Saturday 20th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಭ್ರಮಿಸಿದ ಪತ್ರಕರ್ತರ ದಿನಾಚರಣೆ

Published On : 29 Jul 2019   |  Reported By : Rons Bantwal


ಮನುಕುಲಕ್ಕೆ ನ್ಯಾಯ ಕೊಡಿಸುವುದೇ ಪತ್ರಿಕೋದ್ಯಮದ ಉದ್ದೇಶ : ಡಾ| ದಂಡಾವತಿ

ಮುಂಬಯಿ, ಜು.28: ಮುಂಬಯಿ ಕನ್ನಡಿಗರು ಕನ್ನಡನಾಡನ್ನು ತಲೆಯೆತ್ತಿ ನಿಲ್ಲುವಂತೆ ಇಲ್ಲಿನ ಕನ್ನಡಗರ ಶ್ರಮ ಗುರುತರವಾದದು. ಸದಾ ಕಷ್ಟಪಟ್ಟು ಇಷ್ಟಾರ್ಥಗಳನ್ನು ಪಡೆಯುವಲ್ಲಿ ಯಶಕಂಡ ಇಲ್ಲಿನ ಕನ್ನಡಿಗರ ಸಾಧನೆ ಅತ್ಯಾದ್ಭುತವಾಗಿದೆ. ಜಗತ್ತಿನ ನೋವುಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವುದೇ ಪತ್ರಕರ್ತನ ಧರ್ಮವಾಗಿದೆ. ಒಟ್ಟು ಜಗತ್ತಿಗೆ ಪರಿಹಾರ ಕಂಡುಕೊಳ್ಳುವ ವೃತ್ತಿ ಇದಾಗಿದೆ. ಮನುಕುಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಪತ್ರಿಕೋದ್ಯಮವಾಗಿದೆ. ಆದುದರಿಂದಲೇ ಪತ್ರಿಕೆಗಳು ಯಾ ಮಾಧ್ಯಮಗಳು ಜನಜೀವನಕ್ಕೆ ಸಂಬಂಧ ಪಟ್ಟದ್ದಾಗಿದೆ. ಆಧುನಿಕ ಪತ್ರಿಕಾವಲಯದಲ್ಲಿ ವಿಶ್ವಾಸರ್ಹತೆ ಕ್ಷಿಣಿಸುತ್ತಿದ್ದು ಇದನ್ನು ಮತ್ತೆ ಪ್ರಮಾಣಿಕರಿಸುವಲ್ಲಿ ಪತ್ರಕರ್ತರು ಬದ್ಧತಯುತರಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ| ಪದ್ಮರಾಜ ದಂಡಾವತಿ ನುಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಬೆಳಿಗ್ಗೆ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್‍ನ ಲೋಟಸ್ ಸಭಾಗೃಹದಲ್ಲಿನ `ಸ್ವರ್ಗೀಯ ಸಂಪದಮನೆ ಶ್ರೀ ನಾಗಯ್ಯ ಶೆಟ್ಟಿ ವೇದಿಕೆ' ಯಲ್ಲಿ ಪತ್ರಕರ್ತರ ದಿನಾಚರಣೆ ಸಂಭ್ರಮಿಸಿದ್ದು, ಡಾ| ದಂಡಾವತಿ ದೀಪ ಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆನೀಡಿ ಮಾತನಾಡಿ ಓದುಗರಿಗೆ ಪತ್ರಿಕೆಯನ್ನು ನಡೆಸುವವರ ಕಷ್ಟ, ಕಾರ್ಪಣ್ಯಗಳು ತಿಳಿದಿರುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುವುದು ಸಾಹಸವೇ ಸರಿ. ನಿಮ್ಮೆಲ್ಲರ ಉತ್ಸಾಹದ ಇಂದಿನ ಕಾರ್ಯಕ್ರಮವನ್ನು ಕಂಡು ಸಂತೋಷವಾಯಿತು. ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ, ರಿಜೇನ್ಸಿ ಸಮೂಹ ಮುಂಬಯಿ ಇದರ ಪ್ರವರ್ತಕ ಜಯರಾಮ ಎನ್.ಶೆಟ್ಟಿ, ಗೌರವ ಅತಿಥಿüಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್, ಶ್ರೀ ಚಿತ್ತಾರಿ ಹಾಸ್ಪಿಟಾಲಿಟಿ ಸರ್ವಿಸಸ್ ಎಲ್‍ಎಲ್‍ಪಿ ಸಂಸ್ಥೆಯ ಆಡಳಿತ ನಿರ್ದೇಶಕ ಸದರಾಮ ಎನ್.ಶೆಟ್ಟಿ ಹಾಗೂ ಪ್ರಧಾನ ಅಭ್ಯಾಗತರಾಗಿದ್ದ ಉದಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ್ ಪ್ರಸಾದ್ ಪ್ರಧಾನ ಭಾಷಣವನ್ನಿತ್ತು ಸಂಘದ ಸದಸ್ಯರಿಗೆ (ಸಾಂಕೇತಿಕವಾಗಿ) ನೂತನ ಗುರುತುಪತ್ರ ಹಸ್ತಾಂತರಿಸಿ ಶುಭಾರೈಸಿದರು.

ಜಯರಾಮ ಶೆಟ್ಟಿ ಮಾತನಾಡಿ ಈ ಪತ್ರಕರ್ತರ ಸಂಘದ ಇಂದಿನ ಕಾರ್ಯಕ್ರಮ ಕಂಡಾಗ ಬಹಳ ಸಂತೋಷ ಆಗುತ್ತಿದೆ. ವಿಶೇಷ ಪಾಂಡಿತ್ಯ ಹೊಂದಿರುವ ಪತ್ರಕರ್ತರು ಮುಂಬಯಿಯಲ್ಲಿರುವುದು ನಮಗೆ ಹೆಮ್ಮೆ. ಸಂಘದ ಸದಸ್ಯರ ಹಿತದೃಷ್ಟಿಯಿಂದ ನೀವು ಕೈಗೊಂಡಿರುವ ಯೋಜನೆಗಳೆಲ್ಲವೂ ಸಾಕಾರಗೊಳ್ಳಲಿ. ಅದಕ್ಕೆ ಎಲ್ಲರ ಸಹಕಾರ, ಪೆÇ್ರೀತ್ಸಾಹ ಸದಾಯಿರಲಿ ಎಂದರು.

ಕನ್ನಡಿಗ ಪತ್ರಕರ್ತರ ಸಂಘದ ಸಾಧನಾ ಹಾದಿ ತಿಳಿದು ಹೆಮ್ಮೆಯಾಗುತ್ತಿದೆ. ಅದರಲ್ಲೂ ಸಂಘದ ವತಿಯಿಂದ ಕೆ.ಟಿ ವೇಣುಗೋಪಾಲ್ ಅವರ ಸಂಸ್ಮರಣಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಿ, ಅದನ್ನು ಯೋಗ್ಯ ವ್ಯಕ್ತಿಗೆ ಪ್ರದಾನಿಸಿರುವುದು ಬಹಳಷ್ಟು ಖುಷಿ ತಂದಿದೆ. ಸಂಘದ ಕಾರ್ಯಚಟುವಟಿಕೆಗಳು ಹೀಗೆಯೇ ಮುಂದುವರಿಯಲಿ ಎಂದು ಮೋಹನ್ ಮಾರ್ನಾಡ್ ತಿಳಿಸಿದರು.

ಸದರಾಮ ಶೆಟ್ಟಿ ಮಾತನಾಡಿ ಪತ್ರಿಕೆಗಳ ಬಗ್ಗೆ ವಿಶೇಷ ಗೌರವ, ಓದುವ ಅಭಿರುಚಿ ಹೊಂದಿದ್ದ ತಂದೆ ನಾಗಯ್ಯ ಶೆಟ್ಟಿ ಸ್ಮರಣಾರ್ಥ ವೇದಿಕೆ ರಚಿಸಿ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಕುಟುಂಬದ ಹಿರಿಮೆಯಾಗಿದೆ. ಅದಕ್ಕಾಗಿ ಕುಟುಂಬದ ವತಿಯಿಂದ ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಮುಂಬಯಿಯಲ್ಲಿ ದಿನಂಪ್ರತಿ ಎದ್ದು ಪತ್ರಿಕೆಗಳನ್ನು ಓದುತ್ತಿರುವವರು ನಾವು ಇಂದು ಪತ್ರಕರ್ತರೆಲ್ಲರ ಮಧ್ಯೆ ನಾವಿರುವುದು ಅಭಿಮಾನದ ವಿಷಯ. ಭವಿಷ್ಯದಲ್ಲೂ ನಮ್ಮಿಂದಾಗುವ ಸಹಕಾರ, ಪೆÇ್ರೀತ್ಸಾಹ ಸದಾಯಿದೆ ಎಂದರು.

ಸದಸ್ಯ ಬಾಂಧವರ ಹಿತದೃಷ್ಟಿಯನ್ನಿಟ್ಟುಕೊಂಡಿರುವ ರೋನ್ಸ್ ಬಂಟ್ವಾಳ್ ಅವರ ನೇತೃತ್ವದಲ್ಲಿ ಸಂಘವು ಉತ್ತಮ ಕಾರ್ಯಯೋಜನೆಗಳನ್ನು ಹೊಂದಿದ್ದು, ಅದೆಲ್ಲವೂ ಯಶಸ್ಸನ್ನು ಕಾಣುವಂತಾಗಲಿ ಎಂದು ಪ್ರಧಾನ ಭಾಷಣವನ್ನಿತ್ತು ಮನೋಹರ್ ಪ್ರಸಾದ್ ತಿಳಿಸಿದರು.

ಸಂಘದ ಸದಸ್ಯರಿಗೆ ಪ್ರಯೋಜನವಾಗುವ ರೀತಿಯಲ್ಲಿ ಸಂಘವು ಕಾರ್ಯಪ್ರವೃತ್ತವಾಗಿದೆ. ಇಂದಿನ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ಸಮಿತಿಯ ಸರ್ವ ಸದಸ್ಯರಿಗೆ ಸಲ್ಲಬೇಕು. ಸದಸ್ಯ ಬಾಂಧÀವರು ಇಷ್ಟೊಂದು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಪೆÇ್ರೀತ್ಸಾಹ ಸದಾಯಿರಲಿ ರೋನ್ಸ್ ಬಂಟ್ವಾಳ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿ ಸಂಘದ ಭವಿಷ್ಯತ್ತಿನ ಯೋಜನೆಗಳನ್ನು ವಿವರಿಸಿ ಸರ್ವರ ಸಹಕಾರ ಬಯಸಿದರು.

ಈ ಶುಭಾವಸರದಲ್ಲಿ ಸಂಘದ ಸದಸ್ಯರಾಗಿದ್ದು ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಇದರ ಜೀವನ ಸಾಧನಾ ಪ್ರಶಸ್ತಿಗೆ ಭಾಜನರಾದ ಲಾರೇನ್ಸ್ ಕುವೆಲ್ಲೊ, ಲಿಮ್ಕಾ ರೆಕಾರ್ಡ್‍ಗೆ ಪಾತ್ರರಾದ ರಾಷ್ಟ್ರೀಯ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್, ಹೂಗಾರ ಪುರಸ್ಕಾರಕ್ಕೆ ಪಾತ್ರರಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ದಾಂಪತ್ಯ ಬಾಳಿಗೆ ಕಾಲಿರಿಸಿದ ಅಶೋಕ್ ಆರ್. ದೇವಾಡಿಗ ಅವರಿಗೆ ಅತಿಥಿüಗಳು ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಸಲಹಾ ಸಮಿತಿ ಸದಸ್ಯರುಗಳಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಸುನೀತಾ ಎಂ.ಶೆಟ್ಟಿ, ಗ್ರೇಗೋರಿ ಡಿ.ಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಪಂಡಿತ್ ನವೀನ್‍ಚಂದ್ರ ಆರ್.ಸನಿಲ್, ಕಡಂದಲೆ ಸುರೇಶ್ ಎಸ್. ಭಂಡಾರಿ, ಸುಧಾಕರ್ ಉಚ್ಚಿಲ್ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯರುಗಳಾದ, ನ್ಯಾ| ವಸಂತ ಕಲಕೋಟಿ, ಸಾ.ದಯಾ (ದಯಾನಂದ ಸಾಲ್ಯಾನ್), ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಸಂಘದ ಸಲಹಾ ಸಮಿತಿ ಸದಸ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ ಡಾ| ಆರ್.ಕೆ ಶೆಟ್ಟಿ ಸಂಘದ ಸದಸ್ಯರ ಆರೋಗ್ಯಭಾಗ್ಯ ಮತ್ತು ವಿಮೆ ಬಗ್ಗೆ ಮಾಹಿತಿಯನ್ನಿತ್ತರು.

ಕಳೆದ ಶನಿವಾರ ಸ್ವರ್ಗಸ್ಥರಾದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮತ್ತು ಅಗಲಿದ ಪತ್ರಕರ್ತರಿಗೆ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವನೆಗೈದರು. ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅನಿತಾ ಪೂಜಾರಿ ತಾಕೋಡೆ ಅತಿಥಿüಗಳನ್ನು, ಜಯಂತ್ ಕೆ.ಸುವರ್ಣ ಪುರಸ್ಕೃತರನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾಪನ ಗೊಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here