Thursday 25th, April 2024
canara news

ಪೇಜಾವರ ಮಠದಲ್ಲಿ ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟ ಶ್ರೀ ಕೃಷ್ಣಲೀಲೋತ್ಸವ

Published On : 27 Aug 2019   |  Reported By : Rons Bantwal


ಧಾರ್ಮಿಕ-ಸಾಂಸ್ಕೃತಿಕ ಸಂಪ್ರದಾಯಬದ್ಧÀವಾಗಿ ನೆರವೇರಿದ ವಿಟ್ಲ ಪಿಂಡಿ ಸಂಭ್ರಮ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.24: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸಂಪ್ರದಾಯಬದ್ಧÀ ವಿಟ್ಲ ಪಿಂಡಿ ಉತ್ಸವವನ್ನು ಧಾರ್ಮಿಕ-ಸಾಂಸ್ಕೃತಿಕ ಸಂಪ್ರದಾಯ ಬದ್ಧÀವಾಗಿ ನೆರವೇರಿಸಲಾಯಿತು. ಉಡುಪಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ ಸಡಗರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ವಿಜೃಂಭಿಸಲಾಯಿತು.

ಶ್ರೀಕೃಷ್ಣಷ್ಟಮಿ ಪ್ರಯುಕ್ತ ಶುಕ್ರವಾರ ಸಂಜೆ ನಾರಾಯಣ ಸರಳಾಯ ಬಳಗವು ದಾಸವಾಣಿ, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ಹರಿಕಥೆ ಪ್ರಸ್ತುತ ಪಡಿಸಿದ್ದು ತಡರಾತ್ರಿ ಮಠದ ಶಿಲಾಮಯ ಮಂದಿರದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕೃಷ್ಣಾರ್ಘ್ಯ ಪ್ರದಾನ ಕಾರ್ಯಕ್ರಮ ನೆರವೇರಿಸಲ್ಪಟ್ಟಿತು. ವಿದ್ವಾನ್ ಆದಿತ್ಯ ಕಾರಂತ ಮಹಾಪೂಜೆ, ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಇಂದಿಲ್ಲಿ ಶನಿವಾರ ದಿನವಿಡೀ ಮಠಕ್ಕಾಗಮಿಸಿದ ಶ್ರೀಕೃಷ್ಣ ಭಕ್ತರು ವಿವಿಧ ಪೂಜಾಧಿಗಳಲ್ಲಿ ಪಾಲ್ಗೊಂಡÀು ಶ್ರೀಕೃಷ್ಣ ದೇವರಿಗೆ ಆರಾಧಿಸಿದರು. ಸಂಜೆ ಮಠದಿಂದ ಪ್ರಭಾತ್ ಕಾಲೋನಿ ಮೂಲಕ ದಿನೇಶ್ ವಿ.ಕೋಟ್ಯಾನ್ ಜೆರಿಮೆರಿ ತಂಡದ ಸಾಕ್ಸೋಫೆÇೀನ್, ವಾದ್ಯ, ಬ್ಯಾಂಡು ಚೆಂಡೆಗಳ ನೀನಾದ, ಗೊಂಬೆಯಾಟ, ವಿವಿಧ ವೇಷಭೂಷಣ, ವೈವಿಧ್ಯಗಳೊಂದಿಗೆ ಭವ್ಯ ಶೋಭಾಯಾತ್ರೆಗೈದು ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ ಆಚರಿಸಲ್ಪಟ್ಟಿತು. ವಿದ್ವಾನ್ ವಿಷ್ಣುಮೂರ್ತಿ ಅಡಿಗ ಬೋರಿವಿಲಿ ಉತ್ಸವ ಬಲಿಯೊಂದಿಗೆ ಕೃಷ್ಣರಥೋತ್ಸವ ನೆರವೇರಿಸಿದರು. ಪೇಜಾವರ ಮಠದ ಮಧ್ವೇಶ ಭಜನಾ ಮಂಡಳಿಯಿಂದ ಭಜನೆ ಮತ್ತು ಗಣೇಶ್ ಎರ್ಮಾಳ್ ಬಳಗ ಗಾನಸುಧೆ ಕಾರ್ಯಕ್ರಮ ನೀಡಿತು.

ಕಾರ್ಯಕ್ರಮದ ಅಂಗವಾಗಿ ಐಐಟಿಸಿ ಎಸ್.ಕೆ ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಉರ್ವಾಳ್, ಬಿ.ಆರ್ ರೆಸ್ಟೋರೆಂಟ್ ಹೊಟೇಲು ಸಮೂಹದ ಬಿ.ಆರ್ ಶೆಟ್ಟಿ ಮತ್ತು ಚಂಚಲ ಆರ್.ಶೆಟ್ಟಿ ಪರಿವಾರದ ಪ್ರಾಯೋಜಕತ್ವ -ದಲ್ಲಿ ಸಂಗೀತನಿಧಿ ವಿದ್ಯಾಭೂಷಣ ಬಳಗವು ದಾಸವಾಣಿ ಭಕ್ತಿಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು, ತಬಲಾದಲ್ಲಿ ಸೌರಭ್ ಕರಡೀಕರ್, ವಾಯೋಲಿನ್‍ನಲ್ಲಿ ಪ್ರದೇಶಾ ಆಚಾರ್ಯ ಸಹಕರಿಸಿದರು. ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಹಾಗೂ ಪೇಜಾವರ ಮಠ ಮುಂಬಯಿ ವತಿಯಿಂದ ಶ್ರೀ ಕೃಷ್ಣಲೀಲೋತ್ಸವ, ಶ್ರೀ ಕೃಷ್ಣವೇಷ ಸ್ಪರ್ಧೆ ನಡೆಸಲ್ಪಟ್ಟಿತು. ಸ್ಪರ್ಧಿಗಳಿಗೆ ವಿದ್ಯಾಭೂಷಣರು ಬಹುಮಾನವಿತ್ತು ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಡಾ| ಎ.ಎಸ್ ರಾವ್, ಡಾ| ಸುರೇಶ್ ಎಸ್.ರಾವ್ ಕಟೀಲು, ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಉದ್ಯಮಿ ಬಿ.ಆರ್ ಶೆಟ್ಟಿ, ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್, ಸಾಂಜಯ್ ಮಿಸ್ತ್ರಿ, ರವಿ ಸುವರ್ಣ, ಅನೂಪ್ ಶೆಟ್ಟಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ವಾಸುದೇವ ಉಡುಪ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುನಂದ ಉಪಾಧ್ಯಾಯ, ಆರ್.ಎಲ್ ಭಟ್, ಶೇಖರ್ ಜೆ.ಸಾಲಿಯಾನ್, ಸುರೇಂದ್ರಕುಮಾರ್ ಹೆಗ್ಡೆ, ಗೀತಾ ಆರ್.ಭಟ್, ಮುಕುಂದ ಬೈತ್ತಮಂಗಳ್ಕರ್, ವಿಷ್ಣುಮೂರ್ತಿ ಸಾಲಿ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುಧೀರ್ ಆರ್.ಎಲ್ ಭಟ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ರಾತ್ರಿ ಶ್ರೀಕೃಷ್ಣ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಶ್ರೀಕೃಷ್ಣಷ್ಟಮಿ ಸಂಪನ್ನ ಗೊಂಡಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here