Thursday 28th, March 2024
canara news

ತುಳುನಾಡ ಐಸಿರಿ ವಾಪಿ ಸಂಸ್ಥೆಯಿಂದ `ಆಟಿಡ್ ಒಂಜಿ ದಿನ' ಸಂಭ್ರಮ

Published On : 01 Aug 2019   |  Reported By : Rons Bantwal


ಸಂಪ್ರದಾಯಿಕತೆಗಳಿಂದಲೇ ಮನುಜ ಜೀವನದ ಜೀವಾಳ : ಶಶಿಧರ ಬಿ.ಶೆಟ್ಟಿ

ಮುಂಬಯಿ (ವಾಪಿ-ಗುಜರಾತ್), ಜು.30: ನಾನು ಇನೊಮ್ಮೆ ಮನುಷ್ಯನಾಗಿ ಹುಟ್ಟಿದರೆ ನನ್ನ ತಾಯಿಯ ಉದರದಲ್ಲೇ ಹುಟ್ಟಬೇಕು. ಬಡ ಕುಟುಂಬದಲ್ಲಿ ಹುಟ್ಟಿದರೆ ಬಹುಶಃ ಮನುಷ್ಯ ಜೀವನ ಸಾರ್ಥಕ ಅನ್ನಬೇಕೋ ಏನೋ..? ಯಾಕೆಂದರೆ ನಮ್ಮ ಹಿರಿಯ ಆಚರಣೆಗಳು, ವಿಚಾರಧಾರೆಗಳು ಜೀವಂತ ಉಳಿದಿದ್ದರೆ ಅದು ಖಂಡಿತ ಬಡತನದ ನೋವನು ಉಂಡವರಿಂದ ಮಾತ್ರ. ನಾವು ಚಿಕ್ಕದಿರುವಾಗ ಆಟಿ ತಿಂಗಳು ಬಂದರೆ ಸಾಕು, ನಮ್ಮ ತಾಯಿ ನಮಗೆ ತೆರೆದಿರೆತ ಚಟ್ನಿ , ತಜಂಕ್ ಉಪ್ಪುಕಾರಿ, ತಿಮರೆ ಚಟ್ನಿ, ಪಾಲೆದ ಕಷಾಯ ಮತ್ತು ಪ್ರಕೃತಿಯಲ್ಲಿ ಅಡಗಿರುವ ಗಿಡಗಳ ಔಷಧಿಗಳು ನಮಗೆ ಕೊಡುತಿದ್ದರು. ಈ ವಿಷಯಗಳು ನಮ್ಮ ಮಕ್ಕಳು ತಿಳಿಯಬೇಕು. ಹಿರಿಯರನ್ನು ಇದನ್ನು ಮಕ್ಕಳಲ್ಲಿ ಪರಿಪಠಿಸಬೇಕು ಯಾಕೆಂದರೆ ಸಂಪ್ರದಾಯಿಕತೆಗಳಿಂದಲೇ ಮನುಜ ಜೀವನದ ಜೀವಾಳÀ ಸಾಧ್ಯ ಎಂದು ಗುಜರಾತ್‍ನ ಉದ್ಯಮಿ, ಹಿರಿಯ ಸಮಾಜ ಸೇವಕ, ತುಳು ಸಂಘ ಬರೋಡ ಇದರ ವಿಶ್ವಸ್ಥ ಶಶಿಧರ ಬಿ.ಶೆಟ್ಟಿ ಕರೆಯಿತ್ತರು.

ವಾಪಿ ಇಲ್ಲಿನ ವಾಪಿ-ದಮನ್ ಪರಿಸರದ ತುಳುನಾಡ ಐಸಿರಿ, ಸಂಸ್ಥೆಯು ಕಳೆದ ಭಾನುವಾರ ಸಂಜೆ ದಮನ್ ಇಲ್ಲಿನ ಹನಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ `ಆಟಿಡ್ ಒಂಜಿ ದಿನ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ಶಶಿಧರ ಶೆಟ್ಟಿ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದರು.

ಹಿರಿಯ ಸಮಾಜ ಸೇವಕಿ ಖಜಾನೆ ಹೊಸಮನೆ ಅಕ್ಕು ಭೋಜ ಶೆಟ್ಟಿ ಕಾರ್ಕಳ ಅಭ್ಯಾಗತರಾಗಿದ್ದು ಕಳಸೆಗೆ ಬತ್ತ ಸುರಿದು ಕಲ್ಪವೃಕ್ಷ ಹಿಂಗಾರ ಅರಳಿಸಿ ಮಂಗಳೂರು ಮಲ್ಲಿಗೆ ಮುಡಿದು ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಶುಭಕೋರಿದರು. ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಜಿ.ಪೂಜಾರಿ ಅವರು ನೆರೆದ ತುಳು ಬಾಂಧವರಿಗೆ ಆಟಿ ಸಂಭ್ರಮಕ್ಕೆ ಶುಭಕೋರಿದರು.

ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡುನಲ್ಲಿ ಪ್ರತಿಯೊಂದು ಸಂಪ್ರದಾಯಗಳಿಗೂ ಒಂದೊಂದು ಸ್ವಂತಿಕೆಯ ವೈಶಿಷ್ಟ್ಟತೆಗಳಿವೆ, ತುಳುನಾಡು ಕೋಟಿ ಚೆನ್ನಯ, ಕಾಂತಾಬಾರೆ ಬೂದಬಾರೆ, ಅಂಬಗ ಧಾರಗ, ಸಿರಿ ಕೊಂಡೆ, ಕೋಟೆದ ಬಭೂವು, ಅಗೋಳಿ ಮಂಜನ ಹೀಗೆ ಅನೇಕ ವೀರಪುರುಷರನ್ನು ಹೊಂದಿದ್ದ ಪುರಾತನ ಚರಿತ್ರೆವುಳ್ಳ ನಾಡಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಷಾಡ ತಿಂಗಳಿಗೆ ಬಹಳ ಮಹತ್ವವಿದ್ದು, ಹಿರಿಯರು ತುಳುನಾಡ ಪದ್ದತಿಯನ್ನು ಇಷ್ಟ ಪಡುತಿದರು, ಆಟಿ ತಿಂಗಳು ಕಷ್ಟದ ತಿಂಗಳೆಂದು ಪ್ರತೀತಿ ಇದೆಯಾದರೂ ಈಗ ನಗರದ ಬೇರೆಬೇರೆ ಕಡೆಗಳಲ್ಲಿ ಆಟಿ ತಿಂಗಳ ಆಚರಣೆಯನ್ನು ಸಂಭ್ರಮಿಸುವ ಕಾಲವಾಗಿದೆ. ಸÀಂಪ್ರದಾಯಿಕವಾಗಿ ಆಚರಿಸುವ ಈ ತಿಂಗಳನ್ನು ಭವಿಷ್ಯದ ಜನತೆ ಕಾಪಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅರುಣ್ ಶೆಟ್ಟಿ, ಉದಯ ಬಿ.ಶೆಟ್ಟಿ, ಪ್ರದೀಪ್ ಪೂಜಾರಿ, ಗಣೇಶ್ ಶೆಟ್ಟಿ, ಸುಕೇಶ್ ಎ.ಶೆಟ್ಟಿ ಮುಗೇರಿಮನೆ, ಕಿರಣ್ ಅಂಚನ್, ಮಹೇಶ್ ಶೆಟ್ಟಿ, ಜೀವನ ಶೆಟ್ಟಿ, ದಿವಾಕರ್ ಶೆಟ್ಟಿ, ಹರೀಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಪುತ್ತೂರು, ರಮೇಶ ಪೂಜಾರಿ, ಅಶೋಕ್ ಕೋಟ್ಯಾನ್, ಜನಾರ್ದನ್ ಮೇಲಂಟ ಪುತ್ತೂರು, ಶ್ರೀಧರ್ ಎನ್. ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಬರೋಡ, ಮಾದವ ಶೆಟ್ಟಿ ಬರೋಡ, ಗೋವಿಂದ ಶೆಟ್ಟಿ ಸಿಲ್ವಾಸ, ರಜನಿ ಗೋವಿಂದ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಅಧ್ಯಕ್ಷ ದಿನೇಶ್ ಶೆಟ್ಟಿ, ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ.ಎಸ್.ಕಾರಂತ್, ನಿಶಾ ನಾರಾಯಣ್ ಶೆಟ್ಟಿ, ರವಿನಾಥ್ ಶೆಟ್ಟಿ, ಅಜಿತ್ ಶೆಟ್ಟಿ ಅಂಕಲೇಶ್ವರ್ ಮತ್ತಿತರರು ಹಾಜರಿದ್ದು, ಸಂಘಟಕ, ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ವಿಶ್ವಸ್ಥ ಭಾಸ್ಕರ್ ಸರಪಾಡಿ ಉಪಸ್ಥಿತರಿದ್ದು, ಏಳುವರೆ ಲಕ್ಷ ಮಿಕ್ಕಿ ಮರಗಳನ್ನು ನೆಟ್ಟು ವಿಶ್ವದಾಖಲೆ ಮಾಡಿದ ಆರ್.ಕೆನಾಯರ್ ಇವರನ್ನು ಸನ್ಮಾನಿಸಲಾಯಿತು

ಉಪಾಧ್ಯಕ್ಷ ನವೀನ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಸದಸ್ಯ ಮಲ್ಕೋಮ್ ಪಿರೇರಾೀರಾ, ಆಟಿದ ತಿಂಗೊಲು ಇದರ ಮಹತ್ವ, ಆಚರಣೆಗಳ ವಿಶಿಷ್ಟ ್ಯತೆ ಇದರಿಂದ ಜನತೆಗೆ ಆಗುವÀ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು. ಗೌರವ ಪ್ರದಾನ ಕಾರ್ಯದರ್ಶಿ ಉದಯ ಬಿ.ಶೆಟ್ಟಿ ಪ್ರಸ್ತಾವನೆಗೈದರು. ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ರಜನಿ ಬಾಲಕೃಷ್ಣ ಶೆಟ್ಟಿ ಮತ್ತು ಅರುಂಧತಿ ನವೀನ್ ಶೆಟ್ಟಿ ನಿರೂಪಿಸಿದರು. ಉದಯ ಬಿ.ಶೆಟ್ಟಿ ವದನಾರ್ಪಣೆಗೈದರು.

ವಾಪಿ, ದಮನ್ ವಲ್ಸಡ್, ಸಿಲ್ವಾಸ, ಉಮ್ಮರ್ಗಾಂವ್ ಈ ಪಂಚ ಗ್ರಾಮಗಳನ್ನೊಂದಿರುವ ವಾಪಿ ಪ್ರಾದೇಶಿಕರು ತುಳುನಾಡ ಪರಂಪರೆ ಆಚಾರ ವಿಚಾರ ಅರಿವು ತಮ್ಮ ಮಕ್ಕಳಲ್ಲಿ ರೂಪಿಸಬೇಕು ಎಂಬ ವಿಚಾರಧಾರೆಯನ್ನಿ -ರಿಸಿ ಆಚರಿಸಲಾಗಿದ್ದ ಕಾರ್ಯಕ್ರಮದಲ್ಲಿ ಮನೋರಂಜನೆ ಕಾರ್ಯಕ್ರಮವಾಗಿ ತುಳುನಾಡ ಕ್ರೀಡಾಟಗಳು ಆಯೋಜಿಸಲಾಗಿತ್ತು. ಚಂದ್ರಿಕಾ ಅಶೋಕ್ ಕೋಟ್ಯಾನ್ ಮತ್ತು ಕುಮಾರಿ ಪ್ರತಿಷ್ಠಾ ನಾಗರಾಜ್ ಶೆಟ್ಟಿ ಮತ್ತಿತರರು ಆಟಿ ಕಡೆಂಜ ಕುಣಿತ, ಜಾನಪದ ಹಾಡುಗಳನ್ನಾಡಿ ಸಭೀಕರ ಮನ ಸೆಳೆದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here