Saturday 20th, April 2024
canara news

ಲೇಖಕ ಸೋಮನಾಥ ಎಸ್.ಕರ್ಕೇರ ರಚಿತ ¨ಲೇ ಇಡ್ಲಿ ತಿನ್ಕ ನಾಟಕದ ಕೃತಿ ಬಿಡುಗಡೆ

Published On : 22 Oct 2019   |  Reported By : Rons Bantwal


ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು: ಶಾರದಾ ಎ.ಅಂಚನ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.19: ಹಾಸ್ಯ ಬರೆಯುವುದು ಬಹಳ ಕಷ್ಟಕರ . ಅದರಲ್ಲೂ ವ್ಯಾಂಗ್ಯ ತುಂಬಾ ತ್ರಾಸದಾಯಕ ಆದುದು. ಏಕೆಂದರೆ ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು. ಇಲ್ಲದಿದ್ದಾರೆ ಅದು ಹಾಸ್ಯಸ್ಪದ ಆಗುತ್ತದೆ. ತುಳುವಿನಲ್ಲಿ ಬರೆಯುವವರನ್ನು ತುಂಬಾ ಲಘುವಾಗಿ ಕಾಣಲಾಗುತ್ತಿದೆ. ಆದರೆ ತುಳು ಭಾಷೆಯಯಲ್ಲಿ ಸಶಕ್ತವಾಗಿ ಕೃತಿ ಮೂಡಿರ ಬರಬಲ್ಲದು ಅನ್ನುವುದನ್ನು ದೀರ್ಘಾವಧಿಯಿದಿಂದ ತುಳುವಿನಲ್ಲಿ ಬರೆಯುತ್ತಿರುವ ಸೋಮನಾಥ ಕರ್ಕೇರ ಅವರು ಸಾಕ್ಷಿ ಎಂದು ಮಹಾನಗರದಲ್ಲಿನ ಪ್ರತಿಷ್ಠಿತ, ಪ್ರಶಸ್ತಿ ವಿಜೇತ ಕವಯತ್ರಿ, ಕತೆಗಾರ್ತಿ, ಲೇಖಕಿ ಶಾರದಾ ಆನಂದ್ ಅಂಚನ್ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮುಂಬಯಿ ಕನ್ನಡ ಸಂಘದ ಸಹಯೋಗÀÀದಲ್ಲಿ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಂಘದ ವಾಚನಾಲಯದಲ್ಲಿ ಕನ್ನಡ ಸಂಘದ ಜೊತೆ ಕಾರ್ಯದರ್ಶಿ, ಹಿರಿಯ ಪತ್ರಕರ್ತ, ಲೇಖಕ ಸೋಮನಾಥ ಎಸ್.ಕರ್ಕೇರ ರಚಿತ `¨ಲೇ ಇಡ್ಲಿ ತಿನ್ಕ' (ಬನ್ನಿ ಇಡ್ಲಿ ತಿನ್ನೋಣ) ಹಾಸ್ಯಮಯ ತುಳು ಏಕಾಭಿನಯ ನಾಟಕದ ಕೃತಿ ಬಿಡುಗಡೆ ಗೊಳಿಸಿ ಶಾರದಾ ಅಂಚನ್ ಮಾತನಾಡಿದರು.

ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರ ಮದಲ್ಲಿ ಪ್ರಧಾನ ಅಭ್ಯಾಗತರಾಗಿ ಪೂಜಾ ಪ್ರಕಾಶನದ ಪ್ರಕಾಶಕ, ಪ್ರಶಸ್ತಿ ಪುರಸ್ಕೃತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಉಪಸ್ಥಿತರಿದ್ದರು.

ನಾಟಕ ಬರೆಯುವವರಿಗೆ ಜೀವನಾನುಭªದ ಅಗತ್ಯವಿದೆ. ಯಾಕೆಂದರೆ ನಾಟಕ ಅನ್ನುವುದು ಜೀವನದ ಇನ್ನೊಂದು ಮುಖಭಾವ. ಸೋಮನಾಥರು ದೀರ್ಘ ಕಾಲದಿಂದ ಹಾಸ್ಯ ನಾಟಕಗಳನ್ನು ಬರೆಯುತ್ತಾ ಕಚಗುಳಿ ಇಡುವ ವಿಭಿನ್ನ ಶೈಲಿಯ ನಾಟಕಗಳನ್ನು ಬರೆದಿದ್ದಾರೆ. ಇಂದು ಬಿಡುಗಡೆ ಗೊಂಡಿರುವ ಕೃತಿಯೂ ಅಂತಹ ಒಳ್ಳೆಯ ಹಾಸ್ಯ ನಾಟಕಕ್ಕೆ ಉತ್ತಮ ಉದಾಹರಣೆ ಎಂದು ಚಂದ್ರಹಾಸ ಸುವರ್ಣ ಕೃತಿ ವಿಮರ್ಶೆಗೈದರು.

ಮುಂಬಯಿ ಕನ್ನಡ ಸಂಘದೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿರುವ ಕರ್ಕೇರ ಸಂಘದ ಪದಾಧಿಕಾರಿಯಾಗಿ ನಮ್ಮೊಂದಿಗೆ ದುಡಿಯುತ್ತಿರುವ ಶ್ರಮಜೀವಿ. ಅವರೋರ್ವ ಸರಳ ವ್ಯಕ್ತಿತ್ವವುಳ್ಳ ಅಪ್ರತಿಮ ಪ್ರತಿಭೆ. ಕನ್ನಡ ಸಂಘದ ಕಚೇರಿಯಲ್ಲೇ ಇಂದು ಅವರ ತುಳು ಕೃತಿಯ ಬಿಡುಗಡೆ ಗೊಂಡಿರುವುದು ನಮಗೆ ಅಭಿಮಾನದ ಸಂಗತಿ ಎಂದು ಗುರುರಾಜ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ, ಸದಸ್ಯ ನಾರಾಯಣ ರಾವ್, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಚಿತ್ರಾಪು ಕೆ.ಎಂ ಕೋಟ್ಯಾನ್, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಎಸ್.ಕೆ ಸುಂದರ್, ಸಾ.ದಯಾ, ಕುಸುಮಾ ಸಿ.ಪೂಜಾರಿ ಮತ್ತಿತರ ಗಣ್ಯರು ಹಾಜರಿದ್ದು, ಕೃತಿಕಾರರನ್ನು ಅಭಿನಂದಿಸಿದರು.

ಕೃತಿಕರ್ತ ಸೋಮನಾಥ ಕರ್ಕೇರ ಅತಿಥಿüಗಳಿಗೆ ಪುಷ್ಪಗುಪ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ನವಿಮುಂಬಯಿ ಸಮಿತಿಯ ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಕನ್ನಡಿಗ ಸಂಪಾದಕ ಅಶೋಕ ಎಸ್.ಸುವರ್ಣ ಸುಖಾಗಮನ ಬಯಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ಧನ್ಯವದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here