Friday 19th, April 2024
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಉಪಸಮಿತಿಯಿಂದ ಕಾಂತಾಬಾರೆ-ಬೂದಬಾರೆ ಒಳಾಂಗಣ ಸ್ಪರ್ಧೆ

Published On : 25 Sep 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) 

ಮುಂಬಯಿ, ಸೆ.22: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪಸಮಿತಿ ಇಂದು ಆದಿತ್ಯವಾರ ಬೆಳಿಗ್ಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ 2019ನೇ ಸಾಲಿನ ವಾರ್ಷಿಕ ಕಾಂತಾಬಾರೆ-ಬೂದಬಾರೆ ಒಳಾಂಗಣ ಸ್ಪರ್ಧೆ ಆಯೋಜಿಸಿತ್ತು.

 

ಬಿಲ್ಲವರ ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗೆ ಪೂಜೆ ನೆರವೇರಿಸಿ, ಕೋಟಿಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಸ್ಪರ್ಧೆಗೆ ಚಾಲನೆ ನೀಡಿ ಯುವ ಪೀಳಿಗೆಯು ಮುಂದೆ ಬಂದುಸಮಾಜದ ಚುಕ್ಕಾಣಿ ಹಿಡಿಯುವಂತಾಗಬೇಕು ಹಾಗೂ ಸಮಾಜವನ್ನು ಮುಂದೆ ಕೊಂಡೊಯ್ಯಬೇಕಾದಲ್ಲಿ ಯುವ ಸಮಾಜದ ಸಹಕಾರ ಅತ್ಯಾಗತ್ಯ ಎಂದರು.

ಅತಿಥಿü ಅಭ್ಯಾಗತರಾಗಿದ್ದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ನ್ಯಾ| ರಾಜಾ ವಿ.ಸಾಲ್ಯಾನ್ ಮತ್ತು ಮಲಾಡ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕೆ.ಪೂಜಾರಿ ದೀಪ ಬೆಳಗಿಸಿ ಸಂಕೇತಿಕವಾಗಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.

ಚಂದ್ರಶೇಖರ ಪೂಜಾರಿ ಮತ್ತು ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಾಗೇಶ್ ಎನ್.ಕೋಟ್ಯಾನ್ ಟೇಬಲ್ ಟೆನ್ನಿಸ್ ಹಾಗೂ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ ಮತ್ತು ಶ್ರೀನಿವಾಸ ಆರ್.ಕರ್ಕೇರ ಕೇರಂ ಆಟವನ್ನಾಡಿ ವಿಧ್ಯುಕ್ತವಾಗಿ ಸ್ಪರ್ಧೆಗಳಿಗೆ ಚಾಲನೆಯನ್ನೀಡಿ ಸ್ಪರ್ಧಿಗಳಿಗೆ ಶುಭಕೋರಿದರು. ಹಾಗೂ ಮಹಾನಗರದಲ್ಲಿನ ಹೆಸರಾಂತ ರೇಖಾ ಚಿತ್ರಗಾರ ಜಯ್ ಸಿ.ಸಾಲ್ಯಾನ್ ಹಾಗೂ ಕ್ರೀಡಾಕೂಟದ ಪ್ರಧಾನ ಸಂಚಾಲಕ ರವಿ ಎಸ್.ಸನಿಲ್ ಡೊಂಬಿವಿಲಿ ಇವರÀನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ದಯಾನಂದ ಆರ್. ಪೂಜಾರಿ, ಅಸೋಸಿಯೇಶನ್‍ನ ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಧರ್ಮೇಶ್ ಎಸ್. ಸಾಲ್ಯಾನ್, ಕೇಶವ ಕೆ.ಕೋಟ್ಯಾನ್, ರವೀಂದ್ರ ಎ.ಶಾಂತಿ, ಜೊತೆ ಕೋಶಾಧಿಕಾರಿಗಳಾದ ಶಿವರಾಮ ಎಸ್.ಪೂಜಾರಿ, ಮೋಹನ್ ಡಿ.ಪೂಜಾರಿ, ಜಯ ಎಸ್.ಸುವರ್ಣ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆÀ ಪ್ರಭಾ ಕೆ.ಬಂಗೇರ, ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ, ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಕೆ.ಹೆಜ್ಮಾಡಿ, ಯುವಾಭ್ಯುದಯ ಮಾಜಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಭವನದ ವ್ಯವಸ್ಥಾಪಕರಾದ ಭಾಸ್ಕರ್ ಟಿ.ಪೂಜಾರಿ, ಬಿ.ಚಂದ್ರಶೇಖರ್ ಸಾಲ್ಯಾನ್, ಸಮಿತಿ ಸದಸ್ಯರುಗಳಾದ ಅಕ್ಷಯ್ ಎ. ಪೂಜಾರಿ, ಬಬಿತಾ ಜೆ ಬಂಗೇರ, ಶಾಲಾ ಉಪಸಮಿತಿ ಕಾರ್ಯಾಧ್ಯಕ್ಷ ಬಾನ್ನಂಜೆ ರವೀಂದ್ರ ಅಮೀನ್, ನವೀನ್ ಬಂಗೇರ, ಯುವಾಭ್ಯುದಯ ಸಮಿತಿಯ ಸದಸ್ಯರುಗಳಾದ ಗಣೇಶ್ ಕೆ. ಬಂಗೇರ, ತುಷಾಂತ್ ಕೋಟ್ಯಾನ್, ವಿನಯ ಅಂಚನ್, ಮೋಹನ್ ಪೂಜಾರಿ, ಯೋಗೇಶ್ ಪೂಜಾರಿ, ನಂದೀಶ್ ಪೂಜಾರಿ, ಸಚಿನ್ ಪೂಜಾರಿ, ಸೌಮ್ಯ ಪೂಜಾರಿ ಸೇರಿದಂತೆ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಯುವಾಭ್ಯುದಯ ಸದಸ್ಯರನೇಕರು ಉಪಸ್ಥಿತರಿದ್ದು ಆಯೋಜಿಸಲಾಗಿದ್ದ ಟೇಬಲ್ ಟೆನಿಸ್, ಕೆರಂ, ಚೆಸ್, ಚಿತ್ರಕಲೆ, ರಂಗೋಲಿ ಇತ್ಯಾದಿ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಕಾಂತಬಾರೆ ಬೂದಾಬಾರೆ ಅವರ ಜೀವನ ಚಿತ್ರಣವನ್ನು ಮನವರಿಸಿದರು. ರವಿ ಎಸ್.ಸನೀಲ್ ಸ್ವಾಗತಿಸಿ, ಸ್ಪರ್ಧೆಗಳನ್ನು ನಿರ್ವಹಿಸಿದರು. ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಯುವ ವಿಭಾಗದ ಸಂಯೋಜಕ ಸದಾಶಿವ ಎ.ಕರ್ಕೇರ ಧನ್ಯವದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here