Friday 29th, March 2024
canara news

ಕರಾವಳಿಯ ಸಂಸ್ಕøತಿ ವಿದೇಶದಲ್ಲೂ ಬಿತ್ತರಿಸಿದ ತುಳುವರ ಕೆಲಸ ಶ್ಲಾಘನೀಯ

Published On : 15 Oct 2019   |  Reported By : Rons Bantwal


ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಬಿ.ಎ ವಿವೇಕ್ ರೈ

ಮುಂಬಯಿ (ಮಂಗಳೂರು), ಅ.12: ಕರಾವಳಿಯ ಸಂಸ್ಕøತಿಯನ್ನು ವಿದೇಶದಲ್ಲೂ ಹರಡಿ ಬೆಳಗಿಸುವ ಕಾರ್ಯವನ್ನು ಪರವೂರಿನ ತುಳುವರು ಮಾಡಿದ್ದಾರೆ. ಅಲ್ಲಿದ್ದು ಇಲ್ಲಿಯ ನೆಲದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಕನ್ನಡ ವಿ.ವಿಯ ವಿಶ್ರಾಂತ ಕುಲಪತಿ ಡಾ| ಬಿ.ಎ ವಿವೇಕ್ ರೈ ತಿಳಿಸಿದರು.

ರಂಗ ಚಾವಡಿ ಸಾಹಿತ್ಯಿಕ ಸಾಂಸ್ಕøತಿಕ ಸಂಘಟನೆಯ ವತಿಯಿಂದ ಮಂಗಳೂರು ಪುರಭವನದಲ್ಲಿ ನಡೆದ ರಂಗ ಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ರಂಗಜ್ಯೋತಿ ಪ್ರಜ್ವಲಿಸಿ ಕೊಲ್ಲಿ ರಾಷ್ಟ್ರದಲ್ಲಿ ತುಳು ಭಾಷೆಯ ಬೆಳವಣಿಗೆಯಲ್ಲಿ ತೊಡಗಿರುವ ಯುಎಇ ಕನ್ನಡ ಮತ್ತು ತುಳುಭಾಷಾ ಸಾಂಸ್ಕøತಿಕ ರಾಯಭಾರಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರನ್ನು ಡಾ| ವಿವೇಕ್ ರೈ ರಂಗಚಾವಡಿ ಪ್ರಶಸ್ತಿ ನೀಡಿ ಗೌರವಿಸಿ ಡಾ| ವಿವೇಕ್ ರೈ ಮಾತನಾಡಿದರು.

ಸರ್ವೋತ್ತಮ ಶೆಟ್ಟಿ ಅವರು ಪ್ರಶಸ್ತಿಗೆ ಉತ್ತರಿಸಿ ತುಳು ಕನ್ನಡ ಭಾಷಾ ಬೆಳವಣಿಗೆಗೆ ಕಾರ್ಯ ನಿರ್ವಹಿಸುತ್ತಿರುವ ಕೊಲ್ಲಿ ರಾಷ್ಟ್ರದ ಎಲ್ಲರಿಗೂ ಈ ಸನ್ಮಾನ-ಗೌರವ ಸಲ್ಲಬೇಕೆಂದರು. ರಂಗಚಾವಡಿ ಸಂಸ್ಥೆ ಪ್ರತೀ ವರ್ಷ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಲನಚಿತ್ರ ನಿರ್ಮಾಪಕ ಡಾ| ಸಂಜೀವ ದಂಡೆಕೇರಿ ಮಾತನಾಡುತ್ತಾ ದುಬಾಯಿಯ ಗಮ್ಮತ್ ಕಲಾವಿದರು ಬಯ್ಯಮಲ್ಲಿಗೆ ನಾಟಕವನ್ನು ಈ ಹಿಂದೆ ದುಬಾಯಿಯಲ್ಲೂ ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಆ ತಂಡದವರು ಮಂಗಳೂರಿಗೆ ಆಗಮಿಸಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಯುನೈಟೆಡ್ ಯುಎಇ ಎಕ್ಸ್ ಚೇಂಜ್‍ನ ನಿಕಟಪೂರ್ವ ಅಧ್ಯಕ್ಷ ಸಿಎ| ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಚಲನಚಿತ್ರ ನಿರ್ಮಾಪಕ ಹರೀಶ್ ಬಂಗೇರ ದುಬಾಯಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ದುಬಾಯಿ ಬಿಲ್ಲವಾಸ್ ಸಂಘದ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ದುಬಾಯಿ, ಫರಂಗಿಪೇಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಎ.ಕೆ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ದುಬಾಯಿ ಗಮ್ಮತ್ ಕಲಾವಿದರು ಸಂಸ್ಥೆಯ ಅಧ್ಯಕ್ಷ ಕಿರಣ್ ಶೆಟ್ಟಿ, ರಂಗ ಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ ಶೆಟ್ಟಿ, ವಿ.ಜಿ ಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿ.ಜಿ ಪಾಲ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ವಂದಿಸಿದರು. ಡಾ| ಸಂಜೀವ ದಂಡೇಕೇರಿ ರಚಿತ ಬಯ್ಯಮಲ್ಲಿಗೆ ನಾಟಕವನ್ನು ವಿಶ್ವನಾಥ ಶೆಟ್ಟಿ ದುಬಾಯಿ ನಿರ್ದೇಶನದಲ್ಲಿ ದುಬಾಯಿ ಕಲಾವಿದರು ಪ್ರದರ್ಶಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here