Friday 19th, April 2024
canara news

ಸೈಂಟ್ ಜೋಸೆಫ್'ಸ್ ಇಗರ್ಜಿ ವಿೂರಾರೋಡ್‍ನಲ್ಲಿ ಸಂಭ್ರಮಿಸಲ್ಪಟ್ಟ ಕನ್ಯಾಮೇರಿ ಜನ್ಮೋತ್ಸವ

Published On : 08 Sep 2019   |  Reported By : Rons Bantwal


ಮೊಂತಿಹಬ್ಬ ಸಾಮರಸ್ಯದ ಸಂಭ್ರಮವಾಗಿದೆ : ಫಾ| ಡೋಮಿನಿಕ್ ವಾಜ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.08: ಹೊಸದು ಫಸಲನ್ನು ಪ್ರಾಪ್ತಿಸಿದ ಪ್ರಕೃತಿಗೆ ಒದವಿ ನೆನಪಿಸುತ್ತಾ ಪ್ರಕೃತಿಮಾತೆಗೆ ವಂದಿಸುವ ಸುದಿನವೇ ಮೊಂತಿಹಬ್ಬವಾಗಿದೆ. ಆದುದರಿಂದ ರೈತರು ಬೆಳೆಸಿದ ವರ್ಷದ ಮೊದಲ ಬತ್ತದ ತೆನೆಯ ಕಾಳನ್ನು ಧನ್ಯತಾಭಾವದಿಂದ ಭಕ್ತಿಪೂರ್ವಕವಾಗಿ ಮನೆಯೊಳಗೆ ತಂದು ಮಾತೆಗೆ ಮೆಚ್ಚುಗೆ ವ್ಯಕ್ತಪಡಿಸುವ ಸಂಪ್ರದಾಯ ಈ ಹಬ್ಬದ ವಿಶೇಷತೆ. ವರ್ಷವಾರು ಬೆಳೆಸುವ ಕೃಷಿಯ ಮೊದಲ ಬೆಳೆ ಮಾತೆ ಮರಿಯಮ್ಮಗೆ ಸಮರ್ಪಿಸುವ ಸಂಪ್ರದಾಯ ಹಬ್ಬವಾಗಿ ಆಚರಿಸುವುದು ವಾಡಿಕೆÉ. ಆದುದರಿಂದಲೇ ಮೊಂತಿಹಬ್ಬ ಸಾಮರಸ್ಯದ ಸಂಭ್ರಮವಾಗಿದೆ. ಆಧುನಿಕ ಜನತೆ ಅದೆಷ್ಟೂ ಅವಿಷ್ಕಾರಗಳನ್ನು ಮಾಡಿ ಜಗತ್ತನ್ನು ವೈಜ್ಞಾನಿಕವಾಗಿ ಮುನ್ನಡೆದರೂ ಪೂರ್ವಜರ ನಂಬಿಕೆಗಳು ಮತ್ತು ಸಂಪ್ರದಾಯಗಳು ಎಂದೂ ಹುಸಿಯಾಗಲಾರವು ಅನ್ನುವುದನ್ನೂ ಇಂತಹ ಹಬ್ಬಗಳು ಸಾರುತ್ತವೆ ಎಂದು ಧರ್ಮಗುರು ರೆ| ಫಾ| ಡೋಮಿನಿಕ್ ವಾಜ್ (ಒಸಿಡಿ) ಕರೆಯಿತ್ತರು.

ಉಪನಗರ ವಿೂರಾರೋಡ್ ಪೂರ್ವದಲ್ಲಿನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಪ್ರಭು ಏಸುಕ್ರಿಸ್ತರ ಜನನಿದಾತೆ ಮಾತೆಮೇರಿ ಅವರ ಹುಟ್ಟುಹಬ್ಬ `ಕನ್ಯಾಮೇರಿ ಜನ್ಮೋತ್ಸವ'ವನ್ನು ಸಂಭ್ರಮ ಸಡಗರÀದಿಂದ ಆಚರಿಸಲಾಗಿದ್ದು, ಫಾ| ಡೋಮಿನಿಕ್ ವಾಜ್ ಸಂಭ್ರಮಿಕ ಅಭಿವಂದನಾ ದಿವ್ಯಪೂಜೆ ನೆರವೇರಿಸಿ, ಕನ್ಯಾಮೇರಿಗೆ ಆರಾಧನಾ ಪ್ರಾರ್ಥನೆ ನೆರವೇರಿಸಿದರು ಹಾಗೂ ಪ್ರಸಂಗವನ್ನಿತ್ತು ನೆರೆದ ಭಕ್ತರನ್ನು ಹರಸಿದರು.

ಸೈಂಟ್ ಜೋಸೆಫ್ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್ ಸಹಯೋಗದೊಂದಿಗೆ ನೆರವೇರಿಸಲ್ಪಟ್ಟ ಸಂಭ್ರಮದಲ್ಲಿ ಮಾತೆ ಮೇರಿ ಜನ್ಮೋತ್ಸವ, ಪ್ರಕೃತಿ ಸಂಭ್ರಮ, ಸ್ತ್ರೀಯರ ದಿನಾಚರಣೆ ಹಾಗೂ ಕೊಂಕಣಿ ಮಾನ್ಯತಾ ದಿನಾಚರಣೆ ಇತ್ಯಾದಿಗಳೊಂದಿಗೆ ಆಚರಿಸಲ್ಪಟ್ಟ ಉತ್ಸವದಲ್ಲಿ ಇಗರ್ಜಿಯ ಧರ್ಮಗುರು, ಅಸೋಸಿಯೇಶನ್‍ನ ಆಧ್ಯಾತ್ಮಿಕ ನಿರ್ದೇಶಕ ಫಾ| ಮೆಲ್ವಿನ್ ಡಿ'ಕುನ್ಹಾ ಪ್ರಾರ್ಥನೆ ನಡೆಸಿ ಕರ್ನಾಟಕದ ಕರಾವಳಿ ಪ್ರದೇಶದ ಕೊಂಕಣಿ ಕ್ರೈಸ್ತ ಸಮುದಾಯವು ಪರಂಪರಿಕವಾಗಿ ರೂಢಿಸಿಕೊಂಡು ಬಂದÀಂತೆ ಕೃಷಿಕರಿಂದ ಅರ್ಪಿಸಲ್ಪಟ್ಟ ಹೊಸ ಬತ್ತದ ತೆನೆಗಳನ್ನು, ದವಸ-ಧಾನ್ಯ, ತರಕಾರಿ, ಬೆಳೆಗಳನ್ನು ಆಶೀರ್ವಾದಿಸಿ ತೆನೆಹಬ್ಬ ಸಂಭ್ರಮಕ್ಕೆ ಕಳೆಯನ್ನಿತ್ತರು.

ಮನುಕುಲದಲ್ಲಿ ಮರೆಯಾದ ಕೂಡುಕುಟುಂಬಗಳು ಮತ್ತೆ ಜೊತೆಗೂಡಿ ಬಾಳುವಂತೆ ಎಲ್ಲರೂ ಪ್ರಯತ್ನಿಸಬೇಕು ಆ ಮೂಲಕ ಅನಾದಿಕಾಲದಿಂದಲೂ ಏಕತಾ ಬಾಳಿಗೆ ಪ್ರೇರಣೆಯಾದ ಈ ಹಬ್ಬ ಸರ್ವರನ್ನೂ ಜೊತೆಗೂಡಿಸÀಲಿ ಎಂದು ಫಾ| ಮೆಲ್ವಿನ್ ಮಾತೆ ಮೇರಿಯ ಜನ್ಮೋತ್ಸವದ ಸಂದೇಶ ಸಾರಿದರು.

ಇಗರ್ಜಿಯ ಧರ್ಮಗುರುಗಳಾದ ರೆ| ಫಾ| ವಾಲ್ಟರ್ ಡಿ'ಸೋಜಾ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಉತ್ಸವದಲ್ಲಿ ಸೈಂಟ್ ಜೋಸೆಫ್ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್‍ನ ಅಧ್ಯಕ್ಷ ಜೋನ್ ಕ್ರಾಸ್ತ, ಉಪಾಧ್ಯಕ್ಷ ಹೆನ್ರಿ ಸಿಕ್ವೇರಾ, ಕಾರ್ಯದರ್ಶಿ ಜೆರಾಲ್ಡ್ ಡಿ'ಸೋಜಾ, ಕೋಶಾಧಿಕಾರಿ ವಿಕ್ಟರ್ ಮಸ್ಕರೇನ್ಹಾಸ್, ಜತೆ ಕಾರ್ಯದರ್ಶಿ ಫೆÇ್ಲೀರಿನ್ ಮಥಾಯಸ್, ಜತೆ ಕೋಶಾಧಿಕಾರಿ ವಿಲಿಯಂ ಮಿರಾಂದ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಹಿಲಾರಿ ಡಿಸಿಲ್ವಾ ನಿಡ್ಡೋಡಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಿಚಾರ್ಡ್ ಮಥಾಯಸ್ ಸೇರಿದಂತೆ ಮಾಜಿ ಪದಾಧಿಕಾರಿಗಳು, ಸದಸ್ಯರನೇಕರು ಹಾಗೂ ಸ್ನೇಹಸಾಗರ್ ಭಗಿನಿಯರು ಸೇರಿದಂತೆ ಅಪಾರ ಸಂಖ್ಯೆಯ ಮಾತೆ ಭಕ್ತರು ಧಾರ್ಮಿಕ ವಿಧಿಗಳಲ್ಲಿ ಸಹಭಾಗಿಗಳಾಗಿ ಪೂರ್ವಜರು ರೂಢಿಸಿ ಬಂದಿರುವ ಸಾಂಪ್ರದಾಯಿಕ ಮೋಂತಿಹಬ್ಬವನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಸಂಭ್ರಮಿಸಿ ಮಾತೆಮೇರಿಯನ್ನು ಸ್ತುತಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here