Wednesday 24th, April 2024
canara news

ನ.02: ಬಿಲ್ಲವ ಭವನದಲ್ಲಿ ಗಿರ್‍ಗಿಟ್ ಗಿರಿಧರೆ ತುಳು ನಾಟಕ ಪ್ರದರ್ಶನ

Published On : 21 Oct 2019   |  Reported By : Rons Bantwal


ಎಸ್‍ಬಿಬಿಪಿ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ)ನಿಂದ ವಿದ್ಯಾನಿಧಿ ಪ್ರದಾನ ಕಾರ್ಯಕ್ರಮ

ಮುಂಬಯಿ, ಅ.18: ಶ್ರೀ ಬ್ರಹ್ಮಬೈದರ್ಕಳ ಪಂಚಧೂಮವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆಯು ವಿದ್ಯಾನಿಧಿ ಸಲುವಾಗಿ ಇದೇ ಬರುವ ನವೆಂಬರ್ 02ರ ಶನಿವಾರ ಸಂಜೆ 3.30 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ರಂಗ್‍ದ ರಾಜೆ ಲ| ಸುಂದರ್ ರೈ ಮಂದಾರ ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಸಾರಥ್ಯ ಮತ್ತು ಕುಸಲ್ದರಸೆ ನವೀನ್ ಡಿ.ಪಡೀಲ್ ಸಹಕಾರದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಬಳಗವು ಅಭಿನಯಿಸುವ `ಗಿರ್‍ಗಿಟ್ ಗಿರಿಧರೆ' ತುಳು ನಾಟಕ ಪ್ರದರ್ಶನ ಆಯೋಜಿಸಿದೆ.

ಅಂದು ಸಂಜೆ 3.00 ಗಂಟೆಗೆ ಎಸ್‍ಬಿಬಿಪಿ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ) ವತಿಯಿಂದ ಗರೋಡಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ವಾರ್ಷಿಕ ವಿದ್ಯಾನಿಧಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತೋನ್ಸೆಯ ಹಿರಿಯ ಸಾಧಕರನ್ನು ಸನ್ಮಾನಿಸಲಾಗು ವುದು ಹಾಗೂ ಗತಸಾಲಿನಲ್ಲಿ ಎಸ್‍ಎಸ್‍ಸಿ-ಹೆಚ್‍ಎಸ್‍ಸಿ ಪರೀಕ್ಷೆಯಲ್ಲಿ 70%ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ ಪ್ರದಾನಿಸಲಾಗುವುದು. ಮಕ್ಕಳಿಗಾಗಿ ಛದ್ಮವೇಶ ಸ್ಪರ್ಧೆ, ಪ್ರತಿಭಾ ಪ್ರದರ್ಶನ ಜೊತೆಗೆ ಸಂಘದ ಸದಸ್ಯರು, ಮಕ್ಕಳು ವಿವಿಧ ಮನೋರಂಜನಾ ಇತ್ಯಾದಿ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸಲಿದ್ದಾರೆ. ಆ ಬಳಿಕ `ಗಿರ್‍ಗಿಟ್ ಗಿರಿಧರೆ' ನಾಟಕ ಪ್ರದರ್ಶನಗೊಳ್ಳಲಿದೆÉ.

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್, ಮುಂಬಯಿ ಕಾರ್ಯಕಾರಿ ಸಮಿತಿಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ (ಅಧ್ಯಕ್ಷರು), ಡಿ.ಬಿ ಅವಿೂನ್, ಸಿ.ಕೆ ಪೂಜಾರಿ, ವಿಶ್ವನಾಥ ತೋನ್ಸೆ (ಉಪಾಧ್ಯಕ್ಷರುಗಳು), ಸಂಜೀವ ಪೂಜಾರಿ ತೋನ್ಸೆ (ಗೌ| ಪ್ರ| ಕಾರ್ಯದರ್ಶಿ), ರವಿರಾಜ್ ಕಲ್ಯಾಣ್ಫುರ್ (ಗೌ| ಪ್ರ| ಕೋಶಾಧಿಕಾರಿ), ಕರುಣಾಕರ ಬಿ.ಪೂಜಾರಿ (ಜೊತೆ ಕಾರ್ಯದರ್ಶಿ), ವಿಜಯ್ ಸನಿಲ್ (ಜೊತೆ ಕೋಶಾಧಿಕಾರಿ), ಅಶೋಕ್ ಎಂ.ಕೋಟ್ಯಾನ್ ಥಾಣೆ, ಆನಂದ್ ಜತ್ತನ್, ಸೋಮ ಸುವರ್ಣ, ವಿಠಲ ಎಸ್.ಪೂಜಾರಿ, ರೂಪ್‍ಕುಮಾರ್ ಕಲ್ಯಾಣ್ಪುರ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ವಿಜಯ್ ಪಾಲನ್, ಕೃಷ್ಣ ಪಾಲನ್ (ಕಾರ್ಯಕಾರಿ ಸಮಿತಿ ಸದಸ್ಯರುಗಳು) ಸಮಿತಿಯ ಹಿರಿಯರಾದ ಶಂಕರ್ ಸುವರ್ಣ, ವಿ.ಸಿ ಪೂಜಾರಿ, ಗೋಪಾಲ್ ಪಾಲನ್, ಲಜ್ಹಾರ್ ಟಿ.ಮುತ್ತಪ್ಪ ಕೋಟ್ಯಾನ್, ಲಕ್ಷಿ ್ಮೀ ದಿವಾಕರ್ ಅಂಚನ್ ಅವರ ಸಲಹೆಯಂತೆ ಸೇವಾ ನಿರತರಾಗಿದ್ದಾರೆ.

ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಉದ್ದೇಶಗಳನ್ನಿರಿಸಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗರೋಡಿ ಸೇವಾ ಟ್ರಸ್ಟ್ ಸರ್ವ ಪದಾಧಿಕಾರಿಗಳೊಂದಿಗೆ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಈ ಮೂಲಕ ವಿನಂತಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here