Thursday 25th, April 2024
canara news

ಸೆ.29-ಅ.8: ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‍ನ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ

Published On : 26 Sep 2019   |  Reported By : Rons Bantwal


ಮುಂಬಯಿ, ಸೆ.23: ಉಪನಗರ ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‍ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ (ರಿ.) ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ ತಾರೀಕು ಸೆ.29ನೇ ರವಿವಾರ ಮೊದಲ್ಗೊಂಡು ಅ.08ನೇ ಮಂಗಳವಾರ ತನಕ ಶ್ರೀ ದೇವಿ ಸನ್ನಿಧಿಯಲ್ಲಿ ದಿನಾ ಮಧ್ಯಾಹ್ನ 12.00 ಗಂಟೆÉಗೆ ಮಹಾಪೂಜೆ ನೆರವೇರಿಸಿ ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿತರಣೆ ನೆರವೇರಿಸಿ ನವರಾತ್ರಿ ಮಹೋತ್ಸವ ಜರಗಿಸಲಾಗುವುದು.

ಸೆ.29ನೇ ರವಿವಾರÀ ಬೆಳಿಗ್ಗೆ 7.00 ಗಂಟೆಗೆ ಸ್ಮಸಿತ ಪುಣ್ಯವಾಚನ, ಮಹಾಗಣಪತಿ ಹೋಮ ಸಂಜೆ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ ಮಹಾಪೂಜೆ. ಸೆ.30ನೇ ಸೋಮವಾರ ಸಂಜೆ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ. ಅ.01ನೇ ಮಂಗಳವಾರ ಸಂಜೆ ಭಗವತೀ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ. ಅ.02ನೇ ಬುಧವಾರ ಸಂಜೆ ಕುಮಾರಿ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ. ಅ.03ನೇ ಗುರುವಾರ ಸಂಜೆ ಅಂಬಿಕಾ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ. ಅ.04ನೇ ಶುಕ್ರÀವಾರ ಸಂಜೆ ಮಹಿಷಮರ್ಧಿನಿ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ. ಅ.05ನೇ ಶನಿವಾರ ಸಂಜೆ ಚಂಡಿಕಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚ ನೆ, ಅ.06ನೇ ಶನಿವಾರ ಸಂಜೆ ಸರಸ್ವತಿ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ, ದುರ್ಗಾಷ್ಟಮಿ. ಅ.07ನೇ ಸೋಮವಾರ ಬೆಳಿಗ್ಗೆ 08.00 ಗಂಟೆÉಗೆ ನವದುರ್ಗಾ ಯಾಗ, ಸಂಜೆ ವಾಘೇಶ್ವರಿ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ, ಅ.08ನೇ ಮಂಗಳವಾರ ಸಂಜೆ 8.00 ಗಂಟೆÉಯಿಂದ ರಂಗಪೂಜೆ ನೆರವೇರಲಿದೆ.

ಆ ಪ್ರಯುಕ್ತ ಮಹಾನಗರದಲ್ಲಿನ ಸಮಸ್ತ ಸದ್ಭಕ್ತ ಬಾಂಧವರು ಬಂಧು-ಬಾಂಧವರನ್ನು ಒಳಗೊಂಡು ಚಿತ್ತೈಸಿ, ತನು-ಮನ-ಧನಗಳ ಸಹಕಾರವಿತ್ತು ವಾರ್ಷಿಕ ಶರನ್ನವರಾತ್ರಿ ಆಚರಣೆಯಲ್ಲಿ ಪಾಲ್ಗೊಂಡು ತೀರ್ಥ-ಪ್ರಸಾದ ಸ್ವೀಕರಿಸಿ, ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ದುರ್ಗಾಪರಮೇಶ್ವರಿ ಸಮಿತಿ ಅಧ್ಯಕ್ಷÀ ರಘುನಾಥ ಕೊಟ್ಟಾರಿ, ಉಪಾಧ್ಯಕ್ಷ ಪದ್ಮನಾಭ ಟಿ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್, ಕೋಶಾಧಿಕಾರಿ ಬಾಬು ಎಂ.ಸುವರ್ಣ ಮತ್ತು ಸರ್ವ ಪದಾಧಿಕಾರಿಗಳು, ಕ್ಷೇತ್ರದ ಅರ್ಚಕ ಸೂಡ ಶ್ರೀ ರಾಘವೇಂದ್ರ ಭಟ್ ಈ ಮೂಲಕ ವಿನಂತಿಸಿದ್ದಾರೆ.

ಇಚ್ಛಾಶಕ್ತಿಯೊಂದಿಗೆ ದೈವಭಕ್ತಿ ಇದ್ದರೆ ಎಂತಹ ಮಹಾನ್ ಕಾರ್ಯವನ್ನೂ ಸಾಧಿಸಬಹುದು ಎನ್ನುವುದಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ತಿತ್ವವೇ ಸಾಕ್ಷಿ. 1978ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಎಂಬ ನಾಮಾಂಕಿತದೊಂದಿಗೆ ಹಲವಾರು ಯುವಕರು ಹಾಗೂ ಹಿರಿಯರ ಇಚ್ಛಾಶಕ್ತಿಯಿಂದ ಎಸ್.ಬಿ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಗೌ| ಪ್ರ| ಕಾರ್ಯದರ್ಶಿ ದಿ| ಕೆ.ನಾರಾಯಣ ಬಂಗೇರ ಇವರ ವಸತಿಗೃಹದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಫೆÇೀಟೋ ಇಟ್ಟು ಭಜನೆ, ಪೂಜೆ ಪುರಸ್ಕಾರ ಮಾಡುತ್ತಾ 1982ರಲ್ಲಿ ಈಗಿರುವ ಮಂದಿರದ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿ ಉದ್ಘಾಟನೆ ಗೊಳಿಸಲಾಯಿತು. ದಿನ ಕಳೆದಂತೆ ಭಜನಾ ಕಾರ್ಯಕ್ರಮದಲ್ಲಿ ಪರಿಸರದ ಜನರು ಮತ್ತು ತುಳು ಕನ್ನಡಿಗರು ಸೇರತೊಡಗಿದಂತೆ ಭಕ್ತವೃಂದ ಸಮುದಾಯವು ವೃದ್ಧಿಯಾಗತೊಡಗಿತು. ಇದರಿಂದ ಪೆÇ್ರೀತ್ಸಾಹಿತರಾದ ಸಂಸ್ಥೆಯು ವರ್ಷಂಪ್ರತಿ ಗಣೇಶ ಚತುಥಿರ್ü, ಒಂಬತ್ತು ದಿನಗಳ ನವರಾತ್ರಿ ಉತ್ಸವ, ಕೃಷ್ಣಾಷ್ಟಮಿ, ದೀಪಾವಳಿ, ಲಕ್ಷ್ಮೀಪೂಜೆ, ತುಳಸಿ ಪೂಜೆ ಹೀಗೆ ಹಲವಾರು ಹಬ್ಬಗಳನ್ನು ಆಚರಿಸುತ್ತಾ ಬಂದಿರುವುದು ಪರಂಪರೆ.

2007ರಲ್ಲಿ ಹಲವಾರು ಮಹನೀಯರ ಸಹಕಾರದಿಂದ ನವೀಕರಣಗೊಳಿಸಿ ಡೊಂಬಿವಲಿಯ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿಯವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳ ಮುಂದಾಳುತ್ವದಲ್ಲಿ ಗರ್ಭಗುಡಿ ಜೀರ್ಣೋದ್ಧಾರಗೊಳಿಸಿ ಮೂರ್ತಿ ಪುನ:ರ್ ಪ್ರತಿಷ್ಠಾಪಿಸಲಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here