Tuesday 23rd, April 2024
canara news

ಸೆ.29ರಿಂದ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನಲ್ಲಿ ಸಾರಸ್ವತ ಕಲ್ಚರಲ್‍ನಿಂದ

Published On : 26 Sep 2019   |  Reported By : Rons Bantwal


12ನೇ ವಾರ್ಷಿಕ ದಹಿಸರ್ ದಸರೋತ್ಸವ-ಗರ್ಭ-ದಾಂಡಿಯಾರಾಸ್

(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.23: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ (ರಿ.) ಇದರ ಸಾರಸ್ವತ ಕಲ್ಚರಲ್ ಮತ್ತು ರಿಕ್ರಿಯೇಷನ್ ಸೆಂಟರ್ ವಾರ್ಷಿಕವಾಗಿ ಸಂಭ್ರಮಿಸುವಂತೆ ಈ ಬಾರಿ 12ನೇ ವಾರ್ಷಿಕ ನವರಾತ್ರಿ ಉತ್ಸವ 2019ನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಪೂರೈಸಿದೆ. ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಕೃಪಾನುಗ್ರಹ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಚನಗಳೊಂದಿಗೆ ಇದೇ ಸೆ.29ನೇ ಭಾನುವಾರ ಪ್ರಾರಂಭಗೊಂಡು ಅ.08ರ ಮಂಗಳವಾರ ವಿಜಯದಶಮಿ ವರೆಗೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನ ಸಾರಸ್ವತ ಕಲ್ಚರಲ್ ಎಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ಸಜ್ಜುಗೊಳಿಸಿದ ಮಾಧವೇಂದ್ರ ಸಭಾಗೃಹದಲ್ಲಿ ಸಂಭ್ರಮ ಸಡಗರದಿಂದ ಸಂಭ್ರಮಿಸಲಿದೆ.

ಆ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಒಂಬತ್ತು ದಿನಗಳಲ್ಲೂ ವೈವಿಧ್ಯಮಯವಾಗಿ ನವರಾತ್ರಿ ಉತ್ಸವ ಆಚರಿಸಲಿದೆ. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳು ತಮ್ಮ ಅವರ ಅಭಯಹಸ್ತಗಳಿಂದ ಸಮರ್ಪಿತÀ ಸ್ವರ್ಣಮುಕುಟದೊಂದಿಗೆ ವಜ್ರ, ಚಿನ್ನಾಭರಣಗಳಿಂದ ಅಲಂಕೃತ ಗೊಳಿಸುವ ದೇವಿಯು ರಜತ ಪ್ರಭಾವಳಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುವುದು.

ಸೆ.29ರ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಗೆ ಶ್ರೀ ಹರಿ ಗುರು ಸೇವಾ ಪ್ರತಿಷ್ಠಾನವು ಶ್ರೀದೇವಿಯ ಪ್ರತಿಮೆಯನ್ನು ಸಮರ್ಪಿಸಿದ ಬಳಿಕ ಉತ್ಸವದ ಒಂಬತ್ತು ದಿನಗಳಲ್ಲೂ ದೇವಿಗೆ ವಿಭಿನ್ನ ರೂಪಳಿಂದ ಶೃಂಗಾರಿಸಿ ಆರಾಧಿಸÀಲಾಗು ವುದು. ಸೆ.29ರಂದು ಸರಸ್ವತಿದೇವಿ ಆರಾಧನೆಯೊಂದಿಗೆ ಆದಿಗೊಂಡು ಬಳಿಕ ಕ್ರಮವಾಗಿ ಶಾಂತಾದುರ್ಗಾ, ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ, ಚಂಡಿಕಾ ದೇವಿ, ಮಹಾಲಕ್ಷ್ಮೀ, ದುರ್ಗಾ ಪರಮೇಶ್ವರಿ, ಮಹಾಕಾಳಿ, ವೈಷ್ಣೋದೇವಿ ಹಾಗೂ ವಿಜಯದಶಮಿ ದಿನ ಶಾರದಾ ದೇವಿಗೆ ಪೂಜಿಸಲಾಗುವುದು.

ದಿನಾ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ತನಕ ಪಂಚಾಮೃತ ಅಭಿಷೇಕ, ಚಂಡಿಕಾ ಹವನ, ತುಲಾಭಾರ ಸೇವೆ, ಪಂಚನೈವೇದ್ಯ ಮಹಾಭೋಗ, ಮಧ್ಯಾಹ್ನ ಪೂಜೆ, ದುರ್ಗಾ ನಮಸ್ಕಾರ, ದೀಪಾರಾಧನೆ, ಪುಷ್ಪಾಲಂಕಾರ ಸೇವೆ, ರಂಗಪೂಜೆ, ರಾತ್ರಿ ಪೂಜೆ, ಅ.03ರ ಪಂಚಮಿ ದಿನ ಲಕ್ಷಿ ್ಮೀ ನಾರಾಯಣ ಹೃದಯ ಹವನ, ಅ.06ರಂದು ಮಹಾಕಾಳಿ ದೇವಿಯ ಆರಾಧನೆ, ಪೂರ್ವಾಹ್ನ ಸಾಮೂಹಿಕ ಕುಂಕುಮಾರ್ಚನೆ ಸೇವೆ, ಸಂಜೆ ದಿಪೆÇೀತ್ಸವ ಮತ್ತು ಪ್ರಸಾದ ಸೇವೆ, ಅ.07ರ ನವÀಮಿ ದಿನ ಮಹಾ ಚಂಡಿಕ ಹವನ, ಸಂಜೆ ವಾಹನ ಪೂಜೆ (ಆಯುಧ ಪೂಜೆ) ನೆರವೇರಲಿದೆ. ದಿನಂಪ್ರತೀ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ.

ಅ.02ನೇ ಬುಧವಾರ ಪೂರ್ವಾಹ್ನ 10.00 ಗಂಟೆಯಿಂದ ಸಂಜೆ 4.00 ಗಂಟೆ ತನಕ ಒಟ್ಟು ಆರೋಗ್ಯ ತಪಾಸಣೆ, ಪ್ರಕೃತಿ ಚಿಕಿತ್ಸೆ, ರಕ್ತದಾನ ವೈದ್ಯಕೀಯ ಸೇವಾ ಕಾರ್ಯಕ್ರಮ ನಡೆಸಲಾಗುವುದು. ಅ.08ನೇ ಮಂಗಳವಾರ ವಿಜಯದಶಮಿ ದಿನ ಶಾರದಾ ದೇವಿಯನ್ನು ಪೂಜಿಸಲಾಗುವುದು. ಬೆಳಿಗ್ಗೆ ವಿದ್ಯಾಥಿರ್üಗಳಿಗೆ ಪುಸ್ತಕ ವಿತರಣೆ, ಸಂಜೆ 5.00 ಗಂಟೆಗೆ ವಿಸರ್ಜನಾ ಮೆರವಣಿಗೆ ನೇರವೇರಲಿದೆ ಎಂದು ನವರಾತ್ರಿ ಉತ್ಸವದ ಪ್ರಧಾನ ಸಂಘಟಕ, ಜಿಎಸ್‍ಬಿ ಸಭಾದ ಉಪಾಧ್ಯಕ್ಷ ಮನೋಹರ್ ವಿ.ಕಾಮತ್ ತಿಳಿಸಿದ್ದಾರೆ.

ಜಿಎಸ್‍ಬಿ ಸಭಾದ ಸಂಚಾಲಕರಾದ ಕೆ.ಶ್ರೀನಿವಾಸ ಪ್ರಭು, ಜಿ.ಡಿ ರಾವ್, ಗಣೇಶ್ ವಿ.ಪೈ, ಶೋಭಾ ವಿ.ಕುಲ್ಕರ್ಣಿ, ಸಗುಣಾ ಕೆ.ಕಾಮತ್, ಗೌರವ ಕಾರ್ಯಾಧ್ಯಕ್ಷ ಕೆ.ಆರ್.ಮಲ್ಯ, ಅಧ್ಯಕ್ಷ ಎಂ.ಯು ಪಡಿಯಾರ್, ಉಪಾಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್, ಗೌ| ಪ್ರ| ಕಾರ್ಯದರ್ಶಿ ವಿಷ್ಣು ಆರ್.ಕಾಮತ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜೊತೆ ಕಾರ್ಯದರ್ಶಿಗಳಾದ ಗುರುಪ್ರಸಾದ್ ವಿ.ಪೈ ಮತ್ತು ಜಯೇಶ್ ಹೆಚ್.ಪ್ರಭು, ಜೊತೆ ಕೋಶಾಧಿಕಾರಿ ಪಿ.ಎಸ್ ಕಾಮತ್, ಇತÀರ ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆಯೊಂದಿಗೆ ನಡೆಸಲ್ಪಡುವ ಈ ಉತ್ಸವದಲ್ಲಿ ನಾಡಿನ ಸಮಸ್ತ ಭಕ್ತರು ಆಗಮಿಸಿ ಶ್ರೀಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here