Wednesday 24th, April 2024
canara news

ಬಂಟರ ಸಂಘ ಅಂಧೇರಿ ಬಾಂದ್ರಾ ಸಮಿತಿಯ ದತ್ತು ಸ್ವೀಕಾರ `ದಿಶಾ' ಕಾರ್ಯಕ್ರಮ

Published On : 06 Aug 2019   |  Reported By : Rons Bantwal


ಜನಸ್ಪಂದನೆಯೇ ಸಂಘಸಂಸ್ಥೆಗಳ ಧ್ಯೇಯೋದ್ದೇಶ ಆಗಲಿ : ಚಂದ್ರಹಾಸ ಕೆ.ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.04: ಕಷ್ಟ ಸುಖ ಇದು ಮನುಕುಲದ ಜೀವನಾಂಗವಾಗಿದೆ. ಇದರ ಸ್ಪಂದನೆ ಮತ್ತು ಪರಿಹಾರವೂ ಮಾನಮನ ಧರ್ಮವಾಗಿದೆ. ಇದೆಲ್ಲವನ್ನೂ ಮಾನವೀಯತೆಯಿಂದ ಮಾತ್ರ ಬಗೆಹರಿಸಿ ಕೊಳ್ಳಬಹುದು. ಸಂಘಗಳ ಧ್ಯೇಯೋದ್ದೇಶವೇ ಸ್ಪಂದನೆಯಾಗಿದೆ. ಆದುದರಿಂದ ನಮ್ಮವರಿಗಾಗಿನ ಇದೊಂದು ನಿಜಾರ್ಥದ ಅರ್ಥಪೂರ್ಣ ಕಾರ್ಯಕ್ರಮ. ನಮ್ಮವರ ನಿಸ್ವಾರ್ಥ ಸೇವಾ ಮನೋಭಾವ ಹಾಗೂ ಅನಾನುಕೂಲತೆಯಿಂದ ಬಂಟರು ಹಿಂದುಳಿಯಬಾರದು ಎಂದು ನಮ್ಮಲ್ಲಿನ ಸಾಧಕರು ಮತ್ತು ಅಸಹಾಯಕರನ್ನು ಸ್ಪಂದಿಸಿದ ಪರಿ ದೇವರೇ ಮೆಚ್ಚುವಂತಹದ್ದು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟ್ಟಿ ತಿಳಿಸಿದರು.

ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಸಾರಥ್ಯದಲ್ಲಿ ಇಂದಿಲ್ಲಿ ಆದಿತ್ಯವಾರ ಸಂಜೆ ಪೆÇವಾಯಿ ಇಲ್ಲಿನ ಎಸ್.ಎಂ ಶೆಟ್ಟಿ ವಿದ್ಯಾಲಯದ ಸಭಾಗೃಹದಲ್ಲಿ ಪ್ರಾದೇಶಿಕ ಸಮಿತಿ ಆಯೋಜಿಸಿದ್ದ `ದಿಶಾ-2019' ಕಾರ್ಯಕ್ರಮ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಚಂದ್ರಹಾಸ ಶೆಟ್ಟಿ ಮಾತನಾಡಿದರು.

ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಆರ್.ಶೆಟ್ಟಿ ಮುಂಡ್ಕೂರು ಅತಿಥಿü ಅಭ್ಯಾಗತರಾಗಿ ಹಾಗೂ ಬಂಟರ ಸಂಘದ ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಬಂಟರ ಸಂಘದ ಪ್ರಾದೇಶಿಕ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ, ಪ್ರಾದೇಶಿಕ ಸಮಿತಿ ಸಂಚಾಲಕ ಡಿ.ಕೆ ಶೆಟ್ಟಿÀ ಮತ್ತಿತರರು ವೇದಿಕೆಯಲ್ಲಿದ್ದು ಸಮಾಜದ ಕೆಲವು ಅಶಸಕ್ತ-ಅಂಗವಿಕಲರ ಹಾಗೂ ಆಥಿರ್üಕವಾಗಿ ಅಸಹಾಯಕ ಕುಟುಂಬಗಳ, ಹಲವಾರು ವಿದ್ಯಾಥಿರ್üಗಳ ದತ್ತು ಸ್ವೀಕಾರಗೈದು ಮಕ್ಕಳಿಗೆ ವಿದ್ಯಾಥಿರ್üವೇತನ ಮತ್ತು ಸಹಾಯಕರಿಗೆ ಬಟ್ಟೆಬರೆ ವಿತರಿಸಿ ಪ್ರಾದೇಶಿಕ ಸಮಿತಿಯ ನಿಜಾರ್ಥದ ನಿಷ್ಕಲಂಕ ಸೇವೆ ಪ್ರಶಂಸಿಸಿದರು ಹಾಗೂ ಸ್ಥಾನೀಯ ಮಾಜಿ ನಗರ ಸೇವಕ ಶರದ್ ಪವಾರ್ ಉಪಸ್ಥಿತರಿದ್ದು ಸಮಾಜ ಸೇವಕ ಕರುಣಾಕರ್ ಅನ್ನು ಶೆಟ್ಟಿ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಪ್ರಾದೇಶಿಕ ಸಮಿತಿಯು ಮಾತೃಸಂಸ್ಥೆಯ ಮೆಚ್ಚುಗೆಯ ಸಮಿತಿಯಾಗಿದೆ. ಕೇಂದ್ರ ಸಮಿತಿಯಲ್ಲೂ ಇಲ್ಲಿನ ಶಕ್ತಿ ನಾಲ್ವರು, ಮಾತೃಭೂಮಿಯಲ್ಲೂ ಹೆಚ್ಚಿನ ನಿರ್ದೇಶಕರು ಇದ್ದು ಈ ಸಮಿತಿಯೇ ಎಲ್ಲವುದÀಲ್ಲೂ ಮೊದಲಿಗ ಅನಿಸಿದೆ. ಆರ್.ಕೆ ಶೆಟ್ಟಿ ಅವರ ದೂರದೃಷ್ಠಿತ್ವ, ಕಾಯಕ ಶೈಲಿಯೇ ವೈಶಿಷ್ಟ್ಯಮಯವಾದದು. ಎಲ್ಲಿ ಹೊಸಹೊಸ ಜನರು ಬರುವರೋ ಅಲ್ಲಿ ಹೊಸಹೊಸ ಸಂಶೋಧನಾತ್ಮಕವಾದ ಯೋಜನೆ, ಯೋಚನೆಗಳು ಹುಟ್ಟುತ್ತವೆ. ಇವು ಸಕರಾತ್ಮಕವಾಗಿ ಸಮಾಜದ ಹಿತಕ್ಕೆ ಪೂರಕವಾಗಬಲ್ಲವು. ಇದರಿಂದ ಎಲ್ಲರಿಗೂ ಒಳಿತಾಗುವುದು ಎಂದು ರತ್ನಾಕರ ಮುಂಡ್ಕೂರು ತಿಳಿಸಿದರು.

ಡಾ| ಪ್ರಭಾಕರ ಶೆಟ್ಟಿ ಮಾತನಾಡಿ ಸಮಾಜ ಪರ ಯಾವುದೇ ಕಾರ್ಯಕ್ರಮಗಳು ಕಡ್ಲೆ ತಿಂದು ಕೈ ತೊಳೆದಂತೆ ಆಗಬಾರದು. ಎಲ್ಲವೂ ಪಾರದರ್ಶಕತ್ವದಲ್ಲಿದ್ದು ಸೇವೆಯಿಂದ ಸಫಲತೆ ಸಿಗುವಂತಿರಬೇಕು. ಆದ್ದÀರಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಪೆÇ್ರೀತ್ಸಾಹಿಸಿ ಎಂದÀು ಸಹಲಿಸಿದರು.

ನಮ್ಮನಡೆ ಜನರತ್ತ ಸಾಗಿದಾಗ ಜನತೆ ನಮ್ಮತ್ತ ಸಮೀಪ್ಯರಾಗುವರು. ಇಂತಹ ನಡೆಯಿಂದಲೇ ನಮ್ಮ ಸೇವಾ ಭರವಸೆಯನ್ನು ಸಮರ್ಪಕವಾಗಿ ನೀಗಿಸಿದ ನೆಮ್ಮದಿ ನಮಗಿದೆÉ. ಆರೋಗ್ಯದಾಯಕ ಸಮಾಜದ ಉದ್ದೇಶವೇ ನಮ್ಮದಾಗಿದ್ದು, ನಮ್ಮಲ್ಲಿನ ವಿಧವೆ, ಅನಾರೋಗ್ಯ ಪೀಡಿತರ, ವಿಕಲ ಚೇತನರ ಆರೈಕೆ ಮಾಡುವುದು ಸಮಾಜದ ಪರಮ ಧರ್ಮವಾಗಿದೆ. ಅಂತೆಯೇ ಪ್ರತಿಭಾನ್ವಿತ ಪ್ರತಿಭಾನ್ವೇಷಣೆಗೆ ಹಣದ ಅಸಹಾಯಕತೆ ಆಗದಂತೆ ಸ್ಪಂದಿಸಿದ್ದು, ಸಮಾಜದ ಆಥಿರ್üಕವಾಗಿ ಅಸಹಾಯಕ ಕುಟುಂಬಗಳಿಗೆ ನಿತ್ಯದ ದಿನಸಿ (ಕಿರಾಣಿ ಸಾಮಾನು) ಧರ್ಮಾರ್ಥ ವೈದ್ಯಕೀಯ ಮತ್ತಿತರ ಸೌಲಭ್ಯಗಳು ಲಭಿಸುವಂತೆ ಶ್ರಮಿಸಿದ ತೃಪ್ತಿ ನಮಗಿದೆ. ಇದಕ್ಕೆಲ್ಲಾ ಈ ಸಮಿತಿಯ ಪ್ರತಿಯೊಬ್ಬ ಸದಸ್ಯರ ಸಹಯೋಗವೇ ಕಾರಣ. ಇದೇ ಸಾರ್ಥಕ ಸಮಾಜ ಸೇವೆ ಅಂದೆಣಿಸಿದ್ದೇವೆ ಎಂದು ಪ್ರಸ್ತಾವನೆಗೈದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟ್ಟಿ ಇವರ ತೆರೆಮರೆಯ ಅಸಾಧರಣಾ ಸೇವೆ ಗುರುತಿಸಿ ಸನ್ಮಾನಿಸಲಾಯಿತು. ಪ್ರಾದೇಶಿಕ ಸಮಿತಿ ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಲಕ್ಷ ್ಮಣ್ ಎ.ಶೆಟ್ಟಿ ಇವರ ಅನುಪಮ ಸೇವೆ ಪರಿಗಣಿಸಿ ಗೌರವಿಸಲಾಯಿತು. ಬಂಟ ಸಮಾಜದ ವಿಶ್ವ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಾದ ಶಿವಾನಂದ ಶೆಟ್ಟಿ, ಕು| ತೃಪ್ತಿ ಶೆಟ್ಟಿ ಹಾಗೂ ಜಯ ಆದಿತ್ಯ ಶೆಟ್ಟಿ ಇವರನ್ನು ಸತ್ಕರಿಸಿ ಅಭಿನಂದಿಸಿ (ಅವರ ಭವಿಷ್ಯತ್ತಿನ ಪ್ರವಾಸ ಇತ್ಯಾದಿ) ದತ್ತು ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಉನ್ನತ ಶಿಕ್ಷಣ ಸಮಿತಿ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಪ್ರಾದೇಶಿಕ ಸಮಿತಿ ಉದ್ಯೋಗ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಳ್ವ, ವೈವಾಹಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಆರ್.ಜಿ ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ.ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಆನಂದ ಶೆಟ್ಟಿ ಅವರು ಮೆಡಿಕ್ಲೇಮ್ ಬಗ್ಗೆ ಮಾಹಿತಿ ನೀಡಿದರು. ಪ್ರಾದೇಶಿಕ ಸಮಿತಿಯ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ ಅವರು ಕ್ರೀಡಾ ಪಾಲ್ಗೊಳ್ಳುವಿಕೆ ಹಾಗೂ ಸಾಂಸ್ಕೃತಿಕ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ ಅವರು ನಮ್ಮಲ್ಲಿನ ಕಲಾವಿದ ಪ್ರತಿಭೆಗಳು ಸಂಘದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.

ಪ್ರಶಾಂತಿ ಡಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಪ್ರಾದೇಶಿಕ ಸಮಿತಿ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ ಸುಖಾಗಮನ ಬಯಸಿದರು. ಮಹಿಳಾ ಕಾರ್ಯದರ್ಶಿ ವಜ್ರಾ ಪೂಂಜ ಮತ್ತು ಪ್ರಸಾದ್ ಶೆಟ್ಟಿ ಪುರಸ್ಕೃತ ಕ್ರೀಡಾಳುಗಳನ್ನು ಹಾಗೂ ಮಹಿಳಾಧ್ಯಕ್ಷೆ ವನಿತಾ ವೈ.ನೋಂಡಾ ಮತ್ತು ಜೊತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಸನ್ಮಾನಿತರನ್ನು ಪರಿಚಯಿಸಿದರು. ರವಿ ಆರ್.ಶೆಟ್ಟಿ ಸೇವಾವಿವರ ಮತ್ತು ಫಲಾನುಭವಿಗಳ ಯಾದಿ ಪ್ರಕಟಿಸಿದರು. ಬಾಬಾ ಪ್ರಸಾದ್ ಅರಸ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ನ್ಯಾ| ಆರ್.ಜಿ ಶೆಟ್ಟಿ ಧನ್ಯವದಿಸಿದರು. ಮಿಥಾಲಿ ಶೆಟ್ಟಿ ಶಿಷ್ಯವೃಂದವು ನೃತ್ಯಗಳನ್ನು ಪ್ರಸ್ತುತ ಪಡಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here