Thursday 18th, April 2024
canara news

ರಂಗಚಾವಡಿ ವಾರ್ಷಿಕ ಪ್ರಶಸ್ತಿಗೆ ಕರಾವಳಿಯ ಸಾಂಸ್ಕೃತಿಕ ರಾಯಭಾರಿ ಸರ್ವೋತ್ತಮ ಶೆಟ್ಟಿ ಆಯ್ಕೆ

Published On : 11 Oct 2019   |  Reported By : Rons Bantwal


(ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.10: ಮಂಗಳೂರಿನ ಕಲಾ ಸಾಂಸ್ಕøತಿಕ ಸಂಘಟನೆಯಾಗಿರುವ ರಂಗಚಾವಡಿಯು ಕಳೆದ ಹಲವು ವರ್ಷಗಳಿಂದ ವಿವಿಧ ರಂಗದ ಸಾಧಕರಿಗೆ ತನ್ನ ವಾರ್ಷಿಕ ಸಮಾರಂಭದಲ್ಲಿ ರಂಗಚಾವಡಿ ಪ್ರಶಸ್ತಿಯನ್ನು ನೀಡಿ ಗೌರವಿಸುತಿದ್ದು, ಆ ಮೂಲಕ ಕಲಾ ಪೆÇ್ರೀತ್ಸಾಹಕ್ಕೆ ಸೂಕ್ತ ಗೌರವ ನೀಡುತ್ತಿದೆ. ಈ ಬಾರಿ ಕೊಲ್ಲಿ ರಾಷ್ಟ್ರದಲ್ಲಿ ಕರಾವಳಿಯ ಸಾಂಸ್ಕøತಿಕ ರಾಯಭಾರಿ ಎಂದೇ ಗುರುತಿಸಿ ಕೊಂಡಿರುವ ಸರ್ವೋತ್ತಮ ಎಸ್.ಶೆಟ್ಟಿ ಅಬುಧಾಬಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅ.11 ರಂದು ಶುಕ್ರವಾರ ಸಂಜೆ ಮಂಗಳೂರು ಪುರಭವನದಲ್ಲಿ ರಂಗಚಾವಡಿ ತನ್ನ ವಾರ್ಷಿಕೋತ್ಸವ ಸಂಭ್ರಮಿಸಲಿದ್ದು, ಇದೇ ಶುಭಾವಸರದಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು.

ಸರ್ವೋತ್ತಮ ಎಸ್.ಶೆಟ್ಟಿ:
ಸರ್ವೋತ್ತಮ ಶೆಟ್ಟಿ ಇವರ ಹೆಸರು ಕೇಳದ ತುಳುವರಿಲ್ಲ. ಕೊಲ್ಲಿ ರಾಷ್ಟ್ರದಲ್ಲಿ ಕರಾವಳಿಯ ಸಾಂಸ್ಕøತಿಕ ಸೊಬಗನ್ನು ಪರಿಚಯಿಸುವಲ್ಲಿ ವಿಶೇಷ ಕೊಡುಗೆ ನೀಡಿರುವ ಮತ್ತು ನೀಡುತ್ತಿರುವ ಇವರು ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಸರ್ವೋತ್ತಮ ಎಂಬ ಹೆಸರೇ ಸಾಧಕನಿಗೆ ಪ್ರತೀಕವಾದಂತಿದೆ. ಈ ಹೆಸರಿಗೆ ತಕ್ಕಂತೆ ಸಾಧಕನಾಗಿ, ಎಲ್ಲರಿಂದಲೂ ಉತ್ತಮ ಎಂಬರ್ಥವನ್ನು ಸಾಕ್ಷಾತ್ಕರಿಸುತ್ತಿರುವ, ದಶಕಗಳಿಂದ ಯುಎಇಯಲ್ಲಿ ನೆಲೆಸಿರುವ ಸರ್ವೋತ್ತಮ ಶೆಟ್ಟಿ ಅವರು ಸಾಗಿ ಬಂದ ಯಶಸ್ಸಿನ ದಾರಿ ಗಮನ ಸೆಳೆಯುತ್ತದೆ.

ದೂರದ ಅರಬ್ ರಾಷ್ಟ್ರದಲ್ಲಿ ನೆಲೆಸಿ ಅಲ್ಲಿನ ತುಳು ಮತ್ತು ಕನ್ನಡಿಗರನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿರುವ ಅವರು ಮೂಲತ: ಉಡುಪಿ ಜಿಲ್ಲೆಯ ಪರೀಕದವರು. ಮಟ್ಟಾರು ಪರಾರಿ ಸೂರಪ್ಪ ಶೆಟ್ಟಿ ಮತ್ತು ಪರೀಕ ಸರಸ್ವತಿ ಹೆಗ್ಡೆ ದಂಪತಿ ಸುಪುತ್ರರಾಗಿರುವ ಇವರು ಉಡುಪಿ ಸಮೀಪದ ಪರೀಕದಲ್ಲಿ ಹುಟ್ಟಿ ಬೆಳೆದವರು. ತನ್ನ ಪ್ರಾಥಮಿಕ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪೆರ್ಡೂರು ಮತ್ತು ಹಿರಿಯಡಕದಲ್ಲಿ ಪೂರೈಸಿರುವರು.

ಉದ್ಯೋಗ ನಿಮಿತ್ತ ಎಲ್ಲರಂತೆ ಮುಂಬಯಿಗೆ ಆಗಮಿಸಿ ಇಲ್ಲಿ ಗಳಿಕೆಯೊಂದಿಗೆ ಕಲಿಕೆ ಎನ್ನುತ್ತಾ ಉದ್ಯೋಗದ ಜೊತೆ ಕಾಲೇಜು ಶಿಕ್ಷಣ ಮಾಡಿದ್ದರು. ಇದು ಅವರಲ್ಲಿರುವ ಸಾಧಕನ ಮೊದಲ ಲಕ್ಷಣವಾಗಿತ್ತು. ಅಲ್ಲಿ ಸ್ವಲ್ಪ ಕಾಲ ಹೋಟೆಲಿನಲ್ಲಿ ಕೆಲಸ ಮಾಡಿದ್ದ ಅವರು ಬಳಿಕ ಸಾಲಿಸಿಟರ್ ಕಚೇರಿಯಲ್ಲಿ ಉದ್ಯೋಗ ಗಿಟ್ಟಿಸಿ ಕೆಲಸಕ್ಕೆ ಹೋಗುತ್ತಾ ಬಾಂಬೇ ವಿಶ್ವವಿದ್ಯಾಲಯದಿಂದ ಗವರ್ನಮೆಂಟ್ ಕಾಮರ್ಶಿಯಲ್ ಡಿಪೆÇ್ಲಮಾ ಮಾಡಿದರು. ಅವರ ಶಿಕ್ಷಣದ ದಾಹ ಮತ್ತಷ್ಟು ಹೆಚ್ಚುತ್ತಾ ಹೋದ ಫಲವಾಗಿ ಅವರು 1978ರಲ್ಲಿ ಆರ್.ಎ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಎಕಾನಮಿಕ್ಸ್‍ನಿಂದ ಬಿ.ಕಾಂ ಪದವೀಧರರಾದರು. ಕಾಲೇಜು ಜೀವನದಲ್ಲೇ ಎಲ್ಲ ವಿಷಯಗಳಲ್ಲೂ ಸಕ್ರಿಯರಾಗಿದ್ದ ಇವರು ತನ್ನ ನಾಯಕತ್ವದ ಉತ್ಸಾಹವನ್ನು ತೋರಿಸುತ್ತಿದ್ದರು. ಕಾಲೇಜು ಯೂನಿಯನ್‍ನಲ್ಲಿ ಸಕ್ರಿಯರಾಗಿದ್ದರು. ಮುಂಬಯಿ ವಿವಿ ಸೆನೆಟ್‍ನಲ್ಲಿ 1977ರಲ್ಲಿ ಪೆÇದ್ದಾರ್ ಕಾಲೇಜ್‍ನ ಪ್ರತಿನಿಧಿಯಾಗಿದ್ದರು. ಇದು ಅವರ ನಿಜವಾದ ನಾಯಕನ ಒಂದು ಪ್ರಮುಖ ಲಕ್ಷಣವಾಗಿತ್ತು. ಪದವಿ ಮುಗಿಸುವ ಮೊದಲೇ ಸ್ವಲ್ಪ ಕಾಲ ಫಾರ್ಮಾಸಿಟಿಕಲ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ ಅವರು ಸ್ವಲ್ಪ ಕಾಲ ಸಿಂಡಿಕೇಟ್ ಬ್ಯಾಂಕ್‍ನಲ್ಲೂ ಸೇವೆ ಸಲ್ಲಿಸಿದ್ದರು. ಇಲ್ಲಿ ಅವರು ಬ್ಯಾಂಕಿಂಗ್ ಮತ್ತು ಫೈನಾನ್ಸ್ ಬಗ್ಗೆ ಉತ್ತಮ ಜ್ಞಾನ ಸಂಪಾದಿಸಿಕೊಂಡಿದ್ದರು.

ಕಾಲೇಜು ಜೀವನದಲ್ಲೇ ಅವರು ನಾಟಕ ರಂಗದತ್ತಲೂ ಆಕರ್ಷಿತರಾಗಿದ್ದರು. ಆಗ ಇಂಟರ್ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಪರ್ವತವಾಣಿ ಅವರ ಹಗ್ಗದಕೋಣೆ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಇದರಿಂದಾಗಿ ಇವರೋರ್ವ ಸಮರ್ಥ ಮತ್ತು ಪ್ರತಿಭಾನ್ವಿತ ನಟ ಎಂಬುದು ಸಾಬೀತಾಯಿತು. ಈಗ ಮುಂಬಯಿಯಲ್ಲಿ ಪ್ರಖ್ಯಾತಿಯ ಉತ್ತುಂಗದಲ್ಲಿರುವ ಕಲಾಜಗತ್ತು ಎಂಬ ಸಂಘಟನೆಯನ್ನು ಕೆಲವು ಸಮಾನ ಮನಸ್ಕ ಮಿತ್ರರೊಂದಿಗೆ ಸೇರಿ 1979ರಲ್ಲಿ ಹುಟ್ಟು ಹಾಕಿ, ಅದರ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ಈ ಸಂಘಟನೆಯ ಮೂಲಕ ಅಸಂಖ್ಯಾತ ಪ್ರತಿಭೆಗಳನ್ನು ಬೆಳಕಿಗೆ ತಂದವರು. ಈ ಸಂಘಟನೆಯು ಮುಂಬಯಿಯಲ್ಲೇ ಪ್ರಮುಖ ಕಲಾ ಸಾಂಸ್ಕøತಿಕ ಸಂಘಟನೆ ಎಂದು ಗುರುತಿಸಿಕೊಂಡಿದೆ ಮತ್ತು ಹಲವಾರು ಪ್ರಮುಖ ಮತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಮಿಂಚುತ್ತಾ ಕಲಾಸೇವೆ ಮಾಡುತ್ತಿದೆ.

ಇವರ ಬದುಕಿನಲ್ಲಿ ಅತಿ ದೊಡ್ಡ ತಿರುವು ಎಂದೇ ಹೇಳಬಹುದಾದ ವಿಷಯ ಅಂದರೆ ಇವರಿಗೆ ಯುಎಇಯ ಪ್ರಮುಖ ಕಂಪೆನಿಯೊಂದರಿಂದ ಉದ್ಯೋಗದ ಕೊಡುಗೆ ಸಿಕ್ಕಿರುವುದು. ಅಬುಧಾಬಿಯ ಇಂಟರ್ ನ್ಯಾಷನಲ್ ಡಿಸ್ಟ್ರಿಬ್ಯೂಷನ್ ಎಸ್ಟಾಬ್ಲಿಷ್‍ಮೆಂಟ್ ಕಂಪೆನಿಗೆ ಸೇರಿದ ಇವರು ಅದರಲ್ಲಿ ಪ್ರಮುಖ ಜವಾಬ್ದಾರಿ ವಹಿಸಿ ಕೊಂಡರು. ಈ ಸಂಸ್ಥೆಯಲ್ಲಿ ಸುಮಾರು 25 ವರ್ಷಗಳ ಕಾಲ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಸಂಸ್ಥೆಯೊಂದಿಗೆ ತನ್ನನ್ನೂ ಬೆಳೆಸಿಕೊಂಡಿರುವ ಸಾಧಕ. ಪ್ರಸ್ತುತ ಅವರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಉದ್ಯೋಗದಲ್ಲಿದ್ದುಕೊಂಡೇ ಅವರು ಕೆಲವು ಸಂಘಟನೆಗಳನ್ನು ಹುಟ್ಟುಹಾಕಿ ಅದರ ಮೂಲಕ ಕೊಲ್ಲಿ ರಾಷ್ಟ್ರದಲ್ಲಿರುವ ತುಳುಕನ್ನಡಿಗರನ್ನು ಒಗ್ಗೂಡಿಸುತ್ತಾ ಬಂದವರು. ಕರ್ನಾಟಕ ಸಂಘ ಅಬುಧಾಬಿ, ಯುಎಇ ಬಂಟರ ಸಂಘ, ಯುಎಇ ತುಳುಕೂಟ, ನಮ್ಮ ತುಳುವೆರ್ ಮುಂತಾದ ಸಂಘಟನೆಯನ್ನು ಇವರು ಹುಟ್ಟು ಹಾಕಿ, ಅದರ ಮೂಲಕ ಕಲಾ, ಸಾಂಸ್ಕøತಿಕ ಸೇವೆ ಸಲ್ಲಿಸುತ್ತಿದ್ದಾರೆ.

ಕೊಲ್ಲಿ ರಾಷ್ಟ್ರದ ಪ್ರತಿಷ್ಠಿತ ಹಾಗೂ ಕನ್ನಡಿಗರ ಹೆಮ್ಮೆಯಾಗಿರುವ ಇಂಡಿಯಾ ಸೋಶಿಯಲ್ ಸೆಂಟರ್‍ಗೆ 1999-2000ನೇ ಅವಧಿಗೆ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸಂಘಟನೆಯ 50 ವರ್ಷದ ಇತಿಹಾಸದಲ್ಲಿಯೇ ಅವಿರೋಧ ಆಯ್ಕೆಯಾಗಿದ್ದುದು ಇದೇ ಪ್ರಥಮವಾಗಿತ್ತು. 2002-03ರಲ್ಲಿ ಮತ್ತೊಂದು ಬಾರಿ ಅವರು ಇದೇ ಸಂಘಟನಗೆ ಅಧ್ಯಕ್ಷರಾಗಿದ್ದರು. 1995-96ರಲ್ಲಿ ಇದರ ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಜತೆಗೆ ಅಬುಧಾಬಿಯ ಟೋಸ್ಟ್‍ಮಾಸ್ಟರ್ ಇಂಟರ್‍ನ್ಯಾಷನಲ್‍ನ ಸ್ಥಾಪಕ ಉಪಾಧ್ಯಕ್ಷರಾಗಿದ್ದ ಇವರು ಅದರ ಸಿಟಿಎಂ ಕೂಡ ಆಗಿದ್ದರು. 1997ರಿಂದ ಇವರು ಅಬುಧಾಬಿಯ ಪ್ರತಿಷ್ಠಿತ ಅಬುಧಾಬಿ ಇಂಡಿಯನ್ ಸ್ಕೂಲ್‍ನ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಇದು ಸಿಬಿಎಸ್‍ಇ ಶಿಕ್ಷಣ ನೀಡುವ ಅಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ಸುಮಾರು 7500ಕ್ಕೂ ವಿದ್ಯಾಥಿರ್üಗಳಿದ್ದಾರೆ.

ಗಲ್ಫ್ ರಾಷ್ಟ್ರದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ತ್ರೋ ಬಾಲ್ ಟೂರ್ನಮೆಂಟ್ ಆರಂಭಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಇವರ ನೇತೃತ್ವದಲ್ಲಿ ಮತ್ತು ಹಲವು ಸಂಘಟನೆಗಳ ಸಹಾಯ ಮತ್ತು ಸಹಯೋಗದಲ್ಲಿ ನಡೆಯುತ್ತಿರುವ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ತ್ರೋಬಾಲ್ ಟೂರ್ನಮೆಂಟ್‍ನಲ್ಲಿ ಗಲ್ಫ್ ರಾಷ್ಟ್ರದವರು ಮಾತ್ರವಲ್ಲದೆ ಮುಂಬಯಿ. ಪುಣೆ, ಬೆಂಗಳೂರು, ದಿಲ್ಲಿ, ಹರಿಯಾಣ ತಂಡಗಳು ಕೂಡ ಭಾಗವಹಿಸುತ್ತಿರುವುದು ಇದರ ಪ್ರತಿಷ್ಠೆಗೆ ಸಾಕ್ಷಿ. ಇವರು ಅಧ್ಯಕ್ಷರಾಗಿದ್ದ ಕಾಲದಲ್ಲಿಯೇ ಅಬುಧಾಬಿ ಕರ್ನಾಟಕ ಸಂಘಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಸಿಕ್ಕಿತ್ತು. ವಿಶೇಷವೆಂದರೆ ಸಂಘದ 25ನೇ ವರ್ಷದಲ್ಲಿ ಈ ಪ್ರಶಸ್ತಿ ಸಂದಿದೆ.

ಕಾಪು ಕೊತ್ವಾಲುಗುತ್ತು ಉಷಾ ಶೆಟ್ಟಿ ಅವರನ್ನು ವಿವಾಹವಾಗಿರುವ ಇವರಿಗೆ ಸಮರ್ಥ್ ಶೆಟ್ಟಿ ಮತ್ತು ಸಂಯುಕ್ತಾ ಶೆಟ್ಟಿ ಎಂಬಿಬ್ಬರುಉ ಮಕ್ಕಳು. ಪುತ್ರ ಸಮರ್ಥ್ ಶೆಟ್ಟಿ ಅವರು ಅಬುಧಾಬಿಯಲ್ಲಿ ಸೀನಿಯರ್ ಪೈಪಿಂಗ್ ಎಂಜಿನಿಯರ್ ಆಗಿದ್ದಾರೆ. ಪುತ್ರಿ ಸಂಯುಕ್ತಾ ಶೆಟ್ಟಿ ಅವರು ಕೂಡ ಅಬುಧಾಬಿಯಲ್ಲಿ ಇನ್‍ಸ್ಟ್ರುಮೆಂಟೇಶನ್ ಎಂಜಿನಿಯರ್ ಆಗಿದ್ದಾರೆ. ಇವರಿಬ್ಬರೂ ಬೆಂಗಳೂರಿನ ಬಿಐಟಿ ಕಾಲೇಜಿನ ಹಳೆ ವಿದ್ಯಾಥಿರ್üಗಳು.

ಪ್ರಶಸ್ತಿ, ಗೌರವಗಳು
ಸರ್ವೋತ್ತಮ ಶೆಟ್ಟಿ ಸಲ್ಲಿಸಿರುವ ಸಾಮಾಜಿಕ ಮತ್ತು ಸಾಂಸ್ಕøತಿಕ ಸೇವೆಗಾಗಿ 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಮುಂಬಯಿಯಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಂಸ್ಕøತಿಕ ಸಮಾವೇಶದಲ್ಲಿ ನೋಬಲ್‍ಮ್ಯಾನ್ ಪ್ರಶಸ್ತಿ, 2008ರಲ್ಲಿ ಆರ್ಯಭಟ ಪ್ರಶಸ್ತಿ, 2009ರಲ್ಲಿ ಕುವೈಟ್‍ನಲ್ಲಿ ಜರಗಿದ್ದ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಗ್ಲೋಬಲ್‍ಮ್ಯಾನ್ ಪ್ರಶಸ್ತಿ, 2016ರಲ್ಲಿ ವಿಜಯ ಬ್ಯಾಂಕ್ ವರ್ಕರ್ಸ್ ಆರ್ಗನೈಸೇಷನ್‍ನಿಂದ ಸುಂದರ ರಾಮ ಶೆಟ್ಟಿ ಪ್ರಶಸ್ತಿ, 2017ರಲ್ಲಿ ಬೆಂಗಳೂರು ತುಳು ಕೂಟದಿಂದ ತೌಳವ ಪ್ರಶಸ್ತಿ, 2018ರಲ್ಲಿ ವಿಶ್ವ ಕನ್ನಡಿಗ ಪ್ರಶಸ್ತಿ, ಇದೇ ವರ್ಷ ಕದಂಬ ಪ್ರಶಸ್ತಿ ಮತ್ತು 2018ರಲ್ಲಿ ಉಡುಪಿಯಲ್ಲಿ ಜರಗಿದ್ದ ವಿಶ್ವ ಬಂಟರ ಸಮ್ಮಿಲನದಲ್ಲಿ ಜೀವಮಾನ ಸಾಧಕ ಪ್ರಶಸ್ತಿ ಮುಂತಾದವು ಪ್ರಮುಖವಾಗಿದೆ. ಈಗ ಈ ಸಾಲಿಗೆ ರಂಗಚಾವಡಿ ಪ್ರಶಸ್ತಿಯೂ ಸೇರಿದೆ.


ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಯುಎಇ ಘಟಕದ ಅಧ್ಯಕ್ಷರಾಗಿರುವ ಇವರು 2016ರಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಜರಗಿದ್ದ ವಿಶ್ವ ತುಳು ಆಯನೊದ ಅಧ್ಯಕ್ಷರಾಗಿದ್ದರು. ಅಬುಧಾಬಿಯ ಐಎಸ್‍ಸಿ ಪ್ರೊಫೆಶನಲ್ ಆ್ಯಂಡ್ ಎಂಟರ್‍ಪ್ರಿನರ್ ಫಾರಂನ ಚೇರ್‍ಮ್ಯಾನ್ ಆಗಿದ್ದು, ಅಬುಧಾಬಿಯ ಇಂಡಿಯನ್ ಬ್ಯುಸಿನೆಸ್ ಆ್ಯಂಡ್ ಪ್ರೊಫೆಶನಲ್ ಗ್ರೂಪ್‍ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. 2017ರಲ್ಲಿ ಮಂಗಳೂರಿನ ಪಿಲಿಕುಳದಲ್ಲಿ ಜರಗಿದ್ದ ತುಳುನಾಡೊಚ್ಚಯದ ಗೌರವಾಧ್ಯಕ್ಷರಾಗಿದ್ದ ಇವರು 2018ರಲ್ಲಿ ದುಬಾಯಿಯಲ್ಲಿ ಜರಗಿದ್ದ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹೀಗೆ ಸಾಗರದಾಚೆಯ ಕೊಲ್ಲಿ ರಾಷ್ಟ್ರದಲ್ಲಿದ್ದುಕೊಂಡು ತುಳುನಾಡಿನ ಕಂಪನ್ನು ಅಲ್ಲೆಲ್ಲ ಪಸರುತ್ತಾ, ಕನ್ನಡಿಗರ ಹೆಮ್ಮೆಗೂ ಸಾಕ್ಷಿಯಾಗಿರುವ ಇವರು ವಿವಿಧ ರಂಗಗಳಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಇವರು ಬಂಟರು ಸಾಮಥ್ರ್ಯ ಮತ್ತು ನಾಯಕತ್ವದ ಗುಣಕ್ಕೂ ಒಂದು ಮಾದರಿ ಆಗಿ ನಮ್ಮೆದುರು ನಿಲ್ಲುತ್ತಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here