Thursday 18th, April 2024
canara news

ಹಿರಿಯರ ವಿಭಾಗದಲ್ಲಿ ನÀಡಿಗೆ ಸಾಧನೆಯೆಡೆಗೆ ಸಾಗಿ ಬಂದ ಕೆ.ಸದಾನಂದ ಪ್ರಭು

Published On : 28 Jan 2020   |  Reported By : Rons Bantwal


ಮುಂಬಯಿ, ಜ.23: ಪ್ರಯತ್ನ ಪಟ್ಟರೆಏನನ್ನೂ ಸಾಧಿಸಬಹುದು.ಅದುಚಿಕ್ಕದಾಗಿರಲಿ ಅಥವಾ ದೊಡ್ಡದೇ ಇರಲಿ, ಅದನ್ನು ಉಪೇಕ್ಷಿಸದೆ ಮನಸಿಟ್ಟು ವ್ಯವಸ್ಥಿತವಾಗಿ ಮಾಡಬೇಕಾಗಿದೆ. ಅದಕ್ಕೆ ಸಾಕಷ್ಟು ಸಮಯ, ಸತತ ಪ್ರಯತ್ನ ಮತ್ತು ಪ್ರೇರಣೆಯಅಗತ್ಯವಿದೆ. ಏಕಾಗ್ರತೆ, ಶ್ರಮ, ಸಾಧನೆ ಮೈಗೂಡಿರಬೇಕು. ಹಾಗೆಯೇ ಕಳೆದ ಹದಿನೆಂಟು ವರುಷಗಳ ನಿರಂತರ ಶ್ರಮ-ಸಾಧನೆಗಳಿಂದ ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸ ತೊಡಗಿ, ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆಯುತ್ತಾ, ರಾಷ್ಟೀಯ ಹಾಗೂ ಅಂತರ್ ರಾಷ್ಟೀಯ ಸ್ಪರ್ಧಾಕೂಟಗಳಲ್ಲಿ ಮಿಂಚತೊಡಗಿದ ಮಂಗಳೂರಿನ ಕೆ.ಸದಾನಂದ ಪ್ರಭುರವರ ಹೆಸರು ಇದೀಗ ಚಿರಪರಿಚಿತ.

ಮಂಗಳೂರಿನ ಮಣ್ಣಗುಡ್ಡ ನಿವಾಸಿಯಾಗಿರುವ ಶ್ರೀಯುತರು 1957 ಜೂನ್ 27 ರಂದು ಜನಿಸಿದ್ದು, ನಗರದಕೆನರಾ ಹೈಸ್ಕೂಲಿನಲ್ಲಿ ಪ್ರಾಥಮಿಕ ಹಾಗೂ ನವಭಾರತರಾತ್ರಿ ಶಾಲೆಯಲ್ಲಿತನ್ನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರೈಸಿರುವರು.ಪ್ರಸ್ತುತ ಬೇಕರಿ ವ್ಯವಹಾರ ನಡೆಸುತ್ತಿರುವರು.

ಸ್ಟೈಲಿಷ್ ವಾಕ್
ಪ್ರಭುಅವರದು ಸ್ಟೈಲಿಷ್ ವಾಕ್, ಮಂಗಳಾ ಸ್ಟೇಡಿಯಂನಲ್ಲಿಅವರು ನಡೆಯೋದನ್ನು ನೋಡೋದೇಚೆಂದ.ರಾಷ್ಟ್ರ ಮಟ್ಟದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ನಡಿಗೆಯ ಕೆಲವೊಂದು ಸ್ಟೈಲ್‍ಗಳನ್ನು ಕಲಿತುಕೊಂಡರು.ಟಿವಿಯಲ್ಲಿ ವೀಕ್ಷಿಸಿ ಅದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡರು.

ರಾಷ್ಟೀಯ ಮಟ್ಟದಲ್ಲಿ ನಡೆದಕೂಟವೊಂದರಲ್ಲಿಇವರ ನಡಿಗೆ ಮೋಡಿಗೆ ನೆರೆದಕ್ರೀಢಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು.ಅಂತರಾಷ್ಟ್ರೀಯ ಮಟ್ಟದ ವಾಕರ್ಗೆಇರುವಎಲ್ಲಾರೀತಿಯ ನಡಿಗೆ ಸ್ಷೈಲ್ ಗಳು ಸದಾನಂದರಿಗೆ ಈಗ ಕರಗತ.ಅಚ್ಚರಿಎಂದರೆ, ಸದಾನಂದರುಅಭ್ಯಾಸ ಮಾಡುವುದು ಬರಿಗಾಲಲ್ಲಿ, ಬಿರುಬಿಸಿಲಲ್ಲಿ, ಸ್ಪರ್ಧೆಗಳು ಬಿಸಿಲಲ್ಲೇ ನಡೆಯುವುದರಿಂದಅದಕ್ಕೆ ಹೊಂದಿಕೆಯಾಗುವಂತೆ ಈ ಅಭ್ಯಾಸ ಮಾಡುತ್ತಿದ್ದಾರೆ.

ಸದಾನಂದ ಪ್ರಭುರಇತ್ತೀಚೆಗಿನ ಸಾಧನೆ:
* ಬಿಜಾಪುರದಲ್ಲಿ 12-11-2009ರಂದು ನಡೆದಕ್ರೀಡಾಕೂಟದಲ್ಲಿ 10,000 ಮೀಟರ್‍ಓಟದಲ್ಲಿಚಿನ್ನದ ಪದಕ, 5000 ಮೀಟರ್ ನಡಿಗೆಯಲ್ಲಿ ಬೆಳ್ಳಿಯ ಪದಕ, 5000 ಮೀ. ನಲ್ಲಿ ಕಂಚಿನ ಪದಕದೊಂದಿಗೆರಾಷ್ಟ್ರ ಮಟ್ಟಕ್ಕೆ ಆಯ್ಕೆ.

* ಮಹಾರಾಷ್ಟ್ರದಲ್ಲಿ ನಡೆದರಾಷ್ಟ್ರಮಟ್ಟದ 15-2-2010ರಂದು ನಡೆದಕ್ರೀಡಾಕೂಟದಲ್ಲಿ 5000ಸಾವಿರ ಮೀಟರ್ ನಡಿಗೆ ಸ್ಫರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ.

*2010ರ ಡಿಸೆಂಬರ್ 12ರಂದು ಮಲೇಶಿಯಾದ ಕೌಲಲಂಪುರದಲ್ಲಿ ನಡೆದ ಏಷ್ಯಾ ಮಾಸ್ಟರ್ಸ್ ರೋಡ್‍ಜೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ 5ನೇ ಸ್ಥಾನ.

* 28-29ರ ಜುಲೈ2012ರ ಶ್ರೀಲಂಕಾದ ಸುಜಕಾದಾಸ್ ಸ್ಟೇಡಿಯಂ ಕೊಲೆಂಬೋದಲ್ಲಿ ನಡೆದ ಓಪನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ನಡಿಗೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

* ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಸದಾನಂದ ಪ್ರಭುರವರಿಗೆ ನವೆಂಬರ್ 1,2012ರಂದು ಜಿಲ್ಲಾಮಟ್ಟದರಾಜ್ಯೋತ್ಸವ ಪ್ರಶಸ್ತಿ ವಿಶೇಷ ಪುರಸ್ಕಾರ ಪ್ರಶಸ್ತಿ ಪತ್ರ ನೀಡಿಗೌರವಿಸಲಾಗಿದೆ.

* 2015 ಮಾರ್ಚ್‍ನಲ್ಲಿ ಥಾಯಿಲ್ಯಾಂಡ್‍ನಲ್ಲಿ ಥಾಯ್ವೆಟರನ್ಸ್ ಅಥ್ಲೆಟಿಕ್ ಆಶ್ರಯದಲ್ಲಿ ಮಾ.6 ರಿಂದ 8ರ ವರೆಗೆ ನಡೆದಥಾಯ್ಲೆಂಡ್ ಓಪನ್ ಮಾಸ್ಟರ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ 30-43 ನಿಮಿಷಗಳಲ್ಲಿ ಕ್ರಮಿಸುವುದರೊಂದಿಗೆ ತೃತೀಯ ಸ್ಥಾನÀದೊಂದಿಗೆ ಕಂಚಿನ ಪದಕ.

*8-9 ಜನವರಿ 2011ರಲ್ಲಿ ತಮಿಳುನಾಡಿನಲ್ಲಿ ಅಂತರಾಜ್ಯ ಮಟ್ಟದಲ್ಲಿ ನಡೆದ ಫಸ್ಟ್ ಸೌತ್‍ಝೊನ್ ಅಥ್ಲೆಟಿಕ್ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನÀÀ.

* 13-11-2016 ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿಚಿನ್ನದ ಪದಕ.

* 24-9-2017 ದಕ್ಷಿಣಕನ್ನಡಜಿಲ್ಲಾ ಮಟ್ಟದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನÀ.

* 3-10-2017, ಇಂಟರ್ ಡಿಸ್ಟ್ರಿಕ್ ಮಟ್ಟದಉಡುಪಿ ಅಜ್ಜರ್‍ಕಾಡುಕ್ರೀಡಾಂಗಣದಲ್ಲಿ ನಡೆದ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

* 23 ಮತ್ತು 24 ಡಿಸೆಂಬರ್ 2017 ರಂದು ನಡೆದ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಮಾಸ್ಟರ್‍ಅತ್ಲೆಟಿಕ್ ಅಸೋಸಿಯೇಶನ್ ಇವರು ಹೊಸಕೊಟೆ ಸ್ಟೇಡಿಯಂನಲ್ಲಿ ಆಯೋಜಿಸಿದ 38ನೇ ಸ್ಟೇಟ್ ಮಾಸ್ಟರ್ಸ್‍ಅತ್ಲೆಟಿಕ್ ಮೀಟ್ 2017-18 ಇದರಲ್ಲಿ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 

* ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್‍ಅತ್ಲೆಟಿಕ್ ಬೆಂಗಳೂರಿನಲ್ಲಿ ಕಂಠೀರವಕ್ರೀಡಾಂಗಣದಲ್ಲಿ 2018 ಜನವರಿ 22-25ರ ತನಕ ನಡೆದ 5000ಸಾವಿರ ಮೀಟರ್ ನಡಿಗೆ ಸ್ಪರ್ಧೆಯಲ್ಲಿತೃತೀಯ ಸ್ಥಾನ.

* 15-16 ನವೆಂಬರ್ 2019ರಂದು ನಡೆದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿಜರುಗಿದ 40ನೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 5,000 ಸಾವಿರ ಮೀಟರ್ ನಡಿಗೆಯಲ್ಲಿ ಚಿನ್ನದ ಪದಕ ಪಡೆದು 2020ರ ಮಣಿಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here