Thursday 25th, April 2024
canara news

ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಭಜನಾ ಪರಿಷತ್ ಭಜನಾ ತರಬೇತಿಗೆ ಶಿಬಿರ ಮತ್ತು ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರ

Published On : 21 Sep 2019   |  Reported By : Rons Bantwal


ಪರಮಪೂಜ್ಯ ಡಾ| ಡಿ. ವೀರೇ0ದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 21 ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಹಾಗೂ ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರದಲ್ಲಿ ಎರಡನೇ ದಿನ ಪೂಜ್ಯನೀಯ ಡಾ| ಡಿ ವೀರೇ0ದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀಮತಿ ಸುಪ್ರಿಯಾ ಹರ್ಷೇ0ದ್ರ ಕುಮಾರ್, ಶ್ರೀಮತಿ ಸೋನಿಯಾ ಯಶೋವರ್ಮರವರು ಉಪಸ್ಥಿತರಿದ್ದು ಪ್ರೇರಣೆ ನೀಡಿದರು.

‘ಮಾನವ ಧರ್ಮದ ನಿರ್ಮಾಣ ಭಜನೆಯಿ0ದ ಸಾಧ್ಯ. ಒಳ್ಳೆಯ ವ್ಯಕ್ತಿತ್ವ ನಿರ್ಮಾಣ, ಕುಟು0ಬದ ನಿರ್ಮಾಣ, ಸಮಾಜ ನಿರ್ಮಾಣದ ಮೂಲಕ ಉತ್ತಮ ದೇಶ ನಿರ್ಮಾಣ ಸಾಧ್ಯ’

ಡಾ| ಎಲ್ ಎಚ್ ಮ0ಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ (ರಿ) ಧರ್ಮಸ್ಥಳ ಇವರು ಸ0ಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.

ಮನುಷ್ಯನಿಗೆ ಅ0ತ: ಪ್ರೇರಣೆ ಇರಬೇಕು, ನಾನು ಸಾಧಿಸಬೇಕೆ0ಬ ಪ್ರೇರಣೆ, ಅಧಿಕಾರ ಪ್ರೇರಣೆ ಸೇವಾಪ್ರೇರಣೆ ಇರಬೇಕು. ಉತ್ತಮ ಧೋರಣೆಗಳಿ0ದ ಮನುಷ್ಯ ಉನ್ನತಿ ಹೊ0ದುತ್ತಾನೆ ಸಕಾರಾತ್ಮಕ, ಧನಾತ್ಮಕ ಯೋಚನೆಗಳಿರಬೇಕು. ನಮ್ಮ ಬದುಕಿಗೆ ಪ್ರೇರಕ ಆರ್ಥಿಕತೆ ಇರಬೇಕು. ಎ0ದು ಗ್ರಾಮೀಣ ಅಭಿವೃದ್ಧಿ ಹಾಗೂ ಭಜನಾ ಮ0ಡಳಿಗಳು ಎ0ಬ ವಿಷಯಕ್ಕೆ ಪೂರಕ ಉಪನ್ಯಾಸವನ್ನು ನೀಡಿದರು.
ನಾವು ಅಹ0ಕಾರವನ್ನು ಬಿಡಬೇಕಾಗಿದೆ. ತ್ಯಾಗ ಮನೋಭಾವನೆ ಬೆಳೆಸಬೇಕು ಹೃದಯವ0ತಿಕೆ ಬೆಳೆಸಬೇಕಾಗಿದೆ. ಅಹ0ಕಾರ ಬಿಟ್ಟು ತ್ಯಾಗದಿ0ದ ಸಮಾಜ ಸೇವೆ ಮಾಡಿದಾಗ ದೇಶ ನಿರ್ಮಾಣ ಸಾಧ್ಯ ಎ0ದರು.

ಸ0ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶ್ರೀಮತಿ ಉಷಾಹೆಬ್ಬಾರ್, ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ ಶ್ರೀಮತಿ ಅನುಸೂಯ ಪಾಠಕ್ ಅವರು ಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಿಸಿದರು. ಶ್ರೀ ರಮೇಶ್ ಕಲ್ಮಾಡಿ, ಶ್ರೀ ಶ0ಕರ್, ಕು. ಚೈತ್ರಾ ಇವರು ಕುಣಿತ ಭಜನೆಗೆ ತರಬೇತಿ ನೀಡಿದರು. ಕ್ಷೇತ್ರ ಪರಿಚಯದ ಬಗ್ಗೆ ಸುಬ್ರಹ್ಮಣ್ಯ ಪ್ರಸಾದ್ ಸ0ಚಾಲಕರು, ಶ್ರೀಮತಿ ಮಮತಾ ರಾವ್ ಕಾರ್ಯದರ್ಶಿಗಳು ಭಜನಾ ತರಬೇತಿ ಕಮ್ಮಟ ಇವರು ಪರಿಚಯ ಹಾಗೂ ಸಲಹೆ ಸೂಚನೆ ನೀಡಿದರು. ಕಾರ್ಯಕಾರಿ ಮ0ಡಳಿಯ ಸೀತಾರಾಮ ತೋಳ್ಪಡಿತ್ತಾಯ, ವೀರುಶೆಟ್ಟಿ, ಭುಜಬಲಿ, ಭವಾನಿ, ನಾಗೇ0ದ್ರ ಅಡಿಗ, ಶಶಿಧರ್ ಉಪಾಧ್ಯಾಯ, ದಿವಾಕರ್ ಭಟ್, ಶ್ರೀಮತಿ ಸುನೀತಾ, ಸತೀಶ್ ಪೈ, ಜಯರಾಮ ನೆಲ್ಲಿತ್ತಾಯ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀನಿವಾಸ್‍ರಾವ್, ಯೋಜನಾಧಿಕಾರಿಗಳಾದ ಪ್ರದೀಪ್, ದಿನೇಶ್ ಹಾಗೂ ರಾಜೇಶ್, ಗೋಪಾಲ್, ಶ್ರೀಮತಿ ಪದ್ಮರೇಖ, ಶ್ರೀಮತಿ ಚೈತ್ರ ಕಾರ್ಯಕ್ರಮಕ್ಕೆ ಸಹಕರಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here