Thursday 25th, April 2024
canara news

ಯಕ್ಷಗಾನ-ನಾಟಕ ಸಂಘಟಕ ಮೂಳೂರು ಸಂಜೀವ ಕಾಂಚನ್ ನಿಧನ

Published On : 24 Mar 2020   |  Reported By : Rons Bantwal


ಮುಂಬಯಿ, ಮಾ.23: ಬೃಹನ್ಮುಂಬಯಿಇಲ್ಲಿನ ಹಿರಿಯ ಯಕ್ಷಗಾನ, ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ (88.) ಇಂದಿಲ್ಲಿ ಸೋಮವಾರ ಬೆಳಿಗ್ಗೆ ಗೋರೆಗಾಂ ಅಲ್ಲಿನ ಸ್ವನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಮುಳೂರು ಮೂಲತಃ ಇವರು ಗೋರೆಗಾಂ ಪೂರ್ವದ ಓಬೆರಾೈ ಮಾಲ್ ಸನಿಹದ ಆ್ಯಸ್ಟರ್ ಟವರ್‍ನಲ್ಲಿ ವಾಸವಾಗಿದ್ದು ಮೂರು ಗಂಡು, ಮೂರು ಹೆಣ್ಣು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.

ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾ0ಬಿಕ ಕ್ಷೇತ್ರದಲ್ಲಿ ಐವತ್ತು ನಾಲ್ಕು ವರ್ಷಗಳ ಹಿಂದೆ ಶ್ರೀ ಗೀತಾಬಿಂಕಾ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಸ್ಥಾಪಿಸಿ ಸ್ಥಾಪಕಾಧ್ಯಕ್ಷರಾಗಿದ್ದ ಕಾಂಚನ್ ಕರ್ನಾಟಕದ ತವರೂರಿನ ಸಿನೆಮಾ, ಯಕ್ಷಗಾನ, ನಾಟಕ ತಂಡಗಳನ್ನು ಮಹಾನಗರಕ್ಕೆ ತರಿಸಿ ಮುಂಬಯಿ, ಉಪನಗರಗಳು ಮತ್ತು ಪುಣೆ, ನಾಸಿಕ್, ಬರೋಡ ಇನ್ನಿತ್ತಿತರ ನಗರಗಳಲ್ಲಿ ಪ್ರದರ್ಶಿಸಿ ಯಶಸ್ವಿ ಕಲಾ ಸಂಘಟಕ, ಸಂಚಾಲಕರಾಗಿ ಗುರುತಿಸಿ ಕೊಂಡಿದ್ದರು. ಸಹೃದಯಿ, ಅವಿರತ ಪರಿಶ್ರಮಿಯಾಗಿದ್ದು ಕಲಾಪೆÇೀಷಣೆ ಮತ್ತು ಕಲಾ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದÀರು. ಸರಳ ಸಜ್ಜನಿಕಾ ವ್ಯಕ್ತಿತ್ವವುಳ್ಳವರಾಗಿ ಜನಾನುರೆಣಿಸಿದ್ದ ಹಿರಿಯ ಕಲಾ ಸಂಘಟಕನನ್ನು ಮುಂಬಯಿ ಜನತೆ ಅಗಲಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here