Tuesday 23rd, April 2024
canara news

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2019 ಪ್ರದಾನ

Published On : 30 Jul 2019   |  Reported By : Rons Bantwal


ಪತ್ರಕರ್ತರನ್ನು ಗೌರವಿಸುವುದು ಸಮಾಜದ ಕರ್ತವ್ಯ: ಜಯರಾಮ ಎನ್.ಶೆಟ್ಟಿ

ಮುಂಬಯಿ, ಜು.28: ಪತ್ರಿಕಾ ಮೌಲ್ಯಗಳೇ ಅಚ್ಚರಿದಾಯಕವಾಗಿದ್ದು ಪತ್ರಿಕೋದ್ಯಮದ ಒಳಕಥೆ ಗಮನಾರ್ಹ. ಮಾನಸಿಕ, ದೈಹಿಕ ಒತ್ತಡಗಳ ಮಧ್ಯೆಯೂ ಪತ್ರಕರ್ತರ ಹಗಲಿರುಳ ಶ್ರಮ ಸಮರ್ಪಣಾಭಾವವಾಗಿದ್ದು ಪತ್ರಕರ್ತರ ಸಮಮಪ್ರಜ್ಞೆಯೂ ಪ್ರಶಂಸನೀಯವಾದದು. ಇವೆಲ್ಲವುಗಳ ಮಧ್ಯೆಯೂ ಪತ್ರಿಕಾರಂಗ ಅವಿಷ್ಕಾರದೊಂದಿಗೆ ಕ್ರಾಂತಿಯುತವಾಗಿ ಮುನ್ನಡೆಯುತ್ತಿರುವುದು ಪ್ರಶಂಸನೀಯ. ಪ್ರಸ್ತುತ ಕಾಲಘಟ್ಟದಲ್ಲಿ ವೃತ್ತಪತ್ರಿಕೆಗಳ ಓದುಗರ ಅಭಿಮಾನ, ಅಭಿವೃದ್ಧಿಗಳೇ ಸುದ್ದಿಗಳಾಗುತ್ತಿದ್ದು ಕಷ್ಟಕರ ವೃತ್ತಿಯ ಪತ್ರಕರ್ತರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ, ರಿಜೇನ್ಸಿ ಸಮೂಹ ಮುಂಬಯಿ ಇದರ ಪ್ರವರ್ತಕ ಜಯರಾಮ ಎನ್.ಶೆಟ್ಟಿ ಕಡಂದಲೆ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಬೆಳಿಗ್ಗೆ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್‍ನ ಲೋಟಸ್ ಸಭಾಗೃಹದಲ್ಲಿ ಸಂಘದ ಪ್ರಪ್ರಥಮ ಚೊಚ್ಚಲ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2019 ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಜಯರಾಮ ಶೆಟ್ಟಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ| ಪದ್ಮರಾಜ ದಂಡಾವತಿ, ಗೌರವ ಅತಿಥಿüಗಳಾಗಿ ಉದಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ್ ಪ್ರಸಾದ್, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್, ಶ್ರೀ ಚಿತ್ತಾರಿ ಹಾಸ್ಪಿಟಾಲಿಟಿ ಸರ್ವಿಸಸ್ ಎಲ್‍ಎಲ್‍ಪಿ ಸಂಸ್ಥೆಯ ಆಡಳಿತ ನಿರ್ದೇಶಕ ಸದರಾಮ ಎನ್.ಶೆಟ್ಟಿ, ಸಂಘದ ಸಲಹಾ ಸಮಿತಿ ಸದಸ್ಯೆಯೂ, ಪುರಸ್ಕಾರ ಆಯ್ಕೆ ಸಮಿತಿ ಕಾರ್ಯಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಬೃಹನ್ಮುಂಬಯಿಯಲ್ಲಿನ ಹಿರಿಯ ಪತ್ರಕರ್ತ ನ್ಯಾಯವಾದಿ ವಸಂತ ಎಸ್.ಕಲಕೋಟಿ ಇವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ರೂಪಾಯಿ 25,000/- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಪವನ್ನಿತ್ತು ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2019 ಪ್ರದಾನಿಸಿ ಅಭಿನಂದಿಸಿದರು.

ಡಾ| ಪದ್ಮರಾಜ ಮಾತನಾಡಿ ಕಷ್ಟಪಟ್ಟು ಅವಮಾನಗಳನ್ನು ಎದುರಿಸಿಯಾದ್ರೂ ಒಂದು ಪರಿಪೂರ್ಣತೆಯ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಷ್ಟಿತ ಮೇರು ವ್ಯಕ್ತಿತ್ವದ ಶ್ರೇಷ್ಠಪತ್ರಕರ್ತರೊಬ್ಬರ ಸ್ಮರಣಾರ್ಥ ಮತ್ತೊರ್ವ ಆದರ್ಶವ್ಯಕ್ತಿಗೆ ಪುರಸ್ಕಾರ ಮೂಲಕ ಗೌರವಿಸುವುದೇ ಪ್ರಶಸ್ತಿಯ ಮೌಲ್ಯ ತಿಳಿಯಬಹುದು. ಸಾಧಕರನ್ನು ಗೌರವಿಸುವುದೇ ಒಂದು ಧರ್ಮವಾಗಿದ್ದು ಕೆ.ಟಿ ವೇಣುಗೋಪಾಲ್ ಮತ್ತು ವಸಂತ ಕಲಕೋಟಿ ಅವರ ಪತ್ರಿಕೋದ್ಯಮದ ನಿಷ್ಠೆ ನಾವು ತಿಳಿಯಬಹುದು. ವೃತ್ತಿನಿಷ್ಠೆಯ ಗಳಿಕೆಯ ವಿಶ್ವಾಸರ್ಹತೆಗೆ ಸಲ್ಲುವ ಗೌರವವಾಗಿದೆ. ಈ ಅಗಾಧಶಕ್ತಿಯ ದುರುಪಯೋಗ ಸಲ್ಲದು. ಪತ್ರಕರ್ತ ಅನ್ನುವುದು ಪುರುಷಪ್ರಧಾನ ಶಬ್ದವಾಗಿರದೆ ಸಮಾನತಾ ಪದವಾಗಿದ್ದರೆ ಒಳಿತು. ಪತ್ರಕರ್ತ ಶಬ್ದ ಅಷ್ಟೊಂದು ಒಪ್ಪುವ ಶಬ್ದವಲ್ಲ. ಸತ್ಯಶೋಧನೆಯೇ ಪತ್ರಿಕೋದ್ಯಮದ ಪರಮಗುರಿ ಆಗಿದೆ. ದುರುಪಯೋಗ ಮಹಾಪರಾಧವಾಗಿದೆ. ಪತ್ರಿಕೆಗಳು ಕೇವಲ ಪತ್ರಕರ್ತರಿಗೆ ಮಾತ್ರ ಸಂ¨ಂಧಿಸಿದ್ದಲ್ಲ. ಒಟ್ಟು ಜನಜೀವನ, ಜಗತ್ತಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಕನ್ನಡ ಪತ್ರಿಕೋದ್ಯಮ ರೋಮಾಂಚನವಾದದು. ಪತ್ರಕರ್ತರಿಗೆ ಅಧಿಕಾರ, ಹಣದಾಸೆ, ಜಾಹೀರಾತು ಮೋಹ ಇರಬಾರದು. ಕಾರಣ ಪತ್ರಿಕೋದ್ಯಮ ಅತ್ಯಾಧ್ಬುತವಾದ ವೃತ್ತಿಯಾಗಿದೆ. ಪತ್ರಿಕೋದ್ಯಮ ಜಗತ್ತಿನ ರೋಗ, ನೋವುಗಳಿಗೆ ಚಿಕಿತ್ಸೆ ಕೊಡುವ ವೃತ್ತಿಯಾಗಿದೆ ಎಂದರು.
ಮೋಹನ್ ಮಾರ್ನಾಡ್ ಮಾತನಾಡಿ ಕೆ.ಟಿ ವೇಣುಗೋಪಾಲ್ ಕರ್ತವ್ಯನಿಷ್ಠೆ ಆಧುನಿಕ ಪತ್ರಕರ್ತರಿಗೆ ಮಾದಾರಿಯಾಗಿದೆ. ಅವರಲ್ಲಿನ ವಸ್ತುನಿಷ್ಠೆ ಪತ್ರಿಕೋದ್ಯಮಕ್ಕೆ ಪೂರಕವಾಗಿತ್ತು. ಗಾಂಭೀರ್ಯತ್ವ ಇದ್ದರೂ ಸೌಮ್ಯತ್ವ ಸದ್ಗುಣವಂತರಾಗಿದ್ದ ಕೆಟಿವಿ ಆದರ್ಶ ಪತ್ರಿಕೋದ್ಯಮಕ್ಕೆ ವರವಾಗಿತ್ತು ಎಂದರು.

ನನ್ನ ಆಪ್ತಮಿತ್ರ ಕೆ.ಟಿ ವೇಣುಗೋಪಾಲ್ ಓರ್ವ ಪ್ರಾಮಾಣಿಕ ಮತ್ತು ವಸ್ತುನಿಷ್ಠಾವಂತ ಪತ್ರಕರ್ತರಾಗಿದ್ದರು. ವೇಣುಗೋಪಾಲ್ ಸ್ಮರಣಾರ್ಥ ಸಂಘವು ರೂಪಿಸಿದ ಪ್ರಥಮ ಪ್ರಶಸ್ತಿ ನನಗೆ ಕರುಣಿಸಿದ್ದು ನನ್ನಲ್ಲಿ ಅತೀವ ಸಂತೋಷ, ಅಭಿಮಾನ ಮೂಡಿಸಿದೆ. ಸುಮಾರು ಮೂರುವರೆ ದಶಕಗಳ ಹಿಂದೆ ಈಗಿನಷ್ಟು ಸೌಲಭ್ಯಗಳು ಇಲ್ಲದ ಕಾಲದಲ್ಲೂ ನಾವು ಪರಮಾಪ್ತರಾಗಿ ಪತ್ರಿಕೆಗಳಿಗೆ ನಿಷ್ಠರಾಗಿ ಶ್ರಮಿಸಿದ ಫಲ ಇಂದು ಪುರಸ್ಕಾರ ರೂಪಿತ ವರವಾಗಿ ಸ್ವೀಕರಿಸಲು ಸಂತೋಷವೆಣಿಸುತ್ತಿದೆ ಎಂದÀು ವಸಂತ ಕಲಕೋಟಿ ಪ್ರಶಸ್ತಿಗೆ ಉತ್ತರಿಸಿದರು.

ಮುಂಬಯಿನಲ್ಲಿ ಸುಮಾರು ಮೂರುವರೆ ದಶಕಗಳಿಂದ ಕನ್ನಡ ಪತ್ರಿಕೋದ್ಯಮವನ್ನು ಪ್ರತಿಷ್ಠಿತವಾಗಿರಿಸಿ ಓರ್ವ ನಿಷ್ಠಾವಂತ ಹಿರಿಯ ಪತ್ರಕರ್ತ-ಕಥೆಗಾರ ಆಗಿದ್ದು ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ದೀರ್ಘಾವಧಿಯ ಅನುಪಮ ಸೇವೆಗೈದು ಅಗ್ರಗಣ್ಯ ಪತ್ರಕರ್ತರೆನಿಸಿ, ಕನ್ನಡಿಗ ಪತ್ರಕರ್ತರ ಸಂಘದÀ ಹಿರಿಯ ಸದಸ್ಯರಾಗಿದ್ದು ಸಂಘದ ಕಾಯ್ದೆ ರಚನಾ ಸಮಿತಿ ಕಾರ್ಯಾಧ್ಯಕ್ಷ ಆಗಿದ್ದ ಅವರ ಸ್ಮರಣಾರ್ಥ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ರಚಿಸಿರುವುದು ಶ್ಲಾಘನೀಯ. ಅದನ್ನೂ ವಸಂತ ಕಲಕೋಟಿ ಅವರಿಗೆ ಪ್ರದಾನಿಸುತ್ತಿರುವುದು ಸ್ತುತ್ಯರ್ಹ ಎಂದು ಪುರಸ್ಕಾರ ಸಮಿತಿ ಕಾರ್ಯಧ್ಯಕ್ಷೆ ಡಾ| ಸುನೀತಾ ಶೆಟ್ಟಿ ತಿಳಿಸಿದರು.

ಈ ಶುಭಾವಸರದಲ್ಲಿ ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ಅಶೋಕ್ ಆರ್. ದೇವಾಡಿಗ, ನಾಗರಾಜ್ ಕೆ.ದೇವಾಡಿಗ, ಅನಿತಾ ಪೂಜಾರಿ ತಾಕೋಡೆ, ಜಯಂತ್ ಕೆ.ಸುವರ್ಣ, ಸಲಹಾ ಸಮಿತಿ ಸದಸ್ಯರುಗಳಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಆರ್.ಕೆ.ಶೆಟ್ಟಿ, ಗ್ರೇಗೋರಿ ಡಿ.ಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಪಂ| ನವೀನ್ಚÀಂದ್ರ ಆರ್.ಸನಿಲ್, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುಧಾಕರ್ ಉಚ್ಚಿಲ್ ಸೇರಿದಂತೆ ಸಂಘದ ಸದಸ್ಯರನೇಕರು, ಕೆ.ಟಿ ವೇಣುಗೋಪಾಲ್ ಅಭಿಮಾನಿಗಳು ಉಪಸ್ಥಿತರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ವಿಶೇಷ ಆಮಂತ್ರಿತ ಸದಸ್ಯ ಹಾಗೂ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯ ಸಾ.ದಯಾ (ದಯಾನಂದ ಸಾಲ್ಯಾನ್) ಪುರಸ್ಕೃತರನ್ನು ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ಕೃತಜ್ಞತೆ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here