Thursday 18th, April 2024
canara news

ಅಂಧೇರಿ ಪಶ್ವಿಮ: ಜವಾಬ್ ಸಂಸ್ಥೆ ಪೂರೈಸಿದ ಹದಿನೆಂಟನೇ ವಾರ್ಷಿಕ ಮಹಾಸಭೆ

Published On : 17 Sep 2019   |  Reported By : Rons Bantwal


ಬಂಟರು ಅನಾದಿ ಕಾಲದಿಂದಲೂ ಬಲಿಷ್ಠರೇ ಸರಿ : ಜಯಪ್ರಕಾಶ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.14: ಅನಾದಿ ಕಾಲದಿಂದಲೂ ಬಲಿಷ್ಠರೆಣಿಸಿದ ಬಂಟರು ತಮ್ಮ ಪರಂಪರೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿದರು. ಅದನ್ನೇ ಉದ್ದೇಶವಾಗಿಸಿ ಬಂಟರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರೂಪುಗೊಂಡ ಜವಾಬ್ ಇಂದು ಯೌವನದ ಹೊಸ್ತಿಲಲ್ಲಿದೆ. ಇದರ ಅಧ್ಯಕ್ಷನಾಗಿಸಿ ಸೇವೆಗೈಯಲು ಅವಕಾಶ ಒದಗಿಸಿದ ಸರ್ವರಿಗೂ ಅಭಾರಿಯಾಗಿರುವೆ. ನನ್ನ ಅಧಿಕಾರವಧಿಯಲ್ಲಿ ಸಹಕರಿಸಿದ ಸರ್ವರಿಗೂ ವಂದನೆಗಳು ಎಂದು ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್) ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ನುಡಿದರು.

ಶನಿವಾರ ರಾತ್ರಿ ಅಂಧೇರಿ ಪಶ್ವಿಮದಲ್ಲಿನ ಪ್ಯಾಪಿಲಾನ್ ಪಾರ್ಕ್ ಹೊಟೇಲು ಸಭಾಗೃಹದಲ್ಲಿ ಮಹಾನಗರದಲ್ಲಿನ ಬಂಟ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಾದ ಜವಾಬ್ ತನ್ನ 18ನೇ ವಾರ್ಷಿಕ ಮಹಾಸಭೆ ಜರುಗಿಸಿದ್ದು ಜಯಪ್ರಕಾಶ್ ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿದರು.

ಉಪಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ, ಗೌರವ ಕೋಶಾಧಿಕಾರಿ ಅಶೋಕ್‍ಕುಮಾರ್ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಟಿ.ವಿಶ್ವನಾಥ್ ಶೆಟ್ಟಿ, ಜೊತೆ ಕೋಶಾಧಿಕಾರಿ ಹೆಚ್.ಶೇಖರ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದು, ನಾಡಿನ ಹೆಸರಾಂತ ಹಿರಿ ಹೊಟೇಲು ಉದ್ಯಮಿ ಸುಬ್ಬಯ ವಿ.ಶೆಟ್ಟಿ (ಪರವಾಗಿ ಸುಪುತ್ರರಾದ ಚಂದ್ರಶೇಖರ್ ಎಸ್. ಶೆಟ್ಟಿ ಮತ್ತು ಅರುಣ್ ಎಸ್. ಶೆಟ್ಟಿ) ಅವರನ್ನು ಹಾಗೂ ಮಹಾನಗರದ ಪ್ರಸಿದ್ಧ ವೈದ್ಯಾಧಿಕಾರಿ ಡಾ| ನಿಟ್ಟೆ ರಾಮದಾಸ ಶೆಟ್ಟಿ (ಪತ್ನಿ ಕುಮುದಾ ರಾಮದಾಸ್ ಸಹಿತ) ಸನ್ಮಾನಿಸಿ ಅಭಿನಂದಿಸಿದರು.

ಮಹಾಸಭೆಯಲ್ಲಿ 2019-2021ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ| ಐ.ಆರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಸಭೆ ಆಯ್ಕೆಗೊಳಿಸಿತು. ಹಾಗೂ ಕಾರ್ಯಕಾರಿ ಸಮಿತಿಗೆ 26 ಸದಸ್ಯರ ಆಯ್ಕೆ ನಡೆಸಿತು. ನ್ಯಾ| ಮಾಧವ ಎಂ.ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ನ್ಯಾ| ಗುಣಪಾಲ ಡಿ.ಶೆಟ್ಟಿ ಆಯ್ಕೆಗೊಂಡÀ ಸದಸ್ಯರ ಯಾದಿ ಪ್ರಕಟಿಸಿ ಶುಭಾರೈಸಿದರು. ನಿರ್ಗಮನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪುಷ್ಪಗುಪ್ಛವನ್ನಿತ್ತು ನೂತನ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.

ಜವಾವ್ ಪರಿವಾರದ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ವಿದ್ಯಾಥಿರ್ü ವೇತನ, ವಿಶೇಷ ಸಾಧನೆಗೈದ ಪ್ರತಿಭಾನ್ವಿತರಿಗೆ ಪ್ರತಿಭಾಪುರಸ್ಕಾರವನ್ನು ವಿದ್ಯಾಥಿರ್ü ವೇತನದ ಪ್ರಾಯೋಜಕರುಗಳನ್ನು ಒಳಗೊಂಡು ಪ್ರದಾನಿಸಲಾಯಿತು. ಪದಾಧಿಕಾರಿಗಳು ಮತ್ತು ಮತ್ತಿತರರು ವಿದ್ಯಾಥಿರ್sಗಳನ್ನು ಗೌರವಿಸಿ ಅಭಿನಂದಿಸಿದರು.

ನೂತನ ಅಧ್ಯಕ್ಷ ಐ.ಆರ್ ಶೆಟ್ಟಿ ಮಾತನಾಡಿ ಸಮಗ್ರ ಬಂಟರಲ್ಲಿನ ಬಂಧುತ್ವ ಮತ್ತು ಸಮಾನತಾ ಬಾಳ್ವೆಯೇ ನಮ್ಮ ಉದ್ದೇಶವಾಗಿದೆ. ಬಂಟರನ್ನು ಸಾಂಘಿಕರಾಗಿಸಿ, ನಮ್ಮಲ್ಲಿನ ಪೂರ್ವಜರು ರೂಢಿಸಿ ಬಂದಿರುವ ಸಂಪ್ರದಾಯ, ಸಂಸ್ಕೃತಿ, ಪರಂಪರೆಗಳನ್ನು ಭವಿಷ್ಯತ್ತಿನ ಪೀಳಿಗೆಯಲ್ಲಿ ಪರಿಚಯಿಸಿ ರೂಪಿಸಿ ಕೊಳ್ಳುವಂತೆ ಈ ಸಂಸ್ಥೆ ಪೂರಕವಾಗಿದೆ. ಸಂಸ್ಥೆಯ ಉದ್ದೇಶಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯ ಸಾರಥ್ಯ ನನಗೆ ನೀಡಿದ್ದೀರಿ. ಇದನ್ನು ನಾನು ಸಮರ್ಪಕವಾಗಿ ನಿಭಾಯಿಸುವ ಭರವಸೆ ನನಗಿದೆ. ಅದಕ್ಕೆ ತಮ್ಮೆಲ್ಲರ ಸಹಕಾರಬೇಕು ಎಂದು ಆಶಿಸಿದರು.

ಸಭೆಯಲ್ಲಿ ಮಾಜಿ ಅಧ್ಯಕ್ಷರು, ವಿಶ್ವಸ್ಥ ಸದಸ್ಯರು, ಮಾಜಿ ಅಧ್ಯಕ್ಷರುಗಳಾದ ಎನ್.ಸಿ ಶೆಟ್ಟಿ, ಶಂಕರ್ ಟಿ.ಶೆಟ್ಟಿ, ವಿಶ್ವನಾಥ ಹೆಗ್ಡೆ, ಬಿ.ವಿವೇಕ್ ಶೆಟ್ಟಿ, ರಘು ಎಲ್.ಶೆಟ್ಟಿ (ಪ್ಯಾಪಿಲಾನ್), ನಾಗೇಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಕು| ವೈಷ್ಣವಿ ವೈ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಐ.ಆರ್ ಶೆಟ್ಟಿ ಸ್ವಾಗತಿಸಿದರು. ಅಶೋಕ್‍ಕು ಮಾರ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ನ್ಯಾ| ರತ್ನಾಕರ್ ವಿ.ಶೆಟ್ಟಿ ಸಂಸ್ಥೆಯ ಬಗ್ಗೆ ತಿಳಿಸಿದರು. ಅಶೋಕ್‍ಕುಮಾರ್ ಆರ್.ಶೆಟ್ಟಿ ಮತ್ತು ಟಿ.ವಿಶ್ವನಾಥ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಿಶೋರ್ ಕುಮಾರ್ ಶೆಟ್ಟಿ ಗತ ವಾರ್ಷಿಕ ವರದಿ ವಾಚಿಸಿ ಧನ್ಯವದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here