Tuesday 23rd, April 2024
canara news

ದೀಪಾವಳಿ ಹಬ್ಬದ ನಿಜಾರ್ಥದ ಸಂದೇಶ ಸಾರಿದ ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ

Published On : 22 Oct 2019   |  Reported By : Rons Bantwal


ಆಸಕ್ತರಿಗೆ ಆಥಿರ್üಕತೆ ಕೊರತೆ ಆಗಬಾರದು: ಪದ್ಮನಾಭ ಪಯ್ಯಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.20: ಬಂಟರ ಸಂಘವು ಸುಮಾರು 92 ವರ್ಷಗಳ ಇತಿಹಾಸವಿರುವ ಒಂದು ಪ್ರತಿಷ್ಠಿತ ಸಂಘ. ಹಿರಿಯರು ತಮ್ಮ ಶ್ರಮತೆ, ದೂರದೃಷ್ಟಿತ್ವದಿಂದ ಇದೊಂದು ಸುಸಜ್ಜಿತ ಸಂಘಟನೆಯಾಗಿದ್ದು, ವಿಶ್ವವೇ ಗುರುತಿಸುವಂತೆ ಬೆಳೆದ ಸಂಸ್ಥೆಯಾಗಿದೆ. ಸಂಘದ ಸೇವೆಗಳನ್ನು ಎಲ್ಲಾ ಪ್ರಾದೇಶಿಕ ಸಮಿತಿಗಳು ವಿಸ್ತರಿಸುತ್ತಿದ್ದು ಜನಸಾಮಾನ್ಯರೂ ಫಲಾನುಭವ ಪಡೆಯುವಂತಾಗಿದೆ. ಅದರಲ್ಲೂ ಆರ್.ಕೆ ಶೆಟ್ಟಿ ಅವರ ಸಾರಥ್ಯದಲ್ಲಿ ಈ ಸಮಿತಿ ಸರ್ವೋತ್ತಮ ಕೆಲಸ ನಡೆಸುತ್ತಿದೆ. ಸುಖಕಷ್ಟ ಅನ್ನುವುದು ನಾಣ್ಯದ ಎರಡು ಮುಖಗಳಿಂದಂತೆ. ಯಾರು ಸುಖದಲ್ಲಿದ್ದರೆ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಅದನ್ನೇ ಆರ್.ಕೆ ಸಾಧಿಸಿ ಜನಮೆಚ್ಚುಗೆ ಪಾತ್ರರಾಗಿದ್ದಾರೆ. ಅವರು ದಿಶಾ ಕಾರ್ಯಕ್ರಮ ಮೂಲಕ ಉತ್ತಮ ಕೆಲಸವನ್ನು ಮಾಡಿ ಅಖಂದ ಸಮಾಜಕ್ಕೆ ಆದರ್ಶರಾಗಿದ್ದಾರೆ. ಪರೋಪಕಾರದಿಂದ ಬದುಕು ಹಸನಾಗುವುದು ಆದುದರಿಂದ ಆಸಕ್ತರಿಗೆ ಆಥಿರ್üಕತೆ ಕೊರತೆ ಆಗಬಾರದು. ಇವತ್ತು ಮಹಿಳೆಯರಿಗೆ ಸ್ವಉದ್ಯೋಗ ಕಾರ್ಯಕ್ರಮ ಚಾಲನೆ ನೀಡಿದ್ದು, ಅದರ ಯಶಸ್ವಿಗಾಗಿ ಎಲ್ಲರೂ ಶ್ರಮಿಸಬೇಕು. ಬಂಟರಲ್ಲಿನ ಸರ್ವವರ್ಗದವರನ್ನು ನಾವು ಪೆÇ್ರೀತ್ಸಹಿಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ತಿಳಿಸಿದರು.

ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯು ಇಂದಿಲ್ಲಿ ಆದಿತ್ಯವಾರ ಸಂಜೆ ಅಂಧೇರಿ ಪೂರ್ವದ ಸಾಯಿ ಪ್ಯಾಲೇಸ್ ಹೊಟೇಲ್ ಸಭಾಗೃಹದಲ್ಲಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮ ಆಚರಿಸಿ ದ್ದು, ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅವರ ದೂರದೃಷ್ಠಿತ್ವದಂತೆ ಸರ್ವರ ಬಾಳಲ್ಲೂ ಸಂತಸದ ಬೆಳಕನ್ನು ಪಸರಿಸುವ ವಿಶಿಷ್ಟ್ಯ ಕಾರ್ಯಕ್ರಮವನ್ನಾಗಿಸಿ ಆಯೋಜಿಸಲ್ಪಟ್ಟ ಕಾರ್ಯಕ್ರಮವನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ತನ್ನ ಅಧ್ಯಕ್ಷತೆಯಲ್ಲಿ ಮುನ್ನಡೆಸಿ ಪ್ರಾದೇಶಿಕ ಸಮಿತಿಯ ಹೊಲಿಗೆ ತರಬೇತಿ ಮತ್ತು ಬ್ಯೂಟಿಷಿಯನ್ ತರಬೇತಿ ಯೋಜನೆಗಳಿಗೆ ಚಲನೆಯನ್ನಿತ್ತು ಮಾತನಾಡಿದÀರು.

ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಜೊತೆ ಕಾರ್ಯದರ್ಶಿ ರತ್ನಾ ಪಿ.ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ, ಪಶ್ಚಿಮ ವಲಯ ಸಂಚಾಲಕ ಡಾ| ಪ್ರಭಾಕರ್ ಶೆಟ್ಟಿ ಬೋಳ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ. ನೋಂಡಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್ ಶೆಟ್ಟಿ ವೇದಿಕೆಯಲ್ಲಿದ್ದು ಉಪಸ್ಥಿತ ಸಮಿತಿಯ ದತ್ತು ಸ್ವೀಕೃತ ಮಕ್ಕಳು, ವಿಕಲಚೇತನರು, ಅವರ ಕುಟುಂಬಸ್ಥರಿಗೆ ಸಮಿತಿ ಪರವಾಗಿ ದೀಪಾವಳಿ ಹಬ್ಬದ ಉಡುಗೊರೆಯಾಗಿಸಿ ಸೀರೆ, ಬೆಡ್‍ಶೀಟ್, ಉಡುಗೆ ವಸ್ತು (ಡ್ರೆಸ್ ಮೆಟಿರೀಯಲ್ಸ್) ಜೊತೆಗೆ ನಗದು ಬಹುಮಾನ ನೀಡಿ ದೀಪಾವಳಿ ಹಬ್ಬದ ಸಂತಸ ಹಂಚಿಕೊಂಡರು.

ಅತಿಥಿüವರ್ಯರು ರಾಷ್ಟ್ರೀಯ ಸ್ವರ್ಣ ಪದಕ ವಿಜೇತ ಕ್ರೀಡಾ ಸಾಧಕ ರೋಹಿತ್ ಡಿ ಶೆಟ್ಟಿ (ಪತ್ನಿ ನೀಶಾ ರೋಹಿತ್, ಸುಪುತ್ರಿ ನಯಿಷಾ ರೋಹಿತ್ ಒಳಗೊಂಡು) ಸನ್ಮಾನಿಸಿದ್ದು, ಕ್ರೀಡಾ ಪಟು ಶಿವಾನಂದ ಶೆಟ್ಟಿ ಅವರನ್ನು ಗೌರವಿಸಿದರು. ಅಂತೆಯೇ ಶೀಘ್ರದಲ್ಲೇ ವಿಶ್ವಸ್ಪರ್ಧೆಗೆ ಆಸ್ಟ್ರೇಲಿಯಾಕ್ಕೆ ತೆರಳಲಿರುವ ಮಾ| ಜಯ ಆದಿತ್ಯ ಶೆಟ್ಟಿ ಇವರಿಗೆ ಆಥಿರ್üಕ ಪೆÇ್ರೀತ್ಸಹವಿತ್ತು ಶುಭಕೋರಿದರು.

ಪ್ರಭಾಕರ ಶೆಟ್ಟಿ ಮಾತನಾಡಿ ಆತ್ಮತೃಪ್ತಿ ನೀಡುವಂತಹ ಸೇವೆಯೇ ತೃಪ್ತಿಕರವಾದುದು ಮತ್ತು ಪರೋಪಕಾರದಿಂದ ಬದುಕು ಹಸನಾಗುವುದು ಅನ್ನುವುದನ್ನು ಈ ಸಮಿತಿ ಸಕ್ರೀಯತೆ ಮೂಲಕ ತೋರ್ಪಡಿಸಿದೆ. ಖಾಯಂ ದತ್ತು ಸ್ವೀಕಾರದಿಂದ ಅಶಕ್ತರು ಸದೃಢರಾಗಿ ಬಾಳಲು ಸಹಾಯಕವಾಗುವುದು ಇದನ್ನೇ ಈ ಸಮಿತಿ ಮಾಡಿ ಸಾಧಕವೆನಿಸಿದೆ. ಇದು ದೇವರು ಮೆಚ್ಚುವ ನಿಜಾರ್ಥದ ಸೇವೆ ಎಂದರು.

ಸಮಾಜ ಕಲ್ಯಾಣದಲ್ಲಿ ಹೊಸ ಆಯಾಮ ನೀಡಿದ ದೂರದರ್ಶಿತ್ವದ ಆರ್.ಕೆ ಶೆಟ್ಟಿ ಅವರ ಸಮಾಜ ಸೇವೆ ಅನುಪಮವಾದುದು. ನಮ್ಮಲ್ಲಿನ ಸರ್ವರ ಹೃನ್ಮನ, ಮನೆಮಂದಿಯರನ್ನು ಸಂಪರ್ಕಿಸಿದ ಕೀರ್ತಿ ಈ ಸಮಿತಿಗೆ ಸಲ್ಲುತ್ತದೆ ಎಂದÀು ಉಳ್ತೂರು ಮೋಹನ್‍ದಾಸ್ ತಿಳಿಸಿದರು.

ಸಂಜೀವ ಶೆಟ್ಟಿ ಮಾತನಾಡಿ ಎರಡು ವರ್ಷದಲ್ಲಿ ಈ ಸಮಿತಿ ಆಶಯಕ್ಕಿಂತಲೂ ಮಿಕ್ಕಿ ಒಳ್ಳೆಯ ಕೆಲಸ ಮಾಡಿ ಸರ್ವೋತ್ಕೃಷ್ಟ ಪ್ರಾದೇಶಿಕ ಸಮಿತಿ ಪ್ರಶಸ್ತಿಗೆ ಸಾಕ್ಷಿ ಆಗಿರುವುದೇ ಅವರ ಸೇವಾಕೈಂಕಾರ್ಯಕ್ಕೆ ಹಿಡಿದ ಕೈಗನ್ನಂಡಿ ಆಗಿದೆ ಎಂದರು.

ಇದೊಂದು ಅದ್ಭುತ ಕಾರ್ಯಕ್ರಮ. ಅಗತ್ಯವಿರುವವರಿಗೆ ಸಹಾಯ ಮಾಡುವ ಸೇವೆಕ್ಕಿಂತ ಕೆಲಸ ಮತ್ತೊಂದಿಲ್ಲ. ತುಂಬಾ ಒಳ್ಳೆಯ ಕಾರ್ಯಕ್ರಮ. ಆರ್.ಕೆ ಶೆಟ್ಟಿ ಅವರ ನೇತೃತ್ವದಲ್ಲಿ ಅನೇಕ ಒಳ್ಳೆಯ ಸಮಾಜಪರ ಕಾರ್ಯಕ್ರಮಗಳು ನಡೆಯುತ್ತಿದ್ದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಜನಿ ಹೆಗ್ಡೆ ಶುಭ ಕೋರಿದರು.

ದಾನ ಪ್ರಧಾನತೆ ಬಂಟರ ನೆತ್ತರುನಲ್ಲಿಯೇ ಇದ್ದು, ಕೊಡುಕೊಳ್ಳುವಿಕೆಯಲ್ಲಿ ಕೊಡುವುದನ್ನೇ ಮೈಗೂಡಿಸಿದ ಸಮಾಜವೇ ಬಂಟರದ್ದು. ಅದರಲ್ಲೂ ಹಂಚಿಕೊಂಡು ತಿನ್ನುವ ಅಭಿರುಚಿವುಳ್ಳ ಬಂಟರು ದಾನಶೀಲರು. ಇವತ್ತು ಸೇವೆ ಅಂದರೆ ನುಡಿದಂತೆ ನಡೆಯವ ಮತ್ತು ಅದನ್ನು ಕಾರ್ಯಗತಗೊಳಿಸುವುದೇ ದೊಡ್ಡ ಸಾಧನೆ ಆಗಿದೆ. ಇದೆಲ್ಲವೂ ಸಮಿತಿಯ ಸಮಾನ ಮನಸ್ಕ ಪದಾಧಿಕಾರಿಗಳು, ಸದಸ್ಯರ ಸಹಯೋಗ, ಸಾಂಘಿಕತೆಯಿಂದ ಸಾಧ್ಯವಾಗಿದೆ. ಬಹುಶಃ ಸಮಾಜ ಸೇವೆ ಮೂಲಕ ಸಾಧಕನ್ನು, ಪ್ರತಿಭಾನ್ವಿತರನ್ನು ಪೆÇ್ರೀತ್ಸಾಹಿಸುವುದಕ್ಕಿಂತ ಶ್ರೇಷ್ಠವಾದ ದೀಪಾವಳಿ ಬೇರೊಂದಿಲ್ಲ ಎಂದು ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಅಧ್ಯಕ್ಷ ಆರ್.ಕೆ ಶೆಟ್ಟಿ ತಿಳಿಸಿ ಸಂಭ್ರಮದಲ್ಲೂ ಸರ್ವರೂ ಸಮಾನರು ಅನ್ನುವ ಕಾಳಜಿತ್ವದ ನಿರ್ಧಿಷ್ಟ ಸಂದೇಶದೊಂದಿಗೆ ಈ ಪ್ರಾದೇಶಿಕ ಸಮಿತಿ ಇಂತಹ ಪುಣ್ಯಾಧಿ ಕಾಯಕದಲ್ಲಿ ತೊಡಗಿಸಿಕೊಂಡಿದೆ ಎಂದರು.

ಆಥಿರ್sಕವಾಗಿ ಅಸಹಯಕವಿರುವ ಸ್ವಸಮಾಜದ ಜನತೆಗೆ ಪೆÇ್ರೀತ್ಸಹಿಸುವ ನಿಟ್ಟಿನಲ್ಲಿ ಸಂಘದ ನಮ್ಮ ಪ್ರಾದೇಶಿಕ ವಲಯದೊಳಗೆ ಸ್ವಂತ ಉದ್ಯೋಗ ಅಥವಾ ಸ್ವಉದ್ಯಮ ಮಾಡಿ ಆಥಿರ್sಕ ಸ್ವಾವಲಂಬನೆ ಪಡೆಯಲು ಇಚ್ಛಿಸುವ ಬಾಲಕಿಯರು, ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಬ್ಯೂಟಿಷಿಯನ್ ತರಬೇತಿ ಯೋಜನೆಯನ್ನು ಸಮಿತಿ ಆರಂಭಿಸಿದ್ದು, ಆಸಕ್ತರಿಗೆ ತರಬೇತಿ ಶುಲ್ಕವನ್ನು ಸಮಿತಿ ಭರಿಸುವುದು ಅಲ್ಲದೆ ಅಗತ್ಯವಿದ್ದಲ್ಲಿ ಹೋಲಿಗೆ ಯಂತ್ರವನ್ನೇ ಉಚಿತವಾಗಿ ನೀಡಿ ಪೆÇ್ರೀತ್ಸಹಿಸಲಿದೆ ಎಂದು ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಹೊಲಿಗೆ ತರಬೇತಿ ಬಗ್ಗೆ ಮಾಹಿತಿಯನ್ನಿತ್ತರು.

ಕಾರ್ಯಕ್ರಮದಲ್ಲಿ ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಜ್ಞಾನ ಮಂದಿರ (ದೇವಾಲಯ) ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ವೈವಾಹಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಸೇರಿದಂತೆ ನಗರದ ಅನೇಕ ಬಂಟ ಧುರೀಣರು ಉಪಸ್ಥಿತರಿದ್ದರು. ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ ಸುಖಾಗಮನ ಬಯಸಿದರು. ಮಮತಾ ಎಸ್.ರೈ ಪ್ರಾರ್ಥನೆÀಯನ್ನಾಡಿ ಬ್ಯೂಟಿಷಿಯನ್ ತರಬೇತಿ ಬಗ್ಗೆ ವಿವರಿಸಿದರು. ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ ಮತ್ತು ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಫಲಾನುಭವಿಗಳ ಯಾದಿ ವಾಚಿಸಿದರು. ಬಾಬಾಪ್ರಸಾದ್ ಅರಸ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ ವಂದಿಸಿದದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here