Friday 29th, March 2024
canara news

ಐಐಟಿಸಿ ಸಂಸ್ಥೆಯಿಂದ `ಟ್ರಾವೆಲ್ ಎಂಡ್ ಟೂರಿಸಂ' ಮಾಹಿತಿ ಕಾರ್ಯಗಾರ

Published On : 28 Sep 2019   |  Reported By : Rons Bantwal


ಪ್ರವಾಸೋದ್ಯಮದಿಂದ ಭೌಗೋಳಿಕ ಜ್ಞಾನೋದಯ : ವಿಕ್ರಾಂತ್ ಉರ್ವಾಲ್
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ನ.05: ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು-ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆಯಾದ ಇಂಟರ್‍ನೇಶನಲ್ ಇನ್‍ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯು ತನ್ನ ಟ್ರಾವೆಲ್ ಎಂಡ್ ಟೂರಿಸಂ ಹಾಗೂ ಐಎಟಿಎ (ಐಯಾಟ) ವಿದ್ಯಾಥಿರ್üಗಳಿಗಾಗಿ ಇಟೆಲಿಯನ್ ಟೂರಿಸ್ಟ್ ಬೋರ್ಡ್ ಸಹಯೋಗದೊಂದಿಗೆ ಇಂದಿಲ್ಲಿ ಮಂಗಳವಾರ ಉಪನಗರ ಅಂಧೇರಿ ಪೂರ್ವದ ಸಹಾರ್‍ನಲ್ಲಿನ ಹೊಟೇಲ್ ಲೀಲಾ ಕೆಂಪೆನ್‍ಸ್ಕಿಯ ಬಾಲ್‍ರೂಮ್ ಸಭಾಗೃಹದಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮ ವಿಚಾರಿತ ಕಾರ್ಯಗಾರ ಆಯೋಜಿಸಿತ್ತು. ಇಟೆಲಿಯನ್ ಇಎನ್‍ಐಟಿ ಮುಂಬಯಿ ಪ್ರತಿನಿಧಿ ಸಲ್ವತೊರ್ ಲನ್ನಿಯಿಲ್ಲೋ ಕಾರ್ಯಗಾರ ನಡೆಸಿದರು.

ಪ್ರಯಾಣ ಮತ್ತು ಪ್ರವಾಸೋದ್ಯಮ ಜೀವನ ರೂಪಿಸಬಲ್ಲ ಸುಲಭ ಮತ್ತು ಸರಳವಾಗಿ ಆದಾಯ ಗಳಿಕೆಯ ಕ್ಷೇತ್ರವಾಗಿದೆ. ಹತ್ತೂರು ಸುತ್ತುತ್ತಾ ಭೌಗೋಳಿಕ ಅರಿವು ಮೂಡಿಸಬಲ್ಲ ಮನೋಲ್ಲಾಸ ನೀಡುವ ಉದ್ಯಮ ಇದಾಗಿದೆ. ಆದುದರಿಂದಲೇ ಪ್ರವಾಸೋದ್ಯಮ ಅನುಕೂಲಕರ ಉದ್ಯಮವೇ ಸರಿ ಎಂದು ಲನ್ನಿಯಿಲ್ಲೋ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಸುಮಾರು ಐದುವರೆ ದಶಕಗಳ ಹಿಂದೆ ಎಸ್.ಕೆ ಉರ್ವಾಲ್ ಅವರ ದೂರದೃಷ್ಠಿತ್ವದಲ್ಲಿ ಸ್ಥಾಪಿತ ಐಐಟಿಸಿ ಸಂಸ್ಥೆ ನಿರಂತರವಾಗಿ ಐಯಾಟ ತರಬೇತಿ, ವಿಮಾನಯಾನ, ಪ್ರಯಾಣ ಮತ್ತು ಪ್ರವಾಸೋದ್ಯಮ ಬಗ್ಗೆ ವೃತ್ತಿಪರ ಶಿಕ್ಷಣ ನೀಡುವಲ್ಲಿ ಸಾಧನಾಶೀಲ ಸಂಸ್ಥೆಯಾಗಿದೆ. ಸದ್ಯ ಐಐಟಿಸಿ ವಾರ್ಷಿಕವಾಗಿ ನೂರಾರು ವಿದ್ಯಾಥಿರ್üಗಳಿಗೆ ವಿವಿಧ ಉದ್ಯಮಗಳ ವೃತ್ತಿಪರ ಶಿಕ್ಷಣ ನೀಡುತ್ತಿದೆ. ಪ್ರವಾಸೋದ್ಯಮವು ಜನತೆಗೆ ಇಷ್ಟವಾದ ಅಧ್ಯಯನದ, ಉದ್ಯಮಸ್ಥ ಕ್ಷೇತ್ರವಾಗಿದ್ದು, ಇದು ನಿಖರ ಮತ್ತು ಸ್ಪಷ್ಟವಾದ ಪ್ರಯೋಜನಗಳನ್ನು ಒಳಗೊಂಡಿದೆ. ಅಧಿಕ ಗಳಿಕೆಯೊಂದಿಗೆ ವ್ಯವಹಾರವನ್ನು ಆದಾಯಕ್ಕೆ ತಂದು ಕೊಡುವುದರಲ್ಲೂ ಪ್ರವಾಸೋದ್ಯಮ ಅನುಕೂಲಕರ ಉದ್ಯಮ. ಇವೆಲ್ಲಕ್ಕೂ ಪ್ರವಾಸೋದ್ಯಮದಲ್ಲಿ ಭೌಗೋಳಿಕ ಜ್ಞಾನದ ಅಗತ್ಯವಿದೆ. ಈ ಬಗ್ಗೆ ಐಐಟಿಸಿ ವಿದ್ಯಾಥಿರ್üಗಳಲ್ಲಿ ಆಳವಾಗಿ ಅಧ್ಯಾಯನ ರೂಪಿಸುವಲ್ಲಿ ಇಂತಹ ಕಾರ್ಯಗಾರ ಆಯೋಜಿಸಲಾಗುತ್ತಿದೆ ಎಂದು ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್ ಪ್ರಸ್ತಾವಿಕ ನುಡಿಗಳನ್ನಾಡಿ ತಿಳಿಸಿದರು.

ಪ್ರವಸೋದ್ಯಮದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಾಗಿದ್ದ ರೈಲ್ ಯುರೋಪ್‍ನ ವ್ಯವಸ್ಥಾಪಕಿ ಕು| ಬೆಲಾ ಶ್ಹಾ ಅವರು ಇಟೆಲಿಯನ್ ರೈಲುಯಾನ ಜಾಲದ ಬಗ್ಗೆ, ಕಾರ್ಪ್ ಎಂಡ್ ಟ್ರೇಡ್ ಕೊಸ್ಟಾ ಕ್ರೂಜ್ಹರ್‍ನ ವಿಕ್ರಯ ವ್ಯವಸ್ಥಾಪÀಕಿ ಕು| ವಸುಧರಾ ಗುಪ್ತ ಅವರು ಇಟೆಲಿಯಲ್ಲಿ ವಿಹಾರ ನೌಕಯಾನ ಬಗ್ಗೆ, ಬೆಲ್‍ಮೊಂಡ್ ಹೊಟೇಲ್ ಇಟೆಲಿ ಇದರ ವಿಕ್ರಯ ವ್ಯವಸ್ಥಾಪÀಕಿ ಕು| ಸೋನಾಲ್ ಸಾಲ್ಯಾನ್ ಅವರು ಇಟೆಲಿಯ ಲಕ್ಸುರಿ ಹೊಟೇಲ್ಸ್ ಬಗ್ಗೆ ಹಾಗೂ ಭಾರತೀಯ ಮತ್ತು ವಿಶ್ವದ ವಿವಿಧ ರಾಷ್ಟ್ರಗಳ ಪ್ರವಾಸೋದ್ಯಮ ಮತ್ತು ವಿಪುಲ ಉದ್ಯೋಗವಕಾಶಗಳ ಬಗ್ಗೆ ಹಾಗೂ ರೋಮ್, ಫೆÇ್ಲರೆನ್ಸ್, ವೆನಿಸ್, ಪಿಸಾ, ಮಿಲನ್, ಭಾರತೀಯ ವೈಭೋಗದ ಮದುವೆ ಸಂಭ್ರಮಗಳ ಬಗ್ಗೆ ಮಾಹಿತಿಯನ್ನಿತ್ತರು. ನಂತರ ಪ್ರೆಶ್ನೋತ್ತರ ಸರತಿ ನಡೆಸಲ್ಪಟ್ಟಿತು.

ಬಾಲಿವುಡ್ ರಂಗದ ಹೆಸರಾಂತ ವಿನ್ಯಾಸಗಾರ್ತಿ ಭಾರತ ರಾಷ್ಟ್ರದ ಪ್ರಥಮ ಮಿಸ್ ಇಂಡಿಯಾ ಪುರಸ್ಕೃತೆ ಮೆಹೆರ್ ಕಾಸ್ತೆಲಿನೋ, ಬಾಲಿವುಡ್‍ನ ಮೇಕ್-ಅಪ್ ಕಲೋಪಾಸಕ (ಬನಾವಣಾ ಕಲಾವಿದ) ಒಜ್ಹಾಸ್ ರಜನಿ ಮತ್ತು ಸಲೀಂ ಅಜ್‍ಗಾರ್ ಆಲಿ ಅವರೂ ಪಾಲ್ಗೊಂಡು `ಫ್ಯಾಶನ್ ರಂಗದ ಭವಿಷ್ಯ' ಕುರಿತಾದ ಕಾರ್ಯಗಾರ ನಡೆಸಿ ಆಧುನಿಕ ಯುಗದಲ್ಲಿ ಫ್ಯಾಶನ್ ರಂಗದ ಪಾತ್ರ, ಮಹತ್ವ ಮತ್ತು ವೃತ್ತಿಯಾಗಿಸಿ ಮುನ್ನಡೆದÀರೆ ಫಲಾನುಭವಿಗಳ ಭವಿಷ್ಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನಿತ್ತರು.

ಕಾಂiÀರ್iಕ್ರಮದಲ್ಲಿ ಐಐಟಿಸಿ ನಿರ್ದೇಶಕರಾದ ಸಂದೇಶ್ ಉರ್ವಾಲ್, ನಿಖಿಲ್ ಸಂಪತ್, ಶಂಕರ್ ಪಾಂಡೇ, ಸುನೀಲ್ ಶೆವ್ಹಾಳೆ, ವಂದನಾ ಜೈನ್, ಪವಿತ್ರ ರಾಯ್, ದಿವ್ಯಾ ಲಕುರ್, ಈಶಾ ಬೆಡೇಕರ್, ತೋರಲ್ ಠಕ್ಕರ್, ಮುರಳೀಧರ್ ಭಟ್ ಡೊಂಬಿವಿಲಿಮತ್ತಿತರ ಗಣ್ಯರು ಉಪಸ್ಥಿತರಿದ್ದು, ಇಟೆಲಿಯ ಮುಂಬಯಿನ ಪ್ರಧಾನ ವಾಣಿಜ್ಯದೂತೆ (ಕೌನ್ಸಿಲ್ ಜನರಲ್) ಕು| ಸ್ಟೆಫನಿಯಾ ಕೊಸ್ಟಾನ್ಝ ಸ್ವಾಗತಿಸಿದರು. ವಿಕ್ರಾಂತ್ ಉರ್ವಾಲ್ ಮತ್ತು ರೀನಾ ವಿ.ಉರ್ವಾಲ್ ಸಂಪನ್ಮೂಲ ವ್ಯಕ್ತಿಗಳಿಗೆ ಪುಷ್ಪಗುಪ್ಚ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಐಐಟಿಸಿ ಹಾಗೂ ಫ್ಯಾಶನ್ ರಂಗದ ಉಪನ್ಯಾಸಕ, ಮ್ಯಾನೇಜ್‍ಮೆಂಟ್ ಗುರು ಪೆÇ್ರ| ಸೈರಸ್ ಗೋಂಡ ಮತ್ತು ಉಮೇಶ್ ಫೆರ್ವಾನಿ ಕಾರ್ಯಕ್ರಮ ನಿರೂಪಿದರು. ನಿಖಿಲ್ ಸಂಪತ್ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here