Friday 19th, April 2024
canara news

ಕಂಬಳ ಕೋಣಗಳ ಓಟಗಾರ ಶ್ರೀನಿವಾಸ ಗೌಡರಿಗೆ ಹೆಗ್ಗಡೆಯವರಿಂದ ಸನ್ಮಾನ

Published On : 25 Feb 2020   |  Reported By : Rons Bantwal


ಕಂಬಳಕ್ಕೂ ಒಂದುಯೋಗ ಬಂದಿದೆ : ಡಿ.ವೀರೇಂದ್ರ ಹೆಗ್ಗಡೆ

ಮುಂಬಯಿ (ಉಜಿರೆ), ಫೆ.24: ಸೋಲು-ಗೆಲುವಿನ ಬಗ್ಯೆಚಿಂತಿಸದೆ ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಕಂಬಳ ಕ್ರೀಡೆಗೂ ಒಳ್ಳೆಯ ಕಾಲ ಹಾಗೂ ಒಂದುಯೋಗ ಬಂದಿದೆಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಹೆಗ್ಗಡೆಯವರು ಸೋಮವಾರ ಧರ್ಮಸ್ಥಳದಲ್ಲಿ ತಮ್ಮ ನಿವಾಸದಲ್ಲಿಕಂಬಳಗಳ ಕೋಣಗಳ ಓಟದಲ್ಲಿ ದಾಖಲೆ ನಿರ್ಮಿಸಿದಮೂಡಬಿದ್ರೆ ಬಳಿ ಅಶ್ವತ್ಥಪುರ ನಿವಾಸಿ ಶ್ರೀನಿವಾಸ ಗೌಡಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಗೆಲುವು ಬಂದಾಗ ಹಿಗ್ಗದೆ, ಸೋಲು ಬಂದಾಗಕುಗ್ಗದೆ ಸಮತೋಲನದಲ್ಲಿರಬೇಕು.ಸ್ಥಿಮಿತ ಕಳೆದು ಕೊಳ್ಳಬಾರದು. ಸಭೆ-ಸಮಾರಂಭಗಳಿಗೆ ಹೋಗುವಾಗ ಪ್ಯಾಂಟು ಹಾಕಬಾರದು.ಬಿಳಿ ಧೋತಿ ಉಡಬೇಕು ಎಂದು ಹೊಸ ವೇಸ್ಟಿಯನ್ನು ಉಡುಗೊರೆಯಾಗಿ ನೀಡಿದರು.

ಮಾಜಿ ಸಚಿವ ಕೆ.ಅಭಯಚಂದ್ರಜೈನ್, ಕಂಬಳ ಅಕಾಡೆಮಿ ಸಂಚಾಲಕ ಕೆ ಗುಣಪಾಲ ಕಡಂಬ, ಎಸ್.ಡಿ. ಸಂಪತ್ ಸಾಮ್ಯಾಜ್ಯ ಶಿರ್ತಾಡಿ, ಕೋಣಗಳ ಮಾಲಕ ಸತೀಶ್ಚಂದ್ರ ಸಾಲಿಯಾನ್‍ಇರುವೈಲ್, ಕಂಬಳ ಅಕಾಡೆಮಿ ನಿರ್ದೇಶಕರುಗಳಾದ ಜ್ವಾಲಾ ಪ್ರಸಾದ್ ಈದು, ಸುಭಾಶ್ಚಂದ್ರ ಚೌಟ, ಮೂಡಬಿದ್ರೆ, ಮಂಗಳೂರು ಎ.ಪಿ.ಎಂ.ಸಿ.ಅಧ್ಯಕ್ಷ ಪ್ರವೀಣಕುಮಾರ್‍ಜೈನ್, ಚಿಂತನ್‍ಲೋಬೊ, ತರಬೇತುದಾರ ದಿನೇಶ್ ಅಳಿಯೂರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here