆಲ್ಲರೂ ಸೇವಾ ನಿರತರಾಗೋಣ. ಈ ಟ್ರಸ್ಟ್ ಮೂಲಕ ವಿದ್ಯಾಥಿರ್sಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ವಿದ್ಯಾಥಿರ್ü ವೇತನ ನೀಡುವುದರಿಂದ ಶೈಕ್ಷಣಿಕ ಪೆÇ್ರೀತ್ಸಹದ ಜೊತೆಗೆ ಮನೋವಿಕಾಸಕ್ಕೂ ಬೆಂಬಲಿಸಿದಂತೆ ಆಗುತ್ತದೆ. ಇಂತಹ ಪೆÇ್ರೀತ್ಸಹ ಅವಶ್ಯವಾಗಿದೆ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣವನ್ನು ಉದ್ದೇಶಿಸಿ ತಿಳಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ್ ಎಂ.ಕೋಟ್ಯಾನ್ ಥಾಣೆ, ಸೋಮ ಸುವರ್ಣ, ವಿಠಲ ಎಸ್.ಪೂಜಾರಿ, ರೂಪ್‍ಕುಮಾರ್ ಕಲ್ಯಾಣ್ಪುರ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ವಿಜಯ್ ಪಾಲನ್ ಉಪಸ್ಥಿತರಿದ್ದು, ರವಿ ಪೂಜಾರಿ, ಸುರೇಶ್ ಕೋಟ್ಯಾನ್, ವಿ.ಸಿ ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ವಿಠಲ ಎಸ್.ಪೂಜಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹಿದರು.

ಭಾರತಿ ಸುವರ್ಣ ಮತ್ತು ಲಕ್ಷಿ ್ಮೀ ಡಿ.ಅಂಚನ್ ಪ್ರಾರ್ಥನೆಯನ್ನಾಡಿದರು. ಕರುಣಾಕರ ಬಿ.ಪೂಜಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ರವಿರಾಜ್ ಕಲ್ಯಾಣ್ಫುರ್ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ವಿಶ್ವನಾಥ ತೋನ್ಸೆ ವಿದ್ಯಾಥಿರ್ü ವೇತನದ ಬಗ್ಗೆ ಪ್ರಸ್ತಪಿಸಿದರು. ಸಂಜೀವ ಪೂಜಾರಿ ತೋನ್ಸೆ ಸ್ವಾಗತಿಸಿ ಅಭಾರ ಮನ್ನಿಸಿದÀರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here