Thursday 25th, April 2024
canara news

ಆಟಿದೊಂಜಿ ದಿನ ಆಚರಿಸಿದ ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಸಮಿತಿ

Published On : 25 Jul 2019   |  Reported By : Rons Bantwal


ಪೂರ್ವಜರ ತಿಂಡಿ ತಿನಿಸುಗಳೇ ಆರೋಗ್ಯಕರವಾದವು : ಡಾ| ಸುನೀತಾ ಎಂ. ಶೆಟ್ಟಿ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜು.24: ಅಗೋಳಿ ಮಂಜಣ್ಣನಂತಹ ವೀರ ಪುರುಷರು ಹುಟ್ಟಿದ ನಮ್ಮ ತುಳುನಾಡಿನಲ್ಲಿ ವರ್ಷವಿಡೀ ನಾವು ಹಬ್ಬಹರಿದಿನಗಳನ್ನು ಆಚರಿಸುತ್ತೇವೆ. ಆ ಪಯ್ಕಿ ಆಟಿ (ಅಷಾಢ) ಮಾಸವೂವೊಂದಾಗಿದೆ. ಆಟಿ ಅಂದರೆ ಕಷ್ಟದ ತಿಂಗಳೆಂಬ ಪ್ರತೀತಿ ಈ ಹಿಂದಿತ್ತು. ಆಟಿ ತಿಂಗಳಿಗೆ ವಿಶೇಷ ಪ್ರಾಮುಖ್ಯತೆ ಏಕೆಂದರೆ ಲಗ್ನವಾಗಿ ಹೋದ ಹೆಣ್ಣು ಮಕ್ಕಳು ತಾಯಿಯ ಮನೆಗೆ ಬಂದಾಗ ವಿಶೇಷ ಖಾದ್ಯಗಳನ್ನು ಮಾಡಿ ತಿನಿಸುವುದು, ಆಟಿ ಕಳಂಜ, ಆಟಿದಮವಾಸ್ಯೆ, ಪಾಲೆದ ಕೆತ್ತೆಯನ್ನು ನಸುಕಿನಲ್ಲಿ ಬತ್ತಲೆ ಹೋಗಿ ಕಲ್ಲಿನಿಂದ ಕುಟ್ಟಿ ಆ ಕೆತ್ತೆಯಿಂದ ಹಾಲು ತೆಗೆದು ಅದಕ್ಕೆ ಬೋರ್‍ಗಲ್ಲನ್ನು ಕಾಯಿಸಿ ಬೆಳ್ಳುಳ್ಳಿ ಹಾಕಿ ಬಿಸಿ ಬೋರ್‍ಗಲ್ಲಿನಿಂದ ಒಗ್ಗರಣೆ ನೀಡುವ ವಿಶೇಷತೆ ಇದೆ. ಇದನ್ನು ಕುಡಿದವರ ರೋಗ ರುಜಿನಗಳು ಮಾಯವಾಗುತ್ತವೆ ಎಂಬ ಪ್ರತೀತಿ ಇದೆ. ಭಾರತದ ಸಂಸ್ಕೃತಿ-ಸಂಸ್ಕಾರದಲ್ಲಿ ನಮ್ಮ ಆಚಾರ-ವಿಚಾರಗಳು ವಿಭಿನ್ನವಾಗಿವೆ ಎಂದು ಬೃಹನ್ಮುಂಬಯಿಯ ಹಿರಿಯ ಸಾಹಿತಿ, ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಕಳೆದ ರವಿವಾರ ಉಪನಗರ ಅಂಧೇರಿ ಪೂರ್ವದ ಮಾತೋಶ್ರೀ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ, ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಸಾರಥ್ಯದಲ್ಲಿ ನಡೆಸಲ್ಪಟ್ಟ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯು ಪ್ರಾರಂಭದಿಂದಲ್ಲೂ ವಿವಿಧ ಕಾರ್ಯಾಧ್ಯಕ್ಷರ ಮುಂದಾಳುತ್ವದಲ್ಲಿ ಅವರವರ ಕಲಾನುಸಾರ ಉತ್ತಮ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಸಮಿತಿಯ ಸಂಚಾಲಕನಾಗಿ ದುಡಿದ ಅನುಭವ ನನಗಿದೆ. ಬಂಟರ ಸಮ್ಘದ ಮೂಲ ಉದ್ದೇಶ ಸಮಾಜ ಬಾಂಧವರೆಲ್ಲರನ್ನೂ ಒಗ್ಗೂಡಿಸಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು. ಸುಖ-ಕಷ್ಟಗಳಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುವುದು. ನಮ್ಮ ಪೂರ್ವಜರು ಆಟಿ ತಿಂಗಳ ವಿಶೇಷ ತಿಂಡಿ-ತಿನಿಸು ಹಾಗೂ ಪ್ರಾಕೃತಿಕ ಪದಾರ್ಥಗಳನ್ನು ಸೇವಿಸುತ್ತಿರಬೇಕೆಂದು ನಮಗೆಲ್ಲಾ ತಿಳಿಸಿರುವುದರಲ್ಲಿ ಸತ್ಯವಿದೆ ಎಂದು ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ನಾವು ದೈನಂದಿನವಾಗಿ ತಿನ್ನುವ ದಿನಸಿ ಸಾಮಾನು, ತಿಂಡಿ ತಿನಿಸುಗಳು, ಹಾಲು, ಹಣ್ಣು-ಹಂಪಲುಗಳಲ್ಲಿ ವ್ಯಾಪರಸ್ಥರು ತಮ್ಮ ಲಾಭಕ್ಕಾಗಿ ರಾಸಾಯನಿಕ ವಸ್ತುಗಳನ್ನು ಬೆರೆಸುತ್ತಿದ್ದು, ನಾವು ಇದನ್ನು ತಿಳಿದೋ ತಿಳಿಯದೋ ಸೇವಿಸುತ್ತೇವೆ. ರಾಸಾಯನಿಕ ಮಿಶ್ರಣವಿರುವ ವಸ್ತುಗಳನ್ನು ಸೇವಿಸಿದ ಪರಿಣಾಮವೇ ನಮ್ಮ ಆರೋಗ್ಯ ಹದಗೆಡುತ್ತದೆ ಎಂದಾದರೂ ಶುದ್ಧತೆ, ಆರೋಗ್ಯದಾಯಕ ತಿನಿಸುಗಳ ಬಗ್ಗೆ ಸಮಾಜ ಇನ್ನೂ ವಿದ್ಯಾವಂತ ಜಾಗೃತರಾಗದಿರುವುದು ಶೋಚನೀಯ. ಆದರೆ ಓದು ಬರಹ ತಿಳಿದಯ ಪೂರ್ವಜರು ಭವಿಷ್ಯದ ಆರೋಗ್ಯಕ್ಕಾಗಿ ಕಾಲಾನುಸಾರ ಆಹಾರವನ್ನು ಔಷಧಿಯಾಗಿಯೇ ಬಳಸುತ್ತಿದ್ದ ಕಾರಣ ಶತಾಯುಷ್ಯವನ್ನು ಕಾಯ್ದಿರಿಸಿದ್ದಾರೆ. ವರ್ಷದ ಎಲ್ಲಾ ತಿಂಗಳುಗಳಲ್ಲಿ ಕಾಲಾನುಸಾರ ಆಹಾರವನ್ನು ಸೇವಿಸುತ್ತಾ ಬದುಕನ್ನು ನೆಮ್ಮದಿಯಾಗಿರಿಸಿರುವರು. ಆ ಪಯ್ಕಿ ಆಹಾರ ಪದ್ಧತಿಗೆ ಅತೀ ಮಹತ್ವದ ತಿಂಗಳನ್ನು ಆಟಿ ತಿಂಗಳು (ಅಷಾಢ) ಆಗಿಸಿ ರೋಗ ನಿರೋಧ ಶಕ್ತಿಗಳಿರುವ ಕೆಸುವಿನ ಎಲೆ (ತೇವು), ಹಾಳೆÉ ಮರದ ತೊಗಡು, ನುಗ್ಗೆ ಸೊಪ್ಪು, ಮೆತ್ತೆ ಗಂಜಿ ಇತ್ಯಾದಿಗಳನ್ನು ತಿನ್ನಿತ್ತಿದ್ದರು. ಇವೆಲ್ಲವೂ ಕಾಯಿಲೆಮುಕ್ತ, ರೋಗನಿವಾರಕ ತಿನಿಸುಗಳಾಗಿದ್ದ ಕಾರಣ ಈ ಬಗ್ಗೆ ನಾವೂ ನಮ್ಮ ಮಕ್ಕಳಲ್ಲಿ ಇವುಗಳ ಮಹತ್ವದ ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.
ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯದರ್ಶಿ ಮನೋರಮ ಎನ್.ಬಿ ಶೆಟ್ಟಿ, ಪಶ್ಚಿಮ ಪ್ರಾದೇಶಿಕ ವಲಯಗಳ ಸಮನ್ವಯಕ ಸಂಘದ ಡಾ| ಪ್ರಭಾಕರ್ ಶೆಟ್ಟಿ ಬೋಳ ಸಮಯೋಚಿತವಾಗಿ ಮಾತನಾಡಿ ಶುಭಾರೈಸಿದರು.

ಪ್ರಾದೇಶಿಕ ಸಮಿತಿಯ ಸಂಚಾಲಕ ಡಿ.ಕೆÉ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಕೋಶಾಧಿಕಾರಿ ಕರುಣಾಕರ್ ವಿ.ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಪ್ರೇಮಾ ಬಿ.ಶೆಟ್ಟಿ, ಮಹಿಳಾ ಜತೆ ಕಾರ್ಯದರ್ಶಿ ಜ್ಯೋತಿ ಆರ್.ಜಿ ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ, ರತ್ನಾ ಪಿ.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.

ಯಶವಂತ ಶೆಟ್ಟಿ, ಕೃಷ್ಣ ಶೆಟ್ಟಿ, ಜಯರಾಮ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಶೋಭಾ ರಮೇಶ್ ರೈ, ಶೋಭಾ ಶಂಕರ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು, ಅನೇಕರು ಕಾರ್ಯಕ್ರಮದ ಅಂಗವಾಗಿ ಸಿದ್ಧ ಪಡಿಸಲಾದ ಹಳೆಕಾಲದ ಸಾಂಪ್ರದಾಯಿಕ ನೂರಾರು ಬಗೆಯ ತಿಂಡಿತಿನಿಸುಗಳ ಬಗ್ಗೆ ತಿಳಿಸಿದರು. ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾದೇಶಿಕ ಸಮಿತಿಯ ಮಹಿಳಾ ಉಪ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಜ್ರಾ ಕೆ.ಪೂಂಜ ಅಭಾರ ಮನ್ನಿಸಿದರು.

 

 

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here