Friday 19th, April 2024
canara news

ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ವತಿಯಿಂದ ರಂಗ ತರಭೇತಿ ಶಿಬಿರ

Published On : 01 Aug 2019   |  Reported By : Rons Bantwal


ಸಂವೇದನಾಶೀಲ ನಾಟಕಕಾರ ಸಾ.ದಯಾ ಅವರಿಂದ ಶಿಬಿರಭ್ಯಾಸ

ಮುಂಬಯಿ, ಜು.30: ಮುಂಬಯಿ ಉಪನಗರ ಕಾಂದಿವಲಿಯಲ್ಲಿನ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್ ಕನ್ನಡಿಗರ ಬಳಗವು ರಂಗ ತರಭೇತಿ ಶಿಬಿರವನ್ನು ಆಯೋಜಿಸಿದ್ದು, ಇದೇ ಬರುವ ಆ.04ನೇ ಆದಿತ್ಯವಾರ ಸಂಜೆ 4.00 ಗಂಟೆಗೆ ಸರಿಯಾಗಿ ಕಾಂದಿವಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನದ ಸಭಾಗೃಹದಲ್ಲಿ ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷರಾದ ಎಂ.ಕೃಷ್ಣ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಶಿಬಿರವನ್ನು ಬಳಗದ ಗೌರವ ಅಧ್ಯಕ್ಷರೂ, ಸ್ಥಳಿಯ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ, ವೆಜ್ ಟ್ರೀಟ್‍ನ ಮಾಲಕರಾದ ರವೀಂದ್ರ ಎಸ್. ಶೆಟ್ಟಿ ಆಗಮಿಸಲಿರುವರು.

  

Gopal C.Shetty                   Ravindra S. Shetty

   

Ganshyam Srivastava                        Saa Daya

 

 Krishna N Shetty.

ರಂಗಭೂಮಿ ಮತ್ತು ಸಿನೆಮಾ ರಂಗದ ಪ್ರಸಿದ್ಧ ಕಲಾವಿದರಾದ ಘನಶ್ಯಾಮ ಶ್ರೀವಾಸ್ಥವ ಹಾಗೂ ಮುಂಬೈಯ ಖ್ಯಾತ ರಂಗತಜ್ಞ, ಸಂವೇದನಾಶೀಲ ನಾಟಕಕಾರ, ಕವಿ, ಸಾ.ದಯಾ (ದಯಾನಂದ ಸಾಲ್ಯಾನ್) ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರ ನಡೆಸಿ ಕೊಡÀುವರು.

ಮುಂಬಯಿ ಉಪನಗರ ಕಾಂದಿವಲಿಯಲ್ಲಿನ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್ ಕನ್ನಡಿಗರ ಬಳಗವು ಕಳೆದ ಹಲವು ವರ್ಷಗಳಿಂದ ಹತ್ತು ಹಲವು ಸಾಂಸ್ಕೃತಿಕ ,ಸಾಹಿತ್ಯಕ ಕಾರ್ಯಕೃಮಗಳು , ಶೈಕ್ಷಣಿಕ, ಸಾಮಾಜಿಕವಾಗಿ ಅನೇಕ ಜನಪರ ಚಟುವಟಿಗಳಿಂದ ಮಹಾನಗರದಲ್ಲಿ ತನ್ನದೇ ಆದ ಮಹತ್ತರ ಹೆಜ್ಜೆ ಗುರುತನ್ನು ದಾಖಲಿಸಿದೆ. ಇದೀಗ ಸಂಸ್ಥೆಯು ರಂಗಭೂಮಿಯಲ್ಲಿಆಸಕ್ತಿವುಳ್ಳವರಿಗೆ, ಕಲಾವಿದರಿಗೆ ಪೆÇ್ರೀತ್ಸಾಹಿಸುವ ಹಿನ್ನಲೆಯಲ್ಲಿ, ರಂಗ ತರಭೇತಿ ಶಿಭಿರ ಏರ್ಪಡಿಸಲು ನಿರ್ಧರಿಸಿದೆ. ಮೂರು ದಿನಗಳ ಈ ಶಿಭಿರದಲ್ಲಿ ರಂಗಭೂಮಿಯ ಕುರಿತು ಅಧ್ಯಯನಪೂರ್ವಕ ಮೂಲಭೂತ ಶಿಕ್ಷಣನೀಡುವತ್ತ ಗಮನ ಹರಿಸಲಾಗುವುದು.

ಬಳಗದ ಸದ್ರಿ ಕಾರ್ಯಕಾರಿ ಸಮಿತಿಯ ಸಹಕಾರ ಮತ್ತು ಅಧ್ಯಕ್ಷ ಕೃಷ್ಣ ಶೆಟ್ಟಿ ಅವರ ಮುಂದಾಳುತನದಲ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಶೆಟ್ಟಿ ಮುತುವರ್ಜಿಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಸಂಘದ ಸದಸ್ಯರು, ಮಕ್ಕಳು ಮತ್ತು ಚಾರ್ ಕೋಪ್ ಆಸುಪಾಸಿನ ಪರಿಸರದ ಕರ್ನಾಟಕ ಮೂಲದ ಆಸಕ್ತರೆಲ್ಲರು ಭಾಗವಹಿಸಬಹುದು. ಶಿಬಿರಾಥಿರ್üಗಳ ಶಿಸ್ತುಬದ್ಧವಾದ ನೋಂದಣಿಗಾಗಿ ಕೇವಲ ರೂ.100 ನೋಂದಣಿ ಶುಲ್ಕವನ್ನು ವಿಧಿಸಲಾಗುವುದು. ಬಳಗದ ಸಾಹಿತ್ಯ ಮತ್ತು ಸಾಂಸ್ಕ್ರಿಕ ಉಪಸಮಿತಿ ಹಮ್ಮಿಕೊಂಡ ಈ ತರಭೇತಿ ಶಿಬಿರ ದಿಂದ ಕಲಾವಿದರ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಮತ್ತು ಆ ಮೂಲಕ ರಂಗಭೂಮಿಯಲ್ಲಿ ಮುನ್ನಡೆಯಲು ಸದಾವಕಾಶ ಇದಾಗಲಿ ಎಂಬ ಮಹದಾಶೆಯಿದೆ. ಮುಂದಿನ ದಿನಗಳಲಿ ಯಕ್ಷಗಾನ, ತಾಳಮದ್ದಳೆ ಮುಂತಾದ ಶಿಭರಗಳನ್ನೂ ಹಮ್ಮಿಕೊಳ್ಳುವ ಆಲೋಚನೆ ಇದೆ ಎಂದು ಉಪಸಮಿತಿ ಸಂಚಾಲಕ ಭಾಸ್ಕರ ಸರಪಾಡಿ ತಿಳಿಸಿರುವರು.

ಈ ಮೂರು ದಿನಗಳ ರಂಗ ಶಿಭಿರಕ್ಕೆ ಉಪ ಸಮಿತಿಯ ವಿಶೇಷ ಆಮಂತ್ರಿತ ಕವಿ, ಕಲಾವಿದ ಗೋಪಾಲ ತ್ರಾಸಿ ಹಾಗು ಇನ್ನಿತರ ಎಲ್ಲ ಸದಸ್ಯರ ಉಪಸ್ಥತಿ ಹಾಗೂ ನೆರವು ಲಭಿಸಲಿದೆ. ಆಸಕ್ತರು ತನುಜಾ ಭಟ್-ಮೊ. 98201 25830 ಅಥವಾ ರೂಪಾ ಭಟ್-ಮೊ.98212 97562 ಇವರನ್ನು ಸಂಪರ್ಕಿಸ ಬೇಕಾಗಿ ಬಳಗದ ಸಂಘಟಕರು ತಿಳಿಸಿರುತ್ತಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here