Thursday 18th, April 2024
canara news

ಜಿಎಸ್‍ಬಿ ಮಂಡಲ ಡೊಂಬಿವಲಿ 21ನೇ ವಾರ್ಷಿಕ ಶ್ರೀ ಶಾರದಾ ಪೂಜಾ ಮಹೋತ್ಸವ

Published On : 04 Oct 2019   |  Reported By : Rons Bantwal


ಮುಂಬಯಿ, ಅ.02: ಜಿಎಸ್‍ಬಿ ಮಂಡಲ ಡೊಂಬಿವಲಿ 21ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ದಿನಾಂಕ 4 ರಿಂದ 8 ಅಕ್ಟೋಬರ್ 2019 ತನಕ ಡೊಂಬಿವಲಿ ಪೂರ್ವದ ಸ್ವಯಂವರ ಸಭಾಗೃಹ, ಪಾತರ್ಲಿ ಇಲ್ಲಿ ಜರಗಲಿದೆ.

ದಿನಾಂಕ ಅ.4 ಶುಕ್ರವಾರ 11.30 ದೇವತಾ ಪ್ರಾಥನೇ ಗಣಹೋಮ ಹಾಗೂ 12.30ಕ್ಕೆ ಮೂಲಾ ನಕ್ಷತ್ರ ದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ. ದಿನನಿತ್ಯ ಬೆಳಗ್ಗೆ ಚಂಡಿಕಾ ಹವನ, ಪಂಚ ದುರ್ಗಾ ಹವನ, ಹಾಗೂ ಲಕ್ಷ್ಮೀನಾರಾಯಣ ಹೃದಯ ಹವನ, ಉಪಾಸನ, ಭಜನೆ, ಮದ್ಯಾನ್ನ ಪೂಜೆ ಸಮಾರಾಧನೆ, ಸಂಜೆ 6.30 ರಿಂದ ದುರ್ಗಾ ನಮಸ್ಕಾರ, ರಂಗ ಪೂಜೆ ಹಾಗೂ ರಾತ್ರಿ ಪೂಜೆ ನಡೆಯಲಿದೆ.

ಆದಿತ್ಯವಾರ ದಂದು ಸುಹಾಸಿನಿಯರಿಂದ ದೇವಿಗೆ ಲಕ್ಷ ಕುಂಕುಮಾರ್ಚನೆ, ತುಲಾಭಾರ ನಡೆಯಲಿದೆ. ಅದಲ್ಲದೆ ಪ್ರತಿನಿತ್ಯ ದೇವಿಗೆ ವಿವಿಧ ರೂಪದಲ್ಲಿ ಅಲಂಕರಿಸಲಾಗುವದು. ಅಕ್ಟೋಬರ 8 ವಿಜಯ ದಶಮಿ ಯಂದು ದೇವಿಗೆ. ಮಂಗಳೂರು ಮಲ್ಲಿಗೆಯ ಸೋಣಪೂಲ್ (ಮುಡಿ ಇಂದ ಜಡೆ ವರೆಗೆ) ನಿಂದ ಅಲಂಕರಿಸಿ ಸಂಜೆ ವಿಜೃಂಭಣೆಯಿಂದ ವಿಸರ್ಜಿಸಲಾಗುವದು.

ಆ ಪ್ರಯುಕ್ತ ಎಲ್ಲ ಭಕ್ತರು ಬಂದು ಶ್ರೀ ಶಾರದಾಮಾತೇ ಶ್ರೀಮುಡಿ ಪ್ರಸಾದ ವನ್ನು ಸ್ವೀಕರಿಸ ಬೇಕಾಗಿ ಜಿಎಸ್‍ಬಿ ಮಂಡಳ ಡೊಂಬಿವಲಿ ವತಿಯ ಕೋರಲಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here