Wednesday 24th, April 2024
canara news

ಬಿ.ಎಸ್.ಕೆ.ಬಿ ಎಸೋಸಿಯೇಶನ್-ಗೋಕುಲ ಯುವ ವಿಭಾಗದ ಆಯೋಜನೆಯಲ್ಲಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ- ಯುಫೆÇೀರಿಯಾ

Published On : 20 Sep 2019   |  Reported By : Rons Bantwal


ಮುಂಬಯಿ, ಸೆ.18: ಬಿ.ಎಸ್.ಕೆ.ಬಿ ಎಸೋಸಿಯೇಶನ್, ಸಾಯನ್, ಗೋಕುಲ ಯುವ ವಿಭಾಗದ ಆಯೋಜನೆಯಲ್ಲಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ -ಯುಫೆÇೀರಿಯಾವು ಆಶ್ರಯ, ನೇರೂಲ್‍ನಲ್ಲಿ ಕಳೆದರವಿವಾರ ರಂದು ಜರಗಿತು. ಯುವ ವಿಭಾಗದ ಸಂಚಾಲಕ ನಾರಾಯಣ ಮೂರ್ತಿಯವರಿಂದ ಸ್ವಾಗತ, ಜಾಹ್ನವಿ ಪೆÇೀತಿ ಮತ್ತು ಭಾರ್ಗವಿ ಪೆÇೀತಿ ಯವರ ಗಣೇಶ ಸ್ತುತಿಯೊಂದಿಗೆ ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಬಯಿ ಹಾಗೂ ಉಪನಗರಗಳಿಂದ ಸ್ವಾಮಿ ವಿವೇಕಾನಂದ ಹೈಸ್ಕೂಲ್, ಚೆಂಬೂರು, ಚೆಂಬೂರ್ ಕರ್ನಾಟಕ ಹೈಸ್ಕೂಲ್, ಚೆಂಬೂರು, ವಿಬ್‍ಗ್ಯಾರ್ ಹೈಸ್ಕೂಲ್, ಖಾರ್‍ಘರ್, ಜನರಲ್ ಎಜುಕೇಶನ್ ಅಕಾಡೆಮಿ, ಚೆಂಬೂರ್, ಶಿವಾಜಿ ಶಿಕ್ಷಣ ಸಂಸ್ಥಾನ, ಘಾಟ್ಕೋಪರ್, SIಇS (ಎಪಿಜೆ ಅಬ್ದುಲ್ ಕಲಂ ಮೆಮೋರಿಯಲ್) ಘಾಟ್ಕೋಪರ್, ಪ್ರೆಸೆಂಟೇಷನ್ ಸ್ಕೂಲ್, ನೇರೂಲ್, ಎನ್‍ಕೆಇಎಸ್ ವಡಾಲ, ಗುರು ಗೋಬಿಂದ್ ಸಿಂಗ್ ಎಜುಕೇಶನ್ ಅಕಾಡೆಮಿ, ನೇರೂಲ್, ರೆಡ್ಕ್ಲಿಫ್ ಸ್ಕೂಲ್, ಖಾರ್‍ಘರ್, ಸೈಂಟ್ ಆಗಸ್ಟಿನ್ ಹೈಸ್ಕೂಲ್, ನೇರೂಲ್, ಸಾಯಿ ಹೋಲಿ ಫೈತ್ ಸ್ಕೂಲ್, ಕೋಪರ್‍ಖೈರಣೆ ಶಾಲೆಗಳಿಂದ ಸುಮಾರು 150 ವಿದ್ಯಾಥಿರ್üಗಳು ಪಾಗ್ಲೊಂಡು ಸುಗಮ ಸಂಗೀತ, ಭಾಷಣ, ರಸಪ್ರಶ್ನೆ, ಸೃಜನಾತ್ಮಕ ಲೇಖನ, ಡಿಸ್ಕವರಿ ಇಂಡಿಯಾ (ಜಾನಪದ ನೃತ್ಯ) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಿಸ್ಕವರಿ ಇಂಡಿಯಾ ನೃತ್ಯ ಸ್ಪರ್ಧೆಯಲ್ಲಿ, ಭಾರತದ ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿ ವಿವಿಧ ರಾಜ್ಯಗಳ ವೈವಿಧ್ಯಮಯ ಜಾನಪದ ನೃತ್ಯಗಳನ್ನು ಶಾಲಾ ಬಾಲಕ ಬಾಲಕಿಯರು ಪ್ರಸ್ತುತ ಪಡಿಸಿದರು.

ಸುಗಮ ಸಂಗೀತದಲ್ಲಿ ಸಿದ್ಧಿ ಶೇಲರ್, ಸ್ವಾಮಿ ವಿವೇಕಾನಂದ ಹೈಸ್ಕೂಲ್, ಶ್ರವಣ್ ಶೆಟ್ಟಿ, ಎನ್‍ಕೆಇಎಸ್ ವಡಾಲ, ಅರ್ಮಾನ್-ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಭಾಷಣ ಸ್ಪರ್ಧೆಯಲ್ಲಿ ತಹರೀಂ ಖಾನ್, ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಿಯಾ ಗುಪ್ತಾ, ಎನ್‍ಕೆಇಎಸ್ ವಡಾಲ, ಅಹ್ಮದ್ ಖಾನ್, ಚೆಂಬೂರು ಕರ್ನಾಟಕ ಹೈಸ್ಕೂಲ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಸೃಜನಾತ್ಮಕ ಲೇಖನ ಸ್ಪರ್ಧೆಯಲ್ಲಿ ಆಯೇಷಾ, ಗುರು ಗೋಬಿಂದ್ ಹೈಸ್ಕೂಲ್, ಸೆಸಿಲ್ಲ ಪಾಸ್ಕಲ್, ಸೈ0ಟ್ ಆಗಸ್ಟಿನ್ ಹೈಸ್ಕೂಲ್, ಅಂಬರೀಷ್ ಕೃಷ್ಣನ್, SIಇS (ಎಪಿಜೆ ಅಬ್ದುಲ್ ಕಲಂ ಮೆಮೋರಿಯಲ್) ಘಾಟ್ಕೋಪರ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.

ರಸಪ್ರಶ್ನೆಯಲ್ಲಿ ನಿಕೇತ್ ಶೆಟ್ಟಿ ಮತ್ತು ಸ್ವೇಧ ಮುತ್ತುಸ್ವಾಮಿ, ಪ್ರೆಸೆಂಟೇಷನ್ ಸ್ಕೂಲ್ ನೇರೂಲ್, ತನಿಷ್ಕಾ ಖನ್ನಾ, ಸಯನ್ ಬೇರ, ರೆಡ್ಕ್ಲಿಫ್ಫ್ ಸ್ಕೂಲ್, ಖಾರ್ಘರ್, ಹಾಗೂ ಚಾರ್ಮಿ ಸಂಗೊಯಿ, ಮನೀಶ್ ಮುಸಲೆ SIಇS ಘಾಟ್ಕೋಪರ್, ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು ಹಾಗೂ ಡಿಸ್ಕವರಿ ಇಂಡಿಯಾ (ಜಾನಪದ ನೃತ್ಯ), ಸ್ಪರ್ಧೆಯಲ್ಲಿ ಚೆಂಬೂರ್ ಕರ್ನಾಟಕ ಹೈಸ್ಕೂಲ್, ಜನರಲ್ ಎಜುಕೇಶನ್ ಅಕಾಡೆಮಿ, ಚೆಂಬೂರ್, ವಿಬ್‍ಗ್ಯಾರ್ ಹೈಸ್ಕೂಲ್, ಖಾರ್ಘರ್ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಅತ್ಯುತ್ತಮ ಪ್ರದರ್ಶನವಿತ್ತ ಶಾಲೆಗಳಿಗೆ ನೀಡುವ ಟ್ರೋಫಿಯನ್ನು ಚೆಂಬೂರ್ ಕರ್ನಾಟಕ ಹೈಸ್ಕೂಲ್, ಪ್ರಥಮ ಮತ್ತು ಎನ್‍ಕೆಇಎಸ್ ವಡಾಲ ದ್ವಿತೀಯ ಸ್ಥಾನಗಳನ್ನು ಗಳಿಸಿ ಪಡೆದವು. ಶ್ರೀಲಕ್ಷ್ಮಿ ಉಡುಪ ವಿಜೇತರ ಯಾದಿ ವಾಚಿಸಿದರು.

ಪ್ರಥಮ ಬಹುಮಾನ ಹಾಗೂ ಉತ್ತಮ ಶಾಲೆ ಪ್ರಾಯೋಜಕರಾಗಿ ವೈಬ್ರಾ ್ಯಂಟ್ ಎಕ್ಸ್‍ಪೆÇೀಟೆಕ್ಸ್, ದ್ವಿತೀಯ ಬಹುಮಾನ ಹಾಗೂ ರನ್ನರ್ ಅಪ್ ಪ್ರಾಯೋಜಕರಾಗಿ ಓIIಈ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್, ದಿ| ತಾರಾ ರಾವ್ ಸ್ಮರಣಾರ್ಥ, ತೃತೀಯ ಬಹುಮಾನ ಪ್ರಾಯೋಜಕರಾಗಿ ಸುಬ್ರಹ್ಮಣ್ಯ ರಾವ್ ಬಾಳ, ಸಹಕರಿಸಿದರು. ಇತರ ಪ್ರಾಯೋಜಕರಾಗಿ ಪಿಎಮ್‍ಸಿ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಮತ್ತು ಉಖS ಫುಡ್ ಕಾನ್ಸೆಪ್ಟ್ಸ್ ಸಹಕರಿಸಿದರು.

ಸಂಘದ ಉಪಾಧ್ಯಕ್ಷ ವಾಮನ್ ಹೊಳ್ಳರವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆಯ ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಸುಬ್ರಹ್ಮಣ್ಯ ರಾವ್ ಬಾಳ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

ತೀರ್ಪುಗಾರರಾಗಿ ಡಾ| ಸಹನಾ ಪೆÇೀತಿ, ಭಾರತಿ ಡಂಬಲ್, ಡಾ| ವಿಮಲಾ, ಜಗದೀಶ್ ಆಚಾರ್ಯ, ಸೌಮ್ಯ ಉಪಾಧ್ಯಾಯ ಮತ್ತು ಅರ್ಚನಾ ಕೊಲ್ಗೆ ಸಹಕರಿಸಿದ್ದು, ವಾಮನ್ ಹೊಳ್ಳರವರು ತೀರ್ಪುಗಾರರಿಗೆ ಹಾಗೂ ಪ್ರಾಯೋಜಕರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.

ಸುಪ್ರಿಯಾ ಉಡುಪ, ಕೃತಿ ಚಡಗ, ಗುರುಪ್ರಸಾದ್ ಭಟ್,ಶ್ರೀಲಕ್ಷ್ಮಿ ಉಡುಪ, ಪ್ರಶಾಂತ್ ರಾವ್, ಪ್ರಶಾಂತ್ ಹೆರ್ಲೆ, ಜಾಹ್ನವಿ ಪೆÇೀತಿ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೆÇೀತಿ ಮತ್ತು ಪವಿತ್ರಾ ರಾವ್ ಕ್ವಿಜ್ ಮಾಸ್ಟರ್ ಆಗಿ ಸಹಕರಿಸಿದ್ದು, ನಾರಾಯಣ ಮೂರ್ತಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here