Friday 19th, April 2024
canara news

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ವಾರ್ಷಿಕ ಮಹಾಸಭೆ -ಪ್ರಶಸ್ತಿ ಪ್ರದಾನ

Published On : 24 Sep 2019   |  Reported By : Rons Bantwal


ನಿಷ್ಠೆಯ ಗಳಿಕೆ ಯಾವೊತ್ತೂ ಶಾಶ್ವತವಾದುದು : ಡಾ| ಡೇವಿಡ್ ಟಿ.ಅಲ್ವಾರೆಸ್
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಸೆ.21: ಸಾಮಾಜಿಕ ದೂರದೃಷ್ಠಿತ್ವ ಒಂದು ಉದ್ದೇಶವಾದರೆ ಲಾಭಾಂಶವು ಮತ್ತೊಂದು ರೂಪವಾಗಿದೆ. ನಿಷ್ಠೆಯ ಗಳಿಕೆಯಿಂದ ಯಾರು ಪರÀರಿಗೆ ಸಹಾಯ ಮಾಡುತ್ತಾರೋ ಅವರ ಆದಾಯದಲ್ಲಿ ಕಡಿಮೆಯಾದರೂ ಮನಶಾಂತಿ, ನೆಮ್ಮದಿ ಸಮೃದ್ಧಿತನ ಹೆಚ್ಚಾಗುತ್ತದೆ. ಆದುದರಿಂದಲೇ ಪ್ರಾಮಾಣಿಕ ಮತ್ತು ಸ್ವಂತ ಗಳಿಕೆ ಯಾವೊತ್ತೂ ಶಾಶ್ವತವಾಗಿರುತ್ತದೆ. ಇದರಿಂದ ಪ್ರತಿಷ್ಠಿತ ವ್ಯಕ್ತಿತ್ವ ಸಿದ್ಧಿಸುವುದು ಎಂದು ವೃತ್ತಿ ತೆರಿಗೆ ಇಲಾಖೆ ಮುಂಬಯಿ ಇದರ ಜಂಟಿ ಆಯುಕ್ತ ಡಾ| ಡೇವಿಡ್ ಥೋಮಸ್ ಅಲ್ವಾರೆಸ್ ತಿಳಿಸಿದರು.

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ (ಸಿಸಿಸಿಐ) ಇಂದಿಲ್ಲಿ ಶನಿವಾರ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ 14ನೇ ವಾರ್ಷಿಕ ಸಿಸಿಸಿಐ ಪ್ರಶಸ್ತಿ-2019 ಪ್ರದಾನ ಸಮಾರಂಭ ನೆರವೇರಿಸಿದ್ದು, ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಮಡಂತ್ಯಾರು ಸಾರಥ್ಯದಲ್ಲಿ ಜರುಗಿದÀ 14ನೇ ವಾರ್ಷಿಕ ಸಿಸಿಸಿಐ ಪ್ರಶಸ್ತಿ-2019 ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ್ದ್ದು ಡಾ| ಡೇವಿಡ್ ಮಾತನಾಡಿದರು.

ಮಲಂಕರ್ ಸಿರಿಯನ್ ಕಥೋಲಿಕ್ ಚರ್ಚ್ ಪುಣೆ ಇದರ ಘನವಂತ ವಂದನೀಯ ಮೊನ್ಸಿಂಜರ್ ವರ್ಗೀಸ್ ಮಟ್ಟಮನ ಸಭಾಧ್ಯಕ್ಷತೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನಿಸಲಾಗಿದ್ದು ಪ್ರಶಸ್ತಿಗಳ ಪ್ರಾಯೋಜಕರಾದ ವಿನ್ಸೆಂಟ್ ಮಥಾಯಸ್, ಆಲ್ಬರ್ಟ್ ಡಬ್ಲ್ಯೂ, ಡಿಸೋಜಾ, ಕ್ಲೋಟಿಲ್ಡಾ ಆರ್.ಸಿಕ್ವೇರಾ, ಆ್ಯಂಟನಿ ಸಿಕ್ವೇರಾ, ಕೆ.ಶಿಂಧೆ, ಉಪಸ್ಥಿತರಿದ್ದು ಆಯ್ದ ಸಾಧಕರಿಗೆ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಸಿಸಿಸಿಐನ ಸಾಧಕ ಪುರಸ್ಕಾರಗಳಲ್ಲಿನ ಇಲೆಕ್ಟ್ರೋಪೆನೆಮೆಟಿಕ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಉತ್ಕೃಷ್ಟ ಸಾಧಕ ಉದ್ಯಮಿ ಪುರಸ್ಕಾರವನ್ನು ಕ್ಯಾಪ್ಟನ್ ಥೋಮಸ್ ಡಬ್ಲ್ಯೂ.ಪಿಂಟೋ ಇವರಿಗೆ, ಡೇನಿಯಲ್ ಎಂಡ್ ಸನ್ಸ್ ಪ್ರಾಯೋಜಕತ್ವದ ಸಾರ್ವಜನಿಕ ಸೇವಾ ಪುರಸ್ಕಾರವನ್ನು ಕಮಾಂಡರ್ ವಲೈಂಟನ್ ಸಿಕ್ವೇರ ಇವರಿಗೆ, ವೆಲ್‍ವಿನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಸಮಾಜ ಸೇವಾ ಪುರಸ್ಕಾರವನ್ನು ಕೊರ್ರೆನ್ ಆ್ಯಂಟೋನೆಟ್ ರಸ್ಕೀನ್ಹಾ (ವೈಟ್‍ಡವ್ಸ್, ಮಂಗಳೂರು) ಇವರಿಗೆ, ಪಟಥು ಬ್ರದರ್ಸ್ ಪ್ರಾಯೋಜಕತ್ವದ ಮಹಿಳಾ ಉದ್ಯಮಿ ಸಾಧಕ ಪುರಸ್ಕಾರವನ್ನು ಮಿಸ್ ಶೆರ್ಲಿ ಸಿಂಗ್ ಇವರಿಗೆ, ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದ ಯುವ ಉದ್ಯಮಿ ಸಾಧಕ ಪುರಸ್ಕಾರವನ್ನು ರೋಹನ್ ಮೊಂತೆರೋ (ರೋಹನ್ ಕಾಪೆರ್Çೀರೇಶನ್ ಮಂಗಳೂರು) ಇವರಿಗೆ, ರಿಲಾಯಬಲ್ ಎಕ್ಸ್‍ಪೆÇೀರ್ಟ್ಸ್ ಪ್ರಾಯೋಜಕತ್ವದ ಉತ್ಕೃಷ್ಟ ಶೈಕ್ಷಣಿಕ ಸಾಧನಾ ಪುರಸ್ಕಾರವನ್ನು ಬಿಷಪ್ ಫರ್ಸಿವಲ್ ಜೋಸೆಫ್ ಇ.ಫೆರ್ನಾಂಡಿಸ್ ಇವರಿಗೆ ಹಾಗೂ ಆರ್ಕೇಡಿಯಾ ಶೇರ್ ಎಂಡ್ ಸ್ಟಾಕ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಕ್ರೀಡೆ-ಕ¯-ಸಂಸ್ಕೃತಿ ಸಾಧಕ ಪುರಸ್ಕಾರವನ್ನು ಡಾ| ಫಾ| ಚಾರ್ಲ್ಸ್ ವಾಸ್ ಇವರಿಗೆ ಪ್ರದಾನಿಸಿ ಅಭಿನಂದಿಸಿದರು. ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಸಿಸಿಸಿಐ ಸೇವೆಯನ್ನು ಪ್ರಶಂಸಿಸಿ ಅಭಿವಂದಿಸಿದರು.

ಮೊನ್ಸಿಂಜರ್ ವರ್ಗೀಸ್ ಮಾತನಾಡಿ ಸಾಧಕರನ್ನು ಗೌರವಿಸಿದಾಗಲೇ ಅವರಲ್ಲಿನ ಪ್ರತಿಭಾನ್ವೇಷಣೆ ಆಗುವುದು. ಪುರಸ್ಕರಿಸುವುದು ಅಂದರೆ ಸಾಧಕರನ್ನು ಪ್ರಶಂಸಿಸಿ ಸಾಧಿಸುವವರಿಗೆ ಪ್ರೇರೆಪಿಸುವುದು ಎಂದರ್ಥ. ಇದು ಕೊಡುಕೊಳ್ಳುವಿಕೆಯ ಪ್ರಕ್ರಿಯೆಯೂ ಹೌದು. ಸಾಧನಾಶೀಲರಿಂದಲೇ ರಾಷ್ಟ್ರದ ನಿರ್ಮಾಣ ಸಾಧ್ಯ. ದೇಶ ಕಟ್ಟುವಲ್ಲಿ ಉದ್ಯಮಸ್ಥರ ಕೊಡುಗೆ ಅತ್ಯಮೂಲ್ಯವಾಗಿದ್ದು ಇಂತಹ ಉದ್ಯಮಿಗಳಿಗೆ ಪೆÇ್ರತ್ಸಾಹಿಸುವ ಸಿಸಿಸಿಐ ಕಾರ್ಯ ಶ್ಲಾಘನೀಯ ಎಂದು ಶುಭಾರೈಸಿದರು.


ಉದ್ಯಮಿಗಳು ತಾವು ಬಾಳುತ್ತಾ ಮತ್ತೊಬ್ಬರಿಗೆ ಬದುಕು ನೀಡುವ ಸಹೃದಯಿಗಳಾದಾಗ ಧನ್ಯತಾಬಾಳು ಕರುಣಿಸುವುದು. ಯಾವೊತ್ತೂ ಯಾರನ್ನೂ ಬದಲಾಯಿಸಲು ಅಸಾಧ್ಯವಾದರೂ ಸ್ವತಃ ಬದಲಾಗಿ ಇತರರ ಬಾಳಿಗೆ ಪ್ರೇರಕರಾಗುವ ಅಗತ್ಯವಿದೆ. ಸುಮಾರು 675 ಸದಸ್ಯತ್ವವುಳ್ಳ ಈ ಸಂಸ್ಥೆ ಜಾಗತಿಕವಾಗಿ ಮಾನ್ಯತೆ ಹೊಂದಿದೆ. ಇದರ ಅರಿವು ಸದಸ್ಯರು ಹೊಂದಿ ಏರ್ಪಾಡಿಸುವ ಕಾರ್ಯಗಾರದ ಲಾಭಪಡೆಯಬೇಕು. ಇದರಿಂದ ಉದ್ಯಮಶೀಲತೆ, ಮನೋವಿಕಾಸ ಬೆಳೆಸಿ ಸಾಧಕ ಉದ್ಯಮಿಗಳಾಗಿ ಉದಯೋನ್ಮುಖ ಯುವಜನತೆಗೆ ಪ್ರೇರಕರಾಗಬೇಕು ಎಂದÀು ಆ್ಯಂಟನಿ ಸಿಕ್ವೇರಾ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ತಿಳಿಸಿದರು.

ಪುರಸ್ಕಾರ ಸಮಿತಿ ಸಂಚಾಲಕ ಜಾನ್ ಡಿ'ಸಿಲ್ವಾ, ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದು, ಸಮಾರಂಭದಲ್ಲಿ ಸಿಸಿಸಿಐ ಪದಾಧಿಕಾರಿಗಳು, ನಿರ್ದೇಶಕರು, ಉಪ ಸಮಿತಿಗಳ ಸಂಚಾಲಕರುಗಳು ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಇತ್ತೀಚೆಗೆ ಶಾಂಘೈನಲ್ಲಿ ವರ್ಲ್ಡ್ ಕೊರಗೇಟಿವ್ ಗ್ಲೋಬಲ್ ಪುರಸ್ಕಾರಕ್ಕೆ ಭಾಜನರಾದ ಸಿಸಿಸಿಐ ಸಂಸ್ಥಾಪಕಧ್ಯಕ್ಷ ವಿನ್ಸೆಂಟ್ ಮಥಾಯಸ್ ಅವರನ್ನು ಗೌರವಿಸಿ ಅಭಿನಂದಿಸಿದರು

ಸಿಸಿಸಿಐ ನಿರ್ದೇಶಕರಾದ ನ್ಯಾ| ಪಿಯೂಸ್ ವಾಸ್, ಲಾರೇನ್ಸ್ ಡಿಸೋಜಾ, ಗ್ರೆಗೋರಿ ಡಿಸೋಜಾ, ಲಾರೇನ್ಸ್ ಕುವೆಲ್ಲೊ, ಜೋನ್ ಥೆರಾಟ್ಟಿಲ್, ಸ್ಟೇನ್ಲಿ ಲಸ್ರಾದೋ ಮತ್ತು ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೋಬೊ ಪುರಸ್ಕೃತರನ್ನು ಪರಿಚಯಿಸಿದರು. ಉಪ ಕಾರ್ಯಾಧ್ಯಕ್ಷರಾದ ಜೋನ್ ಮಾಥ್ಯು ಮತ್ತು ಆಲ್ಬರ್ಟ್ ಡಿಸೋಜಾ ಅತಿಥಿüಗಳನ್ನು ಪರಿಚಯಿಸಿದರು. ಜೀನ್ ಎ.ಸಿಕ್ವೇರಾ ಮತ್ತು ಫಿಲೋಮೆನಾ ಲೊಬೋ ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದ ರು. ಪ್ರಿಯಾ ಕ್ಲೈಡ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಆಗ್ನೇಲ್ಲೋ ರಾಜೇಶ್ ಅಥೈಡೆ ಧನ್ಯವದಿಸಿದರು.

ರೆ| ಫಾ| ಆಲ್ವಿನ್ ಡಿಕುನ್ಹಾ ಒಮ್ಝೂರು ಮತ್ತು ರೆ| ಫಾ ತಿಮೋತಿ ವಿಕ್ಟರ್ ಪಿಂಟೋ (ಎಸ್‍ವಿಡಿ) ಉಪಸ್ಥಿತರಿದ್ದು ಆರಂಭದಲ್ಲಿ ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ 21ನೇ ವಾರ್ಷಿಕ ಮಹಾಸಭೆ ಜರುಗಿದ್ದು, ಸಿಸಿಸಿಐ ಕಾರ್ಯನಿರ್ವಾಹಕ ಕಾರ್ಯದರ್ಶಿ ರೋಹನ್ ಟೆಲ್ಲಿಸ್ ವಂದಿಸಿದರು. ಮಧ್ಯಾಂತರದಲ್ಲಿ ಸಂಗೀತ್ ಅಭಿನಯ್ ಅಕಾಡೆಮಿ ಇದರ ಕಲಾವಿದರು ಡಾ| ಫಾ| ಚಾರ್ಲ್ಸ್ ವಾಸ್ ನಿರ್ದೇಶನದಲ್ಲಿ ಸಾಂಸ್ಕೃತಿಕ ನೃತ್ಯ ವೈಭವ, ಪುಷ್ಪಾಂಜಲಿ ಹಾಗೂ ಸಮ್ಮಿಳನ ನೃತ್ಯ ಪ್ರದರ್ಶಿಸಿದರು. ರಾಹುಲ್ ಡಿಸಿಲ್ವಾ ನೃತ್ಯ ನಿರ್ವಹನೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here