Thursday 25th, April 2024
canara news

ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ

Published On : 06 Dec 2019   |  Reported By : Rons Bantwal


ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರಲ್ಲಿದೆ-ಎನ್.ಟಿ ಪೂಜಾರಿ

ಮುಂಬಯಿ, ಡಿ.04: ಉಡುಪಿ ಜಿಲ್ಲೆಯ ಕುಂದಾಪುರ ಗುಜ್ಜಾಡಿ ಇಲ್ಲಿನ ತೀರಾ ಗ್ರಾಮೀಣ ಪ್ರದೇಶದÀಲ್ಲಿ ದಿ| ಶಾಬುದ್ದೀನ್ ಅಬ್ದುಲ್ ಖಾದಿರ್ ಮಾಸ್ತರ್ ಅವರಿಂದ ಅಸ್ತಿತ್ವಕ್ಕೆ ಬಂದಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಶತಮಾನೋತ್ಸವ ಸಂಭ್ರಮ. ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಕೂಡ ಅವರೇ ಆಗಿದ್ದು, 1919ರಲ್ಲಿ ಆರಂಭಿಸಿದ ಈ ಜ್ಞಾನದೇಗುಲ ದಿ| ಯು.ಅನಂತಮಯ್ಯ ಈ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಮೊದಲಿಗೆ ಖಾಸಗಿ ಜಾಗವೊಂದರಲ್ಲಿ ಪುಟ್ಟ ಕೊಠಡಿಯಲ್ಲಿ ಆರಂಭಗೊಂಡ ಈ ಶಾಲೆ ಬಳಿಕ ಮ್ಯಾಕ್ಸಿಂ ಮಿರಾಂದರ್ ಎಂಬುವರ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ಬಳಿಕ ಸುಮಾರು ಐದು ದಶಕಗಳ ಹಿಂದೆ ಈಗಿರುವ ಸರಕಾರಿ ಜಾಗದಲ್ಲಿ ಈ ಶಾಲೆಯು ಪಾಠ ಬೋಧನೆ ಮುಂದುವರೆಸಿತು.1980-90ರ ದಶಕದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ ಒಂದು ಸಾವಿರ ಮಂದಿ ವಿದ್ಯಾಥಿರ್üಗಳು ವಿದ್ಯಾರ್ಜನೆಗೈದ ಇತಿಹಾಸ ಇದೆ.

ಹಿಂದೆ ಈ ಶಾಲೆಗೆ ಕಂಚುಗೋಡು, ತ್ರಾಸಿ, ಗಂಗೊಳ್ಳಿ, ಮುಳ್ಳಿಕಟ್ಟೆ, ಗುಜ್ಜಾಡಿ, ನಾಯಕವಾಡಿ, ಬೆಣ್ಗೆರೆ, ಕಳಿಹಿತ್ಲು ಮತ್ತಿತರ ಕಡೆಗಳಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು. ಪ್ರಸ್ತುತ ಈ ಶಾಲೆಯಲ್ಲಿ 1ರಿಂದ 8ರವರೆಗಿನ ತರಗತಿಯಲ್ಲಿ 229 ಮಂದಿ ಹಾಗೂ ಪೂರ್ವ ಪ್ರಾಥಮಿಕ (ಎಲ್‍ಕೆಜಿ, ಯುಕೆಜಿ)ದಲ್ಲಿ 58 ಮಕ್ಕಳು ಸಹಿತ ಒಟ್ಟು 287 ಮಂದಿ ವಿದ್ಯಾಥಿರ್üಗಳು ವ್ಯಾಸಾಂಗ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಆಂಗ್ಲಮಾಧ್ಯಮ ವಿಭಾಗ ಕೂಡ ಅಳವಡಿಸಿ ಕೊಂಡಿದ್ದು, ಇದಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದ್ಯ ಮುಖ್ಯ ಶಿಕ್ಷಕ ಸಹಿತ 9 ಮಂದಿ ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕಿಯರಿದ್ದಾರೆ. ರಾಮನಾಥ್ ಚಿತ್ತಾಲ್ ಎಸ್‍ಡಿಎಂಸಿ ಅಧ್ಯಕ್ಷರಾಗಿದ್ದು ಉಮೇಶ್ ಎಚ್. ಮೇಸ್ತ್ರು ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ.

ಮುಂಬಯಿನ ಯುವೋದ್ಯಮಿ ಎನ್.ಟಿ ಪೂಜಾರಿ, ಶೇಷಯ್ಯ ಕೋತ್ವಾಲ್, ಪದ್ಮನಾಭ ಕೋತ್ವಾಲ್, ಗಣಪತಿ ಮೇಸ್ತ, ದಯಾಕರ ಮೇಸ್ತ, ಲಂಡನ್‍ನಲ್ಲಿ ವೈದ್ಯರಾಗಿರುವ ಡಾ| ಪ್ರಭಾಕರ ಮೇಸ್ತ, ಡಾ| ಅರುಣ್ ಕುಮಾರ್ ಜಿ., ಇತಿಹಾಸತಜ್ಞ ಡಾ| ವಸಂತ ಮಾದವ ಕೊಡಂಚ, ಸಿಂಡಿಕೇಟ್ ಬ್ಯಾಂಕ್ ಎಜಿಎಂ ಗಣಪತಿ ಶೇರುಗಾರ್, ನಟ ಚಂದ್ರಕಾಂತ್ ಕೊಡಪಾಡಿ, ಕುಂದಾಪುರ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಮಂಜು ನಾಯ್ಕ, ಕುಂದಾಪುರ ತಾಲೂಕು ಸಮಿತಿ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೇಸ್ತ ಸೇರಿದಂತೆ ಹಲವು ಮಂದಿ ಸಾದಕರು ಈ ಶಾಲೆಯಲ್ಲಿ ಕಲಿತಿದ್ದಾರೆ.

ಗಣಪತಿ ಮೇಸ್ತ ಸಹೋದರರು, ಪ್ರಶಾಂತ್ ಹನಿವಲ್, ಶಾಂತೆರಾಜ್ ಕೆ, ಎನ್.ಟಿ ಪೂಜಾರಿ, ಗೋಪಾಲ ಎಸ್. ಪುತ್ರನ್, ದುಬಾಯಿ ಉದ್ಯಮಿ ದಿ| ಕೊಂಚಾಡಿ ಗಣಪತಿ ಶೆಣೈ ಟ್ರಸ್ಟ್‍ನಿಂದ ಶಾಲೆಯ ಕಟ್ಟಡ ನವೀಕರಣ ಗೊಂಡಿದ್ದು ಐಶ್ವರ್ಯ ಡಿ.ಮೇಸ್ತ ಶಾಲಾ ವಾಹನ ಒದಗಿಸಿ ತಮ್ಮ ಶಿಕಣಾರ್ಜನಾ ಸಂಸ್ಥೆಯ ಋಣ ಪೂರೈಸಿದ್ದಾರೆ. ಸ್ಮಾರ್ಟ್ ಕ್ಲಾಸ್ ಅಗತ್ಯವಿದ್ದು ಕಂಪ್ಯೂಟರ್ ಲ್ಯಾಬ್, ಗ್ರೀನ್‍ಬೋರ್ಡ್, ಶಿಕ್ಷಕರ ಕೊಠಡಿಗಳ ಸಹಿತ ಅನೇಕ ಬೇಡಿಕೆಗಳಿವೆ.

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆ ಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕಷ್ಟದ ದಿನಗಳಲ್ಲಿ ಕಲಿತ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನನ್ನ ಈವರೆಗಿನ ಬದುಕಿನ ಪಯಣದ ಆರಂಭದ ಮೆಟ್ಟಿಲು ಈ ಶಾಲೆ ಎನ್ನುವುದೇ ಹೆಮ್ಮೆ. ವಿದ್ಯಾಥಿರ್üಯಾಗಿದ್ದಾಗ ಕೃಷಿ ಮಂತ್ರಿಯಾಗಿದ್ದೆ. ಈ ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರ ಮೇಲಿದೆ ಎಂದು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದ್ದಾರೆ. ಜನವರಿ ಕೊನೆಯಲ್ಲಿ ಶತಮಾನೋತ್ಸವ ಸಂಭ್ರಮಿಸಲಾಗುವುದು. ಶಾಲಾಭಿವೃದ್ಧಿಯಲ್ಲಿ ಸರಕಾರದ ಜತೆಗೆ ಊರವರು, ಪೆÇೀಷಕರು, ದಾನಿಗಳು, ಎಸ್‍ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದ ನೆರವು ಹಳೆ ವಿದ್ಯಾಥಿರ್üಗಳು, ಊರವರ ಸಹಕಾರ ಅಗತ್ಯವಿದೆ ಎಂದು ಮುಖ್ಯ ಶಿಕ್ಷಕ ಆನಂದ ಜಿ. ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here