Friday 29th, March 2024
canara news

ಹಾಸ್ಯ ಸಾಹಿತ್ಯದ ಅವಲೋಕನ-ಬೀಚಿ ಸಂಸ್ಮರಣೆ ಆಯೋಜಿಸಿದ್ದ ಮುಂಬಯಿ ವಿವಿ ಕನ್ನಡ ವಿಭಾಗ

Published On : 24 Sep 2019   |  Reported By : Rons Bantwal


ಹಾಸ್ಯವು ಮನುಜ ಖುಷಿಪಡುವಂತಾಗಿರಬೇಕು : ಗಂಗಾವತಿ ಪ್ರಾಣೇಶ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.21: ಟಿಕೇಟು ಪಡಕೊಂಡ ಜನತೆಗೆ ನೀಡುವ ಹಾಸ್ಯಗಳ ಮಧ್ಯೆ ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಲ್ಲಿ ಪ್ರಾಮಾಣಿಕ ಹಾಸ್ಯ ಪ್ರಸ್ತುತ ಪಡಿಸುವುದೇ ಕಷ್ಟಕರ. ಹಾಸ್ಯವು ಮನುಜ ಖುಷಿ ಪಡುವಂತಾಗಿರಬೇಕು. ಆದರೆ ನಮ್ಮಲ್ಲಿ ಟಿಕೇಟು ಶೋ ಅಂದ್ರೆ ನಿಯಂತ್ರಣದಲ್ಲಿದ್ರೆ ಧರ್ಮಾರ್ಥ ಪ್ರದರ್ಶನ ಅಂದ್ರೆ ಅನಿಯಂತ್ರಿತವಾಗಿ ಅಪಹಾಸ್ಯಕ್ಕೆ ಕಾರಣವಾಗುತ್ತಿರುವುದು ಉಚಿತವಲ್ಲ. ಇಂತಹ ವಿಶ್ವಾಸ ಕಳಕೊಳ್ಳದಂತೆ ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮಲ್ಲಿನ ಅತೀತವಾದ ಜಾತಿವಾದಲ್ಲಿ ಹಾಸ್ಯದಲ್ಲೂ ನಿಂದನಾ ಕೇಸುಗಳೆಂಬ ಕತ್ತರಿಗೆ ಸಿಲುಕುವ ಸಂದಿಗ್ಧ ಪರಿಸ್ಥಿತಿಯಿಂದ ಹಾಸ್ಯವೂ ನಿಂತ ನೀರಾಗಿ ಬಿಡುವಂತಾಗಿದೆ. ಮನುಷ್ಯ ಯಾವೊತ್ತೂ ಹೆಸರಂತೂ ಮಾಡ್ಲೇ ಬಾರದು. ಕಾರಣ ಹೆಸರಿಗೆ ಹೆಸರೆಂದು ಹೆಸರಿಟ್ಟವರ ಹೆಸರುವಾಸಿಯಾಗದೆ ಹೆಸರೇ ಇಲ್ಲಿ ಹೆಸರಾಗದೆ ಉಳಿದಿದೆ ಅಂದಮೇಲೆ ನಾವು ಹೆಸರೆಂಬುವುದರ ಹಿಂದೆ ಹೋಗಬಾರದು. ಹೆಸರು ನಮ್ಮ ಸಾಧನೆಯ ಮೂಲಕ ನಮ್ಮಿಂದೆ ಬರುವಂತಾಗಬೇಕು. ಇಂದು ಪ್ರಮಾಣಪತ್ರ ಶಿಕ್ಷಣಕ್ಕಿಂತ ವ್ಯವಹಾರ ಲೋಕ ಪ್ರಿಯತೆಯ ಅವಶ್ಯವಿದೆ. ಆದುದರಿಂದ ಮಕ್ಕಳಲ್ಲಿ ಹಾಸ್ಯಪ್ರಜ್ಞೆ ರೂಢಿಸಿ ಬದುಕು ಹಸನಾಗಿಸಿರಿ ಎಂದು ಪ್ರಸಿದ್ಧ ವಾಗ್ಮಿ, ಕಲಾವಿದ ಗಂಗಾವತಿ ಪ್ರಾಣೇಶ್ ತಿಳಿಸಿದರು.

ಪ್ರಸ್ತುತ ವರ್ಷ ವಿಶ್ವವಿದ್ಯಾಲಯದಿಂದ `ಎ' ಗ್ರೇಡ್ ಮಾನ್ಯತೆ ಪಡೆದ ಮುಂಬಯಿ ವಿವಿ ಕನ್ನಡ ವಿಭಾಗವು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಹಾಸ್ಯ ಸಾಹಿತ್ಯದ ಅವಲೋಕನ ಮತ್ತು ಬೀಚಿ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಗಂಗಾವತಿ ಪ್ರಾಣೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಮಹಾನಗರದಲ್ಲಿನ ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ, ಅತಿಥಿü ಅಭ್ಯಾಗತರಾಗಿ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್, ಸಂಘಟಕ, ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ, ಆಕೃತಿ ಸಂಸ್ಥೆಯ ಮಾಲಕ ಮೈಸೂರು ಶ್ರೀಧರ್ ಹಾಗೂ ಕನ್ನಡ ಕಲಾಕೇಂದ್ರ ಇದರ ಕಾರ್ಯದರ್ಶಿ ಮದುಸೂಧನ್ ಟಿ.ಆರ್ ಉಪಸ್ಥಿತರಿದ್ದು ಪ್ರಸಿದ್ಧ ವಾಗ್ಮಿ, ಕಲಾವಿದರಾದ ನರಸಿಂಹ ಜೋಶಿ ಮತ್ತು ಬಸವರಾಜ ಮಹಾಮನಿ ಹಾಸ್ಯ ಸಾಹಿತ್ಯದ ಅವಲೋಕನಗೈದು ಉಪನ್ಯಾಸವನ್ನಿತ್ತÀರು.

ಹಾಸ್ಯ ಒಂದು ರಸವಾಗಿದ್ದು, ಮಾನವ ಬದುಕಿನ ಮನೋಲ್ಲಾಸವನ್ನು ಭದ್ರವಾಗಿಸುತ್ತಿದೆ. ಹಾಸ್ಯ ಬರಹವಿದ್ದಲ್ಲಿ ಬದುಕು ಎಂದೂ ಬರರು ಆಗಲಾರದು. ಜೋಕು ಎಂದರೆ ಕೈಲಾಸರದ್ದೇ ಮೇಲುಗೈ. ಹಾಸ್ಯ ಪ್ರಜ್ಞೆ ನಮ್ಮೆಲ್ಲ ಸುಖ ಜೀವನಕ್ಕೆ ಮುದನೀಡುವ ಮದ್ದು ಕೂಡಾ ಹೌದು. ಆದುದರಿಂದಲೇ ಜೋಕು, ಹಾಸ್ಯಗಳು ಬದುಕು ರೂಪಿಸಬಲ್ಲ ಶಕ್ತಿ ಹೊಂದಿದೆ. ಜೀವನದಲ್ಲಿ ನಗೆ ಇದ್ದರೆ ಮನ ಸಮೃದ್ಧಿ ಸಾಧ್ಯ ಎಂದು ಡಾ| ಜೀವಿ ಕುಲಕರ್ಣಿ ನುಡಿದರು.

ಹಾಸ್ಯ ಸಾಹಿತ್ಯದ ಬೀಜಿ ನಮ್ಮೊಳಗೆ ಒಬ್ಬರಾಗಿ ಇಂದಿಗೂ ಸೃಜನಶೀಲರಾಗಿ ಜೀವಂತವಾಗಿದ್ದಾರೆ. ಅವರ ಸಾಹಿತ್ಯ ಓದಿನಿಂದ ನಗುವಿಗೆ ಬರಗಾಲವಿಲ್ಲ ಅನ್ನುವುದು ಖಾತ್ರಿಪಡಿಸುತ್ತಿದೆ. ಕಾಯಕಗಳ ಒತ್ತಡದ ಮಧ್ಯೆ ಜನತೆಯಲ್ಲಿ ಹುಟ್ಟುನಗು ಮಾಯವಾಗುತ್ತಿದ್ದರೂ, ಲಾಫ್ಟರ್‍ಶೋಗಳಿಂದ ಕೃತಕನಗು ಸೃಷ್ಟಿಗೊಂಡು ಮನಗಳು ಮುದಪಡುವ ಕಾಲಘಟ್ಟಕ್ಕೆ ಪ್ರಾಣೇಶ್‍ರಂತಹ ವ್ಯಕ್ತಿಗಳ ಅಗತ್ಯವಿದೆ ಎಂದು ಪೇತ್ರಿ ಅಭಿಪ್ರಾಯ ಪಟ್ಟರು.

ಅಸ್ತ್ರ, ಶಸ್ತ್ರಗಳಿಕ್ಕಿಂತ ಮಿಗಿಲಾದ ಶಕ್ತಿ ಹಾಸ್ಯದಲ್ಲಿದ್ದು, ಇಂತಹ ಹಾಸ್ಯದ ಮೂಲಕ ಶ್ರವಣ ಮನಕ್ಕೆ ಆನಂದ ಕೊಟ್ಟು ಇದಕ್ಕೆ ಶಕ್ತಿ ತುಂಬುವ ಕಾಯಕ ನಾವು ಮಾಡುತ್ತಿದ್ದೇವೆ. ಕಷ್ಟಸುಖ ಏನೇ ಬರಲಿ, ಬಡತನ, ಶ್ರೀಮಂತಿಕೆಯಲ್ಲೂ ಒಂದೇ ರೀತಿ ಬಾಳುವ ತಾಳ್ಮೆ ನಮ್ಮದಾಗಬೇಕು. ಆದುದರಿಂದ ನಮ್ಮ ಬದುಕು ಒಂಭತ್ತು ಆಗಿಸಿ ಯಾವೊತ್ತೂ ಸುಖಮಯ, ನೆಮ್ಮದಿಯಾಗಿಸಿ ಕೊಳ್ಳಬೇಕು ಎಂದು ನರಸಿಂಹ ಜೋಶಿ ತಿಳಿಸಿದರು.

ಮಹಾಮನಿ ಮಾತನಾಡಿ ಮಾತಿನಲ್ಲಿ ಹಾಸ್ಯ ಅತ್ಯವಶ್ಯ. ಬೀಜಿ ಮನಮುಟ್ಟುವ ಉತ್ತರ ಕೊಡುತ್ತಾ ಮನುಕುಲದ ಮನಗೆದ್ದವರು. ಅವರಲ್ಲಿನ ಆತ್ಮಕ್ಕೆ ತೃಪ್ತಿಕೊಡುವ ಹಾಸ್ಯ ನಮಗೂ ನೆಮ್ಮದಿ ತಂದಿದೆ. ಕಲಿಯುಗದಲ್ಲಿ ನಗಿಸುವ ಕಲೆ ಕಡಿಮೆಯಾಗುತ್ತಿದ್ದರೂ ನಾವು ಸಾಧ್ಯವಾದಷ್ಟು ಸಮರ್ಪಕವಾಗಿಸುತ್ತಿದ್ದೇವೆ ಎಂದರು.


ನಗು ಬದುಕಿಗೆ ಹೊಸ ಚೇತನ ತುಂಬುವುದು. ಇಂತಹ ನಗೆ ಇವತ್ತು ಒಂದೆಡೆ ನಗೆಯ ಯೋಗ ಕ್ಷಿಣಿಸುತ್ತಿದೆ ಆದರೂ ಮತ್ತೊಂದೆಡೆ ನಗುವುದೂ ವ್ಯಾಪಾರವಾಗಿ ರೂಪುಗೊಂಡು ಜನಮಾನಸದಲ್ಲಿ ಹಾಸ್ಯ ಸೃಷ್ಠಿಸುತ್ತಿದೆ. ನಗು ಸ್ಥಾಯಿಭಾವವಾಗಿದೆ. ಕನ್ನಡ ಸಾಹಿತ್ಯಕ್ಕೆ ಹೊಸ ಅಯಾಮ ನೀಡಿದ ಬೀಚಿ ಓದಿನಲ್ಲಿ ಸೊಗಸುವಿದ್ದು ಇದನ್ನು ಓದುಗರು ಅಸ್ವಾದಿಸಬೇಕು. ತನ್ನ ಹಾಸ್ಯ ಸೊಗಡಿನೊಂದಿಗೆ ಪ್ರಾಣೇಶ್ ಪಂಚ್‍ಗಳು ನಗೆಹೊನಲಲ್ಲಿ ತೇಲಾಡಿಸಿ ಮನಸ್ಸುಗಳನ್ನು ತಂಪಾಗಿಸುತ್ತಿದ್ದು ಇಂತಹ ಪ್ರಾಣೇಶ್‍ರ ನಮ್ಮಲ್ಲಿನ ಆಗಮನ ಮುಂಬಯಿ ಕನ್ನಡಿಗರ ಭಾಗ್ಯವೇ ಸರಿ ಎಂದು ಡಾ| ಉಪಾಧ್ಯ ತಿಳಿಸಿದರು.

ಸುರೇಖಾ ಹೆಚ್.ದೇವಾಡಿಗ, ಡಾ| ಉಮಾರಾವ್, ಕುಮುದಾ ಆಳ್ವ, ಮದುಸೂಧನ ರಾವ್, ಶೈಲಜಾ ಹೆಗಡೆ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಯಜ್ಞ ನಾರಾಯಣ, ಜಯ ಪೂಜಾರಿ, ಉದಯ ಶೆಟ್ಟಿ, ಪಾರ್ವತಿ ಪೂಜಾರಿ, ಜಮೀಳಾ ಬಾನು, ಸೋಮಶೇಖರ್ ಮಸಳಿ, ಜ್ಯೋತಿ ಶೆಟ್ಟಿ, ಸುರೇಖಾ ಶೆಟ್ಟಿ, ಶಾಂತಲಾ ಹೆಗಡೆ, ಪಾರ್ವತಿ ಪೂಜಾರಿ, ಸುನೀಲ್ ದೇಶ್‍ಪಾಂಡೆ, ನಾಗಪ್ಪ ಸಿದ್ಧಪ್ಪ ಕಲ್ಲೂರು ಮತ್ತಿತರ ಗಣ್ಯರು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಹಾಜರಿದ್ದರು.

ಶಶಿಕಲಾ ಹೆಗಡೆ, ಕಲಾ ಭಾಗ್ವತ್ ಮತ್ತು ಸುಶೀಲಾ ಎಸ್.ದೇವಾಡಿಗ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಡಾ| ಜಿ.ಎನ್ ಉಪಾಧ್ಯ ಸ್ವಾಗತಿ ಪ್ರಸ್ತಾವನೆಗೈದರು. ಪ್ರಸಿದ್ಧ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್ ಅತಿಥಿüಗಳಿಗೆ ಅವರವರ ಭಾವಚಿತ್ರಗಳನ್ನು ಪ್ರದಾನಿಸಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ಕಾರ್ಯಕ್ರಮ ನಿರ್ವಹಿಸಿದರು. ಶಿವರಾಜ್ ಎಂ.ಜಿ ಉಪಕಾರ ಸ್ಮರಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here