Wednesday 24th, April 2024
canara news

ರುಡ್‍ಸೆಟ್ ಸಂಸ್ಥೆಯ ವಾರ್ಷಿಕ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಗಾರದ ಸಮಾರೋಪ

Published On : 01 Mar 2020   |  Reported By : Rons Bantwal


ಮಹಿಳೆಯರು ಯಾರೂ ನಿರುದ್ಯೋಗಿಗಳಲ್ಲ : ಡಾ| ವೀರೇಂದ್ರ ಹೆಗ್ಗಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಉಜಿರೆ (ಧರ್ಮಸ್ಥಳ), ಫೆ.28: ಸದ್ಯ ನಮ್ಮಲ್ಲಿ ಸುಶಿಕ್ಷಿತ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು ಬಹುತೇಕರು ವೃತ್ತಿಪರರಾಗಿದ್ದರೆ ಅನೇಕರು ಸ್ವಉದ್ಯಮಿಗಳಾಗಿದ್ದಾದೆ. ಮಹಿಳೆಯರು ದಿನಪೂರ್ತಿ ಪರಿವಾರದ ಕೆಲಸದಲ್ಲೂ ಬ್ಯೂಸಿ ಆಗಿದ್ದಾರೆ. ಆದುದರಿಂದ ಮಹಿಳೆಯರು ಯಾರೂ ನಿರುದ್ಯೋಗಿಗಳಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ಬೀಡುನಲ್ಲಿ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ರುಡ್‍ಸೆಟ್ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ಸ್ವ ಉದ್ಯೋಗ (ಉದ್ಯಮ ನಿರ್ವಹಣಾ) ಕಾರ್ಯಗಾರದ ಸಮಾರೋಪವನ್ನು ಉದ್ದೇಶಿಸಿ, ಶಿಬಿರಾಥಿರ್üಗಳಿಗೆ ಪ್ರಮಾಣಪತ್ರ ಪ್ರದಾನಿಸಿ, ಶಿವರಾಮ ಭಂಡಾರಿಮತ್ತಿತರರಿಗೆ ಗೌರವಿಸಿ ಡಾ| ಹೆಗ್ಗಡೆ ಮಾತನಾಡಿದರು.

ಒಂದು ಕಾಲದಲ್ಲಿ ಕೇಶ ಮುಂಡನ, ಕೂದಲು ಕತ್ತರಿಸುವುದು ಅನ್ನುವಂತಿದ್ದ ಈ ಕುಲವೃತ್ತಿ ಈ ಕಾಲಘಟ್ಟದಲ್ಲಿ ಇದು ಕೇಶ ವಿನ್ಯಾಸವಾಗಿ ಬದಲಾಗಿದೆ. ಇಂತಹ ಬದಲಾದ ಸನ್ನಿವೇಶದಲ್ಲಿ ಮಹಿಳೆಯರೂ ಸೆಕ್ಸಿಯಲ್ಲ ಲಕ್ಷಿ ್ಮೀ ಆಗಿ ಶೋಭಿಸುತ್ತಿದ್ದಾರೆ. ಇದನ್ನು ಜನತೆಯೇ ಬಯಸುತ್ತಿದ್ದಾತೆ ಮತ್ತು ಒಪ್ಪಿದ್ದಾರೆ. ಇಂದು ಜಾಗತೀಕರಣದ ಸಮಯದಲ್ಲಿ ಈ ವೃತ್ತಿ ಮಹತ್ವದ ಉದ್ಯಮಾವಾಗಿ ಬೆಳೆದಿದ್ದು ಇದರಿಂದ ಗಳಿಕೆ ಮತ್ತು ಅರಿವು ಕೂಡಾ ಅಧಿಕಗೊಳ್ಳುತ್ತದೆ. ಜೊತೆಜೊತೆಗೆ ಜನರ ನೆಮ್ಮದಿಗೆ ಪಾತ್ರವಾಗಿ ಕೇಶವಿನ್ಯಾಸಕರ ಒಲವು ನಿಮ್ಮತ್ತ ಆಕರ್ಷಿಸುವಂತಾಗಿದೆ ಎಂದು ಈ ಮಾಹಿತಿ ಕಾರ್ಯಗಾರ ಆಯೋಜಿಸಿ ಮತ್ತು ಶಿಬಿರಾಥಿರ್üಗಳನ್ನು ಡಾ| ಹೆಗ್ಗಡೆ ಅಭಿನಂದಿಸಿದರು.

ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮರ್ಥ ನಾಯಕತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕತ್ವದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಇವುಗಳ ಪ್ರಾಯೋಜಕತ್ವದಲ್ಲಿ ಕಾರ್ಯನಿರತ ಉಜಿರೆ ಇಲ್ಲಿನ ರುಡ್‍ಸೆಟ್ ಸಂಸ್ಥೆ ಆಯೋಜಿಸಿದ್ದ ಸ್ವಉದ್ಯೋಗ (ಉದ್ಯಮ ನಿರ್ವಹಣಾ) ಕಾರ್ಯಗಾರದಲ್ಲಿ ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಸಂಪನ್ಮೂಲವ್ಯಕ್ತಿ ಆಗಿದ್ದು ತನ್ನ ತಂಡದೊಂದಿಗೆ ಸೌಂದರ್ಯ ತರಭೇತಿ ನಿರ್ವಹಣೆ(ಬ್ಯೂಟಿ ಪಾರ್ಲರ್ ಮ್ಯಾನೇಜ್‍ಮೆಂಟ್ - ಆಲ್ ಇಂಡಿಯಾ ಬ್ಯಾಚ್) ಶಿಬಿರಾಥಿರ್üಗಳಿಗೆ ಎರಡು ದಿನಗಳ ತರಬೇತಿ ನೀಡಿ ಬ್ಯೂಟಿ ಪ್ಲಾನೇಟ್ ಮಂಗಳೂರು ಇದರ ಜಗದೀಶ್ ಸೋಮೇಶ್ವರ್ ಇವರನ್ನು ಸನ್ಮಾನಿಸಿದ್ದು, ನ್ಯಾಷನಲ್ ಡೈರಕ್ಟರ್ ಆರ್‍ಸೆಟ್ ಸಂತೋಷ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಳ್ವಾಸ್ ಕಾಲೇಜು ಮುಡಬಿದ್ರೆಯ ಪ್ರಾಚಾರ್ಯ ಶ್ರೀನಿವಾಸ ಪಿ.ಮತ್ತು ಥಿüಂಕ್‍ಸ್ಟ್ರೀಟ್ ಟೆಕ್ನಾಲಾಜೀಸ್ ಬೆಂಗಳೂರು ಸಂಸ್ಥೆಯ ನಿರ್ದೇಶಕ ಉದಯ ಬಿರ್ಜೆ ಬೆಂಗಳೂರು ಇವರು ಮಾರುಕಟ್ಟೆಯಲ್ಲಿನ ಡಿಜಿಟಲ್ ಟೆಕ್ನಾಲಜಿ ಉಪಯುಕ್ತತೆ ಬಗ್ಗೆ, ಅನಸೂಯ ಶೆಟ್ಟಿ, ಮತ್ತು ಹಿರಿಯ ತರಬೇತುದಾರ ಜೇಮ್ಸ್ ಅಬ್ರಹಾಂ, ಐಸ್ ಬ್ರೇಕಿಂಗ್ ಮೈಕ್ರೋ ಲ್ಯಾಬ್ ವಿಚಾರವಾಗಿ, ಕರ್ನಾಟಕ ಸರಕಾರದ ಆಥಿರ್üಕ ಸಲಹಾಗಾರ ಕೆ.ಸೂರ್ಯ ನಾರಾಯಣ ಅವರು ತೆರಿಗೆ ವಿಚಾರಿತ (ಆದಾಯ ತೆರಿಗೆ, ಸರಕುಗಳು ಮತ್ತು ಸೇವಾ ತೆರಿಗೆ-ಜಿಎಸ್‍ಟಿ, ಭವಿಷ್ಯನಿಧಿ ಬಗ್ಗೆ ಹಾಗೂ ಸೆಲೇಬ್ರ್ರಿಟಿಂಗ್ ಲೈಫ್ ಬೆಂಗಳೂರು ಸಂಸ್ಥೆಯ ಅಪರ್ಣಾ ಪಥಾಕ್ ಅವರು ತೆರಿಗೆ ವಿಚಾರಿತ (ಆದಾಯ ತೆರಿಗೆ, ಸರಕುಗಳು ಮತ್ತು ಸೇವಾ ತೆರಿಗೆ-ಜಿಎಸ್‍ಟಿ, ಭವಿಷ್ಯನಿಧಿ ಬಗ್ಗೆ ಹಾಗೂ ಕೆ.ವಿಜಯಾ ಅವರು ವೆಲ್‍ನೆಸ್ ಎಂಡ್ ಲೈಫ್‍ಸ್ಟೈಲ್ ಫೆÇ್ರಫೆಶನ್ ವಿಚಾರವಾಗಿ ತರಬೇತಿಯನ್ನಿತ್ತರು.

ಶಿವರಾಮ ಭಂಡಾರಿ ಮಾತನಾಡಿ ನನ್ನ ಸ್ವಾನುಭವಗಳೇ ನನ್ನ ಬದುಕು ರೂಪಿಸಲು ಸಹಕಾರಿಯಾಗಿವೆ. ಅನುಭವ ಅನ್ನುವುದು ಯಾವ ವಿಶ್ವವಿದ್ಯಾಲಯಗಳಲ್ಲೂ ಅಭ್ಯಾಸಿಸಲು ಸಾಧ್ಯವಾಗದು ಮತ್ತು ಅನುಭವದ ಮೂಲವು ಯಾವ ಪದಕೋಶದಲ್ಲೂ ಸಿಗದು. ಕಾರಣ ಅದು ಸ್ವಂತಿಕೆಯದ್ದೇ ಆಗಿರುತ್ತದೆ. ಹಸಿವಿನ ಜ್ವಾಲೆ ನಿವಾರಿಸಲು ಪ್ರಾಮಾಣಿಕವಾಗಿ ಶ್ರಮಿಸಿದರೂ ಸಾಧನೆ ಸಿದ್ಧಿಸಲಾಗುವುದು. ಮೊದಲಾಗಿ ನಾವು ಅವರಿವರು ಹೇಳುವುದನ್ನು ಕೇಳುವುದಕ್ಕಿತ ನಮ್ಮ ಸ್ವತಃದ ಆತ್ಮಹೇಳುವುದಕ್ಕೆ ಒಪ್ಪಿಸಿಕೊಂಡಾಗ ಯಶಸ್ಸು ಸುಲಭ ಸಾಧ್ಯವಾಗುವುದು. ಆದ್ದರಿಂದ ನೈಪುಣ್ಯತೆಗೆ ಅವಕಾಶ ಕಲ್ಪಿಸಿ ಆ ಮೂಲಕ ಸದೃಡರಾಗಿರಿ ಎಂದರು.

ನಮ್ರತೆ ಮತ್ತು ಸರಳ ಸಜ್ಜನಿಕೆ ಮನುಷ್ಯನನ್ನು ಮಾನಸಿಕವಾಗಿ ಶ್ರೀಮಂತ ಮಾಡಬಲ್ಲದು. ಶ್ರದ್ಧೆಯನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಉದ್ಯಮದ ಸಾಧೆನೆಯಾಗುವುದು. ಉದ್ಯಮ ಬೆಳೆದಾಗ ಜೀವನವೇ ಶ್ರೀಮಂತವಾಗಬಲ್ಲದು ಎಂದÀು ರುಡ್‍ಸೆಟ್‍ನ ಕಾರ್ಯನಿರ್ವಹಣಾ ನಿರ್ದೇಶಕ ಎಂ. ಜನಾರ್ದನ್ ನುಡಿದರು.

ರುಡ್‍ಸೆಟ್‍ನ ನಿರ್ದೇಶಕರುಗಳಾದ ಸಿ.ವಿನಯ ಕುಮಾರ್ (ಉಜಿರೆ), ಜಯಂತ್ ಗೋಂಗಡೆ (ಪುಣೆ), ಪೆÇ್ರ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ (ಉಜಿರೆ), ಶಶಿಕಲಾ ಸಾಲ್ಯಾನ್, ಕೃಷ್ಣ ಪೂಜಾರಿ, ಕಾಶ್ಮೀರ್ ಎಲ್.ಡಿಸೋಜಾ, ಸುರೇಶ್ ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದÀರು.

ಶಿವಾಸ್ ಪರಿವಾರದ ಶ್ವೇತಾ ಆರ್.ಭಂಡಾರಿ, ಮೆಲಿಸಾ ಡಿಕೋಸ್ಟಾ, ಮೊಹ್ಮದ್ ಇಲಿಯಾಸ್, ಜಾಗೃತಿ ಭಂಡಾರಿ, ಸುಧೀರ್ ಭಂಡಾರಿ, ಸ್ಮೀತಾ ಎಸ್.ಭಂಡಾರಿ, ದಿವಾಕರ್ ಭಂಡಾರಿ ಉಪಸ್ಥಿತರಿದ್ದು ಶಿವರಾಮ ಭಂಡಾರಿ ಅವರು ಕೀರ್ತಿಶಾಲಿಗರ (ಸೆಲೇಬ್ರ್ರಿಟೀ) ಕೇಶವಿನ್ಯಾಸದ ಸುಧಾರಿತ ವಿಧಾನಗಳು ಮತ್ತು ತಲೆಕೂದಲುಗಳ ಸಜ್ಜು ಗೊಳಿಸುವಿಕೆಯ ಬಗ್ಗೆ ತರಬೇತಿ ನೀಡಿ ಪ್ರಸ್ತುತ ಕೇಶ ವೃತ್ತೀಯ ಅವಿಷ್ಕಾರದ ಬಗ್ಗೆ ಮಾಹಿತಿ ನೀಡಿ ಆಧುನಿಕ ಕಾಲಘಟ್ಟದಲ್ಲಿ ಸುಧಾರಿತ ಕೇಶವಿನ್ಯಾಸ, ಮುಖಭಾವದ ಅಲಂಕರಣ, ಲಾವಣ್ಯತೆ, ಕೂದಲುಗಳ ವರ್ಣತೆ, ಉಗುರುಗಳ ಹೊಳಪು ಮಾಡುವ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಆಳವಾದ ಮಾಹಿತಿ ನೀಡಿದರು.

ಶ್ರೀ ಪ್ರಸಾದ್ ಪ್ರಾರ್ಥನೆಯನ್ನಾಡಿದರು. ಎಂ. ಜನಾರ್ದನ್ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಅತಿಥಿüಗಳನ್ನು ಪರಿಚಯಿಸಿದರು. ಶ್ರೀಮತಿ ಅನಸೂಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರುಡ್‍ಸೆಟ್‍ನ ನಿರ್ದೇಶಕರುಗಳಾದ ಸಿ.ವಿನಯ ಕುಮಾರ್ (ಉಜಿರೆ) ವಂದನಾರ್ಪಣೆಗೈದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here