Saturday 20th, April 2024
canara news

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಜೀರ್ಣೋದ್ಧಾರದ ವಿಜ್ಞಾಪನಾಪತ್ರ ಬಿಡುಗಡೆ

Published On : 31 Jan 2020   |  Reported By : Rons Bantwal


ಮೂಲಸ್ಥಾನದ ಉದ್ಧಾರದಿಂದ ಜೀವನೋದ್ಧಾರ ಸಾಧ್ಯ : ಪುತ್ತಿಗೆ ಸುಗುಣೇಂದ್ರಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ. ಜ.25: ಮಾತೃಭಾಷೆ ಮತ್ತು ಜನ್ಮಭೂಮಿ ಪ್ರೀತಿಸುವ ಹೃದಯಶ್ರೀಮಂತಿಕೆ ತುಳುವರ ಸದ್ಗುಣವೇ ನಾವುಗಳು ಎಲ್ಲೆಲ್ಲಿ ಹೋದರೂ ನಮ್ಮ ಅಸ್ತಿತ್ವವನ್ನು ಮಾತೃಸಂಸ್ಕೃತಿ ಮೂಲಕ ತೋರ್ಪಡಿಸುತ್ತೇವೆ. ಅಂತೆಯೇ ತುಳುವರ ಭಾಷೆ ಮತ್ತು ಮೂಲಸ್ಥಾನ (ದೇವಸ್ಥಾನ) ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದಿಲ್ಲಿ ನಮ್ಮೂರ ಹೆಜಮಾಡಿ ಗ್ರಾಮಸ್ಥರು ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡಿದ್ದು ತುಂಬಾ ಪುಣ್ಯಾಧಿ ಕಾಯಕÀವಾಗಿದೆ. ಯಾಕೆಂದರೆ ಮೂಲಸ್ಥಾನ ಬಹಳ ಮುಖ್ಯವಾದುದು. ತಾಯಿ-ತಂದೆ, ಮೂಲಸ್ಥಾನ ಪ್ರೀತಿಸಿದರೆ ನಮಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಹೆಜಮಾಡಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಅವರಿಗೆ ಊರಿನ ಬಗೆಗಿನ ಅಭಿಮಾನ ತೊರಿಸುತ್ತದೆ. ಇಂತಹ ಅಭಿಮಾನವನ್ನು ನಾವು ಎಲ್ಲಿ ಹೋದರು ಇಟ್ಟು ಕೊಳ್ಳಬೇಕು. ಮುಂಬಯಿಯಲ್ಲಿ ಹಲವು ಕೀರ್ತಿವಂತರು, ಯಶಸ್ವಿ ಉದ್ಯಮಿಗಳಿ ಈ ಧಾರ್ಮಿಕ ಕಾರ್ಯಕ್ಕೆ ತಮ್ಮ ಸಹಕಾರ ನೀಡಿ ಸುಗಮ ರೀತಿಯಲ್ಲಿ ಕಾರ್ಯ ನೇರೆಸುವಲ್ಲಿ ಸಹಾಯಕರಾಗಿರಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಇದರ ಜೀರ್ಣೋದ್ಧಾರದ ವಿಜ್ಞಾಪನಾಪತ್ರ ಬಿಡುಗಡೆ ಗೊಳಿಸಿ ಪುತ್ತಿಗೆ ಸುಗುಣೇಂದ್ರ ತೀರ್ಥರು ತಿಳಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

ಜೀರ್ಣೋದ್ಧಾರ ಹೆಜಮಾಡಿ (ಕೇಂದ್ರ) ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪುಣೆ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಅತಿಥಿs ಅಭ್ಯಾಗತರಾಗಿ ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ, ಸೌತ್ ಇಂಡಿಯನ್ ಫೆಡರೇಶನ್ ವಸಾಯಿ ತಾಲೂಕ ಇದರ ಅಧ್ಯಕ್ಷ ಡಾ| ವಿರಾರ್ ಶಂಕರ ಬಿ.ಶೆಟ್ಟಿ, ಸಮಾಜ ಸೇವಕರುಗಳಾದ ಸದಾಶಿವ ಎಸ್.ಶೆಟ್ಟಿ, ಅಂಗಡಿಗುತ್ತು ನರಸಿಂಹ ಶೆಟ್ಟಿ (ಮುಂಡ್ಕೂರು), ಜಿ.ಕೆ ಶೆಟ್ಟಿ ಮುಂಬಯಿ ಸÀಮಿತಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ವೇದಿಕೆಯಲ್ಲಿದ್ದರು. ಅತಿಥಿsಗಳು ಸಂದರ್ಭೋಚಿತವಾಗಿ ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾರ ಶೀಘ್ರಗತಿಯ ಲ್ಲಿ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿರಾರ್ ಶಂಕರ್ ಮಾತನಾಡಿ ಗ್ರಾಮದಲ್ಲಿ ಯಾವ ದೇವಸ್ಥಾನವು ಅಜೀರ್ಣೋದ್ದಾರ ವ್ಯವಸ್ಥೆಯಲ್ಲ್ಲಿ ಇರುತ್ತದೆಯೋ ಆ ಗ್ರಾಮದ ಅಭಿವೃದ್ಧಿಯೂ ಕುಂಠಿತವಾಗಿರುತ್ತದೆ. ದೇವಸ್ಥಾನಗಳಂತಹ ಧಾರ್ಮಿಕ, ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರ ಭಕ್ತರ ಪರಮ ಧರ್ಮವಾಗಿದೆ. ಇಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂತೋಷದ ವಿಚಾರ. ದೇವಸ್ಥಾನದ ಜೀರ್ಣೋದ್ಧಾರದೊಂದಿಗೆ ಇಡೀ ಹೆಜಮಾಡಿ ಗ್ರಾಮದ ಉದ್ಧಾರವಾಗಲಿ ಎಂದು ಶುಭಾರೈಸಿದರು.

ಹೆಜಮಾಡಿ ಗ್ರಾಮಸ್ಥರಿಗೆ ಧಾರ್ಮಿಕ ಸೇವೆಯನ್ನು ಮಾಡುವ ಅವಕಾಶ ದೊರಕಿದ್ದು, ಮೂಲಸ್ಥಾನ ಜೀರ್ಣೊದ್ಧಾರ ಕಾರ್ಯಕ್ರಮಕ್ಕೆ ನಾವೆಲ್ಲರೂ ಒಗ್ಗಾಟ್ಟಗಿ ಸೇರಿ ಈ ಸೇವೆಯನ್ನು ಮಾಡೋಣ ಹಾಗೂ ಪುಣ್ಯ ಕೆಲಸ ಮಾಡುವುದರಿಂದ ಒಳ್ಳೆಯ ಫಲ ಸಿಗುವುದು. ಇದಕ್ಕೆಲ್ಲಾ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿರಲಿ ಎಂದು ಜಯಂತ ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿ ಉಪಸ್ಥಿತ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಜೀರ್ಣೋದ್ಧಾರ ಹೆಜಮಾಡಿ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಎಸ್ ರಘುಪತಿ ರಾವ್, ಬೆಂಗಳೂರು ಸಮಿತಿ ಅಧ್ಯಕ್ಷ ಪಿ.ಸುಬ್ರಹ್ಮಣ್ಯ ಬಾಗಿಲ್ತಾಯ, ಮುಂಬಯಿ ಸÀಮಿತಿ ಅಧ್ಯಕ್ಷ ಪುಷ್ಪರಾಜ್ ಎಸ್.ಶೆಟ್ಟಿ, ಉಪಾಧ್ಯಕ್ಷರುಗಳಾದ ಸಿಎ| ಅಶ್ವಜಿತ್ ಹೆಜ್ಮಾಡಿ, ದಿನೇಶ್ ಶೆಟ್ಟಿ ಕಣ್ಣಂಗಾರ್, ಯದುವೀರ್ ಪುತ್ರನ್, ಮೋಹನ್‍ದಾಸ್ ಹೆಜಮಾಡಿ, ಊರ ಸಮಿತಿಯ ಸುಧಾಕರ ಕರ್ಕೇರ, ಪಾಂಡುರಂಗ ಕರ್ಕೇರ, ರವೀಂದ್ರ ಹೆಜಮಾಡಿ, ಜಯಂತ್ ಪುತ್ರನ್, ಸಚಿನ್ ಜಿ.ನಾಯಕ್, ಧರ್ಮೇಶ್ ಎಸ್.ಸಾಲ್ಯಾನ್, ಕೇಶವ ಕೋಟ್ಯಾನ್, ಡಾ| ಭರತ್ ಕುಮಾರ್ ಪೆÇಲಿಪು, ಡಾ| ಈಶ್ವರ ಅಲೆವೂರು, ಮಹೇಶ್ ಕಾರ್ಕಳ, ಜಗದೀಶ್ ಜೊಗೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.

ಮುಂಬಯಿ ಸÀಮಿತಿ ಉಪಾಧ್ಯಕ್ಷೆ ಸುಮಂಗಲ ಶೆಟ್ಟಿ, ಪ್ರಾರ್ಥನೆಯನ್ನಾಡಿದರು. ಜಿನರಾಜ್ ಬಂಗೇರ ಸ್ವಾಗತಿಸಿದ ರು. ಕೋಶಾಧಿಕಾರಿ ಹರೀಶ್ ಹೆಜ್ಮಾಡಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ಎಸ್.ದಿವಾಕರ್ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here