Friday 29th, March 2024
canara news

‘ಶುಭದಾ ಸ್ಕೌಟ್ಸ್‍ಟ್ರೂಪ್’

Published On : 30 Jan 2020   |  Reported By : Rons Bantwal


ಕಿರಿಮಂಜೇಶ್ವರ : ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯ‘ಶುಭದಾ ಸ್ಕೌಟ್ಸ್‍ಟ್ರೂಪ್’ ಮತ್ತು ಗ್ರಾಮ ಪಂಚಾಯತ್ ನಾವುಂದ ಸಹಭಾಗಿತ್ವದಲ್ಲಿ ನಾವುಂದ ಸಮುದ್ರ ಕಿನಾರೆಯಿಂದ ಶುಭದಾ ಶಾಲೆಯ ಸಮುದ್ರ ಕಿನಾರೆಯ ತನಕ ಕಸಕಡ್ಡಿ ಪ್ಲಾಸ್ಟಿಕ್À ಮತ್ತು ಅನಾವಶ್ಯಕ ತ್ಯಾಜ್ಯಗಳನ್ನು ಆರಿಸಿ ಪರಿಸರವನ್ನು ಸ್ವಚ್ಚಗೊಳಿಸಿ ಊರ ಜನರ ,ಪಂಚಾಯತ್ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

ಈ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ಎನ್.ಕೆ.ಬಿಲ್ಲವ ಗ್ರಾಮ ಪಂಚಾಯತ್‍ಅಧ್ಯಕ್ಷರಾದ ನರಸಿಂಹ ದೇವಾಡಿಗ ಶಾಲಾ ಸಲಹಾ ಸಮಿತಿ ಸದಸ್ಯರಾದ ರಾಜೀವ ಶೆಟ್ಟಿ ಹಾಗೂ ನಾಗರಿಕರಾದ ಮೊಗವೀರ ಮಹಾಜನ್ ಸಂಘ, ಮುಂಬಯಿ ನಾಣು ಚಂದನ್ ,ಸಾಯಿರಾಮ್ ಮೆಂಡನ್ ಸಲೂನ್ ಎಂಟರ್ ಪ್ರೈಸಸ್ ಮುಂಬಯಿ, ಹಂಝ, ಮತ್ತು ಸತೀಶ್ ಮಧ್ಯಸ್ಥ ಹಾಗೂ ಸ್ಕೌಟ್ಸ್ ಶಿಕ್ಷಕ ರತ್ನಕುಮಾರ್ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು. ಆಸುಪಾಸಿನಲ್ಲಿರುವ ಮನೆಗಳಿಗೆ ವಿದ್ಯಾರ್ಥಿಗಳು ತೆರಳಿ ಅವರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರದ ಮಹತ್ವವನ್ನು ತಿಳಿಸಿ ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ಬೇಕಾ ಬಿಟ್ಟಿ ಎಸೆಯದಂತೆ ಮನವರಿಕೆ ಮಾಡಲಾಯಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here